ಅಮೆರಿಕದಲ್ಲಿ ಮತ್ತೆ ಆರ್ಥಿಕ ಹಿಂಜರಿತ? |
ಪ್ರಕಟಿಸಿದ ದಿನಾಂಕ : 2010-09-03
ಇದಕ್ಕೆ ಪುಷ್ಟಿ ನೀಡುವಂತೆ ಅವೆುರಿಕದ ಆರ್ಥಿಕ ತಜ್ಞ ಹಾಗೂ ಫೆಡರಲ್ ಬ್ಯಾಂಕಿನ ಮಾಜಿ ಅಧ್ಯಕ್ಷ ಆಲನ್ ಗ್ರೀನ್‌ಸ್ಪಾನ್ 100ಕ್ಕೆ 30ರಷ್ಟು ಚಾನ್ಸ್ ಇದೆ ಎಂದು ಹೇಳುವ ಮೂಲಕ ಮತ್ತೊಂದು ಹಿಂಜರಿತ (ಡಬಲ್ ಡಿಪ್)ದ ಸುಳಿವನ್ನು ನೀಡಿದ್ದಾರೆ.
ಮುಂಬೈ (ಪಿಟಿಐ): ವಿಶ್ವದ ಶ್ರೀಮಂತ ರಾಷ್ಟ್ರವಾಗಿರುವ ಅಮೆರಿಕದಲ್ಲಿ ಮತ್ತೊಮ್ಮೆ ಆರ್ಥಿಕ ಹಿಂಜರಿತ ಕಂಡುಬರಲಿದೆಯೇ?
ಹೀಗೊಂದು ಚರ್ಚೆ ಆರ್ಥಿಕ ವಲಯದಲ್ಲಿ ಕೇಳಿಬರುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಅವೆುರಿಕದ ಆರ್ಥಿಕ ತಜ್ಞ ಹಾಗೂ ಫೆಡರಲ್ ಬ್ಯಾಂಕಿನ ಮಾಜಿ ಅಧ್ಯಕ್ಷ ಆಲನ್ ಗ್ರೀನ್‌ಸ್ಪಾನ್ ‘100ಕ್ಕೆ 30ರಷ್ಟು ಚಾನ್ಸ್ ಇದೆ’ ಎಂದು ಹೇಳುವ ಮೂಲಕ ಮತ್ತೊಂದು ಹಿಂಜರಿತ (ಡಬಲ್ ಡಿಪ್)ದ ಸುಳಿವನ್ನು ನೀಡಿದ್ದಾರೆ.
ಖಾಸಗಿ ಟಿ.ವಿ ಚಾನೆಲ್‌ವೊಂದು ಆಯೋಜಿಸಿದ ಕಾರ್ಯಕ್ರಮದಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ಅವರು ವೀಕ್ಷಕರ ಪ್ರಶ್ನೆಗಳಿಗೆ ಮೇಲಿನಂತೆ ಉತ್ತರಿಸಿದರು.
ಅಮೆರಿಕದ ಆರ್ಥಿಕ ಸ್ಥಿತಿ ಕುಸಿಯುವ ಸಂಭವವನ್ನು ಸಂಪೂರ್ಣವಾಗಿ ತಳ್ಳಿಹಾಕದ ಅವರು, ‘ನೂರಕ್ಕೆ 30ರಷ್ಟು ಸಂಭವ ಇದೆ’ ಎಂದು ಹೇಳಿದ್ದಾರೆ.
2008ರಲ್ಲಿ ಸಂಭವಿಸಿದ ವಿಶ್ವ ಆರ್ಥಿಕ ಹಿಂಜರಿತದ ಕರಾಳ ನೆನಪು ಮತ್ತೆ ಮರುಕಳಿಸಿದಂತಾಗಿದೆ. ಈ ಸ್ಥಿತಿಯಲ್ಲಿ ಆರ್ಥಿಕ ಸ್ಥಿತಿಯನ್ನು ಸದೃಢಗೊಳಿಸಲು ಕೇಂದ್ರೀಯ ಬ್ಯಾಂಕ್ ಕೈಗೊಳ್ಳುತ್ತಿರುವ ಕ್ರಮಗಳನ್ನು ಅವರು ಮುಕ್ತವಾಗಿ ಹೊಗಳಿದ್ದಾರೆ.
ವಿತ್ತೀಯ ಕೊರತೆಯು ದೀರ್ಘಾವಧಿಯಲ್ಲಿ ದೇಶದ ಬೆಳವಣಿಗೆ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ‘ಇದನ್ನು ತಡೆಯವುದು ಅಸಾಧ್ಯ’ ಎಂದರು.
ಹಾಗೊಂದು ವೇಳೆ ಇಂತಹ ಸ್ಥಿತಿ ಉದ್ಭವಿಸಿದರೆ ಮತ್ತೆ ಆರ್ಥಿಕ ಉತ್ತೇಜನಾ ಕ್ರಮಗಳನ್ನು ಸರ್ಕಾರಕೈಗೊಳ್ಳುತ್ತದೆಯೇ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ‘ಈ ಬಾರಿ ಅಂತಹ ಪ್ಯಾಕೇಜ್‌ಗಳನ್ನು ನೀಡಲಾಗುತ್ತದೆ ಎಂದು ನನಗನ್ನಿಸುವುದಿಲ್ಲ’ ಎಂದರು.
ಮೊನ್ನೆಯಷ್ಟೇ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು, ‘ದೇಶದ ಆರ್ಥಿಕ ಸ್ಥಿತಿ ನಿಧಾನವಾಗಿ ಸುಧಾರಿಸುತ್ತಿದೆ, ಆದರೆ ಅದು ಇನ್ನು ತೀವ್ರ ಗತಿಯಲ್ಲಿ ಇಲ್ಲ’ ಎಂದು ಹೇಳಿದ್ದನ್ನು ಸ್ಮರಿಸಬಹುದು.
ಜೂನ್‌ಗೆ ಅಂತ್ಯಗೊಂಡ ತ್ರೈಮಾಸಿಕ ಅವಧಿಯಲ್ಲಿ ಅಮೆರಿಕದ ಜಿಡಿಪಿ (ಒಟ್ಟು ರಾಷ್ಟ್ರೀಯ ಉತ್ಪನ್ನ) ದರವು ಶೇ 1.6ಕ್ಕೆ ತಲುಪಿತ್ತು. ಇದು ನಿರೀಕ್ಷಿತ ಮಟ್ಟವಾದ ಶೇ 2.4ಕ್ಕಿಂತ ಕಡಿಮೆಯಾಗಿದೆ.
ವರದಿಯ ವಿವರಗಳು |
 |
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-09-03 00:00:00
|
|
|