ಲ೦ಡನ್ : ಹಲ್ಲುಜ್ಜದಿದ್ದರೆ ಹೃದಯಾಘಾತ..! ಎನ್ನುತ್ತಿದ್ದಾರೆ ಬ್ರಿಟನ್ ದಂತ ವಿಜ್ಞಾನಿಗಳು |
ಪ್ರಕಟಿಸಿದ ದಿನಾಂಕ : 2010-09-06
ಪ್ರತಿದಿನವೂ ಹಲ್ಲು ತಿಕ್ಕಿ, ಸ್ವಚ್ಛವಾಗಿಟ್ಟುಕೊಳ್ಳಿ. ಇಲ್ಲದಿದ್ದರೆ ಹೃದಯಾಘಾತ ಉಂಟಾಗುವ ಸಾಧ್ಯತೆ ಹೆಚ್ಚು ಎನ್ನುತ್ತಿದ್ದಾರೆ ಬ್ರಿಟನ್ ದಂತ ವಿಜ್ಞಾನಿಗಳು.
ಲಂಡನ್ : ಹಲ್ಲಿಗೂ ಹೃದಯಾಘಾತಕ್ಕೂ ಎತ್ತಣಿಂದೆತ್ತಣ ಸಂಬಂಧ ಎನ್ನಬೇಡಿ. ದಿನಂಪ್ರತಿ ಹಲ್ಲು ಜ್ಜುವ ಹವ್ಯಾಸವಿಲ್ಲದವರಿಗೆ ಹೃದಯಾಘಾತದ ಸಾಧ್ಯತೆ ಹೆಚ್ಚು. ಹಲ್ಲಿನ ಮೇಲೆ ಅಂಟಿಕೊಳ್ಳುವ ಜಿಡ್ಡು ವಸಡು ಸೋಂಕು ತರುತ್ತದೆ.
ವಸಡು ಸೋಂಕಿನಿಂದ ರಕ್ತ ಕಲುಷಿತಗೊಂಡು ಈ ರಕ್ತಕಣಗಳು ದೇಹದಲ್ಲಿ ಹರಿಯುವ ರಕ್ತವನ್ನು ಹೆಪ್ಪುಗಟ್ಟುವಂತೆ ಮಾಡುತ್ತದೆ. ಇದರಿಂದ ಹೃದಯಾಘಾತ ಉಂಟಾಗಬಹುದು ಎಂದು ಸಂಶೋಧನೆ ಆಧರಿಸಿ ಟೆಲಿಗ್ರಾಫ್ ಪತ್ರಿಕೆ ವರದಿ ಮಾಡಿದೆ.
ಇದು ಸಾಮಾನ್ಯ ಸುದ್ದಿ ಎಂದು ನಿರ್ಲಕ್ಷಿಸಬೇಡಿ. ಅಮೆರಿಕದಲ್ಲಿ ಪ್ರತಿ ವರ್ಷ ವಸಡು ಸೋಂಕಿನಿಂದ ರಕ್ತ ಹೆಪ್ಪುಗಟ್ಟಿ ಹೃದಯಾಘಾತಕ್ಕೆ ಒಳಗಾದವರ ಸಂಖ್ಯೆ 2 ಲಕ್ಷ ಎನ್ನುತ್ತದೆ ಅಲ್ಲಿನ ವೈದ್ಯಕೀಯ ವರದಿಗಳು.
ಕೆಲವರಿಗೆ ವಸಡು ಸೋಂಕು ಇರುತ್ತದೆ. ಹಲ್ಲಿನಿಂದ ರಕ್ತ ಸೋರುತ್ತಿರುತ್ತದೆ. ಇಂತವರು ಎಚ್ಚರವಹಿಸ ಬೇಕು. ಪ್ರತಿದಿನ ಹಲ್ಲುಜ್ಜಿ ಸ್ವಚ್ಛವಾಗಿಟ್ಟುಕೊಳ್ಳಬೇಕು. ರಕ್ತ ಸೋರುತ್ತಿದ್ದರೂ ಹಾಗೆಯೇ ಮಲಗಿ ನಿದ್ರಿ ಸುವುದು ಅಪಾಯಕಾರಿ. ಇಂತವರ ಹಲ್ಲಿನ ಮೇಲೆ ಪಾಡ್ ಎ ಎನ್ನುವ ಬ್ಯಾಕ್ಟೀರಿಯಾ ಸೃಷ್ಟಿಯಾಗು ತ್ತದೆ ಇದು ಹೃದಯಕ್ಕೆ ಮತ್ತು ಮೆದುಳಿಗೆ ರಕ್ತ ಪೂರೈಕೆಯನ್ನು ತಡೆಯುತ್ತದೆ ಎನ್ನುತ್ತದೆ ಈ ಸಂಶೋ ಧನೆ.
ಬ್ರಿಸ್ಟೋಲ್ ವಿಶ್ವವಿದ್ಯಾಲಯದ ಸೂಕ್ಷ್ಮಜೀವ ವಿಜ್ಞಾನ ಪ್ರಾಧ್ಯಾಪಕ ಹೊವಾರ್ಡ್ ಜೆನ್‌ಕಿನ್ಸನ್ ಅವರ ತಂಡ ಈ ಸಂಶೋಧನೆ ನಡೆಸಿದೆ.
ವರದಿಯ ವಿವರಗಳು |
 |
ಕೃಪೆ : ಪಿಟಿಐ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-09-06 00:00:00
|
|
|