ಉಡುಪಿ: ಸಿಮ್ ಆಕ್ಟಿವೇಶನ್ ಮುನ್ನ ಎಚ್ಚರಿಕೆ:ಎಸ್ಪಿ ಪ್ರವೀಣ್ ಮಧುಕರ್ ಪವಾರ್ |
ಪ್ರಕಟಿಸಿದ ದಿನಾಂಕ : 2010-09-09
ಉಡುಪಿ: ಸಿಮ್ ಆಕ್ಟಿವೇಶನ್ ಮಾಡುವ ಮುನ್ನ ಗ್ರಾಹಕರ ದಾಖಲಾತಿಗಳನ್ನು ಪರಿಶೀಲಿಸಿಕೊಳ್ಳಬೇಕೆಂದು ಎಸ್ಪಿ ಪ್ರವೀಣ್ ಮಧುಕರ್ ಪವಾರ್ ಅವರು ಸಲಹೆ ನೀಡಿದ್ದಾರೆ.
ಅಮ್ಮಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ಬುಧವಾರ ನಡೆದ ಉಡುಪಿ ತಾಲೂಕಿನ ಎಲ್ಲ ಕಂಪನಿಗಳ ಮೊಬೆಲ್ ಸಿಮ್ ಹಂಚಿಕೆ ದಾರರು ಮತ್ತು ಮಾರಾಟಗಾರರ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸಿಮ್ ಆ್ಯಕ್ಟಿವೇಶನ್ ಮಾಡುವ ಮುನ್ನ ಕಸ್ಟಮರ್ ಅಗ್ರಿಮೆಂಟ್ ಫಾರಮ್ ಭರ್ತಿ ಮಾಡಿ ಜಾಗರೂಕತೆ ವಹಿಸಬೇಕು. ಹೀಗೆ ಎಚ್ಚರಿಕೆ ವಹಿಸದೆ ತೊಂದರೆ ಯಾದರೆ ಹಂಚಿಕೆದಾರರು ಮತ್ತು ಮಾರಾಟಗಾರರು ಹೊಣೆಯಾಗಬೇಕಾಗುತ್ತದೆ ಮತ್ತು ಕಾನೂನುಕ್ರಮ ತೆಗೆದು ಕೊಳ್ಳಲಾಗುವುದು. ಇದನ್ನು ಉಡುಪಿ ತಾಲೂಕಿನಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗುತ್ತದೆ ಎಂದರು.
ಮುಂದೆ ಇತರ ತಾಲೂಕು ಮಟ್ಟದಲ್ಲಿಯೂ ಇಂತಹ ಸಮಾವೇಶ ನಡೆಸಲಾಗುವುದು ಎಂದು ಎಸ್ಪಿ ಹೇಳಿದರು.
ಕಿಮಿನಲ್ ಹಿನ್ನೆಲೆಯವರು ಬೇರೆಯವರ ಹೆಸರಿನಲ್ಲಿ ಸಿಮ್ ಖರೀದಿಸಿ ಅಪರಾಧ ಕೃತ್ಯ ನಡೆಸುತ್ತಿರುವುದು ಕಂಡು ಬರುತ್ತಿದ್ದು ದಾಖಲಾತಿಗಳನ್ನು ಪರಿಶೀಲಿಸಿಯೇ ಆ್ಯಕ್ಟಿವೇಶನ್ ಮಾಡಬೇಕು ಎಂದರು.
ಏರ್‌ಟೆಲ್ ಕಂಪನಿಯ ಫಿರೋಜ್ ಸಿಮ್ ಆಕ್ಟಿವೇಶನ್ ಮಾಡುವ ಕುರಿತು ಮಾಹಿತಿ ನೀಡಿದರು. ನಗರ ಸಿಪಿಐ ಎಸ್.ವಿ.ಗಿರೀಶ್ ವಂದಿಸಿದರು.
ವರದಿಯ ವಿವರಗಳು |
 |
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-09-09 00:00:00
|
|
|