ಬ್ರಿಟನ್: ಸಂಸದನ ಪತ್ನಿಯಿಂದ ವೇಶ್ಯಾವೃತ್ತಿ |
ಪ್ರಕಟಿಸಿದ ದಿನಾಂಕ : 2010-09-08
ಲಂಡನ್ : ಬ್ರಿಟನ್‌ನ ಸಂಸದರೋರ್ವರ ಪತ್ನಿ ವೇಶ್ಯಾವೃತ್ತಿಯಲ್ಲಿ ತೊಡಗಿರುವುದು ಬಹಿರಂಗಗೊಂಡಿದೆ. ಆಕೆ ಸ್ವತಃ ವೇಶ್ಯಾಗೃಹವೊಂದನ್ನು ನಡೆಸುತ್ತಿರುವ ಬಗ್ಗೆ ಮಾಧ್ಯಮವೊಂದು ವರದಿ ಮಾಡಿದ್ದು, ಈ ವರದಿ ತನಗೆ ಆಘಾತವನ್ನುಂಟು ಮಾಡಿದೆ ಎಂದು ಸಂಸದ ಮೈಕ್ ವೆದರ್ಲಿ ಹೇಳಿಕೊಂಡಿದ್ದಾರೆ.
ವೆದರ್ಲಿ ಅವರ ಬ್ರೆಜಿಲಿಯನ್ ಪತ್ನಿ 39ರ ಹರೆಯದ ಕಾರ್ಲ ಅವರು ಮೂರು ವೇಶ್ಯಾಗೃಹಗಳನ್ನು ನಿರ್ವಹಿಸುತ್ತಿದ್ದಾರೆ ಎಂದು ಸಂಡೇ ಮಿರರ್ ವರದಿ ಮಾಡಿದೆ.
ಹತ್ತು ವರ್ಷಗಳ ಹಿಂದೆ ರಿಯೋ ಡಿ ಜನೈರೋಗೆ ಪ್ರವಾಸ ತೆರಳಿದ್ದ ವೆದರ್ಲಿ ಕಾರ್ಲಾಳನ್ನು ಭೇಟಿಯಾಗಿದ್ದರು. ಈ ಸಂದರ್ಭದಲ್ಲಿಯೇ ಆಕೆ ಲೈಂಗಿಕ ಕಾರ್ಯಕರ್ತೆಯಾಗಿ ದುಡಿಯುತ್ತಿದ್ದಳು. ಆದರೆ ಈ ವಿಚಾರ ಸಂಸದರ ಗಮನಕ್ಕೆ ಬಂದಿರಲಿಲ್ಲ ಎಂದು ಅದು ವರದಿ ಮಾಡಿದೆ.
ಆಕೆಯೊಂದಿಗೆ ಸಂಪರ್ಕ ಬೆಳೆಸಿದ ಬಳಿಕ ವೆದರ್ಲಿ ಅವರು ಕಾರ್ಲಾಗೆ ಕೋಪಾಕ್ಯಾಬಾನದಲ್ಲಿ ಅಪಾರ್ಟ್‌ಮೆಂಟ್ ಒಂದನ್ನು ಖರೀದಿಸಿ ನೀಡಿದ್ದರು. 2003ರಲ್ಲಿ ಕಾರ್ಲಾ ಅವರನ್ನು ವಿವಾಹವಾದ ವೆದರ್ಲಿ ಬಳಿಕ ಬ್ರಿಟನ್‌ಗೆ ಕರೆ ತಂದಿದ್ದರು. ವಿವಾಹ ನೋಂದಣಿಯಲ್ಲಿ ಆಕೆಯನ್ನು ಗೃಹಿಣಿ ಎಂದು ನಮೂದಿಸಲಾಗಿತ್ತು. ಹಾಗಿದ್ದರೂ ಆಕೆ ತನ್ನ ಹಿಂದಿನ ಜೀವನವನ್ನು ಮುಂದುವರಿಸಿಕೊಂಡು ಬಂದಿದ್ದಳು ಎಂದು ಮಾಧ್ಯಮ ವರದಿ ಮಾಡಿದೆ.
ಕಳೆದ ಫೆಬ್ರವರಿಯಲ್ಲಿ ವೆದರ್ಲಿ ಅವರು ಚುನಾವಣಾ ಪ್ರಚಾರದಲ್ಲಿ ನಿರತನಾಗಿದ್ದ ಸಂದರ್ಭ ಆಕೆ ವೇಶ್ಯಾವೃತ್ತಿಗೆ ಮರುಪ್ರವೇಶಿಸಿದ್ದಳು ಎಂದು ಅದು ಹೇಳಿದೆ.
ವರದಿಯ ವಿವರಗಳು |
 |
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-09-08 00:00:00
|
|
|