ಗ್ರೌ೦ಡ ಜೀರೋದಲ್ಲಿ ಮಸೀದಿ ವಿವಾದ ! |
ಪ್ರಕಟಿಸಿದ ದಿನಾಂಕ : 2010-09-07
ಸೆಪ್ಟೆಂಬರ್ ೧೧ರ ದಾಳಿಯನ್ನು ಅಮೆರಿಕ ಇನ್ನೂ ಮರೆತಿಲ್ಲ. ಆದರೆ ಈಗ ನ್ಯೂಯಾರ್ಕ್‌ನಲ್ಲಿ ಉಗ್ರರು ದಾಳಿ ನಡೆಸಿದ ಭಾಗದಲ್ಲಿಯೇ ಮಸೀದಿ ನಿರ್ಮಾಣಕ್ಕೆ ಪ್ರಯತ್ನಗಳು ನಡೆದಿವೆ. ಮುಸ್ಲಿಂ ಭಯೋತ್ಪಾ ದನೆಯ ಕ್ರೂರ ಮುಖ ಪ್ರಕಟಗೊಂಡ ಸ್ಥಳದಲ್ಲಿಯೇ ಮಸೀದಿ ಕಟ್ಟಲು ಹೊರಟಿರುವುದು ವಿವಾದಕ್ಕೆ ಕಾರಣ. ಏತನ್ಮಧ್ಯೆ, ಮಸೀದಿ ನಿರ್ಮಾಣಕ್ಕೆ ಬೆಂಬಲ ಸೂಚಿಸಿರುವ ಅಮೆರಿಕ ಅಧ್ಯಕ್ಷ ಬರಾಕ್ ಒಬಾ ಮಾ, ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿದಿದ್ದಾರೆ.
ಒಬಾಮಾ ಮುಸ್ಲಿಂ ಪ್ರೇಮ
ಅಮೆರಿಕದ ಬಗ್ಗೆ ಮುಸ್ಲಿಂ ಜಗತ್ತು ಕೆಂಡಕಾರುತ್ತಿದ್ದ ಹೊತ್ತಿನಲ್ಲಿ ಆ ದೇಶದ ಅಧ್ಯಕ್ಷರಾಗಿ ಆಯ್ಕೆಯಾದ ವರು ಒಬಾಮಾ. ಅವರು ಮುಸ್ಲಿಂ ಜಗತ್ತನ್ನು ಅಮೆರಿಕದ ಜತೆ ಬೆಸೆಯುವ ಪ್ರಯತ್ನದಲ್ಲಿದ್ದಾರೆ.
ಆದರೆ ಅವರ ಮುಸ್ಲಿಂ ಒಲವು-ನಿಲುವಿನ ಬಗ್ಗೆ ಮೊದಲಿನಿಂದಲೂ ಗುಮಾನಿ. ೯/೧೧ರ ದಾಳಿ ನಡೆದ ಸ್ಥಳದಲ್ಲಿ ಮಸೀದಿ ಕಟ್ಟಲು ಒಬಾಮಾ ಸಮ್ಮತಿಸಿರುವುದು ಗುಮಾನಿಗೆ ಇನ್ನಷ್ಟು ಪುಷ್ಟಿ ನೀಡಿದಂತಾಗಿ ದೆ. ಈ ಮೊದಲು ಸಹ ಬರಾಕ್ ಒಬಾಮಾ ಅವರ ಧರ್ಮ ಮತ್ತು ಜನನ ಸ್ಥಳದ ಬಗ್ಗೆ ವಿವಾದ ಸೃಷ್ಟಿ ಯಾಗಿತ್ತು.
‘ಕ್ರೈಸ್ತ ಪರಂಪರೆಯನ್ನು ಪಾಲಿಸುತ್ತಿದ್ದೇನೆ’ ಎಂದು ಹಿಂದೊಮ್ಮೆ ಹೇಳಿದ್ದ ಒಬಾಮಾ, ತಮ್ಮ ಧರ್ಮದ ಬಗೆಗಿನ ವಿವಾದದ ಬಗ್ಗೆ ಅಸಮಾಧಾನಗೊಂಡಿದ್ದಾರೆ. ‘ಜನನ ಪ್ರಮಾಣಪತ್ರವನ್ನು ಬದುಕಿನುದ್ದಕ್ಕೂ ಹಣೆಗೆ ಅಂಟಿಸಿಕೊಂಡು ಸುತ್ತಾಡಲಾರೆ’ ಎನ್ನುವುದು ಅವರ ಇತ್ತೀಚಿನ ಹೇಳಿಕೆ.
ಏನೆನ್ನುತ್ತಾರೆ ಒಬಾಮಾ?
ಮಸೀದಿ ನಿರ್ಮಾಣವನ್ನು ಸಮರ್ಥಿಸಿದ್ದಾರೆ. ‘ನಾನೊಬ್ಬ ಪೌರ ಮತ್ತು ಅಧ್ಯಕ್ಷನಾಗಿ ಮುಸ್ಲಿಮರ ಸ್ವಾ ತಂತ್ರ್ಯಕ್ಕೆ ಆದ್ಯತೆ ನೀಡುತ್ತೇನೆ. ದೇಶದ ಯಾವುದೇ ಭಾಗದಲ್ಲಿ ಮುಸ್ಲಿಮರು ತಮ್ಮ ಹಕ್ಕುಗಳನ್ನು ಚಲಾಯಿಸಬಹುದು’ ಎನ್ನುವುದು ಅವರ ಅಭಿಮತ.
‘ಅಲ್ ಖಾಯಿದಾ ಉಗ್ರರು ಒಡೆದು ಉರುಳಿಸಿದ ವಿಶ್ವ ವ್ಯಾಪಾರ ಕೇಂದ್ರದ(ಡಬ್ಲ್ಯುಟಿಸಿ) ಸಮೀಪವೇ ಮಸೀದಿ ಕಟ್ಟುವುದಕ್ಕೆ ನನ್ನ ವಿರೋಧವೇನಿಲ್ಲ. ಎಲ್ಲ ಜನಾಂಗದವರು ತಮ್ಮದೇ ಹಕ್ಕು ಹೊಂದಿದ್ದಾರೆ. ಇದಕ್ಕೆ ಮುಸ್ಲಿಂ ಸಮುದಾಯ ಕೂಡ ಹೊರತಲ್ಲ. ಅಮೆರಿಕದ ಕಾನೂನಿಗೆ ಬದಟಛಿವಾಗಿ ಮಸೀದಿ ನಿರ್ಮಿಸಲು ನನ್ನ ಅಭ್ಯಂತರವಿಲ್ಲ’ ಎನ್ನುವ ಒಬಾಮಾ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಮಸೀದಿ ಸುತ್ತಮುತ್ತ
‘ಕೊರ್ಡೊಬಾ ಹೌಸ್’ ಎನ್ನುವ ಹೆಸರಲ್ಲಿ ಮಸೀದಿ ಮತ್ತು ಸಮುದಾಯ ಕೇಂದ್ರ ನಿರ್ಮಾಣ ಮಾಡು ವುದು ಮುಸ್ಲಿಂ ಸಮುದಾಯದ ಹಂಬಲ. ಈ ಯೋಜನೆಯ ಅಂದಾಜು ವೆಚ್ಚ ಸುಮಾರು ೧೦ ಕೋಟಿ ಡಾಲರ್. ೧೩ ಮಹಡಿಗಳ ಈ ಕಟ್ಟಡದಲ್ಲಿ ಈಜುಗೊಳ, ಬ್ಯಾಸ್ಕೆಟ್ ಬಾಲ್ ಕೋರ್ಟ್ ಸಹ ಇರಲಿದೆ. ಶುಕ್ರವಾರದ ಪ್ರಾರ್ಥನೆಗೆ ೧,೫೦೦ ಮಂದಿಗೆ ಅನುಕೂಲವಾಗುವಷ್ಟು ವಿಶಾಲ ಸ್ಥಳ ಇಲ್ಲಿ ಇರಲಿದೆ. ಮಸೀದಿ ನಿರ್ಮಾಣ ಮಾಡುವುದು ದಶಕಗಳ ಹಿಂದಿನ ಪ್ರಸ್ತಾವನೆ.
ವ್ಯಾಪಕ ವಿರೋಧ
ಇಸ್ಲಾಂ ಹೆಸರಲ್ಲಿ ನಡೆದ ದಾಳಿಗೆ ಅಮಾಯಕರು ಬಲಿಯಾಗಿದ್ದಾರೆ. ಮಸೀದಿ ನಿರ್ಮಾಣದಿಂದ ಅಪಾ ಯ ತಪ್ಪಿದ್ದಲ್ಲ ಎನ್ನುವುದು ಕೆಲವರ ವಾದ. ಇದು ಮುಂದಿನ ಉಗ್ರರಿಗೆ ಜನ್ಮಸ್ಥಳವಾಗುವ ಆತಂಕ ವ್ಯಕ್ತವಾಗಿದೆ. ಅಲ್ಲದೇ ೨೦೦೧ರ ಸೆ.೧೧ರ ದುರಂತದಲ್ಲಿ ಮಡಿದ ಕುಟುಂಬಗಳು ಮಸೀದಿ ನಿರ್ಮಾಣ ಕ್ಕೆ ವಿರೋಧ ವ್ಯಕ್ತಪಡಿಸಿವೆ.
‘ಮಸೀದಿ ನಿರ್ಮಾಣ ಮಾಡುವುದು ನಾಚಿಕೆ ಗೇಡಿನ ಪ್ರಯತ್ನ. ನನಗೆ ನಿಜಕ್ಕೂ ಇದನ್ನು ನಂಬಲಾ ಗುತ್ತಿಲ್ಲ’ ಎಂದು ಮಾಜಿ ಮುಸ್ಲಿಂ ಮತ್ತು ಜನಪ್ರಿಯ ಲೇಖಕಿ ಸಬಾಟಿನಾ ಜೇಮ್ಸ್ ಹೇಳಿದ್ದಾರೆ. ಮಸೀದಿ ನಿರ್ಮಾಣವು ಹಿಂಸೆಗೆ ಪ್ರೇರಣೆ ನೀಡಿ ದಂತಿದೆ ಎನ್ನುವುದು ಕ್ರೈಸ್ತ ಸಂಘಟನೆಗಳ ಕಳವಳ.
ಅಮೆರಿಕದ ವಿರುದ್ದ ಈಗಲೂ ಅಲ್ ಖಾಯಿದಾ ಕತ್ತಿ ಮಸೆಯುತ್ತಿದೆ. ಮತ್ತೊಂದೆಡೆ ಧರೆಗುರುಳಿದ ವಿಶ್ವ ವಾಣಿಜ್ಯ ಕಟ್ಟಡದ ಸ್ಥಳದಲ್ಲಿ ಮಸೀದಿ ಕಟ್ಟಲು ಒಬಾಮಾ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಏನಿದು ವಿವಾದದ ಕಿಡಿ?
ತತ್ತರಿಸಿದ ಅಮೆರಿಕ
ಸೆ.೧೧ರಂದು ೧೯ ಉಗ್ರರು ನಾಲ್ಕು ಜೆಟ್ ವಿಮಾನಗಳನ್ನು ಹೈಜಾಕ್ ಮಾಡಿ ಅಮೆರಿಕ ಮೇಲೆ ಎರಗಿದರು. ವಿಶ್ವವ್ಯಾಪಾರ ಕೇಂದ್ರದ ಅವಳಿ ಕಟ್ಟಡಗಳು ದಾಳಿಗೆ ತುತ್ತಾದವು. ಉಗ್ರರ ಆತ್ಮಹತ್ಯಾ ದಾಳಿಗೆ ೨,೯೭೭ ಜನ ಬಲಿಯಾದರು.
ಬರ್ಬರ ಕೃತ್ಯವೆಸಗಿದ ೧೯ ಉಗ್ರರೂ ಬಲಿಯಾದರು. ದುರಂತದಲ್ಲಿ ೬೦೦೦ ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಇದರ ಹೊಣೆಗಾರಿಕೆಯನ್ನು ಅಲ್ ಖಾಯಿದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆ ನ್ ಹೊತ್ತಿದ್ದಾನೆ.
ವರದಿಯ ವಿವರಗಳು |
 |
ಕೃಪೆ : ವಿಕ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-09-07 00:00:00
|
|
|