ಉದ್ದೀಪನ ಪರೀಕ್ಷೆ: ರಿಚಾ ಮಿಶ್ರಾ ಸೇರಿ ನಾಲ್ವರು ಕಾಮನ್‌ವೆಲ್ತ್ ಗೇಮ್ಸ್ ನಿಂದ ಔಟ್; ಈಗಾಗಲೇ ಮುಖಭಂಗಕ್ಕೆ ಒಳಗಾಗಿರುವ ದೇಶಕ್ಕೆ ಮತ್ತೆ ಮುಜುಗರ |
ಪ್ರಕಟಿಸಿದ ದಿನಾಂಕ : 2010-09-09
ಹೊಸದಿಲ್ಲಿ : ಭರವಸೆಯ ಈಜುಗಾರ್ತಿ ರಿಚಾ ಮಿಶ್ರಾ ಸೇರಿದಂತೆ ಕಾಮನ್‌ವೆಲ್ತ್ ಗೇಮ್ಸ್ನ ನಾಲ್ವರು ಕ್ರೀಡಾಪಟುಗಳು ಉದ್ದೀಪನ ಪರೀಕ್ಷೆಯ 'ಬಿ' ಮಾದರಿ ವರದಿಯಲ್ಲೂ ವಿಫಲರಾಗಿದ್ದು, ಈಗಾಗಲೇ ಮುಖಭಂಗಕ್ಕೆ ಒಳಗಾಗಿರುವ ದೇಶಕ್ಕೆ ಮತ್ತೆ ಮುಜುಗರ ತಂದಿದ್ದಾರೆ.
ಈಜುಪಟುಗಳಾದ ರಿಚಾ ಮಿಶ್ರಾ , ಜ್ಯೋತ್ಸಾ° ಪನ್ಸಾರೆ, ಶಾಟ್‌ಪುಟ್ ಪಟು ಸೌರಭ್ ವಿಜ್ ಹಾಗೂ ಡಿಸ್ಕಸ್ ಎಸೆತಗಾರ ಆಕಾಶ್ ಅಂಟಿಲ್ 'ಬಿ' ಸ್ಯಾಂಪಲ್ ಪರೀಕ್ಷೆಯಲ್ಲಿ ವಿಫಲರಾಗಿದ್ದಾರೆ. ಈ ಕ್ರೀಡಾಪಟುಗಳಿಗೆ ಶಿಸ್ತು ಸಮಿತಿಯ ಮುಂದೆ ಹಾಜರಾಗುವಂತೆ ನೊಟೀಸ್ ಕಳುಹಿಸಿದ್ದೇವೆ. ಶೀಘ್ರದಲ್ಲಿ ವಿಚಾರಣೆಗೆ ದಿನಾಂಕ ನಿಗದಿಪಡಿಸುವಂತೆ ಆಯೋಗದ ಮುಖ್ಯಸ್ಥರಿಗೆ ಸೂಚಿಸಿದ್ದೇವೆ. ಈ ಕ್ರೀಡಾಪಟುಗಳಿಗೆ ವಿಸುವ ಶಿಕ್ಷೆಯನ್ನು ಶಿಸ್ತು ಸಮಿತಿ ನಿರ್ಧರಿಸಲಿದೆ' ಎಂದು ರಾಷ್ಟ್ರೀಯ ಉದ್ದೀಪನಾ ವಿರೋಧಿ ಆಯೋಗದ (ನಾಡಾ) ಪ್ರಧಾನ ನಿರ್ದೇಶಕ ರಾಹುಲ್ ಭಟ್ನಾಗರ್ ಹೇಳಿದ್ದಾರೆ.
ಜೈಪುರದಲ್ಲಿ ನಡೆದ 64ನೇ ರಾಷ್ಟ್ರೀಯ ಈಜು ಚಾಂಪಿಯನ್‌ಶಿಪ್‌ನಲ್ಲಿ ರಿಚಾ ಮಿಶ್ರಾ ಅತ್ಯುತ್ತಮ ಈಜುಪಟುವಾಗಿ ಹೊರ ಹೊಮ್ಮಿದ್ದರು. ಜ್ಯೋತ್ಸಾ$° ಮತ್ತು ದಿಲ್ಲಿಯ ಸೌರಭ್ ಗೇಮ್ಸ್ ತಂಡದಲ್ಲಿದ್ದರು. ಆದರೆ ಹರಿಯಾಣದ ಡಿಸ್ಕಸ್ ಎಸೆತಗಾರ ಅಶೋಕ್ ಅಂಟಿಲ್ ಅಂತಿಮ ತಂಡಕ್ಕೆ ಅರ್ಹತೆ ಪಡೆದಿರಲಿಲ್ಲ .
'ರಿಚಾ ಮಿಶ್ರಾ ಹಾಗೂ ಜ್ಯೋತ್ಸಾ° ನಾಡಾ ಶಿಸ್ತುಸಮಿತಿ ಮುಂದೆ ಹಾಜರಾಗಬಹುದು. ಆದರೆ ಅದು ಕೇವಲ ಔಪಚಾರಿಕ ವಿಚಾರಣೆ. ಅವರು ಕಾಮನ್‌ವೆಲ್ತ್ ಕ್ರೀಡಾಕೂಟದಿಂದ ಹೊರಬಿದ್ದಿದ್ದಾರೆ' ಎಂದು ಸ್ವಿಮ್ಮಿಂಗ್ ಫೆಡರೇಷನ್‌ನ ಕಾರ್ಯದರ್ಶಿ ವೀರೇಂದ್ರ ನಾನಾವತಿ ಹೇಳಿದ್ದಾರೆ.
ಕಳೆದ ವಾರ 'ಎ' ಸ್ಯಾಂಪಲ್ ಉದ್ದೀಪನ ಪರೀಕ್ಷೆಯಲ್ಲಿ ಈ ನಾಲ್ವರ ಜತೆ ಮತ್ತೋರ್ವ ಈಜುಪಟು ಅಮರ್ ಮುರಳೀಧರನ್ ಕೂಡ ವಿಫಲರಾಗಿದ್ದರು. ಇಂದಿನ 'ಬಿ' ಸ್ಯಾಂಪಲ್ ಪರೀಕ್ಷೆಯಲ್ಲಿ ಮುರಳೀಧರನ್ ತೇರ್ಗಡೆ ಹೊಂದಿದ್ದಾರೆ.
ಈ ಹಿಂದೆ ಉದ್ದೀಪನ ಪರೀಕ್ಷೆಯಲ್ಲಿ 6 ಕುಸ್ತಿಪಟುಗಳು ವಿಫಲರಾಗಿದ್ದರು. 'ಬಿ' ರಿಪೋರ್ಟ್‌ನಲ್ಲೂ ವಿಫಲರಾದ ನಾಲ್ವರನ್ನು ತಂಡದಿಂದ ಕೈಬಿಡಲಾಗಿತ್ತು .
ವರದಿಯ ವಿವರಗಳು |
 |
ಕೃಪೆ : ಉದಯವಾಣಿ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-09-09 00:00:00
|
|
|