ಸಚಿನ್‌ಗೆ ವಾಯುಸೇನೆಯ ಗ್ರೂಪ್ ಕ್ಯಾಪ್ಟನ್ ಗೌರವ ಪ್ರಧಾನ |
ಪ್ರಕಟಿಸಿದ ದಿನಾಂಕ : 2010-09-03
ನವದೆಹಲಿ, ಶುಕ್ರವಾರ, 3 ಸೆಪ್ಟೆಂಬರ್ 2010
ಭಾರತ ವಾಯುಸೇನೆಯು ಶುಕ್ರವಾರ ನಡೆದ ಭವ್ಯ ಸಮಾರಂಭದಲ್ಲಿ ಭಾರತದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರಿಗೆ ಗೌರವ ಗ್ರೂಪ್ ಕ್ಯಾಪ್ಟನ್ ಹುದ್ದೆಯನ್ನು ಪ್ರಧಾನ ಮಾಡಿತು. ಆ ಮೂಲಕ ಸಚಿನ್ ಐಎಎಫ್‌ನಿಂದ ಈ ರ‌್ಯಾಂಕ್ ಪಡೆದುಕೊಂಡ ಮೊದಲ ಕ್ರೀಡಾಪಟು ಎನಿಸಿಕೊಂಡಿದ್ದಾರೆ.
ಕ್ರಿಕೆಟ್‌ನಲ್ಲಿ ದೇಶಕ್ಕೆ ನೀಡಿರುವ ಸಾಧನೆಗಳನ್ನು ಪರಿಗಣಿಸಿ ಈ ಗೌರವ ನೀಡಲಾಗಿದೆ. ನವದೆಹಲಿಯ ವಾಯುಸೇನಾ ಸಂಭಾಗಣ ದಲ್ಲಿ ನಡೆದ ಸಮಾರಂಭದಲ್ಲಿ ಲಿಟ್ಲ್ ಮಾಸ್ಟರ್‌ರನ್ನು ಗೌರವಿಸಲಾಯಿತು.
ಈ ಹಿಂದೆ 2008ರಲ್ಲಿ ವಿಶ್ವಕಪ್ ವಿಜೇತ ಭಾರತ ತಂಡದ ನಾಯಕ ಕಪಿಲ್ ದೇವ್ ಭಾರತದ ಭೂಸೇನೆಯಿಂದ ಲೆಪ್ಟಿನಂಟ್ ಕರ್ನಲ್ ಗೌರವ ಪಡೆದಿದ್ದರು. ಮಲಯಾಳ ನಟ ಮೋಹನ್ ಲಾಲ್‌ರನ್ನು ಕೂಡಾ ‘ಕರ್ನಲ್’ ಪದವಿ ನೀಡಿ ಗೌರವಿಸಲಾಗಿತ್ತು. ಸಚಿನ್ ಅವರ ‘ಗ್ರೂಪ್ ಕ್ಯಾಪ್ಟನ್’ ಪದವಿಯು ಭೂ ಸೇನೆಯ ‘ಕರ್ನಲ್’ ರ‌್ಯಾಂಕ್‌ಗೆ ಸಮಾನವಾಗಿರಲಿದೆ.
ಐಎಎಫ್‌ನಿಂದ ಗೌರವ ಗ್ರೂಪ್ ಕ್ಯಾಪ್ಟನ್ ಪಡೆದಿರುವ ಕ್ಷಣವನ್ನು ಮರೆಯಲು ಸಾಧ್ಯವಿಲ್ಲ. ಎಲ್ಲರಿಗೂ ನಾನು ಧ್ಯನವಾದ ಅರ್ಪಿಸುತ್ತೇನೆ. ಈ ಗೌರವ ಸಂಪಾಸಿಸಿದ್ದು ನನ್ನ ಕನಸು ನನಸಾಗಿದಂತಾಗಿದೆ ಎಂದು ಲಿಟ್ಲ್ ಮಾಸ್ಟರ್ ನುಡಿದರು.
ನಾನೀನ ಭಾರತ ವಾಯುಸೇನೆಯ ಭಾಗವಾಗಿರುವುದರಲ್ಲಿ ಹೆಮ್ಮೆಯಿದೆ. ಹೆಚ್ಚಿನ ಸಂಖ್ಯೆಯ ಯುವ ಜನಾಂಗ ವಾಯುಸೇನೆ ಯತ್ತ ಆಸಕ್ತಿ ವಹಿಸಬೇಕೆಂಬುದು ನನ್ನ ಬಯಕೆ. ವಾಯುಸೇನೆಗೆ ಸೇರುವ ಮೂಲಕ ದೇಶಕ್ಕೆ ಸೇವೆ ಸಲ್ಲಿಸಬೇಕು. ಇದನ್ನು ಸಾಧಿಸಲು ಕನಸು ಕಾಣಬೇಕು. ಯಾಕೆಂದರೆ ಕನಸುಗಳು ಮಾತ್ರ ನನಸಾಗುತ್ತದೆ ಎಂದವರು ಸೇರಿಸಿದರು
ವರದಿಯ ವಿವರಗಳು |
 |
ಕೃಪೆ : ವೆಬ್ ದುನಿಯ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-09-03 00:00:00
|
|
|