ಕ್ರೈಸ್ತ ಬಾ೦ಧವರು ಮಾತ್ರವಲ್ಲದೇ ಹಿ೦ದೂ ಭಕ್ತಾದಿಗಳು ಸೇರುವ ಮೇರಿ ಮಾತೆಯ ತೇರು |
ಪ್ರಕಟಿಸಿದ ದಿನಾಂಕ : 2010-09-07
ಶಿವಾಜಿನಗರದ ಸೇಂಟ್ ಮೇರಿ ಮಹಾ ದೇವಾಲಯದಲ್ಲಿ ‘ಆರೋಗ್ಯ ಮಾತೆ ಮೇರಿ’ಯ ಜನನೋ ತ್ಸವದ ಸಂಭ್ರಮ. ಇದು ಆಗಸ್ಟ್ 29ರಿಂದ ಆರಂಭವಾಗಿದ್ದು, ಬುಧವಾರ ಸಂಜೆ 5.30ಕ್ಕೆ ತೇರಿನ ಮೆರವಣಿಗೆಯೊಂದಿಗೆ ಪೂರ್ಣಗೊಳ್ಳಲಿವೆ.
ಕ್ರೈಸ್ತ ಬಾಂಧವರು ಮಾತ್ರವಲ್ಲದೆ ಅನೇಕ ಹಿಂದೂ ಭಕ್ತಾದಿಗಳೂ ನಸುಗೆಂಪು, ಕಾವಿ ಬಣ್ಣದ ಉಡುಪು ಧರಿಸಿ ಈಗ ಶಿವಾಜಿನಗರದ ಸೆಂಟ್ ಮೇರೀಸ್ ಬೆಸಿಲಿಕಾದಲ್ಲಿ ಅಮ್ಮನ ಒಂಬತ್ತು ದಿನಗಳ ಆರಾಧ ನೆಯಲ್ಲಿ ತೊಡಗಿದ್ದಾರೆ. ಈ ಮಾತೆ ಜಗದೋದ್ಧಾರಕ ಏಸುದೇವನ ಅಮ್ಮ ‘ಮಾತೆ ಮೇರಿ’. ಆರೋ ಗ್ಯಮಾತೆ ಎಂದೇ ಜನಮನದಲ್ಲಿ ಈ ಜನನಿಗೆ ಸ್ಥಾನ. ಎಲ್ಲೆಡೆ ಈಗ ಅಮ್ಮನ ಜನ್ಮದಿನದ ಸಂಭ್ರಮ.
ಜಗತ್ತಿನಲ್ಲಿ ಅಮ್ಮ ಕಣ್ಣಿಗೆ ಕಾಣುವ ದೇವರು. ಆಕೆ ಏಸು ದೇವನ ಅಮ್ಮ ಹಾಗಾಗಿ ಇನ್ನೂ ವಿಶೇಷ. ಬೆಂಗಳೂರಿನ ಶಿವಾಜಿನಗರದಲ್ಲಿ ಉತ್ಸವದ ವಾತಾವರಣ. ಭಕ್ತರ ಜನರ ದಟ್ಟಣೆ ಪ್ರತಿವರ್ಷ ಹೆಚ್ಚು ತ್ತಿದೆ.
ಉತ್ಸವದ ಅವಧಿಯಲ್ಲಿ ನಿತ್ಯ ಇಲ್ಲಿ ಬೆಳಗು-ಬೈಗು ಮಾತೆ ಮೇರಿಗೆ ಪೂಜೆ ಸಲ್ಲಿಸುವವರ ಆಚರಣೆ ಗಳಲ್ಲಿನ ವೈವಿಧ್ಯ ಗಮನ ಸೆಳೆಯುತ್ತದೆ. ಕ್ಯಾಂಡಲ್ ಬೆಳಗಿ ಪೂಜೆ ಸಲ್ಲಿಸುವರು. ಮಾತೆಯ ಸನ್ನಿಧಿ ಯಲ್ಲಿ ಮೊಣಕಾಲಲ್ಲಿ ನಡೆದು ಹರಕೆ ಒಪ್ಪಿಸುವವರು... ಹೀಗೆ ಮನದ ಆಸೆಯ ಈಡೇರಿಕೆಗಾಗಿ, ಅನಾರೋಗ್ಯ ನಿವಾರಣೆಗಾಗಿ ಹಂಬಲಿಸುವರು ಕಾಣಸಿಗುತ್ತಾರೆ. ದೇವಪುತ್ರನನ್ನೇ ಸಲಹಿದ ಮಾತೆ ಸಾಮಾನ್ಯ ಜನರನ್ನೂ ಪೋಷಿಸುತ್ತಾರೆ ಎಂಬ ನಂಬಿಕೆ ಭಕ್ತಾದಿಗಳದು.
ಸೆಂಟ್ ಮೇರಿ ಮಹಾದೇವಾಲಯ ಸಾಕಷ್ಟು ಹಳೆಯ ಕ್ರೈಸ್ತ ದೇವಾಲಯ. ಒಳಾಂಗಣ ಮತ್ತು ಹೊ ರಾಂಗಣ ಸೌಂದರ್ಯ, ಶಿಲುಬೆ, ಗಗನ ಚುಂಬಿ ಕಟ್ಟಡ ಎಲ್ಲವೂ ಆಕರ್ಷಕ. ಶಾಂತಿ, ಸೌಂದರ್ಯದ ನೆಲೆವೀಡೂ ಇದಾಗಿದೆ.
ಮಾತೆಗೆ ಸೀರೆ, ಭಕ್ತರಿಗೆ ಕಾವಿ
ಇಂದಿನ ಶಿವಾಜಿನಗರ ಬಹಳ ಹಿಂದೆ ಬಿಳೇ ಅಕ್ಕಿ ಹಳ್ಳಿ (ಬ್ಲ್ಯಾಕ್ ಪಳ್ಳಿ) ಎಂಬ ಹೆಸರು ಹೊಂದಿತ್ತು. ಅದು ಇನ್ನೂರು ವರ್ಷಗಳ ಹಿಂದಿನ ಕಥೆ. ಪುದುಚೇರಿ, ತಮಿಳುನಾಡಿಯಿಂದ ಬಂದ ಫ್ರೆಂಚ್ ಪಾದ್ರಿ ಗಳು ಇಲ್ಲಿ ಕಟ್ಟಿದ ತೆಂಗಿನ ಗರಿಯ ಚರ್ಚ್‌ನಲ್ಲಿ ಮಾತೆ ಮೇರಿಯನ್ನು ಪ್ರತಿಷ್ಠಾಪಿಸಿ ಆರಾಧಿಸಲಾಯಿ ತು. ಅದು ಲೇಡಿ ಆಫ್ ಪ್ಯೂರಿಫಿಕೇಶನ್ ಚರ್ಚ್ ಅನ್ನಿಸಿತು.
ಆದರೆ ಇಂದು ಕಾಣುವ ಗಾಥಿಕ್ ಶೈಲಿಯ ವಾಸ್ತು, ಆಕರ್ಷಕ ಒಳಾಂಗಣದ ಭವ್ಯ ಚರ್ಚ್ ನಿರ್ಮಾಣ ಗೊಂಡದ್ದು 1882ರಲ್ಲಿ. ಇಲ್ಲಿರುವ ಬಾಲ ಏಸುವನ್ನು ಎತ್ತಿಕೊಂಡ ಮೇರಿ ಮಾತೆ ಪುತ್ಥಳಿಯನ್ನು ಇಟಿ ಯಿಂದ ತರಿಸಿ ಪ್ರತಿಷ್ಠಾಪಿಸಲಾಯಿತು. ಆರಂಭದಲ್ಲಿ ಇಟಲಿ ಶೈಲಿಯ ಅಪ್ಸರೆಯ ವೇಷಭೂಷಣಗಳಿದ್ದ ಈ ಮೂರ್ತಿಗೆ ಈಗ ಭಾರತೀಯ ಪರಿಸರದಲ್ಲಿ ಸೀರೆಯ ಸಿಂಗಾರ ಮಾಡಲಾಗಿದೆ. ಭಕ್ತರ ಕೊಡು ಗೆಯ ಚಿನ್ನದ ಕಿರೀಟದ ಅಲಂಕಾರವಿದೆ.
ಮಾತೆಯ ಪೂಜೆಯಿಂದ ದೈಹಿಕ-ಮಾನಸಿಕ ಆರೋಗ್ಯ ಲಭಿಸುವುದು ಎಂಬುದು ಭಕ್ತರ ನಂಬಿಕೆ. ಆರೋಗ್ಯ ಮಾತೆಯ ಜನ್ಮೋತ್ಸವದಲ್ಲಿ ಇಷ್ಟಾರ್ಥ ಸಿದ್ಧಿಗಾಗಿ ಬರುವ ಭಕ್ತರು ಕಾವಿ ಅಂಗಿ ಪೈಜಾಮ, ಕಾವಿಯ ಸೀರೆ, ಉಡುಪು ಧರಿಸುವುದು ಇನ್ನೊಂದು ವಿಶೇಷ.
ಬುಧವಾರ ಬೆಳಿಗ್ಗೆ 8 ರಿಂದ ಬೆಂಗಳೂರಿನ ಮಹಾಧರ್ಮಾಧ್ಯಕ್ಷ ಡಾ. ಬೆರ್ನಾಡ್ ಮೊರಾಸ್ ಅವರಿಂ ದ ವಿಶೇಷ ಬಲಿ ಪೂಜೆ. ರಾತ್ರಿ 8.30ಕ್ಕೆ ಪರಮ ಪ್ರಸಾದ.
ವರದಿಯ ವಿವರಗಳು |
 |
ಕೃಪೆ : ಪ್ರಜಾವಾಣಿ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-09-07 00:00:00
|
|
|