ಅಕ್ಟೊಬರ್ 29 : ಎಲ್ಲರನ್ನೂ ರ೦ಜಿಸಲು ಬರುತ್ತಿದ್ದಾರೆ ಬಿ೦ದಾಸ್ ಬಾಲಿವುಡ್ ಥ್ರಿಲ್ಲರ್ : ಕಾರ್ಯಕ್ರಮಕ್ಕಾಗಿ ದುಬೈ ಸಜ್ಜು |
ಪ್ರಕಟಿಸಿದ ದಿನಾಂಕ : 2010-09-07
ಸಹಸ್ರಾರು ಜನ ಪಾಲ್ಗೊಳ್ಳಲಿರುವ ಮೆಗಾ ಕಾರ್ಯಕ್ರಮ ಬಿಂದಾಸ್ ಬಾಲಿವುಡ್‌ಗಾಗಿ ದುಬಾಯಿ ಸಿದ್ದವಾಗಿದೆ.
ಅಕ್ಟೋಬರ್ ೨೯ ರಂದು ಇಂಡಿಯನ್ ಹೈಸ್ಕೂಲ್ ನ ಶೇಕ್ ರಶೀದ್ ಸಭಾಂಗಣದಲ್ಲಿ ಕಾರ್ಯಾಕ್ರಮ ನಡೆಯಲಿದೆ. ದ ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೆಂಜ್ ಖ್ಯಾತಿಯ ನವೀನ್ ಪ್ರಭಾಕರ್ ಅವರು ಮುಂಬಯಿಯ ಹೊಸ ಗಾಯನ ಪ್ರತಿಭೆ ತನ್ನ ಗೀತೆಗಳ ಮೂಲಕ ಬಾರಿ ಜನಪ್ರಿಯತೆ ಪಡೆಯುತ್ತಿ ರುವ ಕವಿತಾ ಸೋನಿ ಮತ್ತು ಜನಪ್ರಿಯ ನ್ರತ್ಯ ಪಟುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಜನಮನ ರಂಜಿಸಲಿರುವರು.

ನವೀನ್ ಪ್ರಭಾಕರ್ ಅವರು ಪೆಹಚಾನ್ ಕೌನ್ ದಾರಾವಾಹಿಯ ಮೂಲಕ ಜನರಿಗೆ ನಗೆ ಗುಳಿಗೆಗಳ ನ್ನು ಉಣಬಡಿಸಿ ಮತ್ತಷ್ಟು ಪ್ರಸಿದ್ಧರಾಗಿದ್ದಾರೆ. ತನ್ನ ರಾಂಚಿ ಶೈಲಿಯ ನ್ರತ್ಯದಿಂದ ಭಾರತದಲ್ಲಿ ಜನಪ್ರಿಯರಾಗಿರುವ ನ್ರತ್ಯಗಾತಿ ನಟಿ ಸೀಮಾ ಅವರು ತನ್ನ ತಂಡದೊಂದಿಗೆ ಬಿಂದಾಸ್ ನ್ರತ್ಯ ಪ್ರದರ್ಶನ ನೀಡಲಿದ್ದು ಪ್ರೇಕ್ಷರನ್ನು ಸೆರೆ ಹಿಡಿಯುವಲ್ಲಿ ಯಶಶ್ವಿಯಾಗಲಿದೆ.

ರೋಬೋ ಗಣೇಶ್ ಮತ್ತು ದೇವಾರಾಮ್ ಮತ್ತಷ್ಟು ಆಕರ್ಷಣೆಯಾಗಲಿದೆ.
ಚಿಲ್ಲಿವಿಲ್ಲಿ ಟ್ರೇಡಿಂಗ್ ಪ್ರದರ್ಶನಕ್ಕೆ ಬೆಂಬಲ ನೀಡುತ್ತಿದೆ.
ಟಿಕೇಟ್ ಸದ್ಯವೇ ಬಿಡುಗಡೆಯಾಗಲಿದೆ.

ವಿವರಗಳಿಗಾಗಿ ಸತೀಶ್ 050-4433694, ಅಥವಾ ಅರುಣ್ 050-6616440 ಅಥವಾ ಡೆಂಜಿಲ್ ಫೆರ್ನಾಂಡಿಸ್ 050- 6586675 ಅವರನ್ನು ಸಂಪರ್ಕಿಸಬಹುದು.
ವರದಿಯ ವಿವರಗಳು |
 |
ಕೃಪೆ : ರಾಜ್ ಶೇಖರ್ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-09-07 00:00:00
|
|
|