ಬೆ೦ಗಳೂರು : ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ: ಸಹಿ ಮಾಡಿದ್ದ 55 ಯೋಜನೆಗಳ ಕಾರ್ಯ ಪ್ರಾರಂಭ: ಸಚಿವ ಮುರುಗೇಶ್ ನಿರಾಣಿ |
ಪ್ರಕಟಿಸಿದ ದಿನಾಂಕ : 2010-09-09
ಬೆಂಗಳೂರು, ಸೆ.8: ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಸರಕಾರದೊಂದಿಗೆ ಒಡಂಬಡಿಕೆ ಸಹಿ ಮಾಡಿದ್ದ 2.20 ಲಕ್ಷ ಕೋಟಿ ರೂ.ಗಳ 55 ಯೋಜನೆಗಳ ಕಾರ್ಯ ಪ್ರಾರಂಭ ವಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಮುರುಗೇಶ್ ನಿರಾಣಿ ತಿಳಿಸಿ ದ್ದಾರೆ.
ವಿಕಾಸಸೌಧದಲ್ಲಿ ಮಾತನಾಡಿದ ಅವರು, ನಗರದಲ್ಲಿ ಕಳೆದ ಜೂನ್ 3 ಹಾಗೂ 4ರಂದು ಜರು ಗಿದ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ, ರಾಜ್ಯ ಸರಕಾರ ಸುಮಾರು 4 ಲಕ್ಷ ಕೋಟಿ ರೂ. ಬಂಡವಾಳವನ್ನು ಆಕರ್ಷಿಸಲು ಯಶಸ್ವಿಯಾಗಿತ್ತು. ಈ ಪೈಕಿ ಮೊದಲ ಹಂತದಲ್ಲಿ 2.20 ಲಕ್ಷ ಕೋಟಿ ರೂ.ಮೊತ್ತದ ಯೋಜನೆಗಳಿಗೆ ಚಾಲನೆ ದೊರೆತಿದೆ ಎಂದರು.
ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿ ಸಭೆಯು 69 ಯೋಜನೆಗಳಿಗೆ 87,484 ಕೋಟಿ ರೂ. ಹಾಗೂ ಏಕ ಗವಾಕ್ಷಿ ಸಮಿತಿ ಸಭೆಯು 210 ಯೋಜನೆಗಳಿಗೆ 3,067 ಕೋಟಿ ರೂ.ಗಳ ಬಂಡವಾಳ ಹೂಡಿಕೆಗೆ ಅನುಮೋದನೆ ನೀಡಿದೆ. ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು 19,894 ಎಕರೆ ಭೂಮಿಗೆ ಪ್ರಾರಂಭಿಕ ಅಧಿಸೂಚನೆಯನ್ನು ಹೊರಡಿಸಿದ್ದು, 5,601 ಎಕರೆ ಭೂಮಿಗೆ ಅಂತಿಮ ಅಧಿಸೂಚನೆಯನ್ನು ಹೊರಡಿಸಿದೆ ಎಂದು ಅವರು ತಿಳಿಸಿದರು.
ಸರಕಾರವು ಯೋಜನೆಗಳ ಪರಾಮರ್ಶಿಸಲು ಸರಕಾರದ ಮುಖ್ಯಕಾರ್ಯದರ್ಶಿ ಎಸ್.ವಿ. ರಂಗ ನಾಥ್ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಪರಿಶೀಲನಾ ಸಮಿತಿಯನ್ನು ರಚಿಸಲಾಗಿದೆ. ರಾಜ್ಯದ ಎಲ್ಲ ನದಿ ಕೊಳ್ಳಗಳಲ್ಲಿ, ಕೈಗಾರಿಕೆಯ ಉಪಯೋಗಕ್ಕಾಗಿ ಲಭ್ಯವಿರುವ ನೀರಿನ ಬಗ್ಗೆ ಮಾಹಿತಿ ಪಡೆಯಲು ಒಂದು ತಾಂತ್ರಿಕ ಪರಿಣಿತರ ತಂಡವನ್ನು ರಚಿಸಲಾಗಿದೆ ಎಂದು ಅವರು ಹೇಳಿದರು.
ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ತಮ್ಮ ಜಿಲ್ಲೆಯಲ್ಲಿನ ಕೈಗಾರಿಕೆ ಯೋಜನೆಗಳು ತ್ವರಿತವಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪತ್ರವನ್ನು ಬರೆಯಲಾಗಿದೆ. ರಾಜ್ಯ ಕೈಗಾರಿಕೆ ಅಭಿವೃದ್ಧಿ ಮಂಡಳಿಯಿಂದ ಸ್ವಾಧೀನ ಪಡಿಸುತ್ತಿರುವ ಭೂ ಮಾಲಕರ ಜಮೀನಿಗೆ ಪರಿಹಾರ ಹಣದ ಬದ ಲಾಗಿ ಪ್ರತಿ ಎಕರೆ ಜಮೀನಿಗೆ ಪರಿಹಾರವಾಗಿ 9,583 ಚದರ ಅಡಿ ಅಭಿವೃದ್ಧಿ ಪಡಿಸಿದ ಜಮೀ ನನ್ನು ನೀಡಲು ಸರಕಾರಿ ಆದೇಶ ಹೊರಡಿಸಲಾಗಿದೆ ಎಂದು ಮುರುಗೇಶ್ ನಿರಾಣಿ ತಿಳಿಸಿದರು.
ಕೈಗಾರಿಕಾ ಉದ್ದೇಶಗಳಿಗೆ ಜಮೀನು ನೀಡಿರುವ ರೈತರ ಮಕ್ಕಳಿಗೆ ಈ ಶೈಕ್ಷಣಿಕ ಸಾಲಿನಿಂದಲೆ ಸರಕಾರ ಕೈಗಾರಿಕಾ ಸಂಸ್ಥೆಗಳಲ್ಲಿ ನೇರವಾಗಿ ಶೇ.5ರಷ್ಟು ಸೀಟುಗಳನ್ನು ಕಾದಿರಿಸಲು ಅನುಮತಿ ನೀಡಿದೆ. ವಿವಿಧ ಯೋಜನೆಗಳಿಗೆ ಕೆಎಐಡಿಬಿಯಿಂದ ಜಮೀನು ಸ್ವಾಧೀನ ಪಡಿಸುವಾಗ ವಿಧಿಸುವ ಸೇವಾ ಶುಲ್ಕ ದರವನ್ನು ಶೇ.28ರಿಂದ 7.5-12ಕ್ಕೆ ಮಾರ್ಪಡಿಸಿ ಆದೇಶ ಹೊರಡಿಸಲಾಗಿದೆ ಎಂದು ಅವರು ತಿಳಿಸಿದರು.
ಒಡಂಬಡಿಕೆ ಸಹಿ ಮಾಡಿದ ಯೋಜನೆಗಳ ಪ್ರಗತಿ ವರದಿಗಳನ್ನು ಕ್ರೋಢೀಕರಿಸಲು ಕರ್ನಾಟಕ ಉದ್ಯೋಗ ಮಿತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳನ್ನು ವಲಯವಾರು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಯೋಜನೆಗಳ ಅನುಸರಣೆ ಕಾರ್ಯಕ್ಕಾಗಿ ರಾಜ್ಯ ಕೈಗಾ ರಿಕಾ ಬಂಡವಾಳ ಮತ್ತು ಅಭಿವೃದ್ಧಿ ನಿಗಮವು 13 ಮಂದಿ ಅಧಿಕಾರಿಗಳನ್ನು ಒದಗಿಸಿದೆ ಎಂದು ಅವರು ಹೇಳಿದರು.
www.karnatakainvestor shelpline.com ಉದ್ದಿಮೆದಾರರು ತಮ್ಮ ಕುಂದು ಕೊರತೆಗಳ ನ್ನು ನೇರವಾಗಿ ವೆಬ್‌ಸೈಟ್ ಮೂಲಕ ಸರಕಾರದ ಗಮನಕ್ಕೆ ತರಬಹುದಾಗಿದೆ. ಇದಕ್ಕಾಗಿ ಎಲ್ಲ ಹೂಡಿಕೆದಾರರಿಗೆ ಪ್ರತ್ಯೇ user ID ನೀಡಲಾಗಿದೆ. ಅಲ್ಲದೆ, ಕೈಗಾರಿಕೆಗಳ ಸ್ಥಾಪನೆಗೆ ಒಳಪಡುವ ವಿವಿಧ ಇಲಾಖೆಗಳಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಅವರು ತಿಳಿಸಿದರು.
ವರದಿಯ ವಿವರಗಳು |
 |
ಕೃಪೆ : ವಾಭಾ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-09-09 00:00:00
|
|
|