ಗುರುವಾರ, 09-02-2012
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಹೊನ್ನಾವರ ಬಳಿ ಮರಕ್ಕೆ ಕಾರು ಢಿಕ್ಕಿ: ಉಡುಪಿ ಡಿಸಿಐಬಿ ನಿರೀಕ್ಷಕರಿಗೆ ತೀವ್ರ ಗಾಯ
Latest news item ಜಿಲ್ಲೆಯನ್ನು ಮುಜುಗರಕ್ಕೀಡು ಮಾಡಿದ ಪಾಲೆಮಾರ್ ; ಯಾಕಿಂಥ ಕೆಲಸ ಮಾಡಿದರು? | ಬಿಜೆಪಿಯ ಹಗರಣಗಳು ಮತ್ತು ಕಳಂಕಿತ ಮಿನಿಸ್ಟರುಗಳು | ವಾಜಪೇಯಿ, ಅಡ್ವಾಣಿ ಬೆಳೆಸಿದ ಪಕ್ಷ ಇದೇನಾ?
Latest news item ಯು. ಎ. ಇ. ಬಂಟ್ಸ್ ಡೈರೆಕ್ಟರಿ - 2012 | UAE BUNTS DIRECTORY -2012
Latest news item ಸದನದಲ್ಲಿ ಸಚಿವರ ಸೆಕ್ಸ್ ಫಿಲಂ ವೀಕ್ಷಣೆಯ ರದ್ದಾಂತ : ಉಡುಪಿಯಲ್ಲಿ ಎಸ್.ಡಿ.ಪಿ.ಐ ಪ್ರತಿಭಟನೆ
Latest news item ಯುಪಿಸಿ‌ಎಲ್ ವಿರುದ್ದ ಹೈಕೋರ್ಟ್ ನಲ್ಲಿ ದಾವೆ ಹೂಡಲು ಸಿದ್ದ : ಪತ್ರಿಕಾಗೋಷ್ಠಿಯಲ್ಲಿ ಜಯಶ್ರೀ ಕೃಷ್ಣ ಶೆಟ್ಟಿ
Latest news item ಹೋಟೆಲ್ ಕಿದಿಯೂರಿನ ರಜತ ಸಂಭ್ರಮ : ಪೇಜಾವರ ಶ್ರೀಗಳಿಗೆ ತುಲಾಭಾರ
Latest news item ರೇವ್ ಪಾರ್ಟಿ ಕುರಿತು ಗ್ರಾ.ಪಂ.ಗೆ ಗೊತ್ತೇ ಇಲ್ಲ! ಇನ್ನೊಂದು ವಿವಾದದತ್ತ ಜಿಲ್ಲಾಡಳಿತ
Latest news item ಸದನದಲ್ಲಿ ಸಚಿವತ್ರಯರ ‘ಕಾಮಹರಣ’ : ರಾಜ್ಯದಾದ್ಯಂತ ಆಕ್ರೋಶ : ಉಡುಪಿಯಲ್ಲಿ ನಾಗರೀಕರ ಸಮಿತಿಯ ವಿಶಿಷ್ಟ ಪ್ರತಿಭಟನೆ
Latest news item ಮಲೆನಾಡಿನ ಕವಿ, ಉಪ್ಪುಕಡಲಿನ ರವಿ- ಪ್ರೊ.ಎಸ್.ವಿ.ಪರಮೇಶ್ವರ ಭಟ್ಟರು
Latest news item ದುಬೈ:ಕೆ.ಎಮ್.ಡಬ್ಲು.ಎ ವತಿಯಿಂದ ಕ್ರಿಕೆಟ್ ಟೂರ್ನಮೆಂಟ್
Latest news item ಸದನದಲ್ಲಿ ಮೊಬೈಲ್ ಫೋನ್‌ ಅಶ್ಲೀಲ ದೃಶ್ಯಗಳನ್ನು ವೀಕ್ಷಿಸಿದ ಸಚಿವರುಗಳ ತಲೆದಂಡ: ಸವದಿ, ಸಿಸಿ, ಮತ್ತು ಪಾಲೇಮಾರ್‌ ಮಂತ್ರಿ ಸ್ಥಾನಕ್ಕೆ ರಾಜಿನಾಮೆ
Latest news item SHAME ON YOU! ..ಇದು ಸರೀನಾ?...ವಿಧಾನಸಭೆಯಲ್ಲೇ ಸೆಕ್ಸ್ ಫಿಲ್ಮ್ ವೀಕ್ಷಿಸಿದ ಸಚಿವ ಸವದಿ!; ರಾಜ್ಯಾದ್ಯಂತ ತೀವ್ರ ಆಕ್ರೋಶ | ಅವರ ಜತೆ ಅಶ್ಲೀಲಚಿತ್ರ ಹಂಚಿಕೊಂಡ ಸಚಿವರು ಯಾರ್ಯಾರು? ರಾಜ್ಯ ಸರ್ಕಾರಕ್ಕೆ ಮತ್ತೊಂದು ಮುಜುಗರ!!
Latest news item ಕಲಾಪದಲ್ಲೂ ಪ್ರತಿಧ್ವನಿಸಿದ 'ಮಲ್ಪೆ ಸೈಂಟ್ ಮೇರಿಸ್ ಕಾಮಕೇಳಿ ಪ್ರಕರಣ'; ತನಿಖೆ ಆದೇಶಿಸಿದ ಸಿ.ಎಮ್
Latest news item ರೇವ್ ಪಾರ್ಟಿ ಪಶು ಸಂಸ್ಕೃತಿಯ ಪ್ರತೀಕ : ಅಶೋಕ್ ಸಿಂಘಾಲ್ ಖಂಡನೆ | ರಾಜ್ಯ ಸರ್ಕಾರಕ್ಕೆ ತೀವ್ರ ಮುಜುಗರ
Latest news item ಮಲ್ಪೆ ರೇವ್ ಪಾರ್ಟಿ ಪ್ರಕರಣ : ಜೆಡಿ‌ಎಸ್ ವಿನೂತನ ಪ್ರತಿಭಟನೆ
Latest news item ರೇವ್ ಪಾರ್ಟಿಯಿಂದ ಪವಿತ್ರ ಕ್ಷೇತ್ರ ಅಪವಿತ್ರ: ಇಂತಹ ವಿಕೃತಿ ಎಲ್ಲಿಯೂ ನಡೆಯಬಾರದು : ಪೇಜಾವರ ಶ್ರೀ ಪ್ರತಿಕ್ರೀಯೆ
Latest news item ಕಿದಿಯೂರ್ ಹೋಟೆಲ್ ನ ನೂತನ ಶಿಲಾದೇಗುಲದಲ್ಲಿ ನಾಗದೇವರ ಪುನ:ಪ್ರತಿಷ್ಠೆ : ವಿಶೇಷ ಪೂಜಿತ ನಾಗರಕ್ಷಾದಾರ ಧಾರಣೆ
Latest news item ದುಬಾಯಿಯಲ್ಲಿ ವರ್ಣರಂಜಿತ ಯಕ್ಷಲೋಕ ಸೃಷ್ಟಿಸಿದ ಯಕ್ಷಮಿತ್ರರ ಯಕ್ಷಗಾನ ವೈಭವ ’ಶಾಂಭವಿ ವಿಜಯ’
Latest news item ಶಾರ್ಜಾ ಕರ್ನಾಟಕ ಸಂಘ ವಾರ್ಷಿಕೋತ್ಸವ: ವಿನಯ್ ಆಡಿಗ ಆಶಾ ಫೆರ್ನಾಂಡಿಸ್- 'ಮಯೂರ 'ರಾಜ' 'ರಾಣಿ'; ಶೋಧನ್ ಪ್ರಸಾದ್ ರವರಿಗೆ ಪ್ರತಿಷ್ಟಿತ ’ಮಯೂರ’ ಪ್ರಶಸ್ತಿ ಪ್ರಧಾನ| ಮುಖ್ಯ ಅತಿಥಿ ಕರ್ನಾಟಕ ಲೋಕಾಯುಕ್ತ ಮಾನ್ಯ ಎನ್. ಸಂತೋಷ್ ಹೆಗ್ಡೆ ಯವರಿಂದ ಮೆಚ್ಚುಗೆ
Latest news item ಯು.ಎ.ಇ. ಬಂಟರ 37 ನೇ ಸ್ನೇಹಮಿಲನ: ಜಾನಪದ ಕಲಾ ವೈಭವ... ಡಾ. ಬಿ ಆರ್. ಶೆಟ್ಟಿಯವರಿಂದ ಉದ್ಘಾಟನೆ
Latest news item ಧ್ವನಿ ಪ್ರತಿಷ್ಠಾನ ಯು.ಎ.ಇ. ಯು ಬೆಳ್ಳಿ ಹಬ್ಬ: ವಿಜ್ರಂಭಣೆಯಿ೦ದ ಜರುಗಿದ ಯು.ಎ.ಇ. ಪ್ರಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನ; ಪ್ರಶಸ್ತಿ ಪ್ರದಾನ ಸಮಾರಂಭ
Latest news item ದುಬಾಯಿ ಸರ್ಕಾರದಿಂದ ಸನ್ಮಾನಿತರಾದ ಕರ್ನಾಟಕದ ಗೃಹ ಮತ್ತು ಸಾರಿಗೆ ಸಚಿವರಾದ ಮಾನ್ಯ ಆರ್. ಆಶೋಕ್ ರವರಿಗೆ ದುಬಾಯಿಯಲ್ಲಿ ಕನ್ನಡಿಗರಿಂದ ಅಭಿನಂದನಾ ಸಮಾರಂಭ; ಮಾನ್ಯ ಸಚಿವ ವರಿಂದ ಅನಿವಾಸಿ ಕನ್ನಡಿಗರ ಅಭಿಮಾನಕ್ಕೆ ಮೆಚ್ಚುಗೆ.( Updated )
Latest news item ಮೋಗವೀರ್ಸ್ ಯು.ಎ.ಇ. ಆಶ್ರಯದಲ್ಲಿ ದುಬಾಯಿಯಲ್ಲಿ ಭಕ್ತಿ ಶ್ರದ್ಧೆಯಿಂದ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ
Latest news item ವಿಜ್ರಂಭಣೆಯಿಂದ ಜರುಗಿದ 'ಬಂಟ್ಸ್ ಬಹ್ರೈನ್'ನ ಸಾಂಸ್ಕೃತಿಕ ಕಾರ್ಯಕ್ರಮ: ಶ್ರೀ ಶ್ರೀ ಶ್ರೀ ಒಡಿಯೂರು ಗುರುದೇವಾನಂದ ಸ್ವಾಮೀಜಿಯವರ ಐತಿಹಾಸಿಕ ಭೇಟಿ: ಭಾವಪರವಶರಾದ ಭಕ್ತ ಸಮೂಹ: ಭಕ್ತಿ ಸಂಗೀತದ ಧಾರೆ ಹರಿಸಿದ ನಾಡಿನ ಖ್ಯಾತ ಗಾಯಕ ರವೀಂದ್ರ ಪ್ರಭು.
Latest news item ಸ್ವಾರ್ಥವಿಲ್ಲದ 'ಸಾರ್ಥ' ದ ಅಪೂರ್ವ ಕಾರ್ಯಕ್ರಮ ನಮನ ; ಕನ್ನಡದ ಮಣ್ಣಿಗೆ ದ್ವೀಪದಲ್ಲಿ ನಿಜ ನಮನ; ಸಂಗೀತ ಸುಧೆ ಹರಿಸಿದ ಗಾಯಕಿ ಸಂಗೀತ ಕಟ್ಟಿ ಹಾಗು ತಂಡ; ಖ್ಯಾತ ನಿರ್ದೇಶಕ ನಾಗತಿ ಹಳ್ಳಿ ಚಂದ್ರಶೇಖರ್ ರವರಿಂದ ಸ್ಫೂರ್ತಿಯ ಮಾತುಗಳು.



 

 
ಡಿವೈಎಫ್‌ಐ ನೇತೃತ್ವದಲ್ಲಿ ಏರ್‌ ಇಂಡಿಯಾ ಕಚೇರಿ ಚಲೋ: ವಿಮಾನ ದುರಂತ ಸಂತ್ರಸ್ತರಿಗೆ ನ್ಯಾಯಯುತ ಪರಿಹಾರ; ಲೋಕಸಭೆಯಲ್ಲಿ ಪ್ರಸ್ತಾವ: ಸಂಸದ ಕರುಣಾಕರನ್‌

ನ್ಯಾಯ ದೊರೆಯದಿದ್ದರೆ ‘ಸಂಸತ್ ಚಲೋ’: ಪಿ.ಕರುಣಾಕರನ್

ಮಂಗಳೂರು, ಸೆ.8: ಬಜ್ಪೆ ವಿಮಾನ ದುರಂತ ದಲ್ಲಿ ಮೃತಪಟ್ಟ ಎಲ್ಲ 158 ಮಂದಿಯ ವಾರಿಸು ದಾರರಿಗೆ ಕೇಂದ್ರ ವಿಮಾನ ಯಾನ ಸಚಿವರು ಈಗಾಗಲೆ ನೀಡಿರುವ ಭರವಸೆಯಂತೆ ಕನಿಷ್ಠ 76 ಲಕ್ಷ ರೂ.ಗಳ ಪರಿಹಾರವನ್ನು ಏರ್ ಇಂಡಿಯಾ ತಕ್ಷಣ ನೀಡ ಬೇಕು. ಇಲ್ಲವಾದಲ್ಲಿ ಪಾರ್ಲಿಮೆಂಟ್ ಚಲೋ ಚಳವಳಿ ನಡೆಸಲಾಗುವುದು ಎಂದು ಕಾಸರಗೋಡು ಸಂಸದ ಪಿ. ಕರುಣಾಕರನ್ ಎಚ್ಚರಿಸಿದ್ದಾರೆ.

ಸಂತ್ರಸ್ತರ ವಾರಿಸುದಾರರಿಗೆ ಪರಿಹಾರ ವಿತರಣೆಯಲ್ಲಿ ತಾರತಮ್ಯ ಎಸಗಲಾಗುತ್ತಿದೆ ಎಂದು ಆರೋಪಿಸಿ ಸಂತ್ರಸ್ತರ ಕುಟುಂಬಸ್ಥರು ಡಿವೈಎಫ್‌ಐ ಕೇರಳ ಹಾಗೂ ದ.ಕ. ಜಿಲ್ಲಾ ಘಟಕದ ನೇತೃತ್ವದಲ್ಲಿ ಇಂದು ಹಮ್ಮಿಕೊಂಡಿದ್ದ ನಗರದ ಲಾಲ್‌ಬಾಗ್‌ ನಲ್ಲಿರುವ ಏರ್ ಇಂಡಿಯಾ ಕಚೇರಿ ಚಲೋ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ತಾರತಮ್ಯ:  ವಿಮಾನ ದುರಂತದಲ್ಲಿ ಮಡಿದ ಹೆಚ್ಚಿನವರು ಕೆಳ ಮಧ್ಯಮ ಮತ್ತು ಕಡಿಮೆ ಆದಾಯದ ವರ್ಗಕ್ಕೆ ಸೇರಿದವರು. ಮಡಿದವ ರಲ್ಲಿ ಹೆಚ್ಚಿನವರು ದುಬೈಯಲ್ಲಿ ಸಣ್ಣಪುಟ್ಟ ನೌಕರಿ ಯಲ್ಲಿದ್ದವರು. ಅವರ ಉದ್ಯೋಗ ಪ್ರಮಾಣ ಪತ್ರವನ್ನು ನೀಡ ಬೇಕೆಂದು ಇದೀಗ ಪರಿಹಾರ ನೀಡುತ್ತಿರುವ ಸಂಸ್ಥೆ ಸತಾಯಿಸುತ್ತಿದೆ. ಆದರೆ ಅಲ್ಲಿ ಕಾರ್ಮಿಕ ಕಾನೂನು ಆಗಲಿ, ಕಾರ್ಮಿಕ ಅಧಿಕಾರಿ ಆಗಲಿ ಇಲ್ಲ. ಹಾಗಿರುವಾಗ ಉದ್ಯೋಗ ಪ್ರಮಾಣ ಪತ್ರ ತರುವುದು ಅಸಾಧ್ಯ. ಆದರೆ ಮೋಂಟ್ರಿಯಲ್ ಒಪ್ಪಂದದ ಪ್ರಕಾರ ಮಾನವೀಯ ನೆಲೆಯಲ್ಲಿ ಏರ್ ಇಂಡಿಯಾವು ಸಂತ್ರಸ್ತರಿಗೆ ಕನಿಷ್ಠ 76 ಲಕ್ಷ ರೂ.ಗಳ ಪರಿಹಾರ ನೀಡಬೇಕಾಗಿದೆ.

ಆದರೆ ಇನ್ಶೂರೆನ್ಸ್ ಕಂಪೆನಿಗಳ ಕೂಟದ ನೇತೃತ್ವ ವಹಿಸಿರುವ ರಿಲಾಯೆನ್ಸ್ ಮತ್ತು ಏರ್ ಇಂಡಿಯಾ ಜೊತೆ ಸೇರಿಕೊಂಡು ಸಂತ್ರಸ್ತ ಕುಟುಂಬಗಳಿಗೆ ವಂಚಿಸುತ್ತಿವೆ. ಮುಲ್ಲಾ ಆಯಂಡ್ ಮುಲ್ಲಾ ಸಂಸ್ಥೆಯೂ ಸಂತ್ರಸ್ತರ ಕುಟುಂಬಸ್ಥರ ಜೊತೆ ಅನಾಗರಿಕ ವಾಗಿ ವರ್ತಿಸುತ್ತಿದೆ. ಈ ಬಗ್ಗೆ ಸಂಸತ್ತಿ ನಲ್ಲಿಯೂ ಈಗಾಗಲೆ ಧ್ವನಿ ಎತ್ತಲಾಗಿದೆ. ಸಂತ್ರಸ್ತರಿಗೆ ಸೂಕ್ತ ನ್ಯಾಯ ದೊರೆಯದಿದ್ದರೆ ಮುಂದೆ ಉಗ್ರವಾಗಿ ಪ್ರತಿಭಟಿಸಲಾಗುವುದು ಎಂದು ಕರುಣಾಕರನ್ ತಿಳಿಸಿದರು.

ಮಾನವೀಯ ನೆಲೆಯಲ್ಲಿ ಪರಿಹಾರ ನೀಡಿ: ಡಿವೈಎಫ್‌ಐ ಕಾಸರಗೋಡು ಘಟಕದ ನಾಯಕ ಡಿವೈಎಫ್‌ಐ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಜೇಶ್, ಏರ್ ಇಂಡಿಯಾವು ಮಾನವೀಯ ನೆಲೆಯಲ್ಲಿ ಮೋಂಟ್ರಿಯಲ್ ಒಪ್ಪಂದದಂತೆ ನೀಡಬೇಕಾದ ಕನಿಷ್ಠ ಪರಿಹಾರವನ್ನು ತಕ್ಷಣ ಸಂತ್ರಸ್ತ ಕುಟುಂಬ ಗಳಿಗೆ ವಿತರಿಸಬೇಕು ಎಂದು ಒತ್ತಾಯಿಸಿದರು.

ಆದಾಯದ ಆಧಾರದಲ್ಲಿ ಟಿಕೆಟ್ ನೀಡಲಾಗಿತ್ತೇ?
ಸಿಪಿಎಂನ ನಾಯಕ ಬಿ.ಮಾಧವ ಮಾತ ನಾಡಿ, ಏರ್ ಇಂಡಿಯಾವು ಪ್ರಯಾಣದ ಸಂದರ್ಭ ಆದಾಯದ ಆಧಾರದಲ್ಲಿ ಟಿಕೆಟ್ ನೀಡಿತ್ತೇ ಎಂದು ಪ್ರಶ್ನಿಸಿದರು, ಏರ್ ಇಂಡಿಯಾವು ಪ್ರಸ್ತುತ ಪರಿಹಾರ ವಿತರಣೆ ಕಾರ್ಯವನ್ನು ಸ್ಟಾರ್ ಹೊಟೇಲ್ ಗಳಲ್ಲಿ ನಡೆಸುತ್ತಿದೆ.

ಇಲ್ಲಿ ಇಂಗ್ಲಿಷ್ ಭಾಷೆ ಅರಿಯದವನು ಏನೂ ಮಾಡುವಂತಿಲ್ಲ. ಕನ್ನಡ, ಮಲಯಾಳಂ ಮಾತ್ರ ತಿಳಿದಿರುವ ಸಂತ್ರಸ್ತರ ವಾರಿಸು ದಾರರನ್ನು ಅಧಿಕಾರಿಗಳು ಗಣನೆಗೇ ತೆಗೆದುಕೊಳ್ಳುವುದಿಲ್ಲ. ಪರಿಹಾರ ವಿತರಣೆ ಕಾರ್ಯ ನ್ಯಾಯಬದ್ಧವಾಗಿ ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ಸರಕಾರಿ ಕಚೇರಿಗಳಲ್ಲಿ ನಡೆಯಲಿ ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಡಿವೈಎಫ್‌ಐ ಕೇರಳ ರಾಜ್ಯ ಕಾರ್ಯದರ್ಶಿ ರಾಜಪ್ಪ, ಕೋಶಾಧಿಕಾರಿ ರಮೇಶ್, ಜಿಲ್ಲಾಧ್ಯಕ್ಷ ಬಾಬು ಅಬ್ರಹಾಂ, ಜಿಲ್ಲಾ ಕಾರ್ಯದರ್ಶಿ ಅಜಿತ್‌ಕುಮಾರ್, ಗುರುಚರಣ್, ಡಿವೈಎಫ್‌ಐ ದ.ಕ. ಜಿಲ್ಲಾಧ್ಯಕ್ಷ ಮುನೀರ್ ಕಾಟಿಪಳ್ಳ, ಕಾರ್ಯದರ್ಶಿ ದಯಾನಂದ ಶೆಟ್ಟಿ, ಸಂತ್ರಸ್ತರ ಕುಟುಂಬಸ್ಥರ ನಾಯಕರಾದ ಮುಹಮ್ಮದ್ ಬ್ಯಾರಿ, ನಾರಾಯಣ್, ಮುಹಮ್ಮದ್ ಬಶೀರ್ ಮತ್ತಿತರರು ಉಪಸ್ಥಿತರಿದ್ದರು.

ಈ ಕುರಿತು ಮಾಧ್ಯಮಗಳ ಜೊತೆ ಪ್ರತಿಕ್ರಿಯಿಸಿದ ಲಾಲ್‌ಬಾಗ್‌ನ ಏರ್ ಇಂಡಿಯಾ ಕಚೇರಿಯ ಪ್ರಾದೇಶಿಕ ಮಾರುಕಟ್ಟೆ ವ್ಯವಸ್ಥಾಪಕ ಅರುಣ್ ಕುಮಾರ್, ವಿಷಯವನ್ನು ಆಡಳಿತ ವರ್ಗಕ್ಕೆ ತಲುಪಿಸುವುದಾಗಿ ತಿಳಿಸಿದರು.

ಡಿವೈಎಫ್‌ಐ ಕಾಸರಗೋಡು ಜಿಲ್ಲಾ ಅಧ್ಯಕ್ಷ ಸಾಬು ಅಬ್ರಹಾಂ ಅವರು ಅಧ್ಯಕ್ಷತೆ ವಹಿಸಿದ್ದರು. ಬೇಡಿಕೆ ಈಡೇರುವ ತನಕ ಹೋರಾಟ ನಡೆಯಲಿದೆ ಎಂದವರು ತಿಳಿಸಿದರು.

ಡಿವೈಎಫ್‌ಐ ಅಖೀಲ ಭಾರತ ಉಪಾಧ್ಯಕ್ಷ ಟಿ. ವಿ. ರಾಜೇಶ್‌, ಕೇಂದ್ರ ಸಮಿತಿ ಸದಸ್ಯ ಪಿ.ವಿ. ರಮೇಶನ್‌, ಸಿಪಿಐ (ಎಂ) ದ. ಕನ್ನಡ ಜಿಲ್ಲಾ ಕಾರ್ಯದರ್ಶಿ ಬಿ. ಮಾಧವ ಮುಂತಾದವರು ಮಾತನಾಡಿದರು.

ಡಿವೈಎಫ್‌ಐ ಜಿಲ್ಲಾ ಅಧ್ಯಕ್ಷ ಮುನೀರ್‌ ಕಾಟಿಪಳ್ಳ ಪ್ರಸ್ತಾವನೆಗೈದರು. ಕಾರ್ಯದರ್ಶಿ ದಯಾನಂದ ಶೆಟ್ಟಿ, ಮುಖಂಡರಾದ ಬಿ. ಕೆ. ಇಮಿ¤ಯಾಜ್‌, ಮಹಾಬಲ, ಗುರುಚರಣ್‌ ರಾವ್‌, ವಿಜಯ ಕುಮಾರ್‌ ಹೆಗ್ಡೆ, ಪ್ರಮೀಳಾ ಕೆ. ಮುಂತಾದವರು ಉಪಸ್ಥಿತರಿದ್ದರು.

ನಗರದ ಜೈಲ್‌ ರೋಡ್‌ನಿಂದ ಏರ್‌ ಇಂಡಿಯಾ ಕಚೇರಿ ತನಕ ಮೆರವಣಿಗೆ ನಡೆಯಿತು. ದ.ಕ. ಮತ್ತು ಕಾಸರಗೋಡು ಜಿಲ್ಲೆಯ ಡಿವೈಎಫ್‌ಐ ಕಾರ್ಯಕರ್ತರು ಹಾಗೂ ಸಂತ್ರಸ್ತ ಕುಟುಂಬದ ಸದಸ್ಯರು ಭಾಗವಹಿಸಿದ್ದರು. ಸಂಸದರ ನೇತೃತ್ವದ ನಿಯೋಗ ಏರ್‌ ಇಂಡಿಯಾ ಅಧಿ ಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-09-09 00:00:00

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕರಾವಳಿ]

»‘ಭಾರತ್ ಬೀಡಿ’ಯ ಸಂಸ್ಥಾಪಕರ ದಿನಾಚರಣೆ
»ಜಿಲ್ಲೆಯನ್ನು ಮುಜುಗರಕ್ಕೀಡು ಮಾಡಿದ ಪಾಲೆಮಾರ್
»ಬ್ಲೂಫಿಲಂ ಪ್ರಕರಣ: ಕಾಂಗ್ರೆಸ್‌ನಿಂದ ವಿಧಾನಸಭೆ ಶುಚಿತ್ವ!
»ಸದನದಲ್ಲಿ ಬ್ಲೂಫಿಲಂ ವೀಕ್ಷಣೆ ಪ್ರಕರಣ: ನೈತಿಕತೆ ಇದ್ದಲ್ಲಿ ವಜಾಗೊಳಿಸಿ: ಬಿಜೆಪಿಗೆ ಮೊಯ್ಲಿ ಸವಾಲು
»ಸದನದಲ್ಲಿ ಸಚಿವರಿಂದ ಬ್ಲೂ ಫಿಲಂ ವೀಕ್ಷಣೆ ಪ್ರಕರಣ: ಕರಾವಳಿಯಾದ್ಯಂತ ಕಾವು ಪಡೆದ ಪ್ರತಿಭಟನೆ; ಶಾಸಕ ಸ್ಥಾನ ಅನರ್ಹಗೊಳಿಸಿ ಜೈಲಿಗೆ ತಳ್ಳಿ: ಸಿಪಿಎಂ
»ವಿಕಲಚೇತನರ ಕುಟುಂಬಗಳಿಗೆ ಚೈತನ್ಯ ತುಂಬಿದ ಖಾಝಿ ಭೇಟಿ
»ಫೆ.10: ಕೋಮುದೌರ್ಜನ್ಯ ಖಂಡಿಸಿ ಪ್ರತಿಭಟನೆ
»ಸಿಸಿಬಿ ಪೊಲೀಸರಿಂದ ಗುಲಾಂ ಮುಹಮ್ಮದ್ ವಿಚಾರಣೆ: ಬಿಡುಗಡೆ
»13ರಂದು ರಫ್ತುದಾರರ ಸಮಾವೇಶ: ವೀರಪ್ಪ ಮೊಯ್ಲಿ
»ಹೊನ್ನಾವರ ಬಳಿ ಮರಕ್ಕೆ ಕಾರು ಢಿಕ್ಕಿ: ಉಡುಪಿ ಡಿಸಿಐಬಿ ನಿರೀಕ್ಷಕರಿಗೆ ತೀವ್ರ ಗಾಯ
»ಕಾಸರಗೋಡಿನಲ್ಲಿ ಘರ್ಷಣೆ: ಪೊಲೀಸರಿಂದ ಲಾಠಿ ಪ್ರಹಾರ; 200ಮಂದಿಯ ವಿರುದ್ಧ ಪ್ರಕರಣ ದಾಖಲು
»ಸದನದಲ್ಲಿ ಸಚಿವರ ಸೆಕ್ಸ್ ಫಿಲಂ ವೀಕ್ಷಣೆಯ ರದ್ದಾಂತ : ಉಡುಪಿಯಲ್ಲಿ ಎಸ್.ಡಿ.ಪಿ.ಐ ಪ್ರತಿಭಟನೆ
»ಫೆ.10 ರಿಂದ ರಾಷ್ಟ್ರೀಯ ಮಟ್ಟದ ಮ್ಯಾನೇಜ್‌ಮೆಂಟ್ ಉತ್ಸವ
»ಫೆ.25ರಂದು ಭಾರತೀಯ ಮಜ್ದೂರ್ ಸಂಘದ 18ನೇ ತ್ರೈವಾರ್ಷಿಕ ಪ್ರದೇಶ ಅಧಿವೇಶನ
»ಯುಪಿಸಿ‌ಎಲ್ ವಿರುದ್ದ ಹೈಕೋರ್ಟ್ ನಲ್ಲಿ ದಾವೆ ಹೂಡಲು ಸಿದ್ದ : ಪತ್ರಿಕಾಗೋಷ್ಠಿಯಲ್ಲಿ ಜಯಶ್ರೀ ಕೃಷ್ಣ ಶೆಟ್ಟಿ
»ಹೋಟೆಲ್ ಕಿದಿಯೂರಿನ ರಜತ ಸಂಭ್ರಮ : ಪೇಜಾವರ ಶ್ರೀಗಳಿಗೆ ತುಲಾಭಾರ
»ತಣ್ಣೀರುಪಂಥದ ಖತೀಜಮ್ಮ ಕೊಲೆ ಪ್ರಕರಣ: ಮೂವರ ಬಂಧನ
»ಏತಡ್ಕ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದ ಆರಂಭೋತ್ಸವ
»ರೇವ್ ಪಾರ್ಟಿ ಕುರಿತು ಗ್ರಾ.ಪಂ.ಗೆ ಗೊತ್ತೇ ಇಲ್ಲ! ಇನ್ನೊಂದು ವಿವಾದದತ್ತ ಜಿಲ್ಲಾಡಳಿತ
»ವಿಧಾನಸಭೆಯಲ್ಲಿ ಸಚಿವರಿಂದ ಬ್ಲೂಫಿಲಂ ವೀಕ್ಷಣೆ: ರಾಜ್ಯಾದ್ಯಂತ ಪ್ರತಿಭಟನೆ
»ಸದನದಲ್ಲಿ ಸಚಿವತ್ರಯರ ‘ಕಾಮಹರಣ’ : ರಾಜ್ಯದಾದ್ಯಂತ ಆಕ್ರೋಶ : ಉಡುಪಿಯಲ್ಲಿ ನಾಗರೀಕರ ಸಮಿತಿಯ ವಿಶಿಷ್ಟ ಪ್ರತಿಭಟನೆ
»ಶ್ರೀ ಅಶೋಕ್ ಸಿಂಘಾಲ್ ಅವರಿಗೆ ಗೌರವಪೂರ್ವಕ ಸ್ವಾಗತ
»ಮಂಗಳೂರು: ಕ್ರೈಸ್ತ ಸಂಘಟನೆ ಮೇಲೆ ತೆರಿಗೆ ವಂಚನೆ ಆರೋಪ
»ವಿಧಾನಸಭೆಯಲ್ಲಿ ಸಚಿವರಿಂದ ಬ್ಲೂಫಿಲಂ ವೀಕ್ಷಣೆ; ಶಾಸಕ ಸ್ಥಾನ ಅನರ್ಹಗೊಳಿಸಿ ಜೈಲಿಗೆ ತಳ್ಳಿ: ಸಿಪಿಎಂ
»ರೇವ್ ಪಾರ್ಟಿ: ಗ್ರಾಪಂಗೆ ಮಾಹಿತಿಯೇ ಇಲ್ಲ!...
»ಪಚ್ಚನಾಡಿ ಡಂಪಿಂಗ್ ಯಾರ್ಡ್‌ನಲ್ಲಿ ಬೆಂಕಿ: ಎರಡು ದಿನಗಳಿಂದ ಹೊಗೆಯಲ್ಲಿ ದಿನಗಳೆದ ಸ್ಥಳೀಯರು
»ಮಂಗಳೂರು: ಗೋದ್ರೆಜ್ ಅಲ್‌ಪೈನ್‌ಗೆ ಚಾಲನೆ
»ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಎಫ್‌ಐಆರ್: ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದಿಂದ ಪ್ರತಿಭಟನೆ
»ಉಳ್ಳಾಲ ಪುರಸಭೆಗೆ ಸ್ಪೆಷಲ್ ರೆಕೊಗ್ನಿಷನ್ ಅವಾರ್ಡ್-2012
»ನಾಪತ್ತೆಯಾಗಿದ್ದ ವ್ಯಕ್ತಿಯ ಅಸ್ಥಿಪಂಜರ ಪತ್ತೆ
»ಸೈಂಟ್ ಮೇರಿಸ್ ದ್ವೀಪದಲ್ಲಿ ನಡೆದ ನಂಗ ನಾಚಿಗೆ ಮುಖ್ಯಮಂತ್ರಿ ಸಮರ್ಥನೆ : ಸಿ.ಎಮ್. ರಾಜಿನಾಮೆಗೆ ಜನಾರ್ಧನ್ ಪೂಜಾರಿ ಆಗ್ರಹ
»ರೇವ್ ಪಾರ್ಟಿ ಪಶು ಸಂಸ್ಕೃತಿಯ ಪ್ರತೀಕ : ಅಶೋಕ್ ಸಿಂಘಾಲ್ ಖಂಡನೆ | ರಾಜ್ಯ ಸರ್ಕಾರಕ್ಕೆ ತೀವ್ರ ಮುಜುಗರ
»ಮಲ್ಪೆ ರೇವ್ ಪಾರ್ಟಿ ಪ್ರಕರಣ : ಜೆಡಿ‌ಎಸ್ ವಿನೂತನ ಪ್ರತಿಭಟನೆ
»ರೇವ್ ಪಾರ್ಟಿಯಿಂದ ಪವಿತ್ರ ಕ್ಷೇತ್ರ ಅಪವಿತ್ರ: ಇಂತಹ ವಿಕೃತಿ ಎಲ್ಲಿಯೂ ನಡೆಯಬಾರದು : ಪೇಜಾವರ ಶ್ರೀ ಪ್ರತಿಕ್ರೀಯೆ
»ಕಿದಿಯೂರ್ ಹೋಟೆಲ್ ನ ನೂತನ ಶಿಲಾದೇಗುಲದಲ್ಲಿ ನಾಗದೇವರ ಪುನ:ಪ್ರತಿಷ್ಠೆ : ವಿಶೇಷ ಪೂಜಿತ ನಾಗರಕ್ಷಾದಾರ ಧಾರಣೆ
»ಅಖಿಲ ಭಾರತ ಬಿಲ್ಲವರ ಯೂನಿಯನ್ ಗೆ 100ರ ಸಂಭ್ರಮ:ಫೆ.12ರಂದು ಮುಖ್ಯಮಂತ್ರಿಗಳಿಂದ ಚಾಲನೆ
»ಸ್ಟ್ರಿಂಗ್ ಝೂಕ್ ನಲ್ಲಿ ಅತಿರೇಕವಾಗಿದ್ದರೆ ಕರ್ತವ್ಯದಲ್ಲಿದ್ದವರಿಂದ ವರದಿ ಕಡ್ಡಾಯ: ಜಿಲ್ಲಾಧಿಕಾರಿ ಡಾ.ಎಂ.ಟಿ.ರೇಜು
»ಹೋಟೆಲ್ ಕಿದಿಯೂರ್ ರಜತ ಮಹೋತ್ಸವ ಉದ್ಘಾಟನೆ
»ಭಟ್ಕಳ: ಮಾವಿನಕಟ್ಟೆ ಬಳಿ ಭೀಕರ ಅಪಘಾತ; ಕೇರಳದ ಇಬ್ಬರ ದುರ್ಮರಣ
»ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಕೋಮು ಕಾಯ್ದೆ ವಿರುದ್ಧ ರಾಷ್ಟ್ರಾದ್ಯಂತ ಹೋರಾಟ: ಸಿಂಘಾಲ್‌
»ಮೂಡಬಿದಿರೆ ಪುರಸಭೆಗೆ ’ವರ್ಲ್ಡ್ ವಾಟರ್‌ ಅವಾರ್ಡ್‌’
»ಪೆರುಂಬಳ ದುರಂತ: ಒಂದೇ ಕುಟುಂಬದ ಇಬ್ಬರು ವಿದ್ಯಾರ್ಥಿಗಳ ಸಾವು
»ಬಿ.ಸಿ.ರೋಡ್: ಪೈಪ್‌ಲೈನ್ ಒಡೆದು ಪೋಲಾಗುತ್ತಿರುವ ನೀರು
»ಬೆಂಡರವಾಡಿಗೆ ‘ಪನ್ನಾಭ ಪುರಸ್ಕಾರ’
»ಬ್ಯಾರಿ ಅಕಾಡಮಿಯ ನೂತನ ಅಧ್ಯಕ್ಷರ ಪದಗ್ರಹಣ
»ಫೆ.11-12: ಮಂಗಳೂರು ಧರ್ಮ ಪ್ರಾಂತ್ಯದ ಶತಮಾನೋತ್ತರ ಬೆಳ್ಳಿ ಹಬ್ಬ
»‘ಅಲ್‌ಪೈನ್ ಅಸೋಸಿಯೇಟ್ಸ್’ಗೆ ನಾಲ್ಕನೆ ವರ್ಷದ ಸಂಭ್ರಮ: ಆಯುರ್ವೇದ-ಯುನಾನಿ ಔಷಧಿಗಳು, ತಜ್ಞರಿಂದ ಚಿಕಿತ್ಸೆ
»ಪುತ್ತೂರು: ಯಕ್ಷಗಾನ ಬಯಲಾಟ ಸಪ್ತಾಹ ಉದ್ಘಾಟನೆ
»ವಿರೋಧದ ನಡುವೆಯೂ ಸೂಲಿಬೆಲೆ ಭಾಷಣ...
»ಹೋಟೆಲ್ ಕಿದಿಯೂರ್ ರಜತ ಸಂಭ್ರಮ: ಅಷ್ಟಪವಿತ್ರ ನಾಗಮಂಡಲೋತ್ಸವಕ್ಕೆ ಬೃಹತ್ ಹೊರಕಾಣಿಕೆ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri