ಕುರ್‌ಆನ್‌ಗೆ ಅಪಚಾರವಾದರೆ ಅಮೆರಿಕ ಸೇನೆಗೆ ಆಪತ್ತು: ಅಫ್ಘಾನ್‌ನಲ್ಲಿನ ಅಮೆರಿಕನ್ ಪಡೆಗಳ ಕಮಾಂಡರ್ ಪೆಟರಸ್ ಎಚ್ಚರಿಕೆ |
ಪ್ರಕಟಿಸಿದ ದಿನಾಂಕ : 2010-09-08
ವಾಶಿಂಗ್ಟನ್,ಸೆ.7:ಇಸ್ಲಾಂನ ಪರಮ ಪವಿತ್ರ ಧರ್ಮಗ್ರಂಥ ಕುರ್‌ಆನ್‌ನ ಪ್ರತಿಗಳನ್ನು ದಹಿಸುವ ಹೇಯ ಕೃತ್ಯಕ್ಕೆ ಅಮೆರಿಕದ ಚರ್ಚ್ ಸಂಘಟನೆಯೊಂದು ಮುಂದಾದಲ್ಲಿ, ವಿಶ್ವದ ವಿವಿಧೆಡೆಗಳಲ್ಲಿರುವ ಸಾವಿರಾರು ಅಮೆರಿಕನ್ ಸೈನಿಕರ ಜೀವವು ಅಪಾಯಕ್ಕೆ ಸಿಲುಕಲಿದೆ ಎ೦ದು ಅಫ್ಘಾನ್‌ನಲ್ಲಿರುವ ಅಮೆರಿಕ ಪಡೆಗಳ ವರಿಷ್ಠ ಕಮಾಂಡರ್ ಡೇವಿಡ್ ಪೆಟರಸ್ ಎಚ್ಚರಿಕೆ ನೀಡಿದ್ದಾರೆ. ಈ ದುಷ್ಕೃತ್ಯವು ''ಕಾಬೂಲ್ ಮಾತ್ರವಲ್ಲ ಜಗತ್ತಿನ ಎಲ್ಲೆಡೆಯೂ ಗಂಭೀರ ಸಮಸ್ಯೆಗಳನ್ನು'' ಸೃಷ್ಟಿಸಲಿದೆಯೆಂದು ಪೆಟರಸ್ ಆತಂಕ ವ್ಯಕ್ತಪಡಿಸಿದ್ದಾರೆ.
ಮುಸ್ಲಿಮರ ಪವಿತ್ರ ಧರ್ಮಗ್ರಂಥ ಕುರ್‌ಆನ್‌ಗೆ ಅಪಚಾರವೆಸಗುವ ಹೇಳಿಕೆಗಳನ್ನು ನೀಡಿರುವ ಅಮೆರಿಕದ 'ಡೋವ್ ವರ್ಲ್ಡ್ ಔಟ್‌ರೀಚ್ ಸೆಂಟರ್' ಚರ್ಚ್ ಪಂಥದ ವಿರುದ್ಧ ಮಂಗಳವಾರ ಅಫ್ಘಾನಿ ಸ್ತಾನದ ರಾಜಧಾನಿ ಕಾಬುಲ್‌ನಲ್ಲಿ ಸಾವಿರಾರು ಜನರು ಪ್ರತಿಭಟನಾ ರ್ಯಾಲಿ ನಡೆಸಿದರು.
ಈ ಬಗ್ಗೆ ಮಂಗಳವಾರ ಅಮೆರಿಕದ ಮಾಧ್ಯಮಗಳಿಗೆ ಹೇಳಿಕೆಯೊಂದನ್ನು ನೀಡಿರುವ ಜನರಲ್ ಪೆಟರಸ್, ಈ ಕ್ರಮವು ಅಮೆರಿಕನ್ ಪಡೆಗಳಿಗೆ ಅಪಾಯವನ್ನೊಡ್ಡಲಿದೆ ಹಾಗೂ ಶಾಂತಿ ಸ್ಥಾಪನೆಯ ಒಟ್ಟಾರೆ ಪ್ರಯತ್ನವನ್ನೇ ಹಾಳು ಗೆಡವಲಿದೆ. ಇದರಿಂದ ಗಂಭೀರ ಪರಿಣಾಮಗಳಾಗಲಿವೆ'' ಎಂದು ಹೇಳಿದ್ದಾರೆ.
''ಅಫ್ಘಾನ್‌ನಲ್ಲಿ ಮಾತ್ರವಲ್ಲ, ಜಗತ್ತಿನ ಎಲ್ಲೆಡೆಗಳಿಂದಲೂ ಇಸ್ಲಾಮಿಕ್ ಸಮುದಾಯದಿಂದ ನಾವು ತೀವ್ರ ವಿರೋಧವನ್ನು ಎದುರಿಸಬೇಕಾದೀತು'' ಎಂದು ಪೆಟರಸ್ ಕಳವಳ ವ್ಯಕ್ತಪಡಿಸಿದ್ದಾರೆ. ಪೆಟರಸ್ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಬಂಡುಕೋರರ ವಿರುದ್ಧ ಸಮರ ನಿರತವಾಗಿರುವ 1.50 ಲಕ್ಷ ಸೈನಿಕ ಬಲದ ನ್ಯಾಟೊ ಸೇನೆಯ ನೇತೃತ್ವ ವಹಿಸಿದ್ದಾರೆ.
ಅಮೆರಿಕದ 'ಡೋವ್ ವರ್ಲ್ಡ್ ಔಟ್‌ರೀಚ್ ಸೆಂಟರ್' ಎಂಬ ಚರ್ಚ್ ಸಂಘಟನೆಯೊಂದರ ಮುಖ್ಯಸ್ಥ ಎನಿಸಿಕೊಂಡಿರುವ ಟೆರ್ರಿ ಜೋನ್ಸ್ ಎಂಬಾತ, ಅಮೆರಿಕದ ಮೇಲೆ ನಡೆದ 9/11 ದಾಳಿ ಘಟನೆಯ ವರ್ಷಾಚರಣೆಯನ್ನು ಸೆ.11 ರಂದು ಆಚರಿಸುವ ಸಂದರ್ಭದಲ್ಲಿ ಇಸ್ಲಾಂನ ಪವಿತ್ರ ಧರ್ಮಗ್ರಂಥದ ಪ್ರತಿಗಳನ್ನು ದಹಿಸಲಾಗುವುದೆಂದು ಹೇಳಿಕೊಂಡಿದ್ದಾನೆ.
'ಡೋವ್ ವರ್ಲ್ಡ್ ಔಟ್‌ರೀಚ್ ಸೆಂಟರ್' ನಿರ್ಧಾರದ ವಿರುದ್ಧ ವಿಶ್ವವ್ಯಾಪಿ ಪ್ರತಿಭಟನೆಗಳು ಭುಗಿಲೆ ದ್ದಿವೆ. ಈ ಮಧ್ಯೆ ಕಾಬೂಲ್‌ನಲ್ಲಿರುವ ಅಮೆರಿಕ ರಾಯಭಾರಿ ಕಚೇರಿ ಹೇಳಿಕೆಯೊಂದನ್ನು ಜಾರಿಗೊಳಿ ಸಿ, ಫ್ಲಾರಿಡಾದ ಗ್ಲೈನ್ಸ್‌ವಿಲ್ಲೆಯಲ್ಲಿರುವ ಈ ಪ್ರತ್ಯೇಕ ಚರ್ಚ್ ಪಂಥದ ಯೋಜನೆಯನ್ನು ಖಂಡಿಸಿದೆ.
ಅಫ್ಘಾನಿಸ್ತಾನದಲ್ಲಿರುವ ನ್ಯಾಟೊ ಸೈನಿಕ ತರಬೇತಿ ದಳದ ಕಮಾಂಡರ್ ಲೆ. ಜ. ವಿಲಿಯಂ ಕಾಲ್ಡ್ ವೆಲ್, ಮಂಗಳವಾರ ಸಿಎನ್‌ಎನ್ ಸುದ್ದಿಸಂಸ್ಥೆಯೊಂದಿಗೆ ಮಾತನಾಡುತ್ತ, ''ಕುರ್‌ಆನ್ ಮುಸ್ಲಿಮರ ಪವಿತ್ರ ಗ್ರಂಥ. ಯಾರಾದರೊಬ್ಬರು ಅದನ್ನು ಹಾನಿಗೊಳಿಸುವುದಾಗಿ ಮತ್ತು ಅಪಚಾರವೆಸಗುವುದಾ ಗಿ ಹೇಳಿದಾಗ, ತಕ್ಷಣವೇ ಅದು ಮುಸ್ಲಿಮರಲ್ಲಿ ಆಕ್ರೋಶ ಹಾಗೂ ಆತಂಕವನ್ನು ಸೃಷ್ಟಿಸುತ್ತದೆ'' ಎಂದಿ ದ್ದಾರೆ.
ಅಮೆರಿಕನ್ ಚರ್ಚ್‌ನ ಘೋಷಣೆಯನ್ನು ಪ್ರತಿಭಟಿಸಿ, ಕಾಬೂಲ್‌ನಲ್ಲಿ ಸೋಮವಾರ ಸಾವಿರಾರು ಮಂ ದಿ ಪ್ರತಿಭಟನಕಾರರು ರ್ಯಾಲಿ ನಡೆಸಿ, ''ಇಸ್ಲಾಂ ಚಿರಾಯುವಾಗಲಿ'' ಹಾಗೂ '' ಅಮೆರಿಕಕ್ಕೆ ಮೃತ್ಯು'' ಇತ್ಯಾದಿ ಘೋಷಣೆಗಳನ್ನು ಕೂಗಿದರು. 'ಡೋವ್ ವರ್ಲ್ಡ್ ಔಟ್ ರೀಚ್ ಸೆಂಟರ್'ನ ಮುಖ್ಯಸ್ಥ ಜೋನ್ಸ್‌ನ ಪ್ರತಿಕೃತಿಯನ್ನು ಕೂಡಾ ಅವರು ದಹಿಸಿದರು. ಇಂಡೋನೇಶ್ಯದಲ್ಲಿಯೂ ಪ್ರತಿಭಟನೆಗಳು ಭುಗಿಲೆದ್ದಿದ್ದು, ಶನಿವಾರ ನಡೆದ ರ್ಯಾಲಿಗಳಲ್ಲಿ ಸಹಸ್ರಾರು ಮಂದಿ ಪಾಲ್ಗೊಂಡಿದ್ದರು.
ವರದಿಯ ವಿವರಗಳು |
 |
ಕೃಪೆ : ವಾಭಾ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-09-08 00:00:00
|
|
|