ಉತ್ತರ ಭಾರತದ ಪ್ರೇಮಿಗಳಿಗೆ ತುಳುನಾಡ ರಕ್ಷಣಾ ವೇದಿಕೆ ಸಾರಥ್ಯದಲ್ಲಿ ಮಂಗಳೂರಿನಲ್ಲಿ ಮದುವೆ |
ಪ್ರಕಟಿಸಿದ ದಿನಾಂಕ : 2010-09-07
ಮಂಗಳೂರು,ಸೆ.07: ಮನೆಯವರ ವಿರೋಧದಿಂದಾಗಿ ಉತ್ತರ ಪ್ರದೇಶ ದಿಂದ ನಗರಕ್ಕೆ ಓಡಿ ಬಂದಿದ್ದ ಪ್ರೇಮಿಗಳಿಬ್ಬರಿಗೆ ಇಲ್ಲಿನ ಆರ್ಯ ಸಮಾಜದಲ್ಲಿ ತುಳುನಾಡ ರಕ್ಷಣಾ ವೇದಿಕೆ ಮದುವೆ ಮಾಡಿಸಿದೆ.
ಉತ್ತರ ಪ್ರದೇಶದ ಮಾವ್ ರೀಸ್ವಲ್ ಪುರಿ ಎಸ್ಟೇಟ್‌ನ ನೋಬೆಲ್ ಸೋನ್ಕರ್ ಮತ್ತು ಕೌಶಲ್ಯ ದೇವಿ ಅವರ ಪುತ್ರ ವಕಿಲ್ ಕುಮಾರ್, ದಯಾ ಶಂಕರ್ ಜೈಸ್ವಾಲ್ ಮತ್ತು ಆರತಿ ಜೈಸ್ವಾಲ್ ಎಂಬವರ ಪುತ್ರಿ ಮೋಹಿನಿ ತುಳುನಾಡ ರಕ್ಷಣಾ ವೇದಿಕೆ ಸಾರಥ್ಯದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟವರು.

ವಕಿಲ್ ಕುಮಾರ್ ಮತ್ತು ಮೋಹಿನಿ ಕಳೆದ ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದು, ಮನೆಯವರ ವಿರೋಧದಿಂದಾಗಿ ಊರು ಬಿಟ್ಟು ಓಡಿ ಬಂದು ಸಂಬಂಧಿಕರೊಬ್ಬರ ಮನೆಯಲ್ಲಿ ಮಂಜೇಶ್ವರದಲ್ಲಿ ವಾಸವಾಗಿದ್ದು, ಈ ವಿಷಯವನ್ನು ತಲಪಾಡಿ ಪರಿಸರದ ಪರಿಚಯಸ್ಥರು ಕೋಟೆಕಾರು ಗ್ರಾ. ಪಂ. ಸದಸ್ಯರೊಬ್ಬರಿಗೆ ತಿಳಿಸಿದ್ದರು. ಇದನ್ನವರು ತುಳುನಾಡ ರಕ್ಷಣಾ ವೇದಿಕೆಯವರಿಗೆ ಹೇಳಿದ್ದರು.
ಈ ಬಗ್ಗೆ ಮಂಜೇಶ್ವರ ಠಾಣೆಯಲ್ಲಿ ಎರಡು ಕುಟುಂಬಗಳ ಮಧ್ಯೆ ರಾಜಿ ಪಂಚಾಯ್ತಿ ನಡೆಸಿದರೂ ಹುಡುಗಿ ಹೆತ್ತವರ ಜೊತೆ ತೆರಳಲು ನಿರಾಕರಿಸಿದ ಹಿನ್ನೆಲೆಯಲ್ಲಿ ಕರಾರು ಪತ್ರ ಬರೆಸಿಕೊಂಡು ತುಳುನಾಡ ರಕ್ಷಣಾ ವೇದಿಕೆ ಯುವ ಪ್ರೇಮಿಗಳಿಗೆ ಆರ್ಯ ಸಮಾಜದಲ್ಲಿ ಮದುವೆ ಮಾಡಿಸಿದೆ.


ವರದಿಯ ವಿವರಗಳು |
 |
ವರದಿಗಾರರು : ಸತೀಶ್ ಕಾಪಿಕಾಡ್
ಪ್ರಕಟಿಸಿದ ದಿನಾಂಕ : 2010-09-07 00:00:00
|
|
|