ಅರಸೀಕೆರೆ : ಮೆಕ್ಕೆಜೋಳ ವಹಿವಾಟಿನಲ್ಲೂ ರೆಡ್ಡಿ ಸೋದರರ ಕೈವಾಡ : ಅನಿಲ್ ಲಾಡ್ ಸಿಡಿಸಿದ ಹೊಸ ಬಾಂಬ್ |
ಪ್ರಕಟಿಸಿದ ದಿನಾಂಕ : 2010-09-09
ಅರಸೀಕೆರೆ: ರೆಡ್ಡಿ ಸಹೋದರರು ಗಣಿಗಾರಿಕೆ ಮಾತ್ರವಲ್ಲ, ಮೆಕ್ಕೆಜೋಳದಲ್ಲೂ ಅಕ್ರಮವಾಗಿ ಹಣ ಮಾಡಲು ಹೊರಟಿದ್ದಾರೆ.
ಇದು ಗಣಿ ಉದ್ಯಮಿ, ರಾಜ್ಯಸಭೆ ಸದಸ್ಯ ಅನಿಲ್ ಲಾಡ್ ಸಿಡಿಸಿದ ಹೊಸ ಬಾಂಬ್.
ಮೆಕ್ಕೆ ಜೋಳದ ಕುಸಿತದಿಂದ ರೈತರಿಗೆ ನೆರವಾಗಲು ಕೆ.ಜಿ.ಗೆ ರು. ೮ ರೂ. ನಂತೆ ರು. ೫ ಕೋಟಿ ಮೆಕ್ಕೆಜೋಳ ಖರೀದಿಸಿ, ದಾಸ್ತಾನು ಮಾಡಿತ್ತು. ರಾಜ್ಯ ಸರ್ಕಾರ ಈಗ ಅದನ್ನು ರು. ೭ ರಂತೆ ಕಂಪನಿಯೊಂದಕ್ಕೆ ಮಾರಾಟ ಮಾಡಿದೆ. ಆದರೆ ದಾಸ್ತಾನಿನಲ್ಲಿ ರು. ೨ ಕೋಟಿ ಮೌಲ್ಯದ ಮೆಕ್ಕೆಜೋಳ ಕಾಣೆಯಾಗಿದೆ ಎಂದು ಬುಧವಾರ ಆರೋಪ ಮಾಡಿದರು.
`೧೯೫೪ ರಿಂದ ನ್ಯಾಯವಾದ ರೀತಿಯಲ್ಲಿ ಗಣಿಗಾರಿಕೆ ನಡೆಸುತ್ತಿದ್ದೇವೆ. ನಾವು ದಿಢೀರ್ ಶ್ರೀಮಂತರಾದವರಲ್ಲ. ಯಾವುದೇ ಅಕ್ರಮ ಗಣಿಗಾರಿಕೆಯಲ್ಲಿ ಪಾಲುದಾರರಾಗಿಲ್ಲ' ಎಂದು ಸಮರ್ಥಿಸಿಕೊಂಡರು.
ಸಿಎಂ ಬಳ್ಳಾರಿಗೆ ಹೋಗಲು ಹಿಂಜರಿಯತ್ತಿದ್ದಾರೆ: ರೆಡ್ಡಿ ಸಹೋದರರ ಅಪ್ಪಣೆ ಇಲ್ಲದೆ ಬಳ್ಳಾರಿಗೆ ಹೋಗಲು ಮುಖ್ಯಮಂತ್ರಿಗಳೇ ಹಿಂಜರಿಯುತ್ತಿದ್ದಾರೆ. ಅವರ ಸ್ಥಿತಿಯೇ ಈ ರೀತಿಯಾ ದರೆ ಜನಸಾಮಾನ್ಯರ ಗತಿ ಯಾವ ಮಟ್ಟದಲ್ಲಿ ತಲುಪಿದೆ ಎಂಬುದನ್ನು ಅರಿಯಬೇಕೆಂದರು.
೧೦ ವರ್ಷಗಳಿಂದ ಗಣಿಗಾರಿಕೆಯಲ್ಲಿ ತೊಡಗಿರುವ ರೆಡ್ಡಿ ಸಹೋದರರು ಮುಖ್ಯಮಂತ್ರಿಗಳನ್ನು ಬ್ಲಾಕ್‌ಮೇಲ್ ಮಾಡುವ ಮೂಲಕ ಅಕ್ರಮ ಗಣಿಗಾರಿಕೆಯಿಂದ ಅಪಾರ ಹಣ ಗಳಿಸಿದ್ದಾರೆ. ಇದ ರಿಂದ ಕರ್ನಾಟಕ ಹಾಗೂ ಆಂಧ್ರಪ್ರದೇಶವನ್ನು ಕೊಂಡುಕೊಳ್ಳುವ ದುರಹಂಕಾರದ ಮಾತುಗಳ ನ್ನಾಡುತ್ತಿದ್ದಾರೆ ಎಂದು ದೂರಿದರು.
ಸರ್ಕಾರ ರೆಡ್ಡಿ ಸಹೋದರರ ನಿಯಂತ್ರಣದಲ್ಲಿ: ಬಳ್ಳಾರಿಯ ೫೭ ಉನ್ನತಾಧಿಕಾರಿಗಳನ್ನು ವರ್ಗಾವಣೆ ಮಾಡುವ ದಿಟ್ಟತನ ತೋರಿದ ಯಡಿಯೂರಪ್ಪನವರನ್ನು ಇಳಿಸಲು ೫೦ ಮಂದಿ ಶಾಸಕರು ತಮ್ಮ ಪರವಾಗಿರುವಂತೆ ರೆಡ್ಡಿ ಸಹೋದರರು ನೋಡಿಕೊಂಡರು. ಕೂಡಲೇ ಮಣಿದ ಮುಖ್ಯಮಂತ್ರಿ ಅಧಿಕಾರಿಗಳ ವರ್ಗ ರದ್ದು ಮಾಡಿದರು.
ಹೀಗಾಗಿ ಸರ್ಕಾರವೇ ರೆಡ್ಡಿ ಸಹೋದರರ ನಿಯಂತ್ರಣದಲ್ಲಿದೆ ಎಂದು ತಿಳಿಯುತ್ತದೆ ಎಂದರು. ಅಕ್ರಮ ಗಣಿಗಾರಿಕೆಯ ಹೆಸರಿನಲ್ಲಿ ನಮ್ಮ ಮೇಲೆ ರಾಜ್ಯ ಸರ್ಕಾರ ಹೂಡಿರುವ ಮೊಕದ್ದಮೆಯನ್ನು ನ್ಯಾಯಾಲಯದಲ್ಲಿ ಎದುರಿಸಿ ನ್ಯಾಯ ಪಡೆಯುವುದಾಗಿ ತಿಳಿಸಿದರು.
ವರದಿಯ ವಿವರಗಳು |
 |
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-09-09 00:00:00
|
|
|