ಜಿದ್ದಾ : ಸೌದಿ ದೊರೆ ಅಬ್ದುಲ್ಲಾಗೆ ಉಮ್ಮುಲ್ ಖುರಾ ವಿಶ್ವವಿದ್ಯಾನಿಲಯದಿ೦ದ ಗೌರವ ಡಾಕ್ಟರೇಟ್ |
ಪ್ರಕಟಿಸಿದ ದಿನಾಂಕ : 2010-09-06
ಜಿದ್ದಾ,ಸೆ.5: ಸೌದಿ ಅರೇಬಿಯದ ದೊರೆ ಅಬ್ದುಲ್ಲಾಗೆ ಉಮ್ಮುಲ್ ಖುರಾ ವಿಶ್ವವಿದ್ಯಾನಿಲಯವು ಗೌರ ವ ಡಾಕ್ಟ ರೇಟ್ ಪ್ರದಾನ ಮಾಡಿದೆ. ದೊರೆ ಅಬ್ದುಲ್ಲಾ ಸಲ್ಲಿಸಿದ ಮಾನವೀಯ ಸೇವೆಗಳಿಗಾಗಿ ಅವರಿಗೆ ಈ ಗೌರವ ಸಂದಿದೆ. ಸೌದಿಯ ಉನ್ನತ ಶಿಕ್ಷಣ ಸಚಿವ ಡಾ. ಖಾಲಿದ್ ಅಲ್-ಅನ್‌ಖಾರಿ ಹಾಗೂ ವಿವಿ ಅಧ್ಯಕ್ಷ ಮೆತೊಕ್ ಅಸ್ಸಾಸ್ ಅವರು ಶನಿವಾರ ಅಲ್ ಸಫಾ ಮಸೀದಿಯಲ್ಲಿ ನಡೆದ ಸಮಾರಂಭವೊಂ ದರಲ್ಲಿ ಮಕ್ಕಾ ಹಾಗೂ ಮದೀನಾ ಮಸೀದಿಗಳ ಪಾಲಕರೂ ಆದ ಅಬ್ದುಲ್ಲರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅಸ್ಸಾಸ್, ಮಾನವೀಯ ಸೇವೆಗಳಿಗಾಗಿ ದೊರೆ ಅಬ್ದುಲ್ಲಾಗೆ ದೊರೆ ತಿರುವ ಅಂತಾರಾಷ್ಟ್ರೀಯ ಮನ್ನಣೆಯನ್ನು ಪ್ರಶಂಸಿದರು.ಪಾಕಿಸ್ತಾನದ ಪ್ರವಾಹ ಸಂತ್ರಸ್ತರ ಬವಣೆ, ಯಾತನೆಗಳನ್ನು ನಿವಾರಿಸಲು ದೊರೆ ನಡೆಸಿರುವ ಪ್ರಯತ್ನಗಳನ್ನು ಅವರು ಪ್ರಸ್ತಾಪಿಸಿದರು. ವಿವಿಧ ಧರ್ಮಗಳ ನಡುವೆ ಸೌಹಾರ್ದತೆಯನ್ನು ಬೆಳೆಸುವ ಮಾತುಕತೆಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ದೊರೆ ಅಬ್ದುಲ್ಲಾ ಕೈಗೊಂಡಿರುವ ಐತಿಹಾಸಿಕ ಕ್ರಮಗಳನ್ನು ಅವರು ಶ್ಲಾಘಿಸಿದರು.
ಸೌದಿ ಅರೇಬಿಯದಲ್ಲಿ ಮಾನವಹಕ್ಕುಗಳ ರಕ್ಷಣೆ, ಬೃಹತ್ ಆರ್ಥಿಕ ನಗರಗಳ ಸೃಷ್ಟಿಸುವ ಮೂಲಕ ರಾಷ್ಟ್ರೀಯ ಆರ್ಥಿಕತೆಯ ಬಲವರ್ಧನೆ ಮತ್ತು ಆರ್ಥಿಕ ಶೃಂಗಸಭೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಜಾಗತಿಕ ಆರ್ಥಿಕ ಬಿಕ್ಕಟ್ಟಿಗೆ ಪರಿಹಾರ ಯತ್ನ ಮತ್ತಿತರ ವಿಷಯಗಳಿಗೆ ಸಂಬಂಧಿಸಿ ಸೌದಿ ದೊರೆ ಸಲ್ಲಿಸಿರುವ ಕೊಡುಗೆಯನ್ನು ವಿಶ್ವವಿದ್ಯಾನಿಲಯದ ವರಿಷ್ಠರು ಸ್ಮರಿಸಿದರು.
ಏತನ್ಮಧ್ಯೆ, ಮುಸ್ಲಿಂ ವಿಶ್ವ ಲೀಗ್‌ನ 50ನೆ ವರ್ಷಾಚರಣೆಯ ಅಂಗವಾಗಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ಲಾ ಅಲ್ ತುರ್ಕಿಯವರಿಂದ, ವಿಶೇಷ ಪದಕವೊಂದನ್ನು ದೊರೆ ಅಬ್ದುಲ್ಲಾ ಸ್ವೀಕರಿಸಿದರು.
ವರದಿಯ ವಿವರಗಳು |
 |
ಕೃಪೆ : ವಾಭಾ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-09-06 00:00:00
|
|
|