ಶೇ. 30ರಷ್ಟು ಭಾರತೀಯರು ಭ್ರಷ್ಟರು ಮತ್ತು ಶೇ. 50ರಷ್ಟು ಭ್ರಷ್ಟಾಚಾರದ ಅಂಚಿನಲ್ಲಿ! |
ಪ್ರಕಟಿಸಿದ ದಿನಾಂಕ : 2010-09-09
ಹೊಸದಿಲ್ಲಿ: ಮೂರನೇ ಒಂದರಷ್ಟು ಭಾರತೀಯರು ಸಂಪೂರ್ಣ ಭ್ರಷ್ಟರಾಗಿದ್ದರೆ, ಶೇ. 50ರಷ್ಟು ಮಂದಿ ಭ್ರಷ್ಟಾಚಾರದ ಅಂಚಿನಲ್ಲಿದ್ದಾರೆ ಎಂದು ದೇಶದ ಭ್ರಷ್ಟಾಚಾರ ವಿಚಕ್ಷಣ ದಳದ ನಿರ್ಗಮಿತ ಮುಖ್ಯಸ್ಥ ಪ್ರತ್ಯೂಶ್ ಸಿನ್ಹ ಹೇಳಿದ್ದಾರೆ.
ಭಾರತದಲ್ಲಿ ಭ್ರಷ್ಟಾಚಾರ ಹೇಗೆ ಹೆಚ್ಚುತ್ತಿದೆ ಎಂಬುದನ್ನು ಅಧ್ಯಯನ ನಡೆಸುವ ಕೆಲಸ ಅತ್ಯಂತ ಕೀಳುಮಟ್ಟದ್ದಾಗಿತ್ತು ಎಂದು ನಿವೃತ್ತ ಕೇಂದ್ರ ವಿಜಿಲೆನ್ಸ್ ಕಮಿಶನರ್ ಸಿನ್ಹಾ ಅವರು ತಿಳಿಸಿದ್ದಾರೆ.
ನಾವು ಇನ್ನೂ ಚಿಕ್ಕವರಿದ್ದಾಗ ಕೆಲವರಷ್ಟೇ ಭ್ರಷ್ಟರು ಇದ್ದರು. ಪ್ರಸ್ತುತ ಅದು ನಿಯಂತ್ರಣಕ್ಕೆ ಬಾರದಷ್ಟು ಎತ್ತರಕ್ಕೆ ಬೆಳೆದು ನಿಂತಿದೆ. ಭ್ರಷ್ಟಾಚಾರವನ್ನು ಸಮಾಜವೇ ಸ್ವೀಕರಿಸಿದಂತಿದೆ ಟ್ರಾನ್ಸ್‌ಫರೆನ್ಸಿ ಇಂಟರ್‌ನ್ಯಾಶನಲ್‌ನ ಅಧ್ಯಯನ ವರದಿ ಅನ್ವಯ ಜಾಗತಿಕ ಮಟ್ಟದಲ್ಲಿ ನೂರು ಭ್ರಷ್ಟಾಚಾರಿ ರಾಷ್ಟ್ರಗಳ ಪೈಕಿ ಭಾರತವು 3.4 ಅಂಕಗಳೊಂದಿಗೆ 84ನೇ ಸ್ಥಾನದಲ್ಲಿದೆ. ನ್ಯೂಜಿಲೆಂಡ್ 9.4 ಅಂಕಗಳಿಸಿದ್ದರೆ , ಸೊಮಾಲಿಯ 1.1 ಅಂಕ ಪಡೆದಿದೆ ಎಂದು ಅವರು ಹೇಳಿದರು.
ಭಾರತದಲ್ಲಿ ಪ್ರತೀ ವರ್ಷ ದಶಲಕ್ಷ ಮಂದಿ ಬಡ ಭಾರತೀಯರು ಸರಕಾರಿ ಸವಲತ್ತುಗಳನ್ನು ಪಡೆದುಕೊಳ್ಳುವ ಸಲುವಾಗಿ ಭ್ರಷ್ಟ ಅಧಿಕಾರಿಗಳಿಗೆ ಲಂಚ ನೀಡುತ್ತಿರುತ್ತಾರೆ. ಭಾರತದಲ್ಲಿ ಪ್ರಸ್ತುತ ಅತೀ ಹೆಚ್ಚು ಹಣವಿರುವಾತ ಗೌರವಾನ್ವಿತ ವ್ಯಕ್ತಿಯೆನಿಸುತ್ತಾನೆ. ಯಾವ ಮೂಲದಿಂದ ಇಷ್ಟೊಂದು ಹಣ ಸಂಪಾದನೆ ಆಯ್ತು ಎಂದು ಯಾರೂ ಆತನನ್ನು ಪ್ರಶ್ನಿಸುವುದಿಲ್ಲ. ಅಕ್ರಮ ಬೆಟ್ಟಿಂಗ್ ವ್ಯವಹಾರಗಳು, ಜೂಜು ಹಾಗೂ ಬುಕ್ಕಿಗಳಿಗೂ ಭಾರತ ಖಾರಸ್ಥಾನವಾಗಿದೆ ಎಂದು ಅವರು ಹೇಳಿದರು.
ವರದಿಯ ವಿವರಗಳು |
 |
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-09-09 00:00:00
|
|
|