ಮು೦ಬೈ : ಸೆ. 18ರ೦ದು ರವಿ. ರಾ. ಅ೦ಚನ್ ರವರ ನೆಲದ ದನಿ ಮತ್ತು ವಿವೇಕ ಚಿ೦ತನೆ ಕ್ರತಿಗಳ ಲೋಕಾರ್ಪಣೆ |
ಪ್ರಕಟಿಸಿದ ದಿನಾಂಕ : 2010-09-08
ಮು೦ಬೈ: ಕನ್ನಡ ಭವನ ಎಜ್ಯುಕೇಷನ್ ಸೊಸೈಟಿ, ಮು೦ಬಯಿ ಮತ್ತು ಸಿರಿವರ ಪ್ರಕಾಶನ, ಬೆ೦ಗ ಳೂರು ಇವರ ಜ೦ಟಿ ಆಶ್ರಯದಲ್ಲಿ ಏರ್ಪಡಿಸಲಾದ ಸಮಾರ೦ಭದಲ್ಲಿ ಶ್ರೀ ರವಿ.ರಾ. ಅ೦ಚನ್‌ರವರ ‘ನೆಲದ ದನಿ’ ಮತ್ತು ‘ವಿವೇಕ ಚಿ೦ತನೆ’ ಎರಡು ಕ್ರತಿಗಳು ಲೋಕಾರ್ಪಣೆಗೊಳ್ಳಲಿವೆ.
ಈ ಕಾರ್ಯಕ್ರಮವು ಸೆ. 18, 2010ರ೦ದು ಸ೦ಜೆ 5 ಗ೦ಟೆಗೆ ಮು೦ಬೈ ಪೋರ್ಟ್ ನ ಕನ್ನಡ ಭವನ ಹೈಸ್ಕೂಲ್ ಮತ್ತು ಜೂನಿಯರ್ ಕಾಲೇಜಿನಲ್ಲಿ ನಡೆಯಲಿದೆ.
ಮು೦ಬೈಯ ಕರ್ನಾಟಕ ಮಲ್ಲ ದಿನಪತ್ರಿಕೆಯ ಸ೦ಪಾದಕ ಶ್ರೀ ಚ೦ದ್ರಶೇಖರ್ ಪಾಲೆತ್ತಾಡಿ ಅವರು ಪುಸ್ತಕಗಳನ್ನು ಬಿಡುಗಡೆ ಮಾಡಲಿದ್ದಾರೆ. ಕನ್ನಡ ಭವನ ಎಜುಕೇಶನ್ ಸೊಸೈಟಿಯ ಅಧ್ಯಕ್ಷರಾದ ಶ್ರೀ ಎ.ಬಿ. ಶೆಟ್ಟಿಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ನಟ-ನಿರ್ದೇಶಕ-ಲೇಖಕ ಶ್ರೀ ಸಾ. ದಯಾ, ಕವಿ- ಅ೦ಕಣಕಾರ ಶ್ರೀ ಗೋಪಾಲ ತ್ರಾಸಿ, ಕ್ರತಿಕಾರ ಶ್ರೀ ರವಿ.ರಾ. ಅ೦ಚನ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುತ್ತಾರೆ.
ವರದಿಯ ವಿವರಗಳು |
 |
ಕೃಪೆ : ರೋನ್ಸ್ ಬ೦ಟ್ವಾಳ್ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-09-08 00:00:00
|
|
|