ದುಬೈ : ಔರಂಗಜೇಬನ ಕಾಲದ ಕುರ್‌ಆನ್ ಜರ್ಮನಿಯಲ್ಲಿ ಹರಾಜಿಗೆ ಸಿದ್ಧತೆ |
ಪ್ರಕಟಿಸಿದ ದಿನಾಂಕ : 2010-09-05
ದುಬೈ, ಸೆ. 4: ಭಾರತದ ಮೊಗಲರ ದೊರೆ ಔರಂಗಜೇಬ್ ಬರೆಸಿದ್ದೆನ್ನಲಾದ, ಸುಮಾರು 300 ವರ್ಷ ಗಳಷ್ಟು ಹಳೆಯದಾದದ ಕೈ ಬರಹದ ಕುರ್‌ಆನ್‌ನ್ನು ಶ್ರೀಘ್ರದಲ್ಲೇ ಅದರ ಎಮಿರೇಟ್‌ನ ಮಾಲಕ ಜರ್ಮನಿಯಲ್ಲಿ ಹರಾಜು ಮಾಡಲಿದ್ದಾರೆ ಎಂದು ವರದಿಯೊಂದು ತಿಳಿಸಿದೆ.
14.5, 24 ಸೆ.ಮೀ. ವಿಸ್ತಾರದ ಕೈಬರಹದ ಕುರ್‌ಆನ್ ಭಾರತದ ಮೊಗಲರ ಕಾಲದ್ದು ಎಂದು ಹೇಳಲಾಗಿದೆ. ಔರಂಗಜೇಬನ ಕಾಲದಲ್ಲಿ ರಚಿಸಲಾದ ಈ ಕುರ್‌ಆನಿನ ಸಂಗ್ರಹ ಇದಾಗಿದೆ. ಈ ಕುರ್‌ಆನ್‌ನ್ನು ಜರ್ಮನ್‌ನ ಬಾಂರ್ಬೆರ್ಗ್ ನಗರದ ಸೆಬೊಕ್ ಏಲಂ ಕೇಂದ್ರದಲ್ಲಿ ಹರಾಜು ನಡೆಸಲು ನಿರ್ಧರಿಸಲಾಗಿದೆ ಎಂದು ಗಲ್ಫ್ ಸುದ್ದಿವಾಹಿನಿಯೊಂದು ತಿಳಿಸಿದೆ. ಈ ಕುರ್‌ಆನ್‌ನ ಕೈ ಬರಹ ಪ್ರತಿಯ ಪ್ರಸ್ತುತ ಮಾಲಕರು, ಅದನ್ನು ತನ್ನ ಮುತ್ತಾತನಿಂದ ಸಂಗ್ರಹಿಸಿದ್ದರು ಎನ್ನಲಾಗಿದೆ.
ಆ ಕುರ್‌ಆನ್‌ನ ಪ್ರಸ್ತುತ ಮಾಲಕನ ಮುತ್ತಾತ ಉತ್ತರ ಭಾರತದ ಔಧ್‌ನಲ್ಲಿ ಗವರ್ನರ್ ಆಗಿದ್ದರು ಮತ್ತು ಮೊಗಲ್ ಆಡಳಿತದಲ್ಲಿ ಸೇವೆ ಸಲ್ಲಿಸಿದ್ದರು ಎಂದು ವರದಿಯಾಗಿದೆ. ಭಾರತದಲ್ಲಿ ಮೊಗಲ್ ಸಂಸ್ಥಾನ ವನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುವ ಮೊದಲು ಬ್ರಿಟಿಷರು, ಆ ಸಂಸ್ಥಾನದ ಸೇವಕರು ತಮಗೆ ಇಷ್ಟವಾದ ವಸ್ತುಗಳನ್ನು ಪಡೆದುಕೊಳ್ಳುವ ಅವಕಾಶವನ್ನು ನೀಡಿದ್ದರೆನ್ನಲಾಗಿದೆ. ಆ ಸಂದರ್ಭ ಅವರು ಔರಂಗಜೇಬನ ಕಾಲದ ಕೈ ಬರಹದ ಕುರ್‌ಆನ್‌ನ ಪ್ರತಿಯನ್ನು ಪಡೆದಿದ್ದರು ಎಂದು ವರದಿಯಾಗಿದೆ.
ವರದಿಯ ವಿವರಗಳು |
 |
ಕೃಪೆ : ವಾಭಾ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-09-05 00:00:00
|
|
|