ಡಾ.ಕಿರಣ್‌ಬೇಡಿ ಅವರ ''ಬ್ರೂಮ್ ಅಂಡ್ ಗ್ರೂಮ್' ಪುಸ್ತಕ ಬಿಡುಗಡೆ |
ಪ್ರಕಟಿಸಿದ ದಿನಾಂಕ : 2010-09-08
ಬೆಂಗಳೂರು : ದೇಶದ ಪ್ರಥಮ ಐಪಿಎಸ್ ಅಧಿಕಾರಿ ಡಾ.ಕಿರಣ್‌ಬೇಡಿ ಮತ್ತು ಪವನ್ ಚೌದರಿ ಅವರ 'ಬ್ರೂಮ್ ಅಂಡ್ ಗ್ರೂಮ್' ಕೃತಿ ಇಂದಿಲ್ಲಿ ಬಿಡುಗಡೆಯಾಯಿತು.
ನಗರದ ಸ್ಟ್ರಾಂಟ್ ಬುಕ್‌ಸ್ಟಾಲ್‌ನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ 'ಬ್ರೂಮ್ ಅಂಡ್ ಗ್ರೂಮ್' ಕೃತಿಯನ್ನು ಬಿಡುಗಡೆಗೊಳಿಸ ಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಡಾ.ಕಿರಣ್‌ಬೇಡಿ, 'ಸಭ್ಯತಾ ಹಮಾರಾ ಜನಮ್ ಸಿದ್œ ಅಧಿ ಕಾರ್ ಹೈ' ಎಂಬುದು ನಮ್ಮ ಮಂತ್ರ. ಬ್ರೂಮ್ ಅಂಡ್ ಗ್ರೂಮ್ ಪುಸ್ತಕವು ಸಮಾಜದಲ್ಲಿ ನಾವು ವೈಯಕ್ತಿಕವಾಗಿ ಮತ್ತು ಸಾಮೂಹಿಕವಾಗಿ ನಿರ್ಮಿಸಿದ ಮತ್ತು ಬೆಳೆಸಿಕೊಂಡು ಬಂದ ಸನ್ನಿವೇಶಗಳಿಗೆ ಕನ್ನಡಿ ಹಿಡಿಯುತ್ತದೆ. ಇನ್ನೊಬ್ಬರೊಂದಿಗೆ ವ್ಯವಹರಿಸುವಾಗ ಹಾಗೂ ಸಾಮಾನ್ಯವಾಗಿ ನಾವು ಹೇಗೆ ವರ್ತಿಸುತ್ತೇವೆ ಎಂಬುದನ್ನು ಪುಸ್ತಕ ಬಿಂಬಿಸುತ್ತದೆ ಎಂದು ತಿಳಿಸಿದರು.
ನಾಗರಿಕ ನಡವಳಿಕೆಯಲ್ಲಿ ಸಾಮಾಜಿಕ ಪುನರುಜ್ಜೀವನ ತರುವುದು ನಮ್ಮ ಆಶಯವಾಗಿದೆ. ನಮ್ಮ ಈ ಹಂಬಲವನ್ನು ಬ್ರೂಮ್ ಅಂಡ್ ಗ್ರೂಮ್ ಕೃತಿ ವ್ಯಕ್ತಪಡಿಸುತ್ತದೆ. ಅಧಿ ಕಾರದಲ್ಲಿರುವವರು ಮತ್ತು ಸಾರ್ವಜನಿಕರು ಒಂದುಗೂಡಿ ತಮ್ಮ ಜೀವನದ ಸ್ಥಿತಿಗತಿಯನ್ನು ಸಂಪೂರ್ಣವಾಗಿ ಬದಲಿಸಿಕೊಳ್ಳುವ ಪ್ರಜ್ಞಾಪೂರ್ವಕ ಚಳವಳಿ ಆಗಬೇಕು. ಬ್ರೂಮ್ ಅಂಡ್ ಗ್ರೂಮ್ ಮೂಲಕ ನಾವು ನಮ್ಮ ನಡೆಯನ್ನು ಆರಂಭಿಸಿದ್ದೇವೆ ಎಂದು ಹೇಳಿದರು.
ಪ್ರಕಾಶನದ ಅನು ಆನಂದ್, ಭಾರತೀಯ ವಿದ್ಯಾಪೀಠ ನಿರ್ವಹಣಾ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಸಚಿನ್ ವೆಣೇìಕರ್ ಮಾತನಾಡಿದರು.
ವರದಿಯ ವಿವರಗಳು |
 |
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-09-08 00:00:00
|
|
|