ಚೀನಾ: ಸರ್ಕಾರೇತರ ಸ೦ಸ್ಥೆಯಿ೦ದ 10 ಶ್ವಾನಗಳಿಗೆ ಡಾಕ್ಟರೇಟ್ ಪದವಿ ನೀಡಿ ಗೌರವ! |
ಪ್ರಕಟಿಸಿದ ದಿನಾಂಕ : 2010-09-07
ಬೀಜಿಂಗ್: ಸಮಾಜದಲ್ಲಿ ಸೇವೆಗೈದ ಗಣ್ಯರಿಗೆ ಡಾಕ್ಟರೇಟ್ ಪದವಿ ನೀಡುವುದು ಎಲ್ಲರಿಗೆ ತಿಳಿದ ವಿಚಾರ.
ಆದರೆ, ಚೀನಾದಲ್ಲಿ ಮಾತ್ರ ಈ ಡಾಕ್ಟರೇಟ್ ಈಗ ನಾಯಿಪಾಲಾಗಿದೆ. ಹೌದು. ಚೀನಾದ ಸರ್ಕಾರೇ ತರ ಸಂಸ್ಥೆಯೊಂದು ಬರೋಬ್ಬರಿ ೧೦ ಶ್ವಾನಗಳಿಗೆ ‘ಡಾಕ್ಟರ್’ ಪದವಿ ನೀಡಿ ಗೌರವಿಸಿದೆ!
ಇದು ಆಶ್ಚರ್ಯವಾದರೂ ಸತ್ಯ. ಈ ೧೦ ಶ್ವಾನಗಳು ಮಾಡಿದ ಸಮಾಜ ಸೇವೆ ಹಾಗೂ ವಿಶ್ರಾಂತಿ ಗೃಹಗಳಲ್ಲಿ, ಪರಿಹಾರ ಕೇಂದ್ರಗಳಲ್ಲಿ, ಆರೋಗ್ಯ ಸಂಸ್ಥೆಗಳಲ್ಲಿ ಜನರನ್ನು ಮನರಂಜಿಸಿರುವುದನ್ನು ಪರಿಗಣಿಸಿ ಎನ್‌ಜಿಒ ಈ ಪದವಿ ನೀಡಿದೆ.
ಈ ಶ್ವಾನಗಳು ೧,೪೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರಾಣಿಗಳನ್ನು ಹೇಗೆ ಪೋಷಿಸಬೇಕು ಎಂಬ ಬಗ್ಗೆ ಬೋಧನೆ ಮಾಡಿವೆ.
ವರದಿಯ ವಿವರಗಳು |
 |
ಕೃಪೆ : ಕನ್ನಡಪ್ರಭ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-09-07 00:00:00
|
|
|