'ತ್ವಾನಗಳಂತೆ' - ವಿಪಕ್ಷಗಳ ವಿರುದ್ಧ ಒಬಾಮಾ ಕಿಡಿ |
ಪ್ರಕಟಿಸಿದ ದಿನಾಂಕ : 2010-09-08
ವಾಷಿಂಗ್ಟನ್ : ರಿಪಬ್ಲಿಕನ್ ಎದುರಾಳಿಗಳು ತನ್ನ ಬಗ್ಗೆ 'ತ್ವಾನಗಳಂತೆ' ಮಾತನಾಡುತ್ತಿದ್ದಾರೆ ಎಂದಿರುವ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರು ಡೆಮಾಕ್ರಟಿಕ್ ಪಕ್ಷದ ಚುನಾವಣಾ ಪ್ರಚಾರ ಸಭೆಯಲ್ಲಿ ವಿಪಕ್ಷಗಳ ವಿರುದ್ಧ ಕಿಡಿ ಕಾರಿದರು.
ಕೆಲವು ಪ್ರಭಾವಿ ಹಿತಾಸಕ್ತಿಗಳು ಕಳೆದ ಹಲವು ವರ್ಷಗಳ ಕಾಲ ವಾಷಿಂಗ್ಟನ್‌ನಲ್ಲಿ ಪ್ರಭುತ್ವ ಸಾಧಿಸಿದ್ದವು. ಅವರಿಗೆ ತನ್ನ ಕಾರ್ಯನಿರ್ವಹಣೆಯಿಂದ ಯಾವತ್ತೂ ಸಂತೋಷವಾಗಿಲ್ಲ ಎಂದು ವಿಸ್‌ಕನ್‌ಸಿàನ್‌ನ ಮಿಲ್‌ವಾಕಿಯಲ್ಲಿ ಸೋಮವಾರ ಲೇಬರ್‌ಡೇ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಅವರು ಹೇಳಿದರು.
ಅವರು ನನ್ನ ಬಗ್ಗೆ ತ್ವಾನಗಳ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಇದು ತಾನು ಸೃಷ್ಟಿ ಮಾಡಿ ನೀಡುತ್ತಿರುವ ಹೇಳಿಕೆಯಲ್ಲ. ಆದರೆ ಇದು ನಿಜ ಎಂದು ಆಕ್ರೋಶಭರಿತರಾಗಿ ಅವರು ತಿಳಿಸಿದರು. ಮುಂದಿನ ನವೆಂಬರ್ ಒಳಗೆ ಜನತೆ ತನ್ನನ್ನು ಅಧಿ ಕಾರದಿಂದ ಕೆಳಗಿಳಿಸಲಿದ್ದಾರೆ ಎಂದು ಅವರು ಪಂಥ ಕಟ್ಟಿದ್ದಾರೆ ಎಂದು ಮಧ್ಯಾವಧಿ ಚುನಾವಣೆಗೆ ಇನ್ನೂ ಎರಡು ತಿಂಗಳು ಇರುವಂತೆಯೇ ಚುನಾವಣಾ ಪ್ರಚಾರವನ್ನು ಆರಂಭಿಸಿದ ಅವರು ಹೇಳಿದರು.
ವರದಿಯ ವಿವರಗಳು |
 |
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-09-08 00:00:00
|
|
|