ಶಿಕ್ಷಣ ಕ್ಷೇತ್ರದಲ್ಲಿ ಮು೦ಚೂಣಿಯಲ್ಲಿರುವ ಉಡುಪಿ ಜಿಲ್ಲೆ : ಆ೦ಗ್ಲ ಮಾಧ್ಯಮದ ವ್ಯಾಮೋಹದಿ೦ದ ಕಡೆಗಣಿಸುತ್ತಿರುವ ಸರ್ಕಾರಿ ಶಾಲೆಗಳು |
ಪ್ರಕಟಿಸಿದ ದಿನಾಂಕ : 2010-09-08
ಉಡುಪಿ : ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯದಲ್ಲೇ ಮುಂಚೂಣಿಯಲ್ಲಿರುವ ಜಿಲ್ಲೆ ಉಡುಪಿ. ಆದರೆ ಆಂಗ್ಲ ಮಾ ಧ್ಯಮ ಶಾಲೆಗಳ ವ್ಯಾಮೋಹಕ್ಕೆ ಬಲಿಯಾದ ಸರ್ಕಾರಿ ಶಾಲೆಗಳ ದುಸ್ಥಿತಿ ಇಲ್ಲೂ ಹೊರತಾಗಿಲ್ಲ. ಉದ್ಯಾವರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿರುವ ಏಕೈಕ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕೇವಲ ಏಳು ವಿದ್ಯಾರ್ಥಿಗಳಿದ್ದಾರೆ.
ಕಡಲು ಕೊರೆತದ ಭೀತಿಯಿಂದ ಗ್ರಾಮಸ್ಥರು ಊರನ್ನೇ ತೊರೆಯುತ್ತಿರುವುದು ಈ ದುಸ್ಥಿತಿಗೆ ಒಂದು ಕಾರಣವಾದರೆ ಎರಡು ವರ್ಷದ ಹಿಂದೆ ಪರಿಸರದಲ್ಲಿ ಆಂಗ್ಲ ಮಾದ್ಯಮ ಶಾಲೆಯೊಂದು ಆರಂಭವಾ ದ ಬಳಿಕ ಈ ಶಾಲೆಗೆ ಏಕೈಕ ದಾಖಲಾತಿಯೂ ನಡೆದಿಲ್ಲ.
ಕಡಲ ತಡಿಯ ಉದ್ಯಾವರ ಪಡುಕರೆಯಲ್ಲಿರುವ ಈ ಶಾಲೆಯಲ್ಲಿ ಯಾವ ಕೊರತೆಯೂ ಇಲ್ಲ. ಕೇವ ಲ ಹತ್ತು ವರ್ಷಗಳ ಹಿಂದಷ್ಟೇ ನಿರ್ಮಾಣಗೊಂಡ ಸುಂದರ ಕಟ್ಟಡ, ಬಿಸಿಯೂಟ, ಅತ್ಯುತ್ತಮ ಅಧ್ಯಾ ಪಕ ಎಲ್ಲವೂ ಇದೆ. ಆದರೆ ಇವೆಲ್ಲದರ ಲಾಭ ಪಡೆಯಬೇಕಾದ ವಿದ್ಯಾರ್ಥಿಗಳೇ ಇಲ್ಲಿಲ್ಲ.
ಆರು ಕಂಪ್ಯೂಟರ್ ಗಳಿರುವ ಶಾಲೆಯ ವಿದ್ಯಾರ್ಥಿಗಳ ಸಂಖ್ಯೆ ಕೇವಲ ಏಳು! ಉದ್ಯಾವರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಈ ಏಕೈಕ ಸರ್ಕಾರಿ ಶಾಲೆಯನ್ನು ಹಿಂದೆಲ್ಲಾ ದರ್ಬಾರು ಶಾಲೆಯೆಂದೇ ಕರೆಯುತ್ತಿದ್ದರು. ಸ್ವಾತಂತ್ರ್ಯಪೂರ್ವದಲ್ಲಿ ಅಂದರೆ ೧೯೪೦ ರಲ್ಲೇ ಆರಂಭಗೊಂಡಿರುವ ಈ ಶಾಲೆ ಯೆಂದರೆ ಊರವರಿಗೆಲ್ಲಾ ಅಚ್ಚುಮೆಚ್ಚು ಆದರೆ ತಮ್ಮ ಮಕ್ಕಳನ್ನು ಮಾತ್ರ ಯಾರೂ ಕಳುಹಿಸುವು ದಿಲ್ಲ. ಮೂರು ವರ್ಷಗಳಿಂದ ದಾಖಲಾತಿಯೇ ಇಲ್ಲದ ಈ ವಿದ್ಯಾದೇಗುಲದಲ್ಲಿ ದೇವರೇ ಇಲ್ಲ ಎಂಬ ಪರಿಸ್ಥಿತಿ.
ಪಡುಕರೆ ಎಂದರೆ ಭಾಗಶಃ ದ್ವೀಪ ಪ್ರದೇಶವೇ. ಇಲ್ಲಿ ಹಲವಾರು ವರ್ಷಗಳಿಂದ ಕಡಲುಕೊರೆತ ಬಗೆಹರಿಯದ ಸಮಸ್ಯೆ. ಕಡಲತೀರದಲ್ಲೇ ಇರುವ ಶಾಲೆಗೆ ಬರುವ ವಿದ್ಯಾರ್ಥಿಗಳಿಗೂ ಅದೇ ಸಮ ಸ್ಯೆ. ಈಗಾಗಲೇ ಪರಿಸರದ ಗ್ರಾಮಸ್ಥರು ಕಡಲುಕೊರೆತದ ಭೀತಿಗೆ ಅಂಜಿ ಊರು ತೊರೆದಿದ್ದಾರೆ. ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಲು ಅದೂ ಒಂದು ಪ್ರಮುಖ ಕಾರಣ.
ನೂರಕ್ಕೂ ಅಧಿಕ ವಿದ್ಯಾರ್ಥಿಗಳ ಓಡಾಟ, ತರಗತಿಗೊಬ್ಬ ಪ್ರಾಧ್ಯಾಪಕ ಹೀಗೆ ವೈಭವ ಕಂಡಿದ್ದು ಈ ದರ್ಬಾರು ಶಾಲೆಯಲ್ಲಿ ಈಗ ಖಾಲಿ ತರಗತಿಗಳು ಮತ್ತು ಏಕೋಪಾಧ್ಯಾಯ ಶಾಲೆಯ ಮುಖ್ಯೋ ಪಾಧ್ಯಾಯರನ್ನು ಬಿಟ್ಟರೆ ಬೇರೇನೂ ಇಲ್ಲ. ಗ್ರಾಮದ ಏಕೈಕ ಸರ್ಕಾರಿ ಶಾಲೆಯನ್ನು ಸ್ಥಳಾಂತರಿಸಿ ಯಾದರೂ ಉಳಿಸಿಕೊಳ್ಳಬೇಕೆಂಬ ಸ್ಥಳೀಯರ ಒತ್ತಾಸೆಗೆ ಸರ್ಕಾರ ಸಹಕರಿಸುತ್ತಿಲ್ಲ.
ಹತ್ತಕ್ಕೂ ಕಡಿಮೆ ಮಕ್ಕಳಿರುವ ಸರ್ಕಾರಿ ಶಾಲೆಗಳ ಸಂಖ್ಯೆ ಜಿಲ್ಲೆಯಲ್ಲಿ ಹೆಚ್ಚುತ್ತಿದೆ. ಗುಣಮಟ್ಟದ ಶಿಕ್ಷಣ ನೀಡುವ ಸರ್ಕಾರಿ ಶಾಲೆಗಳಿಗೇನೂ ಜಿಲ್ಲೆಯಲ್ಲಿ ಕೊರತೆಯಿಲ್ಲ. ಆದರೆ ಸರ್ಕಾರಿ ಶಾಲೆಗಳತ್ತ ವಿದ್ಯಾರ್ಥಿಗಳನ್ನು ಸೆಳೆಯುವ ಬದಲು ಆಂಗ್ಲ ಮಾದ್ಯಮ ಶಾಲೆಗಳಿಗೆ ಎಗ್ಗಿಲ್ಲದೆ ಅನುಮತಿ ನೀಡುವು ದರಲ್ಲಿ ಶಿಕ್ಷಣ ಇಲಾಖೆ ನಿರತವಾಗಿದೆ.
ವರದಿಯ ವಿವರಗಳು |
 |
ವರದಿಗಾರರು : ಪ್ರವೀಣ್ ಪ್ರಭಾಕರ್
ಪ್ರಕಟಿಸಿದ ದಿನಾಂಕ : 2010-09-08 00:00:00
|
|
|