ತ.ನಾಡು; ಬಸ್, ಲಾರಿ ಡಿಕ್ಕಿ: ಇಂಧನ ಟ್ಯಾಂಕ್ ಸ್ಫೋಟಿಸಿ 9 ಮಂದಿ ಸಜೀವ ದಹನ |
ಪ್ರಕಟಿಸಿದ ದಿನಾಂಕ : 2010-09-09
ಚೆನ್ನೈ: ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯಲ್ಲಿ ಸಂಭವಿಸಿದ ಲಾರಿ ಮತ್ತು ಬಸ್ ನಡುವಿನ ಮುಖಾಮುಖಿ ಅಪಘಾತದಲ್ಲಿ ೯ ಜನರು ಸ್ಥಳದಲ್ಲೇ ಮೃತಪಟ್ಟಿದ್ದು, ೨೯ ಜನರು ಗಾಯಗೊಂಡ ಘಟನೆ ಬುಧವಾರ ನಡೆದಿದೆ.
ಸೋರಂದೈ ಹಳ್ಳಿಯ ಸಮೀಪ ಸರ್ಕಾರಿ ಬಸ್ ಹಾಗೂ ಲಾರಿ ಮುಖಾಮುಖಿಯಾಗಿ ಡಿಕ್ಕಿ ಹೊಡೆ ದವು. ಈ ವೇಳೆ ಬಸ್ಸಿನ ಡೀಸೆಲ್ ಟ್ಯಾಂಕ್ ಸ್ಫೋಟಗೊಂಡು, ಬೆಂಕಿ ಹತ್ತಿಕೊಂಡಿತು. ಇದರಿಂ ದಾಗಿ ೯ ಜನರು ಸ್ಥಳದಲ್ಲೇ ಸತ್ತುಹೋದರು ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತಕ್ಕೀಡಾದ ಬಸ್ ವೆಲ್ಲೂರ್‌ನಿಂದ ಕುಡಲೂರ್‌ಗೆ ಹೊರಟಿತ್ತು. ಸತ್ತವರಲ್ಲಿ ಲಾರಿ ಹಾಗೂ ಬಸ್ ಚಾಲಕರಿಬ್ಬರೂ ಸೇರಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವರದಿಯ ವಿವರಗಳು |
 |
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-09-09 00:00:00
|
|
|