ಬಂತು ಗೌರಿ ಹಬ್ಬ: ಅರಳಿ ನಗುತ್ತಿದೆ ಗೌರಿ ಹೂ |
ಪ್ರಕಟಿಸಿದ ದಿನಾಂಕ : 2010-09-08
* ದೇವಿಪ್ರಸಾದ್ ಕೆ.ಎನ್.
ಬಂತು ಗೌರಿ ಹಬ್ಬ ಎಂದು ನೆನಪಿಸುವಂತೆ ಅರಳಿದ ಗೌರಿ ಹೂ. ಪುತ್ತೂರಿನ ವಿವೇಕಾನಂದ ಕಾಲೇಜಿನ ಆವರಣದಲ್ಲಿ ಗೌರಿ- ಗಣೇಶ ಹಬ್ಬವನ್ನು ಸ್ವಾಗತಿಸಲು ಸಿದಳಾಗಿ ನಿಂತಿರುವ ಗೌರಿ ಹೂ ಗಿಡ ಮೂಲಿಕೆಯ ವಿವಿಧ ಭಂಗಿಯ ನಯನ ಮನೋಹರ ದೃಶ್ಯಗಳನ್ನು ಸೆರೆ ಹಿಡಿಯಲಾಗಿದೆ.
ಬೇಸಿಗೆ ಕಾಲದಲ್ಲಿ ಗೆಡ್ಡೆಯ ರೂಪದಲ್ಲಿ ನೆಲದಡಿಯಲ್ಲಿದ್ದು, ಮೇ ತಿಂಗಳಲ್ಲಿ ಮಳೆ ಬಿದ್ದ ನಂತರ ಚಿಗುರತೊಡಗಿ ಬಳ್ಳಿಯಾಗಿ ಇತರ ಗಿಡಗಳ ಮೇಲೆ ಹಬ್ಬಿಕೊಂಡು ಜುಲೈ-ಆಗಸ್ಟ್ ತಿಂಗಳಲ್ಲಿ ಹೂ ಬಿಡಲು ಪ್ರಾರಂಭಿಸುತ್ತದೆ. ಉದ್ದನೆಯ ಎಲೆಗಳನ್ನು ಹೊಂದ್ಧಿದ್ದು, ಎಲೆಯ ತುದಿಯು ದಾರದಂತಿದು, ಸುರುಳಿಕೊಂಡಿರುತ್ತದೆ. ಹೂವು ಅರಳಿದ ಕೂಡಲೇ ಹಳದಿ ಮಿಶ್ರಿತ ಹಸಿರು ಬಣ್ಣದ್ಧಿಂದ ಕೂಡಿದ್ದು, ನಂತರ ತಿಳಿ ಬಣ್ಣಕ್ಕೆ ತಿರುಗಿದ ಮೇಲೆ ಹಳದ್ಧಿ ಮತ್ತು ಕೇಸರಿ ಬಣ್ಣಗಳನ್ನು ಪಡೆದು ದಳಗಳು ಹಿಂದಕ್ಕೆ ಬಾಗುತ್ತದೆ. ಹೀಗೆ ವಿವಿಧ ಬಣ್ಣ ಮತ್ತು ಆಕಾರಗಳನ್ನು ಪಡೆದು ಪರಾಗಸ್ಪರ್ಶದ ನಂತರ ಕಡು ಕೆಂಪು ಬಣ್ಣಕ್ಕೆ ತಿರುಗಿ ಬಾಡುತ್ತಾ ಹೋಗು ತ್ತದೆ.


ಹೂವಿನ ವಿವಿಧ ಹಂತಗಳನ್ನು ಹೊಂದ್ಧಿರುವ ಬಳ್ಳಿಯು ಎಂತಹವರನ್ನು ಕೂಡಾ ಒಮ್ಮೆ ಆಕರ್ಷಿಸುತ್ತದೆ. ಇದರ ಆಕರ್ಷಣೆಗೆ ಪೂರ್ತಿ ಗಿಡವನ್ನು ಕಿತ್ತುಕೊಂಡು ಹೋಗುವವರು ಹೆಚ್ಚಾಗಿರುವುದರಿಂದ ತನ್ನ ಗೆಡ್ಡೆಯ ಮೂಲಕ ನೆಲದಲ್ಲಿ ಅಡಗಿಕೊಂಡು ಮುಂದಿನ ವರ್ಷದ ಮಳೆಯ ನಂತರ ಚಿಗುರಿ ಇಕ್ಕೆಡೆಗಳಲ್ಲಿ ಕಂಡು ಬರುವ ಈ ಗಿಡ ಮೂಲಕಿಯ ಹೂ ಗೌರಿ-ಗಣೇಶ ಹಬ್ಬದಲ್ಲಿ ವಿಶೇಷವಾಗಿ ಬಳಕೆಯಾಗುತ್ತದೆ. ಕನ್ನಡದಲ್ಲಿ ಕೆಲವು ಕಡೆ ಹುಲಿ ಗುರು ಎಂದು, ಹವ್ಯಕ ಭಾಷೆಯಲ್ಲಿ 'ಅಬ್ಬೆಗೆ ಹೊಡೆದ ಕೈ' ಎಂದೂ ಕರೆಯುತ್ತಾರೆ.
ಇಂಗ್ಲೀಷ್ ನಲ್ಲಿ ಗ್ಲೋರಿ ಲಿಲ್ಲಿ ಎಂದು, ಹಿಂದ್ಧಿಯಲ್ಲಿ ಕಲಿಹರಿ, ಹಾಗೂ ಸಂಸ್ಕೃತದಲ್ಲಿ ಅಗ್ನಿಮುಖೀ ಎಂದು ಕರೆಯುತ್ತಾರೆ. ಇದರ ಗೆಡ್ಡೆಯನ್ನು ಹಾಗೂ ಬೀಜವನ್ನು ಆಯುರ್ವೇದ ಮತ್ತು ಯುನಾನಿಯಲ್ಲಿ ಹೊಟ್ಟೆಹುಣ್ಣು, ಕರುಳು ಹುಣ್ಣು, ಕುಷ್ಠ ರೋಗ, ಮೂಲ ವ್ಯಾದಿ, ತುರುಸುವಿಕೆ ಮೊದಲಾದ ರೋಗಗಳಿಗೆ ಔಷಧಿಯಾಗಿ ಬಳಸುತ್ತಾರೆ. ದಕ್ಷಿಣ ಭಾರತದಲ್ಲಿ ಮುಖ್ಯವಾಗಿ ಕೇರಳದಲ್ಲಿ ಇದರ ಔಷಧಿ ಗುಣದಿಂದಾಗಿ ಕೃಷಿ ಮಾಡುತ್ತಾರೆ
ವರದಿಯ ವಿವರಗಳು |
 |
ಕೃಪೆ : * ದೇವಿಪ್ರಸಾದ್ ಕೆ.ಎನ್.| ಉದಯವಾಣಿ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-09-08 00:00:00
|
|
|