ಶೀಂಬ್ರ: ಸ್ನಾನ ಘಟ್ಟ ನಿರ್ಮಾಣ - ಡಾ ಆಚಾರ್ಯ |
ಪ್ರಕಟಿಸಿದ ದಿನಾಂಕ : 2010-09-08
ಉಡುಪಿ : ಪೆರಂಪಳ್ಳಿಯ ಶೀಂಬ್ರ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಬಳಿ ಸ್ವರ್ಣಾ ನದಿಯಲ್ಲಿ ಪವಿತ್ರ ತೀರ್ಥ ಸ್ನಾನ ಮಾಡುವವ ರಿಗಾಗಿ ಸುಮಾರು 25 ಲ.ರೂ. ವೆಚ್ಚದಲ್ಲಿ ಸ್ನಾನ ಘಟ್ಟ, ತಡೆದಂಡೆ, ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ, ಶೌಚಾಯಲವೇ ಮೊದ ಲಾದ ಮೂಲಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳುವುದಾಗಿ ಸಚಿವ ಡಾವಿ.ಎಸ್. ಆಚಾರ್ಯ ಹೇಳಿದ್ದಾರೆ.
ಮಂಗಳವಾರ ಕೃಷ್ಣಾಂಗಾರಕ ಚತುರ್ದಶಿಯಂದು ಪತ್ನಿ ಶಾಂತಾ ಆಚಾರ್ಯರ ಜತೆಗೂಡಿ ಬಾಗಿನ ಸಮರ್ಪಿಸಿ ಮಾತನಾಡಿದ ಅವರು, ಸ್ಥಳೀಯರು ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗಿ ಸಲ್ಲಿಸಿದ ಬೇಡಿಕೆಯನ್ನು ಈಡೇರಿಸಲು ವಿವಿಧ ಇಲಾಖೆಗೆ ಸೂಚಿಸುವುದಾಗಿ ತಿಳಿಸಿದರು.

ಶಾಸಕ ಕೆ. ರಘುಪತಿ ಭಟ್, ಜಿಲ್ಲಾಧಿ ಕಾರಿ ಪಿ. ಹೇಮಲತಾ, ಎಸ್ಪಿ ಪ್ರವೀಣ್ ಮಧುಕರ ಪವಾರ್, ನಗರಾಭಿವೃದ್ಧಿ ಪ್ರಾಧಿ ಕಾರದ ಅಧ್ಯಕ್ಷ ಸುಧಾಕರ ಶೆಟ್ಟಿ, ಆಯುಕ್ತ ರಮಾನಂದ ನಾಯಕ್, ನಗರಸಭೆ ಉಪಾಧ್ಯಕ್ಷೆ ಭಾರತೀ ಚಂದ್ರಶೇಖರ್, ಜಿ.ಪಂ. ಸಿಇಒ ಎನ್.ರಾಜಶೇಖರ್, ಡಿಎಸ್ ಪ್ರಾಣೇಶ ರಾವ್, ತಹಶೀಲ್ದಾರ್ ವಿ. ಪ್ರಸನ್ನ, ಶ್ರೀ ಸೋದೆ ಮಠದ ದಿವಾನ್ ಪಾಡಿಗಾರು ಶ್ರೀನಿವಾಸ ತಂತ್ರಿ, ಉದ್ಯಮಿಗಳಾದ ಭುವನೇಂದ್ರ ಕಿದಿಯೂರು, ಎಂ. ಸೋಮಶೇಖರ ಭಟ್, ಬಾಲಾಜಿ ರಾಘವೇಂದ್ರ ಆಚಾರ್ಯ, ನಗರಸಭಾ ಸದಸ್ಯ ರಮೇಶ ನಾಯಕ್, ಎಂಜಿನಿಯರ್ ರಮೇಶ ರಾವ್, ಸ್ಥಳೀಯ ಸಂಘ ಸಂಸ್ಥೆಗಳ ಪದಾಧಿ ಕಾರಿಗಳು ಉಪಸ್ಥಿತರಿದ್ದರು.
ಸಾವಿರಾರು ಜನರು ತೀರ್ಥಸ್ನಾನ ಮಾಡಿದರು.
ವರದಿಯ ವಿವರಗಳು |
 |
ಕೃಪೆ : ಜೆ.ಪಿ.ಕಿಣಿ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-09-08 00:00:00
|
|
|