ಶುಕ್ರವಾರ, 10-02-2012
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಕಿದಿಯೂರ್ ಹೋಟೆಲ್ ರಜತ ಸಂಭ್ರಮ: ವೈಭವದಿಂದ ನಡೆದ ನಾಗಮಂಡಲೋತ್ಸವ
Latest news item ಕರಾವಳಿ ಕಾಲೇಜು ಕ್ರೀಡೋತ್ಸವ - ವಿಧ್ಯಾರ್ಥಿಗಳಿಗೆ ತಂತ್ರಜ್ಞಾನ ಸೌಲಭ್ಯಗಳ ಸದುಪಯೋಗಕ್ಕೆ ಎಸ್.ಗಣೇಶ್ ರಾವ್ ಕರೆ.
Latest news item ಸಚಿವರ ನೀಲಿ ಖಯಾಲಿಗೆ ಆಕ್ರೋಶ : ಉಡುಪಿಯಲ್ಲಿ ಕಾಂಗ್ರೆಸ್ ವಿನೂತನ ಪ್ರತಿಭಟನೆ
Latest news item ಸಂವಿಧಾನವನ್ನು ಅಪಮಾನಿಸಿರುವ ಇಂತಹವರನ್ನು ಜೈಲಿಗಟ್ಟಿ’: ಅಣ್ಣಾ ಹಜಾರೆ
Latest news item ಸಚಿವರ ಸೆಕ್ಸ್ ಫಿಲಂ ವೀಕ್ಷಣೆ: 'ತ್ರಿ ಡರ್ಟಿ' ಮಂತ್ರಿಗಳ ಬಗ್ಗೆ ಬಾಲಿವುಡ್ ಪ್ರತಿಕ್ರಿಯೆ
Latest news item "ಛಲಪತ್ತಿನ ಕಿತಾಪತಿ" ನಾಟಕ ಮುಹೂರ್ತ
Latest news item ಹೆಸರಾಂತ ಬ್ಯಾಂಕರ್ ಟಿ.ಜೆ.ಎ ಗಾಣಿಗ ದುಬಾಯಿಗೆ ಭೇಟಿ
Latest news item ಮತ್ತೊಂದು ಮುಜುಗರ!: ಅಡ್ವೊಕೇಟ್ ಜನರಲ್ ಬಿ.ವಿ. ಆಚಾರ್ಯ ಪದತ್ಯಾಗ..
Latest news item ಚರ್ಚೆಯೊಂದನ್ನು ಬಿಟ್ಟು ಇನ್ನೆಲ್ಲಕ್ಕೂ ವೇದಿಕೆಯಾಗುತ್ತಿರುವ ವಿಧಾನಸಭೆ!
Latest news item ‘ಎಲ್‌ಡಿ‌ಎಸ್’ ಅರ್ಥಾತ್‘ ಲವ್- ದೋಖಾ ಔರ್ ಸೆಕ್ಸ್’
Latest news item ‘ಮಹಾಧವಳ’ದ ಕನ್ನಡಾನುವಾದ ಲೋಕಾರ್ಪೆಣೆ...
Latest news item ಸದನದಲ್ಲಿ ಬ್ಲೂಫಿಲಂ ವೀಕ್ಷಣೆ ಪ್ರಕರಣ: ನೈತಿಕತೆ ಇದ್ದಲ್ಲಿ ವಜಾಗೊಳಿಸಿ: ಬಿಜೆಪಿಗೆ ಮೊಯ್ಲಿ ಸವಾಲು
Latest news item ಸದನದಲ್ಲಿ ಸಚಿವರಿಂದ ಬ್ಲೂ ಫಿಲಂ ವೀಕ್ಷಣೆ ಪ್ರಕರಣ: ಕರಾವಳಿಯಾದ್ಯಂತ ಕಾವು ಪಡೆದ ಪ್ರತಿಭಟನೆ; ಶಾಸಕ ಸ್ಥಾನ ಅನರ್ಹಗೊಳಿಸಿ ಜೈಲಿಗೆ ತಳ್ಳಿ: ಸಿಪಿಎಂ
Latest news item ಹೊನ್ನಾವರ ಬಳಿ ಮರಕ್ಕೆ ಕಾರು ಢಿಕ್ಕಿ: ಉಡುಪಿ ಡಿಸಿಐಬಿ ನಿರೀಕ್ಷಕರಿಗೆ ತೀವ್ರ ಗಾಯ
Latest news item ನೀಲಿ ಕಮಲ:.ಕಳಂಕಿತರಿಗೆ ಸದನ ಪ್ರವೇಶ ನಿರ್ಬಂಧ : ಬ್ಲೂಫಿಲಂ ವೀಕ್ಷಣೆ ಪ್ರಕರಣದಿಂದ ತಪ್ಪಿಸಿಕೊಳ್ಳಲು ಸರಕಾರದ ಹುನ್ನಾರ: ಎಂಟೇ ದಿನಕ್ಕೆ ಮೊಟಕುಗೊಂಡ ಅಧಿವೇಶನ
Latest news item ಜಿಲ್ಲೆಯನ್ನು ಮುಜುಗರಕ್ಕೀಡು ಮಾಡಿದ ಪಾಲೆಮಾರ್ ; ಯಾಕಿಂಥ ಕೆಲಸ ಮಾಡಿದರು? | ಬಿಜೆಪಿಯ ಹಗರಣಗಳು ಮತ್ತು ಕಳಂಕಿತ ಮಿನಿಸ್ಟರುಗಳು | ವಾಜಪೇಯಿ, ಅಡ್ವಾಣಿ ಬೆಳೆಸಿದ ಪಕ್ಷ ಇದೇನಾ?
Latest news item ಯು. ಎ. ಇ. ಬಂಟ್ಸ್ ಡೈರೆಕ್ಟರಿ - 2012 | UAE BUNTS DIRECTORY -2012
Latest news item ದುಬಾಯಿಯಲ್ಲಿ ವರ್ಣರಂಜಿತ ಯಕ್ಷಲೋಕ ಸೃಷ್ಟಿಸಿದ ಯಕ್ಷಮಿತ್ರರ ಯಕ್ಷಗಾನ ವೈಭವ ’ಶಾಂಭವಿ ವಿಜಯ’
Latest news item ಶಾರ್ಜಾ ಕರ್ನಾಟಕ ಸಂಘ ವಾರ್ಷಿಕೋತ್ಸವ: ವಿನಯ್ ಆಡಿಗ ಆಶಾ ಫೆರ್ನಾಂಡಿಸ್- 'ಮಯೂರ 'ರಾಜ' 'ರಾಣಿ'; ಶೋಧನ್ ಪ್ರಸಾದ್ ರವರಿಗೆ ಪ್ರತಿಷ್ಟಿತ ’ಮಯೂರ’ ಪ್ರಶಸ್ತಿ ಪ್ರಧಾನ| ಮುಖ್ಯ ಅತಿಥಿ ಕರ್ನಾಟಕ ಲೋಕಾಯುಕ್ತ ಮಾನ್ಯ ಎನ್. ಸಂತೋಷ್ ಹೆಗ್ಡೆ ಯವರಿಂದ ಮೆಚ್ಚುಗೆ
Latest news item ಯು.ಎ.ಇ. ಬಂಟರ 37 ನೇ ಸ್ನೇಹಮಿಲನ: ಜಾನಪದ ಕಲಾ ವೈಭವ... ಡಾ. ಬಿ ಆರ್. ಶೆಟ್ಟಿಯವರಿಂದ ಉದ್ಘಾಟನೆ
Latest news item ಧ್ವನಿ ಪ್ರತಿಷ್ಠಾನ ಯು.ಎ.ಇ. ಯು ಬೆಳ್ಳಿ ಹಬ್ಬ: ವಿಜ್ರಂಭಣೆಯಿ೦ದ ಜರುಗಿದ ಯು.ಎ.ಇ. ಪ್ರಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನ; ಪ್ರಶಸ್ತಿ ಪ್ರದಾನ ಸಮಾರಂಭ
Latest news item ದುಬಾಯಿ ಸರ್ಕಾರದಿಂದ ಸನ್ಮಾನಿತರಾದ ಕರ್ನಾಟಕದ ಗೃಹ ಮತ್ತು ಸಾರಿಗೆ ಸಚಿವರಾದ ಮಾನ್ಯ ಆರ್. ಆಶೋಕ್ ರವರಿಗೆ ದುಬಾಯಿಯಲ್ಲಿ ಕನ್ನಡಿಗರಿಂದ ಅಭಿನಂದನಾ ಸಮಾರಂಭ; ಮಾನ್ಯ ಸಚಿವ ವರಿಂದ ಅನಿವಾಸಿ ಕನ್ನಡಿಗರ ಅಭಿಮಾನಕ್ಕೆ ಮೆಚ್ಚುಗೆ.( Updated )
Latest news item ಮೋಗವೀರ್ಸ್ ಯು.ಎ.ಇ. ಆಶ್ರಯದಲ್ಲಿ ದುಬಾಯಿಯಲ್ಲಿ ಭಕ್ತಿ ಶ್ರದ್ಧೆಯಿಂದ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ
Latest news item ವಿಜ್ರಂಭಣೆಯಿಂದ ಜರುಗಿದ 'ಬಂಟ್ಸ್ ಬಹ್ರೈನ್'ನ ಸಾಂಸ್ಕೃತಿಕ ಕಾರ್ಯಕ್ರಮ: ಶ್ರೀ ಶ್ರೀ ಶ್ರೀ ಒಡಿಯೂರು ಗುರುದೇವಾನಂದ ಸ್ವಾಮೀಜಿಯವರ ಐತಿಹಾಸಿಕ ಭೇಟಿ: ಭಾವಪರವಶರಾದ ಭಕ್ತ ಸಮೂಹ: ಭಕ್ತಿ ಸಂಗೀತದ ಧಾರೆ ಹರಿಸಿದ ನಾಡಿನ ಖ್ಯಾತ ಗಾಯಕ ರವೀಂದ್ರ ಪ್ರಭು.
Latest news item ಸ್ವಾರ್ಥವಿಲ್ಲದ 'ಸಾರ್ಥ' ದ ಅಪೂರ್ವ ಕಾರ್ಯಕ್ರಮ ನಮನ ; ಕನ್ನಡದ ಮಣ್ಣಿಗೆ ದ್ವೀಪದಲ್ಲಿ ನಿಜ ನಮನ; ಸಂಗೀತ ಸುಧೆ ಹರಿಸಿದ ಗಾಯಕಿ ಸಂಗೀತ ಕಟ್ಟಿ ಹಾಗು ತಂಡ; ಖ್ಯಾತ ನಿರ್ದೇಶಕ ನಾಗತಿ ಹಳ್ಳಿ ಚಂದ್ರಶೇಖರ್ ರವರಿಂದ ಸ್ಫೂರ್ತಿಯ ಮಾತುಗಳು.



 

 
ಅಕ್ಕ ಜಾತ್ರೆ ಎರಡನೆ ದಿನ ಇಮ್ಮಡಿಗೊಂಡ ಸಂಭ್ರಮ

ಅಕ್ಕ ಸಮ್ಮೇಳನದ ಅವಿಭಾಜ್ಯ ಅಂಗ ಕಣ್ಮನ ತಣಿಸುವ ಮೆರವಣಿಗೆ. ಇದರಲ್ಲಿ ಅಮೆರಿಕದ ವಿವಿಧ ಪ್ರಾಂತ್ಯಗಳ ಕನ್ನಡ ಸಂಘಗಳ ಸದಸ್ಯರು ಉತ್ಸಾಹದಿಂದ ಪಾಲ್ಗೊಳ್ಳುತ್ತಾರೆ. ತಂತಮ್ಮ ಸಂಘ ಗಳ ಬ್ಯಾನರ್ ಹಿಡಿದುಕೊಂಡು ಮೆರವಣಿಗೆಯಲ್ಲಿ ಹೆಜ್ಜೆಗೆ ಹೆಜ್ಜೆಯಾಗುವುದು ಸಂಘ ಸದಸ್ಯರಿಗೆ ಅತೀವ ಹೆಮ್ಮೆ ಕೊಡುವ ಒಂದು ಘಳಿಗೆ.

ಈಬಾರಿ ಮೆರವಣಿಗೆಯ ಕೇಂದ್ರವಸ್ತು (ಥೀಮ್) ಕರ್ನಾಟಕದ ಹಬ್ಬಹರಿದಿನಗಳು. ಸಂಕ್ರಾಂತಿ ಯಿಂದ ಹಿಡಿದು ವಿಜಯದಶಮಿಯವರೆಗಿನ ಸಣ್ಣದೊಡ್ಡ ಹಬ್ಬಗಳೆಲ್ಲವೂ ವಿವಿಧ ಸಂಘಗಳು ಕಟ್ಟಿ ಕೊಟ್ಟ ಸ್ತಬ್ಧ ಚಿತ್ರಗಳ ಮೂಲಕ ಪ್ರತಿಬಿಂಬಿತವಾದವು. ಸಂಕ್ರಾಂತಿಯ ತಂಡ ಎಳ್ಳುಬೀರಿದರೆ ಯುಗಾದಿಯ ತಂಡ ಬೇವುಬೆಲ್ಲ ಹಂಚಿತು. ಬಸವನ ಪರಿಷೆಯ ತಂಡ ಕಳ್ಳೇಕಾಯಿ ಕೊಟ್ಟರೆ ಗಣೇಶಚೌತಿಯ ತಂಡ ಮೋದಕಪ್ರಿಯರ ಬಾಯಿಯನ್ನು ಸಿಹಿಯಾಗಿಸಿತು.

ವಿಡಿಯೋ ಕಾನ್ಫರೆನ್ಸ್ ಸಾಹಿತ್ಯಗೋಷ್ಠಿ

ಟೆಲಿಕಾನ್ಫರೆನ್ಸ್ ತಂತ್ರಜ್ಞಾನವನ್ನು ಬಳಸಿಕೊಂಡು ಕರ್ನಾಟಕ ಮತ್ತು ಅನಿವಾಸಿ ಭಾರತೀಯರ ನಡು ವಿನ ಸಾಹಿತ್ಯ ಸಂವೇದನಗಳಿಗೆ ಸೇತುವೆ ನಿರ್ಮಿಸುವ `ಯಾವ ಮೋಹನ ಮುರಳಿ ಕರೆಯಿತು' ಶೀರ್ಷಿಕೆಯ ಕಾರ್ಯಕ್ರಮ ಭರ್ಜರಿ ಯಶಸ್ಸು ಕಂಡಿತು. ಬೆಂಗಳೂರಿನ ನಯನ ಸಭಾಂಗಣ ಮತ್ತು ನ್ಯೂ ಜೆರ್ಸಿಯ ಗುಬ್ಬಿ ವೀರಣ್ಣ ರಂಗಮಂಟಪದಲ್ಲಿ ಏಕಕಾಲಕ್ಕೆ ಉಪಸ್ಥಿತರಿದ್ದ ಕವಿಪುಂಗವರು ಮು ಖಾಮುಖಿಯಾದರು.

ನಯನದಲ್ಲಿ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಅವರ ಉಪಸ್ಥಿತಿ ಕಾರ್ಯಕ್ರಮಕ್ಕೆ ವಿಶೇಷ ಶೋಭೆ ತಂದರೆ `ಅಕ್ಕ' ವೇದಿಕೆಯಲ್ಲಿ ನೆರೆದಿದ್ದ ಅನಿವಾಸಿ ಕನ್ನಡ ಸಾಹಿತಿಗಳ ಬಳಗ ಕವಿಕಾವ್ಯಕ್ಕೆ ಧ್ವನಿ ಯಾಯಿತು.

ಕಾರ್ಯಕ್ರಮದ ಆರಂಭದಲ್ಲಿ ಅಕ್ಕ ಆಶಯಗೀತೆ ``ಅಲ್ಲೇ ಹುಟ್ಟಿದರೂ ಇಲ್ಲೇ ಹುಟ್ಟಿದರೂ..." ಅತ್ಯಂತ ಸುಶ್ರಾವ್ಯವಾಗಿ ಮೂಡಿಬಂತು. ಈ ಗೀತೆಯನ್ನು ಬರೆದವರು ಎಚ್ಚೆಸ್ವಿ ಮತ್ತು ಸಂಗೀತಕ್ಕೆ ಅಳವಡಿಸಿ ದವರು ಸುನೀತಾ ಅನಂತಸ್ವಾಮಿ. ಕನ್ನಡ ಸಾಹಿತ್ಯದ ಮೇಲಿನ ಪ್ರೀತಿಯಿಂದ ಇಂಡ್ಯಾಕಾಮಿಕ್ಸ್ ಡಾಟ್ ಕಾಮ್ ಪ್ರಾಯೋಜಿಸಿದ್ದ ಈ ಕಾರ್ಯಕ್ರಮ ಈ ಬಾರಿಯ `ಅಕ್ಕ' ಸಮ್ಮೇಳನದ ವಿಶೇಷಗಳಲ್ಲಿ ಒಂದಾಗಿ ಜನಮನ ಗೆದ್ದಿತು.

ಇದೇ ವೇದಿಕೆಯನ್ನು ಬಳಸಿಕೊಂಡು ಮುಖ್ಯಮಂತ್ರಿ ಯಡಿಯೂರಪ್ಪನವರು `ಅಕ್ಕ' ಸಮ್ಮೇಳನದ ಸಂದರ್ಭದಲ್ಲಿ ಉಭಯ ಸದನಗಳನ್ನು ಉದ್ದೇಶಿಸಿ ಸುದೀರ್ಘವಾಗಿ ಮಾತನಾಡಿದರು. ಕಳೆದೆ ರಡು ಸಮ್ಮೇಳನಗಳಲ್ಲಿ ತಾವು ಪ್ರತ್ಯಕ್ಷವಾಗಿ ಭಾಗವಹಿಸಿದ್ದನ್ನು ನೆನೆಸಿಕೊಂಡರು. ಅಮೆರಿಕ ಒಂದು ನದಿ, ಕರ್ನಾಟಕ ಒಂದು ನದಿ. ಈ ಎರಡೂ ನದಿಗಳ ನಡುವೆ ಒಂದು ಅಮೃತವಾಹಿನಿ ಹರಿಯುತ್ತಿದೆ ಎಂದು ಮುಖ್ಯಮಂತ್ರಿಗಳು ಕರ್ನಾಟಕ ಮತ್ತು ಅನಿವಾಸಿ ಕನ್ನಡಿಗರ ನಂಟನ್ನು ಕಾವ್ಯಾತ್ಮಕವಾಗಿ ಬಣ್ಣಿಸಿದರು.

ನಯನ ಸಭಾಂಗಣದಲ್ಲಿ ಉಪಸ್ಥಿತರಿದ್ದ ಚಿತ್ರನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ವಲಸೆ ಹಕ್ಕಿಗಳ ಕಲರವವನ್ನು ಎಳೆಎಳೆಯಾಗಿ ಬಿಡಿಸಿಟ್ಟರು. ಈ ಹಿಂದಿನ ಎಲ್ಲ `ಅಕ್ಕ' ಸಮ್ಮೇಳನಗಳಲ್ಲಿ ತಾನು ಭಾಗವಹಿಸಿದ್ದುದಾಗಿ ಹೇಳಿ, ಪ್ರಸಕ್ತ ಸಮ್ಮೇಳನದಲ್ಲಿ ಕಾರಣಾಂತರಗಳಿಂದ ಪಾಲ್ಗೊಳ್ಳಲಾ ಗದಿರುವುದಕ್ಕೆ ವಿಷಾದ ವ್ಯಕ್ತಪಡಿಸಿದರು. ಆದರೆ ಈ ವಿಷಾದವನ್ನು ಟೆಲಿಕಾನ್ಫರೆನ್ಸ್ ನೀಗುತ್ತಿದೆ ಎಂದು ಸಮಾಧಾನಿಸಿಕೊಂಡರು.

ರಕ್ತದಾನ

ಈ ಬಾರಿಯ `ಅಕ್ಕ' ಸಮ್ಮೇಳನದ ಹಲವು ಪ್ರಥಮಗಳಲ್ಲಿ ಮತ್ತೊಂದಾಗಿ ಗಮನ ಸೆಳೆದದ್ದು ರಕ್ತ ದಾನ ಶಿಬಿರ. ಪಿಟ್ಸ್‌ಬರ್ಗ್ ಕನ್ನಡ ಸಂಘದ ಅಧ್ಯಕ್ಷ ಶಶಿಶೇಖರ ಅವರ ಮುತುವರ್ಜಿಯಿಂದ ಆಯೋಜಿತವಾದ ಈ ಶಿಬಿರಕ್ಕೆ `ಅಕ್ಕ' ಅಧ್ಯಕ್ಷ ರವಿ ಡಂಕಣಿಕೋಟೆಯವರು ರಕ್ತದಾನ ಮಾಡುವ ಮೂಲಕ ಚಾಲನೆ ನೀಡಿದರು.

ನ್ಯೂಯಾರ್ಕ್‌ನ `ಬ್ಲಡ್ ಪ್ರೊಗ್ರಾಂ' ಅಡಿಯಲ್ಲಿ ಈ ಶಿಬಿರ ನಡೆಯಿತು. ಒಟ್ಟು ನೂರೈವತ್ತು ದಾನಿಗಳಿಂ ದ ರಕ್ತ ಸಂಗ್ರಹಿಸುವ ಉದ್ದೇಶ ಈ ಕಾರ್ಯಕ್ರಮದ್ದು. ಶನಿವಾರ ಸಂಜೆಯ ಹೊತ್ತಿಗೆ ಮೂವತ್ತು ಅನಿವಾಸಿ ಕನ್ನಡಿಗರು ರಕ್ತದಾನ ಮಾಡುವುದರೊಂದಿಗೆ ಕರ್ನಾಟಕದ ರಕ್ತ ಅಮೆರಿಕ ರಕ್ತದಲ್ಲಿ ಬೆರೆಯಿತು.

ರಾಜಕಾರಣಿಗಳು

`ಅಕ್ಕ' ಸಮ್ಮೇಳನದಲ್ಲಿ ಪಾಲ್ಗೊಳ್ಳುವ ಉತ್ಸಾಹ ಪ್ರದರ್ಶಿಸುವಲ್ಲಿ ಈ ಬಾರಿಯೂ ರಾಜಕಾರಣಿ ಗಳು ಹಿಂದೆ ಬೀಳಲಿಲ್ಲ. ರಾಜ್ಯದಿಂದ ಸರಿಸುಮಾರು ಮೂವತ್ತೆರಡು ಮಂದಿ ಶಾಸಕರು ಕುಟುಂಬ ಸಮೇತ ರಾಗಿ ಆಗಮಿಸಿ ಕಡಲಾಚೆಯ ಕನ್ನಡಿಗರ ಭಾವಬಿಂದುಗಳಲ್ಲಿ ಒಂದಾದರು.

ಸಭಾಪತಿ ಡಿ.ಎಸ್.ಶಂಕರಮೂರ್ತಿ, ಸಚಿವರುಗಳಾದ ಜಗದೀಶ ಶೆಟ್ಟರ್, ನರೇಂದ್ರ ಸ್ವಾಮಿ, ಕರಾರ ಸಾಸಂ ಅಧ್ಯಕ್ಷ ಜಗ್ಗೇಶ್, ಬೊಮ್ಮನಹಳ್ಳಿಯ ಶಾಸಕ ಸತೀಶ ರೆಡ್ಡಿ ವೇದಿಕೆಯನ್ನು ಹಂಚಿಕೊಂಡರೆ ಉಳಿದ ಶಾಸಕರು ನಾಲ್ಕುಸಾವಿರ ಸಮ್ಮೇಳನಾರ್ಥಿಗಳ ಸಾಲಿನಲ್ಲಿ ತಾವೂ ಒಬ್ಬರಾಗಿ ಕನ್ನಡ ಕಾರ್ಯಕ್ರಮಗಳಿಗೆ ಸಾಕ್ಷೀಭೂತರಾದರು. ತಮ್ಮ ಎಂದಿನ ಖಾದಿ ಉಡುಪಿಗೆ ತಾತ್ಕಾಲಿಕ ವಿರಾಮ ಘೋಷಿಸಿಕೊಂಡರು. ಶಾಸಕರ ತಂಡ ಅಮೆರಿಕದ ನಾನಾ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿಕೊಟ್ಟು ಇನ್ನೆರಡು ವಾರಗಳಲ್ಲಿ ಕರ್ನಾಟಕಕ್ಕೆ ವಾಪಸಾಗುವ ನಿರೀಕ್ಷೆಯಿದೆ.

ಉತ್ಕೃಷ್ಟ ದರ್ಜೆಯ ಸಾಂಸ್ಕೃತಿಕ ಕಾರ್ಯಕ್ರಮಗಳು

ಉತ್ಕೃಷ್ಟ ದರ್ಜೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ಈ ಬಾರಿಯ `ಅಕ್ಕ' ಸಮ್ಮೇಳನದ ಹಿರಿಮೆಗಳ ಲ್ಲಿ ಒಂದು ಎಂಬುದು ನಿಸ್ಸಂದೇಹವಾಗಿ ಸಾಬೀತಾಯಿತು. ಪ್ರಭಾತ ಕಲಾವಿದರು ಪ್ರಸ್ತುತಪಡಿಸಿದ `ಕೃಷ್ಣ ವೈಜಯಂತಿ' ನೃತ್ಯರೂಪಕ, ಅಮೆರಿಕದ ವಿವಿಧ ಕನ್ನಡಕೂಟಗಳ ಸದಸ್ಯರು ಒಟ್ಟಾಗಿ ಸಾದರ ಪಡಿಸಿದ `ಕರುನಾಡ ಕೊಡುಗೆ' ಎಂಬ ಸಮೂಹನೃತ್ಯ ಗಾನವೈಭವ ಸಮ್ಮೇಳನಾರ್ಥಿಗಳನ್ನು ಮಂತ್ರ ಮುಗ್ಧರನ್ನಾಗಿಸಿದವು.

ಕರ್ನಾಟಕದಿಂದ ಬಂದಿರುವ ಕಲಾವಿದರ ತಂಡಗಳ ಪ್ರದರ್ಶನಗಳು ತಮ್ಮ ಕಲಾತ್ಮಕತೆ ಮತ್ತು ವೈವಿಧ್ಯದಿಂದ `ಅಕ್ಕ' ಸಮ್ಮೇಳನಕ್ಕೆ ಸಾಂಸ್ಕ್ರೃತಿಕ ಮೆರಗು ತಂದುಕೊಟ್ಟವು. ಇವುಗಳ ಮಧ್ಯೆ ಸ್ಥಳೀಯ ಕಲಾವಿದರಿಂದ ಹಾಸ್ಯನಾಟಕಗಳು, ನೃತ್ಯರೂಪಕಗಳು ಮನರಂಜನೆಯ ರಸದೌತಣ ಉಣಬಡಿಸಿದವು. ಕನೆಕ್ಟಿಕಟ್ ಕನ್ನಡಕೂಟದ ಮಲ್ಲಿ ಸಣ್ಣಪ್ಪನವರ್ ಮತ್ತು ತಂಡದವರು ಪ್ರಸ್ತುತ ಪಡಿಸಿದ `ಅಮೆರಿಕದಲ್ಲಿ ಯಮಧರ್ಮರಾಯ' ಕಿರುಪ್ರಹಸನವಂತೂ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿತು.

ಶುಕ್ರವಾರ ಮತ್ತು ಶನಿವಾರ ಪ್ರದರ್ಶಿತವಾದ ಬಹುತೇಕ ಕಾರ್ಯಕ್ರಮಗಳಿಗೆ ದೃಶ್ಯವೈಭವದ ಸ್ಪರ್ಶ ಕೊಟ್ಟ ಬೆಳಕಿನ ಸಂಯೋಜನೆ, ಧ್ವನಿಗ್ರಹಣ, ಹಿನ್ನೆಲೆಗಾಯನ ಮತ್ತು ಔಚಿತ್ಯಪೂರ್ಣ ಕಾರ್ಯಕ್ರಮ ನಿರೂಪಣೆಗಳು ಅತ್ಯಂತ ಸಮರ್ಪಕವಾಗಿದ್ದು ರಸಾಸ್ವಾದನೆಯ ಆನಂದವನ್ನು ದುಪ್ಪಟ್ಟಾಗಿಸಿದವು.

ಸುಧಾರಣೆಗೊಂಡ ಭೋಜನ ವ್ಯವಸ್ಥೆ :

ಭೋಜನಶಾಲೆಯಲ್ಲಿ ಶನಿವಾರ ಮಧ್ಯಾಹ್ನದ ವರೆಗೂ ಕಂಡುಬಂದಿದ್ದ ಅವ್ಯವಸ್ಥೆ, ಗೊಂದಲಗಳು ಸಮ್ಮೇಳನ ಸಂಯೋಜಕ ಪ್ರಸನ್ನ ಕುಮಾರ್ ಮತ್ತು ಅಮರನಾಥ ಗೌಡ ಅವರ ಸಮಯೋಚಿತ ನಿರ್ದೇಶನದಿಂದಾಗಿ ನಿರಾಳವಾದವು. ಶನಿವಾರ ರಾತ್ರೆಯ ಊಟಕ್ಕೆ ಸರತಿಸಾಲಿನಲ್ಲಿ ಕಾಯುವ ಅವಶ್ಯಕತೆಯೇ ಇರಲಿಲ್ಲ. ಪೂರಿ-ಪಲ್ಯ, ಗೊಜ್ಜು, ಹುಳಿ, ಮೊಸರನ್ನ, ಬೂಂದಿಲಡ್ಡು ಸಹಿತ ಸ್ವಾದಿಷ್ಟ ಭೋಜನವನ್ನು ಎಲ್ಲ ಸಮ್ಮೇಳನಾರ್ಥಿಗಳೂ ಹೊಟ್ಟೆ ತುಂಬ ಸವಿದರು.

ಬಾಲಮುರಳೀಕೃಷ್ಣ ಗಾನಾಮೃತ :

ಶುಕ್ರವಾರ ಸಂಜೆ ಸಮ್ಮೇಳನ ಉದ್ಘಾಟನೆಯ ನಂತರ ಪ್ರಧಾನ ಸಾಂಸ್ಕೃತಿಕ ಕಾರ್ಯಕ್ರಮ ವಾಗಿದ್ದ ಬಾಲಮುರಳೀಕೃಷ್ಣ ಅವರ ಸಂಗೀತ ಕಛೇರಿ ಶಾಸ್ತ್ರೀ ಯ ಸಂಗೀತ ರಸಿಕರಿಗೆ ಮುದ ನೀಡಿತು. ಎಪ್ಪತ್ತಾರರ ಇಳಿವಯಸ್ಸಿನಲ್ಲೂ ಮನೋಜ್ಞ ಕಛೇರಿ ನೀಡಿದ ಬಾಲಮುರಳಿಯವರ ವಿದ್ವತ್ತಿಗೆ ತಲೆದೂಗದವರೇ ಇಲ್ಲ. `ಈ ಪರಿಯ ಸೊಬಗಾವ ದೇವರಲಿ ನಾ ಕಾಣೆ' ಕೀರ್ತನೆ ಯನ್ನು ಅವರು ಸುಶ್ರಾವ್ಯವಾಗಿ ಹಾಡಿದಾಗ ಭಾರತೀಯ ಶಾಸ್ತ್ರೀಯ ಸಂಗೀತದ ಸಮ್ಮೋಹನವು ಗುಬ್ಬಿ ವೀರಣ್ಣ ರಂಗಮಂಟಪವನ್ನು ಆವರಿಸಿಕೊಂಡಿತು.

ಸಂಗೀತ ಕಾರ್ಯಕ್ರಮಗಳಿಗೆ ಮೀಸಲಾಗಿದ್ದ ಪುರಂದರ ಸಭಾಂಗಣದಲ್ಲಿ ಇಡೀದಿನ ಒಂದಾದ ಮೇಲೊಂದರಂತೆ ಸಂಗೀತ ಕಾರ್ಯಕ್ರಮಗಳ ಝೇಂಕಾರ. ವಿದ್ಯಾಭೂಷಣರ ದೇವರ ನಾಮ ಗಳಿಗೆ ಅಮೆರಿಕದಲ್ಲಿ ಎಲ್ಲಿಲ್ಲದ ಬೇಡಿಕೆ. ಅವರ ಕಛೇರಿಯ ನಂತರ ವೇದಿಕೆ ಹತ್ತಿದ್ದು ಅವರ ಶಿಷ್ಯರೇ ಆದ ಶಂಕರ ಶಾನುಭಾಗ್ ಮತ್ತು ತಂಡ. ಶನಿವಾರ ಮಧ್ಯಾಹ್ನ ಸಂಗೀತಪ್ರಿಯರಿಗೆ ಮತ್ತೊಂದು ರಸ ದೌತಣ ಉಣಬಡಿಸಿದವರು ಸ್ಯಾಕ್ಸೊಫೋನ್ ವಾದಕ ಕದ್ರಿ ರಮೇಶನಾಥ್. ಶನಿವಾರದ ಸಾಂಸ್ಕೃ ತಿಕ ಕಾರ್ಯಕ್ರಮಗಳಿಗೆ ಶಿಖರಪ್ರಾಯವಾಗಿ ಮೂಡಿಬಂದದ್ದು ರಾತ್ರಿ ಭೋಜನಾನಂತರದ ``ಕನ್ನಡ ವೇ ಶ್ರೇಷ್ಠ" ಸಂಗೀತ ಸೌರಭ.

ಹತ್ತರೊಡನೆ ಹನ್ನೊಂದು `ಸಾಹಿತ್ಯ' : ಇಂಥ ಸಮ್ಮೇಳನಗಳಲ್ಲಿ ತಾನೇತಾನಾಗುವ ಜನಪ್ರಿಯ ಕಾರ್ಯಕ್ರಮಗಳ ನಡುವೆ ಸೊರಗುವ ಏಕೈಕ ಕಾರ್ಯಕ್ರಮವೆಂದರೆ ಕನ್ನಡ ಸಾಹಿತ್ಯ. ಆದರೆ ಕಾರ್ಯಕ್ರಮವನ್ನು ಮೂಲೆಗುಂಪಾಗಿಸಲು ಬಿಡದ ಸಾಹಿತ್ಯ ಕಮಿಟಿಯ ಮುಂದಾಳು ಸತ್ಯಪ್ರಸಾದ್ ಅವರ ಉಮೇದಿನಿಂದ ಕವಿಗೋಷ್ಠಿ ಅಂತೂ ಇಂತೂ ಡಿವಿಜಿ ಭವನದಲ್ಲಿ ನಡೆದೇಬಿಟ್ಟಿತು. ಹಿರಿಯ ಅನಿವಾಸಿ ಲೇಖಕರಾದ ಎಚ್.ವಿ.ರಂಗಾಚಾರ್ ಮತ್ತು ಮೈ.ಶ್ರೀ. ನಟರಾಜ್ ಅವರ ಮುಂದಾಳತ್ವದಲ್ಲಿ ಕವನವಾಚನ ಗೋಷ್ಠಿ ಸಾಕಾರಗೊಂಡಿತು.

ಬಿ.ಆರ್.ಲಕ್ಷ್ಮಣ ರಾವ್ ಅವರು ವಿಷಾದಗೀತೆಯನ್ನು ವಾಚಿಸಿದರೆ, ಎಚ್ಚೆಸ್ವಿಯವರು ಕವಿತೆಯ ಬದ ಲಾಗಿ ಸದ್ಯದಲ್ಲೇ ಬಿಡುಗಡೆಯಾಗಲಿರುವ ತಮ್ಮ ಅನಾತ್ಮಕಥನ ಕೃತಿಯಿಂದ ಆಯ್ದ ಒಂದು ಹೃದ ಯಸ್ಪರ್ಶಿ ಪ್ರಸಂಗವನ್ನು ಸಭಿಕರೊಂದಿಗೆ ಹಂಚಿಕೊಂಡರು. ಈ ಹೃದಯಸ್ಪರ್ಶಿ ಪ್ರಸಂಗದ ಕೇಂದ್ರ ವ್ಯಕ್ತಿ ಪು.ತಿ.ನರಸಿಂಹಾಚಾರ್ ಮತ್ತು ಅವರ ಪ್ರಿಯ ಶಿಷ್ಯ, ಇಂತೀ ನಿಮ್ಮ ವಿಧೇಯ ಎಚ್.ಎಸ್. ವೆಂಕಟೇಶಮೂರ್ತಿ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಶ್ರೀವತ್ಸ ಜೋಶಿ ಮತ್ತು ಎಸ್ಕೆ ಶಾಮಸುಂದರ/ದಟ್ಸ್ ಕನ್ನಡ
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-09-06 00:00:00

Tell a Friend
ಇತರ ಸಂಭಂದಪಟ್ಟ ವರದಿಗಳು
»‘ಅಕ್ಕ’ರೆಯ ವಿಶ್ವ ಕನ್ನಡಿಗರ ಜಾತ್ರೆ : ಆರನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನಕ್ಕೆ ಸ೦ಭ್ರಮದ ಚಾಲನೆ
»

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಸಾಹಿತ್ಯ-ಸಂಸ್ಕೃತಿ]

»ಮೂಡಿಗೆರೆ: ಜನಪರ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ: ಶೂದ್ರ, ದಲಿತ ಸಂಸ್ಕೃತಿಗಳು ಕೀಳಲ್ಲ: ನಿಡುಮಾಮಿಡಿ ಶ್ರೀ
»ಡಾ| ಕಮಲಾ ಹಂಪನಾ ಅವರಿಗೆ 'ಚಾವುಂಡರಾಯ ಪ್ರಶಸ್ತಿ' ಪ್ರದಾನ
»‘ಮಹಾಧವಳ’ದ ಕನ್ನಡಾನುವಾದ ಲೋಕಾರ್ಪೆಣೆ...
»ಮಲೆನಾಡಿನ ಕವಿ, ಉಪ್ಪುಕಡಲಿನ ರವಿ- ಪ್ರೊ.ಎಸ್.ವಿ.ಪರಮೇಶ್ವರ ಭಟ್ಟರು
»ಡಾ. ಗೀತಾ ನಾಗಭೂಷಣಗೆ ಭಾರತೀಯ ಭಾಷಾ ಪರಿಷತ್ ಪ್ರಶಸ್ತಿ
»ಮುಳಿಯ ಪ್ರಶಸ್ತಿ ಪ್ರದಾನ: ರೋಚಕ ಕೃತಿಗಳು ಕಡಿಮೆಯಾದಾಗ ಸಾಂಸ್ಕೃತಿಕ ಶ್ರೀಮಂತಿಕೆ ಮರೆಯಾಗುತ್ತದೆ: ಮಾಧವ ಆಚಾರ್ಯ
»ಕನ್ನಡ ಭಾಷೆ, ಸಾಹಿತ್ಯ ಪರಂಪರೆಗೆ ಐತಿಹಾಸಿಕ ಹಿನ್ನೆಲೆಗಳಿವೆ: ಮೂಡಿಗೆರೆ: 3ನೆ ಕನ್ನಡ ಸಾಹಿತ್ಯ ಸಮ್ಮೇಳನ ಸಮಾರೋಪದಲ್ಲಿ ಸಮ್ಮೇಳನಾಧ್ಯಕ್ಷ ಡಿ.ಬಿ.ಸುಬ್ಬೇಗೌಡ
»ರಷ್ಯನ್‌ ಕಥೆಗಳು ಪುಸ್ತಕ ಬಿಡುಗಡೆ: ಕನ್ನಡ ಸಾಹಿತ್ಯ ಲೋಕದಲ್ಲಿ ಅನುವಾದಕರಿಗೆ ವಿಪುಲ ಅವಕಾಶ: ಪ್ರೋ.ಸಿ. ನಾಗಣ್ಣ
» ಪ್ರಶಂಸೆಗೆ ಪಾತ್ರವಾದ ಸಿಕ್ಕಿಂ ವಿದ್ಯಾರ್ಥಿಗಳ ಯಕ್ಷಗಾನ ಪ್ರದರ್ಶನ : ನೆರೆದವರ ರಂಜಿಸಿದ ಜಟಾಯು ಮೋಕ್ಷ
»ಜಾತಿ, ಮತದ ಗಡಿ ದಾಟಿದರೆ ಮಾತ್ರ ಕವಿಯಾಗಬಲ್ಲ: ಎಚ್.ಎಸ್.ವೆಂಕಟೇಶಮೂರ್ತಿ
»2011ನೇ ಸಾಲಿನ ಪ.ಗೋ. ಸಂಸ್ಮರಣಾ ಗ್ರಾಮೀಣ ವರದಿಗಾರಿಕೆ ಪ್ರಶಸ್ತಿಗೆ ಅರ್ಜಿ ಆಹ್ವಾನ
»ಕುಕ್ಕೆ ಸುಬ್ರಹ್ಮಣ್ಯ: ಮಲೆ ಮಾದೇಶ್ವರಕ್ಕೆ ISO ಅಂತಾರಾಷ್ಟ್ರೀಯ ಮಾನ್ಯತೆ
»ಕವನ : ಕ್ಲಾಸ್ ಶಯನ...
»ಮಾತು ಬೇರೆ ಬೇಕೆ ಗೆಳೆಯ....
»ಚಂದ್ರಶೇಖರ ಕೆದ್ಲಾಯರಿಗೆ ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ; ಫೆ.4ರಂದು ಪ್ರಶಸ್ತಿ ಪ್ರದಾನ
»ಉಡುಪಿ :ದಿವಂಗತ ಸೂರ್ಯನಾರಾಯಣ ಚಡಗ ಸ್ಮಾರಕ ಪ್ರಶಸ್ತಿ ಪ್ರದಾನ
»ಕವಿ, ಪ್ರಾಧ್ಯಾಪಕ ಡಾ| ಧನಂಜಯ ಕುಂಬ್ಳೆ ಅವರಿಗೆ ಮುದ್ದಣ ಕಾವ್ಯ ಪ್ರಶಸ್ತಿ ಪ್ರದಾನ
»ಯಕ್ಷಗಾನ ಬಯಲಾಟ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ: ಯಕ್ಷಗಾನಕ್ಕೆ ನಿರ್ದಿಷ್ಟ ಸ್ವರೂಪ ಅಗತ್ಯ- ಗೋವಿಂದ ಭಟ್‌
»ತೋನ್ಸೆ ಕಾಂತಪ್ಪ ಮಾಸ್ತರರ ಸಂಸ್ಮರಣಾ ಪ್ರಶಸ್ತಿ ಪ್ರದಾನ ಸಮಾರಂಭ: ಪರಿಪೂರ್ಣ ಕಲಾವಿದನಾಗಬೇಕಾದರೆ ಯಕ್ಷಗಾನದ ಬಗ್ಗೆ ಆಸಕ್ತಿ ಜ್ಞಾನ ಅಗತ್ಯ- ಡಾ. ಭಾಸ್ಕರಾನಂದ ಕುಮಾರ್
»ಮೈಸೂರು ಉದ್ಯಾನಕಲಾ ಸಂಘದ ವತಿಯಿಂದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಕಂಬಾರರಿಗೆ ಸನ್ಮಾನ
»ಕವನ : ನನ್ನ ಸುಬ್ಬಿ
»ಮಲಯಾಳಂನ ಖ್ಯಾತ ಸಾಹಿತಿ ಸುಕುಮಾರ್ ಅಝಿಕೋಡ್ ನಿಧನ
»ಯಕ್ಷಗಾನ ಬಯಲಾಟ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಗೋವಿಂದ ಭಟ್ಟ
»ಭಾರತದ ಪ್ರಪಿತಾಮಹನೆ ...
»ಖ್ಯಾತ ಸಾಹಿತಿ ನಾಡೋಜ ಪ್ರೊ. ಹಂಪ. ನಾಗರಾಜಯ್ಯರಿಗೆ ‘ವಿಶ್ವಮಾನವ ಪ್ರಶಸ್ತಿ’; ಕನ್ನಡ ಸಾಹಿತ್ಯಕ್ಕೆ ಸಂಕುಚಿತತೆ ಇಲ್ಲ: ಎಚ್.ಆರ್.ಭಾರದ್ವಾಜ್
» ಅನಂತಮೂರ್ತಿ ವಿಚಾರಧಾರೆ : ಅನಂತಮೂರ್ತಿ ಸೃಜನಶೀಲ ಸಾಹಿತಿ:ಡಾ.ನ. ರತ್ನ
»ಅದೆರಳಿದೆ....
»ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ತಾನೂ ಆಕಾಂಕ್ಷಿ: ಚಂಪಾ
»ಡಾ| ಪಾಟೀಲ ಪುಟ್ಟಪ್ಪಗೆ ನಾಗರಿಕ ಸಮ್ಮಾನ: ಗಾಂಧೀಜಿ ತತ್ವ ಪ್ರಚುರಪಡಿಸಲು ಗಾಂಧಿ ಗ್ರಾಮ ಸ್ಥಾಪನೆ:ಜಗದೀಶ ಶೆಟ್ಟರ್
»ಆಸ್ಟ್ರೋ ಮೋಹನ್ ರವರ ’ಪಿಕ್ಟೋರಿಯಲ್ ಜರ್ನಿ ಟು ಉಡುಪಿ”ಪುಸ್ತಕ ಬಿಡುಗಡೆ ಸಮಾರಂಭ
»ಮತ್ತೆ ಮಳೆ ಬರುವುದೆ....
»ಮಕ್ಕಳೊಂದಿಗೆ ಸಂವಾದ ಕಾರ್ಯಕ್ರಮ:ಗಣಿತ ನನಗೆ ಕಬ್ಬಿಣದ ಕಡಲೆಯಾಗಿತ್ತು: ಡಾ. ಚಂದ್ರಶೇಖರ ಕಂಬಾರ
»ಡಾ.ಜಿ.ಎನ್. ಉಪಾಧ್ಯಗೆ ‘ಶ್ರೀ ಗುರುನಾರಾಯಣ ಸಾಹಿತ್ಯ ಪ್ರಶಸ್ತಿ’
»ಕಾಳಿಂಗ ನಾವಡ ಯಶೋಗಾಥೆ ಸಾಕ್ಷ್ಯಚಿತ್ರ ವಿಡಿಯೋ
»ಕುವೆಂಪು ಕಂಚಿನ ಪ್ರತಿಮೆಗೆ ಪ್ಲಾಸ್ಟಿಕ್ ಮುಸುಕು!: ರಾಷ್ಟ್ರ ಕವಿ ಪ್ರತಿಮೆಗೂ ಬಿಜೆಪಿ ಭಿನ್ನಮತದ ಕರಿನೆರಳು; ಸಿಎಂಗಾಗಿ ಕಾದು ಕುಳಿತಿರುವ ಅಧಿಕಾರಿಗಳು
»ಗಾಯಕಿ ಎಸ್.ಜಾನಕಿಗೆ ಬಸವಭೂಷಣ ಪ್ರಶಸ್ತಿ ಪ್ರದಾನ
»ಜ್ಞಾನಪೀಠ ಶ್ರೇಷ್ಠವಾದದ್ದಲ್ಲ; ನಾಟಕ ಬರೆದದ್ದೇ ಆಕಸ್ಮಿಕ: ಡಾ| ಗಿರೀಶ ಕಾರ್ನಾಡ
»ಪಾರ್ಥಸಾರಥಿಯವರಿಗೆ ಕೊಲರಾಡೋ ಕನ್ನಡ ಪ್ರಶಸ್ತಿ
»ಯಕ್ಷಗಾನದ ಮೇರುನಟರ ಕ್ಯಾಲೆಂಡರ್‌ ಬಿಡುಗಡೆ; ಸಮಗ್ರ ಮಾಹಿತಿಯುಳ್ಳ ವೆಬ್‌ಸೈಟ್‌ ಕೂಡ ತಯಾರಿಯಲ್ಲಿ.
»30 ಜಿಲ್ಲೆಗಳಲ್ಲಿ ಕಂಬಾರರ ನಾಟಕಗಳ ಉತ್ಸವ
»ಎಲೆಯ ಮರೆಯ ಹೂ...
»ಪುತಿನ ಕಲಾಮಂದಿರ ಲೋಕಾರ್ಪಣೆ
»ಸುಳ್ಯ ಯಶಸ್ವೀ ಸಂಗೀತ ಸಂಭ್ರಮ 2011
»ಹಿರಿಯ ಸಾಹಿತಿ ಏರ್ಯ ಲಕ್ಷಿನಾರಾಯಣ ಆಳ್ವ ರಿಂದ ಡಾ| ಮೋಹನ ಆಳ್ವರಿಗೆ ಕಿಲ್ಲೆ ಪ್ರಶಸ್ತಿ ಪ್ರಧಾನ
»`ಕುವೆಂಪು ಪ್ರಭಾವ ಎಲ್ಲೆಡೆ ಪಸರಿಸಲಿ' ....
»ಕಸಾಪ ಅಧ್ಯಕ್ಷ ಸ್ಥಾನಕ್ಕೆ ಚಂಪಾ, ಹಾಲಂಬಿ ಸ್ಪರ್ಧೆ?
»ಕವನ : ಕನಸಿನಾಳದಿಂದ .....
»ನಾಲ್ವರು ಸಾಧಕರಿಗೆ `ನಾಡೋಜ' ಗೌರವ ಪದವಿ ನೀಡಿ ಸನ್ಮಾನ
»ಸಂತೆ ಶಿವಾರದಲ್ಲಿ ಸಾಹಿತಿ ಡಾ ಭೈರಪ್ಪರಿಗೆ ಸನ್ಮಾನ
»ಕವನ...

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri