ಹಲ್ಲೆ ಆರೋಪಿಗಳಿಗೆ ನಿರೀಕ್ಷಣಾ ಜಾಮಿನು |
ಪ್ರಕಟಿಸಿದ ದಿನಾಂಕ : 2010-09-03
ಪುತ್ತೂರು: ಬೀಡಿ ಗುತ್ತಿಗೆ ಪಡೆದುಕೊಳ್ಳುವ ವಿಚಾರಕ್ಕೆ ಸಂಬಂಧಪಟ್ಟಂತೆ ಕೌಡಿಚ್ಚಾರ್ ನಿವಾಸಿ ರವಿರಾಜ್ ಮೇಲೆ ಕಾವಿನಲ್ಲಿ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದ ಮೂವರು ಆರೋಪಿಗಳಿಗೆ ದ.ಕ. ಜಿಲ್ಲಾ ತ್ವರಿತ ಸೆಶನ್ಸ್ ನ್ಯಾಯಾಲಯ ನಿರೀಕ್ಷಣಾ ಜಾಮೀನು ನೀಡಿದೆ.
ರವಿರಾಜ್ ಮೇಲೆ ಆರೋಪಿಗಳಾದ ಪುಷ್ಪಕ್ ಇಬ್ರಾಹಿಂ, ಶಾಫಿ ಮತ್ತು ಮಹಮ್ಮದ್ ಮಾರುತಿ ಕಾರಿನಲ್ಲಿ ಬಂದು ಆ. 15 ರಂದು ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ್ದರು ಎಂದು ಆರೋಪಿಗಳ ವಿರುದ್ಧ ಪುತ್ತೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿದ್ದರು. ಆರೋಪಿಗಳ ಪರವಾಗಿ ನ್ಯಾಯವಾದಿಗಳಾದ ಮಹೇಶ್ ಕಜೆ, ಕಿಶೋರ್ ಕೊಳತ್ತಾಯ, ಪ್ರಸಾದ್ ಕುಮಾರ್ ರೈ ವಾದಿಸಿದ್ದರು.
ಮಾನವೀಯ ನೆರವು: ಕೆಲ ದಿನಗಳ ಹಿಂದೆ ಪುತ್ತೂರಿನ ಕೆಮ್ಮಾಯಿಯಲ್ಲಿ ವಿದ್ಯುತ್ ಕಂಬದಲ್ಲಿ ದುರಸ್ಥಿ ಕಾರ್ಯ ನಡೆಸುತ್ತಿದ್ದ ವೇಳೆ ಶಾಕ್ ತಗಲಿ ಕೆಳಗೆ ಬಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮೆಸ್ಕಾಂ ಲೈನ್ ಮ್ಯಾನ್ ಜಗದೀಶ್ ಅವರಿಗೆ ಕೋಡಿಂಬಾಡಿಯ ಸಾರ್ವಜನಿಕರು 5055 ರೂಪಾಯಿ ತುರ್ತು ಆರ್ಥಿಕ ನೆರವು ನೀಡಿ ಮಾನವೀಯತೆ ತೋರಿದ್ದಾರೆ.
ವರದಿಯ ವಿವರಗಳು |
 |
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-09-03 00:00:00
|
|
|