ರಾಹುಲ್ ಗಾಂಧಿಗೂ ಚಪ್ಪಲಿ ಎಸೆತ ಭೀತಿಯೇ?. ರಾಹುಲ್ ಕಾರ್ಯಕ್ರಮಕ್ಕೆ ಚಪ್ಪಲಿ ಧರಿಸಿರುವವರಿಗೆ ಪ್ರವೇಶವಿಲ್ಲ! |
ಪ್ರಕಟಿಸಿದ ದಿನಾಂಕ : 2010-09-08
ಅಕೋಲಾ(ಮಹಾರಾಷ್ಟ್ರ): ರಾಜಕಾರಣಿಗಳಿಗೆ ಈಗ ಚಪ್ಪಲಿ ಭಯ ಕಾಡುತ್ತಿದೆ. ಹಿಂದೆಲ್ಲಾ ಎಲ್ಲೆಂದ ರಲ್ಲಿ, ಮೈಕ್ ಸಿಕ್ಕ ತಕ್ಷಣ ಭಾಷಣಕ್ಕೆ ನಿಂತು ಬಿಡುತ್ತಿದ್ದ ರಾಜಕಾರಣಿಗಳಿಗೆ ಎಲ್ಲಿ, ಯಾರು, ಏನನ್ನು ಎಸೆದು ಬಿಡುತ್ತಾರೋ ಎಂಬ ಭಯ ಆವರಿಸುತ್ತಿದೆ.
ಇದೇ ಭಯ ಮಹಾರಾಷ್ಟ್ರ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಅವರಿಗೂ ಕಾಡಿತು. ಅಕೋಲಾದಲ್ಲಿ ಏರ್ಪಡಿಸಲಾಗಿದ್ದ ವಿದ್ಯಾರ್ಥಿಗಳೊಡನೆ ರಾಹುಲ್ ಸಂವಾದ ಕಾರ್ಯಕ್ರಮಗಲ್ಲಿ ಚಪ್ಪಲಿ ಧರಿಸಿದ್ದ ಯಾವುದೇ ವಿದ್ಯಾರ್ಥಿಗೂ ಪ್ರವೇಶದ ಅನುಮತಿ ನೀಡಲೇ ಇಲ್ಲ. ಪಾಪ ವಿದ್ಯಾರ್ಥಿಗಳು ತಮ್ಮದೇ ಕಾಲೇಜಿನಲ್ಲಿ ಚಪ್ಪಲಿ ಹಾಕಿಕೊಂಡು ಬಂದ ತಪ್ಪಿಗೆ(?) ಹೊರಗೆ ನಿಲ್ಲಬೇಕಾದ ಪ್ರಸಂಗವೂ ಎದುರಾ ಯಿತು.
ಆದರೂ ಕಾರ್ಯಕ್ರಮ ಆರಂಭವಾದ ಎಷ್ಟೋ ಹೊತ್ತಿನ ಬಳಿಕ ಕೃಪೆ ತೋರಿ ಚಪ್ಪಲಿ ಧರಿಸಿದ ವಿದ್ಯಾ ರ್ಥಿಗಳಿಗೂ ಸಭಾಂಗಣಕ್ಕೆ ಪ್ರವೇಶ ನೀಡಲಾಯಿತಾದರೂ ಅರ್ಧಕ್ಕೂ ಹೆಚ್ಚು ವಿದ್ಯಾರ್ಥಿ ಗಳು ಬೇಸರ ದಿಂದ ಅಲ್ಲಿಂದ ತೆರಳಿದ್ದರು. ಕಾಲೇಜಿನಲ್ಲಿ ಮಾತನಾಡಿದ ರಾಹುಲ್ ವಿದ್ಯಾರ್ಥಿ ಗಳಿಗೆ ರಾಜಕಾರಣಕ್ಕೆ ಬರುವಂತೆ ಕರೆ ನೀಡಿದರು.
'ಯುವರಾಜ' ರಾಹುಲ್ ಗಾಂಧಿಗೂ ಚಪ್ಪಲಿ ಎಸೆತ ಭೀತಿಯೇ?
ಅಕೋಲಾ, ಬುಧವಾರ, 8 ಸೆಪ್ಟೆಂಬರ್ 2010 ಪ್ರತಿಭಟನೆಯ ನೂತನ ಅಸ್ತ್ರವಾಗಿ ಮಾರ್ಪಟ್ಟಿರುವ ಬೂಟೆಸೆತಗಳು ರಾಜಕಾರಣಿಗಳ ಮೇಲೆ ಪ್ರಯೋಗವಾಗುತ್ತಿರುವುದು ಪರಿಣಾಮಕಾರಿ ಪ್ರಮಾಣದಲ್ಲಿ ಹೆಚ್ಚುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಮಹಾರಾಷ್ಟ್ರ ಪೊಲೀಸರು, ಇಲ್ಲಿಗೆ ಆಗಮಿಸಿರುವ ರಾಹುಲ್ ಗಾಂಧಿ ಜತೆ ಸಂವಹನ ನಡೆಸುವ ವಿದ್ಯಾರ್ಥಿಗಳು ಬರಿಗಾಲಲ್ಲಿ ಹೋಗಬೇಕು ಎಂದು ಫರ್ಮಾನು ಹೊರಡಿಸಿದ ಪ್ರಸಂಗ ವರದಿಯಾಗಿದೆ.
ಮಹಾರಾಷ್ಟ್ರದ ವಿದರ್ಭ ಪ್ರಾಂತ್ಯದಲ್ಲಿನ ಅಕೋಲಾ ಜಿಲ್ಲೆಯ ಪಂಜಾಬ್‌ರಾವ್ ಕೃಷಿ ವಿದ್ಯಾಪೀಠದ ವಿದ್ಯಾರ್ಥಿಗಳ ಜತೆ ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ಮಾತುಕತೆ ನಡೆಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಅದರಂತೆ ಕಾಲೇಜಿನ ಸಭಾಂಗಣಕ್ಕೆ ವಿದ್ಯಾರ್ಥಿಗಳು ತೆರಳುವವರಿದ್ದರು. ಆದರೆ ಅವರನ್ನು ತಡೆದ ಪೊಲೀಸರು ಚಪ್ಪಲಿ, ಬೂಟುಗಳನ್ನು ಹೊರಗೆ ಬಿಟ್ಟು ಹೋಗುವಂತೆ ಕಟ್ಟುನಿಟ್ಟಾಗಿ ಸೂಚಿಸಿದರು. ಇದಕ್ಕೆ ನಿರಾಕರಿಸಿದರನ್ನು ಪ್ರವೇಶಿಸಲು ಅವಕಾಶ ನೀಡಬೇಡಿ ಎಂದು ನಮಗೆ ಸೂಚನೆ ಬಂದಿದೆ ಎಂದು ಈ ಕುರಿತು ಭದ್ರತಾ ಅಧಿಕಾರಿಗಳು ಪ್ರತಿಕ್ರಿಯಿಸಿದ್ದರು.
ದೇಶದಾದ್ಯಂತ ರಾಜಕೀಯ ಪ್ರವಾಸ ಮಾಡುತ್ತಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿದ್ಯಾರ್ಥಿಗಳು ಮತ್ತು ಯುವ ಜನತೆಯ ಜತೆ ಸಂವಹನ ನಡೆಸುತ್ತಿದ್ದು, ಅದರ ಭಾಗವಾಗಿ ಮಹಾರಾಷ್ಟ್ರಕ್ಕೆ ಮಂಗಳವಾರ ಆಗಮಿಸಿದ್ದರು.
ಕಾರ್ಯಕ್ರಮಕ್ಕೆ ಚಪ್ಪಲಿಗಳನ್ನು ಧರಿಸಲು ಅವಕಾಶ ನಿರಾಕರಿಸಿರುವ ವಿಚಾರ ವಿವಾದಕ್ಕೆ ಕಾರಣವಾಗುತ್ತಿದೆ ಎಂಬುದನ್ನು ಗಮನಕ್ಕೆ ತೆಗೆದುಕೊಂಡ ಅಧಿಕಾರಿಗಳು ಚರ್ಚೆ ನಡೆಸಿ ನಂತರ ರದ್ದು ಮಾಡಿದರು. ಆದರೆ ಅಷ್ಟರಲ್ಲಾಗಲೇ ಬಹುತೇಕ ವಿದ್ಯಾರ್ಥಿಗಳು ತಮ್ಮ ಚಪ್ಪಲಿ-ಶೂಗಳನ್ನು ಹೊರಗೆ ಬಿಟ್ಟು ಸಭಾಂಗಣ ಪ್ರವೇಶಿಸಿದ್ದರು.
ರಾಜಕಾರಣಿಗಳ ಮೇಲೆ ಬೂಟೆಸೆಯುವ ಬೆಳವಣಿಗೆ ಆರಂಭವಾದದ್ದು ಅಮೆರಿಕಾ ಮಾಜಿ ಅಧ್ಯಕ್ಷ ಜಾರ್ಜ್ ಡಬ್ಲ್ಯೂ ಬುಶ್ ಅವರ ಮೂಲಕ. ಬುಶ್ ಅವರಿಗೆ ಬಾಗ್ದಾದ್‌ನಲ್ಲಿ ಇರಾಕ್ ಪತ್ರಕರ್ತ 2008ರ ಡಿಸೆಂಬರ್ ತಿಂಗಳಲ್ಲಿ ಬೂಟೆಸೆಯುವ ಮೂಲಕ ತನ್ನ ಪ್ರತಿಭಟನೆಯನ್ನು ವ್ಯಕ್ತಪಡಿಸಿದ್ದ.
ಆ ಬಳಿಕ ಚೀನಾ ಪ್ರಧಾನಿ ವೆನ್ ಜಿಯಾಬೋ, ಪಾಕಿಸ್ತಾನಿ ಅಧ್ಯಕ್ಷ ಆಸಿಫ್ ಆಲಿ ಜರ್ದಾರಿ, ಕೇಂದ್ರ ಗೃಹಸಚಿವ ಪಿ. ಚಿದಂಬರಂ, ಬಿಜೆಪಿ ವರಿಷ್ಠ ಎಲ್.ಕೆ. ಅಡ್ವಾಣಿ ಮತ್ತು ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಸೇರಿದಂತೆ ಹಲವು ಮಂದಿ ಬೂಟೆಸೆತಗಳಿಗೆ ಒಳಗಾಗಿದ್ದಾರೆ.
ವರದಿಯ ವಿವರಗಳು |
 |
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-09-08 00:00:00
|
|
| Saif, Ajman | 2010-09-08 | | No Mr Rahul Gandhi, you need not worry about 'Chappal' missile as many Indians do not want to put their 'foot protector Chappals' to shame! |
|