ಅಕ್ಟೋಬರ್ 14 ಮತ್ತು 15ರಂದು ತುಳುಕೂಟ ಕುವೈಟ್ ದಶಮಾನೋತ್ಸವ |
ಪ್ರಕಟಿಸಿದ ದಿನಾಂಕ : 2010-09-09
ವಾಯುಯಾನ ಸಂಸ್ಥೆಯ ಅಧ್ಯಕ್ಷ, ಫವಾಜ್ ಎ. ಅಲ್-ಫರಹ್ ಅವರನ್ನು ದಶಮಾನೋತ್ಸವ ಸಮಾರಂಭಕ್ಕೆ ಅತಿಥಿಯಾಗಿ ಆಹ್ವಾನಿಸಿದರು
ತುಳುಕೂಟದ ಉಪಾಧ್ಯಕ್ಷ, ಪಾಸ್ಕಲ್ ಬಿ. ಪಿಂಟೋ ಅವರು ಇತ್ತೀಚೆಗೆ ಕುವೈಟ್‌ನ ನಾಗರಿಕ ವಾಯುಯಾನ ಸಂಸ್ಥೆಯ ಅಧ್ಯಕ್ಷ, ಫವಾಜ್ ಎ. ಅಲ್-ಫರಹ್ ಅವರನ್ನು ಭೇಟಿಯಾಗಿ ದಶಮಾನೋತ್ಸವ ಸಮಾರಂಭಕ್ಕೆ ಅತಿಥಿಯಾಗಿ ಆಹ್ವಾನಿಸಿದರು. ಕುವೈಟ್-ಮಂಗಳೂರು ನೇರ ವಿಮಾನಯಾನ ಸೇವೆ ಪ್ರಾರಂಭಿಸಿರುವ ಹಿನ್ನೆಲೆಯಲ್ಲಿ ಫವಾಜ್ ಎ. ಅಲ್-ಫರಹ್ ಅವರನ್ನು ಪಾಸ್ಕಲ್ ಬಿ. ಪಿಂಟೋ ಅವರು ಸಾರ್ವಜನಿಕರ ಪರವಾಗಿ ಸ್ಮರಣಿಕೆ ನೀಡಿ ಗೌರವಿಸಿದರು. ವಾಯುಯಾನ ಸಂಸ್ಥೆಯ ಮಹಾ ನಿರ್ದೇಶಕರ ಮುಖ್ಯ ಕಾರ್ಯದರ್ಶಿ ಎಂಜಿನಿಯರ್ ಬದರ್ ಎ. ಬುಟೈಬಾನ್ ಅವರನ್ನೂ ಪಿಂಟೋ ಗೌರವಿಸಿದರು.
ಜುಲೈ 2008ರಲ್ಲಿ ಪ್ರಥಮ ನೇರ ವಿಮಾನ ಯಾನ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಪ್ರಾರಂಭವಾದಂದಿನಿಂದ ಯಾನಿಗಳಿಂದ ನಿರೀಕ್ಷೆಗೂ ಮೀರಿ ಪ್ರತಿಕ್ರಿಯೆ, ಸಹಕಾರ ವ್ಯಕ್ತವಾಗಿದೆ. ಪಾಸ್ಕಲ್ ಪಿಂಟೋ ಅವರು ಈ ಸೇವೆ ಆರಂಭದ ಹಿಂದೆ ಪ್ರಮುಖಪಾತ್ರ ವಹಿಸಿದ್ದರು.
ಈ ವೊದಲಿಂದ ತುಳುಕೂಟ ಕುವೈಟ್ ಭಾಷೆ, ಕಲೆ, ಸಂಸ್ಕೃತಿ ಹಾಗೂ ಸಾಮಾಜಿಕ ಸೇವೆಯಲ್ಲಿ ಅದ್ವಿತೀಯ ಸ್ಥಾನಮಾನ ಗಳಿಸಿದೆ. ಕುವೈಟ್ ಮತ್ತು ಭಾರತದ ಹಲವಾರು ಆಸ್ಪತ್ರೆ, ಸೇವಾ ಹಾಗೂ ವಿದ್ಯಾ ಸಂಸ್ಥೆಗಳಿಗೆ, ವಿದ್ಯಾರ್ಥಿಗಳಿಗೆ, ಪ್ರಕೃತಿ ವಿಕೋಪ ಪೀಡಿತರಿಗೆ, ಬಡ ಹಾಗೂ ನಿರ್ಗತಿಕ ಕುಟುಂಬಗಳಿಗೆ ಆರ್ಥಿಕ ಹಾಗೂ ವೈದ್ಯಕೀಯ ಸೌಲಭ್ಯಗಳಿಗೆ ನೆರವು ಒದಗಿಸುತ್ತಾ ಬಂದಿದೆ.
ಮಾನವೀಯತೆಯ ಸೇವೆಯೇ ನಮ್ಮ ಜೀವನದ ಧ್ಯೇಯ, ಪರಮ ಗುರಿ - ಈ ವರ್ಷವೂ ಕೂಡ ಸಂಗ್ರಹಣೆಯಾದ ಆದಾಯದಲ್ಲಿ, ಕುವೈಟ್ ಮತ್ತು ಭಾರತದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ರೋಗಿಗಳು, ಬಡ, ಅಶಕ್ತ, ನಿರ್ಗತಿಕರ ಸೇವೆಗಾಗಿ ಮೀಸಲಾಗಿಡುತ್ತೇವೆ ಎಂದು ಪಿಂಟೋ ಅವರು ತಿಳಿಸಿದ್ದಾರೆ.
ವರದಿಯ ವಿವರಗಳು |
 |
ಕೃಪೆ : ಸುರೇಶ್ ರಾವ್ ನೇರಂಬಳ್ಳಿ | ಮಂಜೇಶ್ವರ ಮೋಹನ್‌ದಾಸ್ ಕಾಮತ್ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-09-09 00:00:00
|
|
|