|
ಪ್ರಕಟಿಸಿದ ದಿನಾಂಕ : 2010-09-08
ಶ್ರೀ ಅಬ್ದುಲ್ ರಹೀಂ, ಮಂಗಳೂರು ಎಂಬವರ ಪತ್ರ...
ಇತ್ತೀಚೆಗೆ (ಸೆಪ್ಟೆಂಬರ್ ೨) ಮಂಗಳೂರಿನ ಅತ್ತಾವರದಲ್ಲಿ ಸಾರ್ವಜನಿಕ ಶ್ರೀಕ್ರಷ್ಣ ಜಯಂತ್ಯುತ್ಸವ ಸಮಿತಿ ಆಶ್ರಮದಲ್ಲಿ ನಡೆದ "ಮೊಸರುಕುಡಿಗೆ" ಉತ್ಸವದ ಸಂದರ್ಭದಲ್ಲಿ ಕಾರ್ಯಕ್ರಮದ ಸಂಘ ಟಕರು ಪಾಲಿಸಿದ ಒಂದು ಮಾದರಿ, ಸತ್ಸಂಪ್ರದಾಯವನ್ನು ನಾನಿಲ್ಲಿ ಉಲ್ಲೇಖಿಸ ಬಯಸುತ್ತೇನೆ.
ಮೊಸರು ಕುಡಿಕೆ ಉತ್ಸವ ನಡೆದ ಅತ್ತಾವರ ಕಟ್ಟೆಯ ಸುತ್ತಮುತ್ತಲಿರುವ ವಸತಿ ಸಮುಚ್ಚಯ ಗಳಲ್ಲಿ ಬಹಳಷ್ಟು ಮುಸ್ಲಿಂ ಕುಟುಂಬಗಳು ವಾಸಿಸುತ್ತವೆ. ಈಗ ರಂಜಾನ್ ತಿಂಗಳಾಗಿರುವುದ ರಿಂದ, ಸಾಮಾನ್ಯವಾಗಿ ಈ ತಿಂಗಳಲ್ಲಿ ನಮಾಜಿನ ಸಮಯ ಪರಿಪಾಲನೆಯನ್ನು ಮುಸ್ಲಿಮರು ಒಂದಿಷ್ಟು ಹೆಚ್ಚು ಮುತುವರ್ಜಿಯಿಂದ, ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಮತ್ತು ಇದಕ್ಕಾಗಿ ಮಸೀದಿ ಯಿಂದ ಮೊಳಗುವ "ಬಾಂಗ್" ನ ಕರೆಯನ್ನು ಅವಲಂಬಿಸುತ್ತಾರೆ.
ಮೊಸರು ಕುಡಿಕೆ ಉತ್ಸವ ಮದ್ಯಾಹ್ನ ಸುಮಾರು 3 ಗಂಟೆಗೆ ಆರಂಭವಾಗಿತ್ತು. ಮೈಕಿನಲ್ಲಿ ಭರ್ಜರಿ ಯಾಗಿ ಭಕ್ತಿಗೀತೆ, ಚಲನಚಿತ್ರಗೀತೆಗಳು ಪ್ರಸಾರವಾಗುತ್ತಿದ್ದ ಹಿನ್ನೆಲೆಯಲ್ಲಿ ನಾವು ಬಾಂಗ್ ಕರೆ ಕೇಳಿಸುವ ನಿರೀಕ್ಷೆಯನ್ನು ಆ ದಿನದ ಮಟ್ಟಿಗೆ ಕಳಕೊಂಡಿದ್ದೆವು. ಆದರೆ ಆಶ್ಚರ್ಯ ವೆಂಬಂತೆ ಸಂಜೆ 4 ಗಂಟೆಯ ಬಾಂಗಿನ ಕರೆಯಾಗುವಾಗ ಮೈಕಿನಲ್ಲಿ ಬರುತ್ತಿದ್ದ ಗೀತೆಗಳು ಸ್ತಬ್ಧವಾದುವು. ನಾವು ಇದು ಕಾಕತಾಳೀಯವಾಗಿರಬೇಕೆಂದು ತಿಳಿದುಕೊಂಡೆವು.
ಮುಸ್ಸಂಜೆ 7 ರ ಬಾಂಗ್ ಕರೆ ನಾವು ಉಪವಾಸ ವ್ರತ ಮುರಿಯುವ ಕರೆಯಾಗಿರುವುದರಿಂದ ಇದು ನಮಗೆ ಬಹಳ ಪ್ರಾಮುಖ್ಯ. ಈ ಸಮಯದಲ್ಲಿ ಉತ್ಸವದ ಮಂಟಪದಲ್ಲಿ ಬಹಳ ಜೋರಾಗಿ ರಸಮಂಜ ರಿಯಂತಹ ಕಾರ್ಯಕ್ರಮಗಳು ನಡೆಯುತ್ತಿದ್ದವು. ಆ ದಿನದ ಮಟ್ಟಿಗೆ ಗಡಿಯಾರ ನೋಡಿ ಉಪವಾಸ ಮುರಿಯುವುದೆಂದು ನಾವು ತೀರ್ಮಾನಿಸಿದೆವು. ಆದರೆ 7 ಗಂಟೆಗೆ ಸರಿಯಾಗಿ ಮತ್ತೊಮ್ಮೆ ಮೈಕು ಸಂಪೂರ್ಣ ನಿಶ್ಯಬ್ಧವಾಯಿತು. ಮಸೀದಿಯ ಬಾಂಗಿನ ಕರೆ ಮುಗಿಯುವವರೆಗೆ ಸ್ವಯಂ ಪ್ರೇರಿತವಾಗಿ ಕಾರ್ಯಕ್ರಮಗಳು ನಿಲ್ಲಿಸಲ್ಪಟ್ಟವು.
ಬಹಳ ವರ್ಷಗಳ ಅನಂತರ ಒಬ್ಬ ಭಾರತೀಯನಾಗಿ ನನ್ನ ದೇಶದ ಬಗ್ಗೆ ನನ್ನ ದೇಶದ ಸಂಸ್ಕ್ರತಿ ಯ ಬಗ್ಗೆ ಅನ್ಯ ಧರ್ಮೀಯರ ಭಾವನೆಗಳನ್ನು ಗೌರವಿಸುವ ನನ್ನ ಸಹೋದರ ಸಮುದಾಯದ ಹ್ರದಯ ವೈಶಾಲ್ಯದ ಬಗ್ಗೆ ಅಭಿಮಾನದಿಂದ ನನ್ನ ಹ್ರದಯ ಹಾಗೂ ಕಣ್ಣುಗಳು ತುಂಬಿ ಬಂದುವು.
ಭಾವನೆಗಳು ಕಲುಷಿತವಾಗಿರುವ ಈ ಸಮಾಜದಲ್ಲಿ ಇಂತಹ ಒಂದು ಸೌಜನ್ಯವನ್ನು ಖಂಡಿತ ವಾಗಿ ಯೂ ನಾನು ಕಾರ್ಯಕ್ರಮ ಸಂಘಟಕರಿಂದ ನಿರೀಕ್ಷಿಸಿರಲಿಲ್ಲ. ಆದರೂ ತಮ್ಮ ನಾಡಿನ ಭವ್ಯ ಸಂಸ್ಕ್ರತಿಯನ್ನು ಹ್ರದಯ ವೈಶಾಲ್ಯವನ್ನು ತಮ್ಮ ನಡೆ ನುಡಿಗಳ ಮೂಲಕ ಈ ಕಾರ್ಯ ಕ್ರಮದ ಸಂಘಟಕರು ತೋರಿಸಿಕೊಟ್ಟು ಮಾದರಿ ಎನಿಸಿದ್ದಾರೆ. ಸಹೋದರತೆಯ ಸಂದೇಶವನ್ನು ಸಾರಿದ್ದಾರೆ. ಮಾತ್ರವಲ್ಲ ಸಾಂಕೇತಿಕವಾಗಿ ಸ್ನೇಹ ಹಸ್ತವನ್ನು ನಮ್ಮತ್ತ ಚಾಚಿದ್ದಾರೆ ಎಂದು ನಾವು ಭಾವಿಸಿದರೆ ಖಂಡಿತಾ ತಪ್ಪಾಗಲಾರದು.
ಈ ಕೊಡುಗೆಯನ್ನು ಅಷ್ಟೇ ಗೌರವದಿಂದ ಪ್ರೀತಿಯಿಂದ ಹಾಗೂ ಕ್ರತಜ್ಞತೆಯಿಂದ ಸ್ವೀಕರಿಸಿ ಅದರಂತೆ ನಡೆದುಕೊಳ್ಳುವ ಜವಾಬ್ದಾರಿ ನನ್ನ ಮುಸ್ಲಿಂ ಸಮಾಜದ ಮೇಲಿದೆ ಎಂಬುದನ್ನು ನನ್ನ ಸಮಾಜ ಬಾಂಧವರು ಗಮನಿಸಬೇಕಾಗಿಯೂ ವಿನಂತಿಸುತ್ತೇನೆ.
ಅತ್ತಾವರ ಸಾರ್ವಜನಿಕ ಶ್ರೀಕ್ರಷ್ಣ ಜಯಂತ್ಯುತ್ಸವ ಸಮಿತಿಗಳಂತಹ ಸಂಘಟನೆಗಳ ಸಂತತಿ ಸಾವಿ ರವಾಗಲಿ, ಇದರ ಸಂಘಟಕರನ್ನು ದೇವರು ಆಶೀರ್ವದಿಸಲೆಂದು ಪ್ರಾರ್ಥಿಸುತ್ತಾ ನನ್ನ ವೈಯಕ್ತಿಕ ಹಾಗೂ ನನ್ನ ಸಮುದಾಯದ ತುಂಬು ಹ್ರದಯದ ಕ್ರತಜ್ಞತೆಗಳನ್ನು ಸಲ್ಲಿಸುತ್ತೇನೆ.
ವರದಿಯ ವಿವರಗಳು |
 |
ಕೃಪೆ : ವಿಜಯ್ ಸುವರ್ಣ ಕತಾರ್ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-09-08 00:00:00
|
|
| Vidyanand shetty, Bujumbura,Burundi | 2010-09-10 | | ಎಂಕ್ ಉಂದು ಸುದ್ದಿ ಕೇಂಡ್ ಬಾರೀ ಕುಶಿ ಆಂಡ್. ಇಂಚಿನೆ ಮಾತೆರ್ಲಾ ಒಟ್ಟಾದು ನಮ್ಮನ ಊರ್ನ ಲಾಯ್ಕ್ ಮಲ್ಪುಗಾ . ದೇವರ್ ಮಾತೆರ್ಗ್ಲಾ ಎಡ್ಡೆ ಬುದ್ದಿ ಕೊರೋಡ್ ಪಣ್ದ್ ದೇವರೆಡೆ ನಟ್ಟೋನ್ವೆ . ಜೈ ಹಿಂದ್ |
| YASHAVANTH G SHETTY, MANGALORE | 2010-09-09 | | Eid Mubarak 2 all Muslim Brothers, Sisters, Dears,Nears & Friends.
Moved reading this article.Thanks Mr. Abdul Rahim,M'lore.
It's time let's all stop fighting, misunderstanding, ill treating each other on the basis of religion. & re-iterate once again the unity & Diverse culture of Our 'Great INDIA'with Pride. U made Indians shine 4 the time being. Let's all pledge 2 continue this right spirit. May Almighty Bless us all & help us bring peace & Harmony amongst us as True Indians -A True Example 2 the whole World. |
| Zulfiakar, Mangalore / KSA | 2010-09-09 | | ಶ್ರೀ ಅಬ್ದುಲ್ ರೆಹೀಮ್ ನವರ ಪತ್ರವು ಎದೆಗೆ ಹಿಡಿದ ಕನ್ನಡಿಯಂತಿದೆ. ನಿಜವಾಗಿಯೋ ಅತ್ತಾವರ್ಅ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿಯವರು ತೋರಿಸಿದ ಮಾದರಿಯು ಜಿಲ್ಲೆಗೆ ಮಾದರಿಯಾಗಿದೆ. ಇಂತಹ ಸಮಿತಿಯು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲೂ ಇದ್ದರೆ ನಮ್ಮ ಕರ್ನಾಟಕವು ಎಲ್ಲಾ ರಾಜ್ಯಕ್ಕೂ ಮಾದರಿಯಾದೀತು.
. ಹಾಗೆಯೇ ಮುಸ್ಲಿಮ್ ಸಮುದಾಯದವರೂ ಸಹಕರಿಸಬೇಕು |
| ವಿಜಯ್ ಸುವರ್ಣ , ಕತಾರ್ | 2010-09-08 | | ಶ್ರೀ ಅಬ್ದುಲ್ ರಹೀಂ, ಮಂಗಳೂರು ರವರ ಈ ಪುಟ್ಟ ಬರಹ ಇಂದು ತಾರೀಕು ೮ನೇ ಸೆಪ್ಟೆಂಬರ್ ನ ಉದಯವಾಣಿ ಕನ್ನಡ ದೈನಿಕದ ಜನತಾವಾಣಿ ವಿಭಾಗದಲ್ಲಿ ಪ್ರಕಟವಾಗಿದೆ. ಅವರ ಮನದಾಳದಿಂದ ತುಂಬಿಬಂದ ಅರ್ಥಪೂರ್ಣ ಬರಹವನ್ನು ಗಲ್ಫ್ ಕನ್ನಡಿಗಕ್ಕೆ ಕಳುಹಿಸಿದ್ದೇನೆ. ಗಲ್ಫ್ ಕನ್ನಡಿಗದ ಪ್ರತಿಸ್ಪಂದನ ವಿಭಾಗದಲ್ಲಿ ಕೆಲವರು ಒಬ್ಬರಿನ್ನೊಬ್ಬರ ಮೇಲೆ ಅನಗತ್ಯವಾಗಿ ಕೆಸರೆರಚಿ ಕೊಳ್ಳುತ್ತಿರುವವರು ಅಬ್ದುಲ್ ರಹೀಂ ರವರ ಈ ಪತ್ರವನ್ನು ಓದಿಯಾದರೂ ನೇರದಾರಿ ಹಿಡಿಯಲಿ ಎಂಬ ಹಾರೈಕೆ. |
|