ಸಾಕ್ಷಾತ್ ಶ್ರೀ ಕೃಷ್ಣನೇ ಒಡೆಯುವ ಮೂಡುಬಿದಿರೆ ಮೊಸರು ಕುಡಿಕೆ |
ಪ್ರಕಟಿಸಿದ ದಿನಾಂಕ : 2010-09-03
ಆ ದಿನ ಸರಿಸುಮಾರು 1.30 ಗಂಟೆ ಹೊತ್ತಿಗೆ ಮೂಡುಬಿದಿರೆಯ ಶ್ರೀ ಗೋಪಾಲಕೃಷ್ಣ ದೇವಾಲಯದಿಂದ ಸಾಕ್ಷಾತ್ ಶ್ರೀಕೃಷ್ಣ ಹೊರಡುತ್ತಾನೆ. ನರರೂಪಿಯಾಗಿ, ಯಕ್ಷಗಾನ ವೇಷ ಧಾರಿಯಾಗಿ, ಚಕ್ರ ಧಾರಿಯಾಗಿ ಮುಖ್ಯ ರಸ್ತೆಯಲ್ಲಿ ಯಕ್ಷಗಾನದ ಚೆಂಡೆ-ಮದ್ದಳೆ ದನಿಗೆ ಹೆಜ್ಜೆ ಹಾಕುತ್ತಾ ತೆಂಕು ತಿಟ್ಟು ಶೈಲಿಯಲ್ಲಿ ಕುಣಿಯುತ್ತಾ ಮುಂದೆ ಸಾಗುತ್ತಾನೆ.
ಶ್ರೀ ಕೃಷ್ಣನಿಗೆ ಎಟಕುವಂತೆ ಕೆಲವೆಡೆ ಎಟುಕದಂತೆ ಕಟ್ಟಲಾದ ಮಡಕೆಗಳನ್ನು ತನ್ನ ಚಕ್ರದಿಂದ ರಕ್ಕ ಸರ ಶಿರ ಮರ್ಧಿಸಿದಂತೆ ಕುಟ್ಟಿಪುಡಿ ಮಾಡುತ್ತಾನೆ. ಅದರೊಳಗೆ ತುಂಬಲಾಗಿರುವ ಬಣ್ಣ ಬಣ್ಣದ ನೀರು, ಹಣ್ಣು, ವಸ್ತುಗಳು ತನ್ನ ತಲೆ ಮೇಲೆ ಬೀಳದಂತೆ ತಪ್ಪಿಸಿಕೊಂಡು ಮಡಕೆಗಳನ್ನು ಒಡೆಯು ತ್ತಾನೆ. ಕೆಲವು ಕಡೆಗಳಲ್ಲಿ ಯುವಕರು ಮಡಕೆ ಕಟ್ಟಿದ ಹಗ್ಗಗಳನ್ನು ಮೇಲೆ ಕೆಳಗೆ ಅಲ್ಲಾಡಿಸಿ ಕುಣಿಸಿ ಮಜಾ ತೆಗೆದುಕೊಳ್ಳುವುದಿದೆ.

ಬೇರೆ ಊರುಗಳಂತೆ ಎಣ್ಣೆ ಹಚ್ಚಿ ತಿಕ್ಕಿ ತೀಡಿದ ತೆ೦ಗಿನ ಮರವೇರಿಯೋ ಅಥವಾ ಆಗಸದೆತ್ತರ ಕಟ್ಟಿ ದ ಮಡಕೆಗಳನ್ನು ಮಾನವ ಸರಪಣಿ ಮಾಡಿ ಮಡಕೆ ಒಡೆಯಲು ಇಡೀ ಊರಿನಲ್ಲಿ ಎಲ್ಲೆಲ್ಲೂ ಅವಕಾಶ ವೇ ಇಲ್ಲ. ಇಲ್ಲಿ ಎಲ್ಲವೂ ಕೃಷ್ಣಮಯ ........................... ಶ್ರೀ ಕೃಷ್ಣಮಯ
ಪುರದ ಬೀದಿಯಲ್ಲಿಯ ಸುಮಾರು 200 ರಷ್ಟು ಮಡಕೆಗಳನ್ನು ಅಥವಾ ಮೊಸರು ಕುಡಿಕೆಗಳನ್ನು ಒಡೆದು ಇಕ್ಕೆಲದಲ್ಲಿ ಸೇರಿರುವ ಸಹಸ್ರ ಪುರಜನರ ಸಂಭ್ರಮ, ಪ್ರೀತಿ ಪಡೆದು ಬರುವ ಕೃಷ್ಣ ಗುಡಿಗೆ ಹಿಂತಿರುಗುವಾಗ ರಾತ್ರಿ 8 ಕಳೆಯುತ್ತದೆ.

ಈ ಸಂಪ್ರದಾಯ ಹೇಗೆ ಆರಂಭವಾಯಿತು ಎಂಬ ಮಾತಿಗೆ ಖಚಿತ ಮಾಹಿತಿ ಸಿಗಲೊಲ್ಲದು. ಒಮ್ಮೆ ನಿಂತಿದ್ದ ಈ ಪದ್ದತಿಗೆ ದೇವಳ ಧಾರ್ಮಿಕ ಪ್ರಶ್ನೆ ಕಾರ್ಯಕ್ರಮದ ಮೂಲಕ ಉತ್ತರ ಕಂಡುಕೊಂಡು ಪುನರಾರಂಭಿಸಲಾಗಿದೆ. ಪದ್ದತಿ ಪುನಃ ಜೀವಿತಕ್ಕೆ ಬಂದು ಹತ್ತಿರ ಹತ್ತಿರ 85 ವರ್ಷಗಳಾಯಿತೆಂಬ ಅಭಿಪ್ರಾಯವಿದೆ. ಇದು ಕುಟುಂಬದ ದೇವಾಲಯ ಮೊಕ್ತೇಸರರಾಗಿ ಗುರುಪ್ರಸಾದ್ ಇದ್ದಾರೆ. ಮೋನಪ್ಪ ಕುಲಾಲ್ ಶ್ರೀ ಕೃಷ್ಣ ವೇಷಧಾರಿಯಾಗಿದ್ದವರು ಈಗ ಅವರ ಮಗ ಸುಧಾಕರ ಕುಲಾಲ್ ಶ್ರೀ ಕೃಷ್ಣ ವೇಷ ಸೇವೆ ಮಾಡುತ್ತಿದ್ದಾರೆ.
ಕಳೆದ ಎರಡೂವರೆ ದಶಕಗಳಿಂದ ಶ್ರೀ ಕೃಷ್ಣ ಫ್ರೆಂಡ್ಸ್ ಕ್ಲಬ್ ಮುಖ್ಯ ರಸ್ತೆಯಲ್ಲಿ ಹಿರಿಯರಿಗೆ ಸನ್ಮಾನ ಸಭೆ ಮತ್ತು ನಾಟ್ಯರಂಜನೆಯ ಕಾರ್ಯಕ್ರಮ ಮಾಡುತ್ತಿದೆ. ಇತ್ತೀಚೆಗೆ ನ್ಯೂ ಕೃಷ್ಣ ಫ್ರೆಂಡ್ಸ್ ಕ್ಲಬ್ ಕೂಡ ಮನರಂಜನೆ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.
ಅಧ್ಯಯನ ಯೋಗ್ಯ, ಸಾಂಸ್ಕೃತಿಕ ವಿಶೇಷ ಇದಾಗಿದ್ದು ಈ ಸಾರಿಯ ಸವಿ ಸವಿಯಲು, ವಿಶೇಷ ತಿಳಿ ಯಲು ಮುಂದಿನ ವರ್ಷ ಖಂಡಿತಾ ಬನ್ನಿ ಮೂಡುಬಿದಿರೆಗೆ .ಮತ್ತೆ ಚಿತ್ರ ನೋಡಿ ಸಮಾಧಾನ ಪಟ್ಟುಕೊಂಡು - ನೈಜ ಸೊಬಗಿನ ಭಾಗ್ಯದಿಂದ ವಂಚಿತರಾವುದು ಖಂಡಿತಾ ಬೇಡ !


ವರ್ಷದ ಬಳಿಕ ನಮ್ಮ ನಿಮ್ಮ ಭೇಟಿ ಧರೆಯ ರಸ್ತೆಯೊಳ್ ನಡೆದು ಸಾಗುವ ಶ್ರೀ ಕೃಷ್ಣನ ಜೊತೆಗೆ . . .
ರಸ್ತೆಯಲ್ಲೇ ಅಷ್ಟಮಿ ವಾಹನ ಸಂಚಾರ ಅಸ್ತವ್ಯಸ್ತ:
ಮೂಡುಬಿದಿರೆಯ ಕೆಲ ಯುವಕರ ತಂಡ ಹನುಮಂತ ದೇವಾಲಯಕ್ಕೆ ಸನಿಹದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿ ಕೊಂಡಿದೆ.ಆದರೆ ಅದಕ್ಕಾಗಿ ಮುಖ್ಯ ರಸ್ತೆಯನ್ನು ಮಧ್ಯಾಹ್ನ ಎರಡರಿಂದ ಸಂಜೆ ಏಳೂವರೆವರೆಗೆ ಬಂದ್ ಮಾಡಲಾಗುತ್ತದೆ.

ಒಳರಸ್ತೆಯಿಂದ ಮಖ್ಯರಸ್ತೆಗೆ ತಾಗುವಂತೆ ವೇದಿಕೆಯನ್ನು ಹೂವಿನ ಅಲಂಕಾರದೊಂದಿಗೆ ಮಾಡ ಲಾಗುತ್ತದೆ. ಆದರೆ ಅದರೆದುರು ನೇರವಾಗಿ ೩೦-೪೦ ಜನ ಕುಳಿತು ಕೊಳ್ಳ ಬಹುದು. ಉಳಿದಂತೆ ಭಾರಿ ಸಂಖ್ಯೆಯ ಜನ ಎಡ ಅಥವಾ ಬಲ ಪಾಶ್ರ್ವದಿಂದ ಅರೆಬರೆ ಕಾರ್ಯಕ್ರಮ ಸವಿಯುವ ಅವಕಾಶ.
ಕಳೆದ ಬಾರಿ ಒಮ್ಮೆ ಅದನ್ನು ಬೇರೆ ಕಡೆ ವರ್ಗಾಯಿಸುವಂತೆ ಇಲಾಖೆಯು ಸೂಚಿಸಿತ್ತು.ಆದರೆ ರಾಜಕೀಯ ಪ್ರಭಾವದಿಂದ ಅದು ಸಾಧ್ಯವಾಗಿರಲಿಲ್ಲ.


ನಡೆದು ಹೋಗುವವರಿಗೆ ಅವಕಾಶ ಮಾಡಿಕೊಡಲಾಗುತ್ತಿದೆ.ಆದರೂ ಇಷ್ಟು ಒಳ್ಳೆಯ ಕಾರ್ಯ ಕ್ರಮ ವಿಶಾಲ ಜಾಗದಲ್ಲಿ ಆದರೆ ಒಳ್ಳೆಯದು ಎಂಬ ಮಾತು ಮುಂದಿನ ವರ್ಷ 25 ಆಚರಿಸುತ್ತಿ ರುವ ಸಮಿತಿಗೆ ಕೇಳುತ್ತದೆಯೇ? ಎಂಬುದು ಈಗ ಪ್ರಶ್ನೆ.
ನ್ಯೂ ಕೃಷ್ಣ ಫ್ರೆಂಡ್ಸ್
ಕಳೆದ ದಶಕಗಳಿಂದ ಮತ್ತೊಂದು ಯುವಕರ ಗುಂಪು ರಸಮಂಜರಿ ಮತ್ತು ಆಧುನಿಕ ನೃತ್ಯ ಗಳನ್ನು ಆಯೋಜಿಸುತ್ತಾ ಬಂದಿದೆ.
ಆ ತಂಡ ವೆಂಕಟ್ರಮಣ ದೇವಾಲಯದ ಒಳರಸ್ತೆಯಲ್ಲಿ ಮುಖ್ಯರಸ್ತೆಯ ಸಂಚಾರಕ್ಕೆ ತೊಂದರೆ ಯಾಗದಂತೆ ಕಾರ್ಯಕ್ರಮ ಆಯೋಜಿಸುತ್ತಾ ಬಂದಿದೆ.
ಟ್ಯಾಲೆಂಟ್ಸ್ ರಾಜೇಶ್ ಭಟ್ ಬಳಗದ ಸಂಗೀತಾ ಮತ್ತು ನೃತ್ಯ ಕಾರ್ಯಕ್ರಮಗಳು ನಡೆದವು.


ನಿಧಿಗಾಗಿ ಮಾನವ ಸರಪಳಿ
ಎತ್ತರದಲ್ಲಿ ಕಟ್ಟಲಾಗಿರುವ ಸೇಬು ಸಹಿತ ನಿಧಿಯನ್ನು ಪಡೆಯಲು ಯುವಕರು ಮನವ ಸರಪಳಿ ಮಾಡಿ ಏಳುವುದು ಬೀಳುವುದು ಇಲ್ಲಿಯೂ ಇದೆ.ಆದರೆ ಅವರು ಮೊಸರು ಕುಡಿಕೆ ಓಡೆಯುವಂತಿಲ್ಲ. ಆದಕ್ಕೆಲ್ಲಾ ಕೃಷ್ಣನೇ ಜವಾಬ್ರಾರಿ.
ಪ್ರಪಂಚದಲ್ಲೇ ವಿಚಿತ್ರ ಆಚರಣೆ:
ಇಡೀ ಪ್ರಪಂಚದಲ್ಲಿ ಎಲ್ಲೂ ಈ ರೀತಿಯಾಗಿ ಕೃಷ್ಣ ರಾಧೆಯನ್ನು ಪಲ್ಲಕ್ಕಿಯಲ್ಲಿ ಇರಿಸಿಕೊಂಡು ಅರ್ಚಕ ರ ತಂಡದೊಂದಿಗೆ ಪುರ ಪ್ರದಕ್ಷಿಣೆ ಮಾಡಿ ತಾನೇ ಚಕ್ರದಿಂದ ಎಲ್ಲಾ ಮಡಕೆಗಳನ್ನು ಓಡೆಯುವ ವಿಶಿ ಷ್ಠ ಆಚರಣೆ ಬೇರೆಲ್ಲೂ ಕಾಣಸಿಗುವುದಿಲ್ಲ.
ಆದರೆ ದೇವಾಲಯದ ಮತ್ತು ಸಮಿತಿಗಳ ನಿರಾಸಕ್ತಿಯಿಂದ ವಿಶ್ವದ ಗಮನಸೆಳೆಯ ಬೇಕಾಗಿರುವ ಮೂಡುಬಿದಿರೆಯ ಅಷ್ಟಮಿ ಪತ್ರಿಕೆಗಳ ಲೊಕಲ್ ಪೇಜ್ ಗಳಿಗೇ ಸೀಮಿತವಾಗಿರುವದು ದುರಂತವೇ ಸರಿ. ಇನ್ನಾದರು ವಿವಿಧ ಕಾರಣಗಳಿಂದ ಗಮನಸೆಳೆಯುವ ಮೂಡುಬಿದಿರೆಯ ಧವಳ ಕೀರ್ತಿಗೆ ಇದೂ ಒಂದು ಕಿರೀಟವಾಗಿದೆ ಎಂಬ ಸತ್ಯ ತಿಳಿಯಲಿ.

ಈ ವರ್ಷ ದೇವಾಲಯದ ಜೀರ್ಣೊದ್ದಾರ, ಕೃಷ್ಣ ಸಮಿತಿಯ ೨೫ ವರ್ಷದ ಸಡಗರ. ಈ ಸಂದರ್ಭ ದಲ್ಲಿಯಾದರೂ ಮೂಡುಬಿದಿರೆ ಅಷ್ಟಮಿಗೆ ವಿಶ್ವವ್ಯಾಪಿ ಪ್ರಚಾರ ಸಿಗಲಿ.ಸಾಂಸ್ಕೃತಿಕ ಮಹತ್ವದ ಈ ಆಚರಣೆ ಕೇವಲ ಕಾಟಾಚಾರದ ವ್ಯವಸ್ಥೆ ಆಗಬಾರದು ಎಂಬುದು ಆಶಯವಾಗಿದೆ.
ಸನ್ಮಾನ:
ಮೂಡುಬಿದಿರೆಯ ನೂತನ ಪುರಸಭಾ ಅಧ್ಯಕ್ಷ ಸಹಿತ ಅನೇಕ ಸಾಧಕರನ್ನು ಮತ್ತು ಕೃಷ್ಣ ವೇಶದಾರಿ ಯನ್ನು ಸನ್ಮಾನಿಸಲಾಯಿತು.
ಅಭಯಚಂದ್ರ ಕೆ ಅವರು ಕೃಷ್ಣ ದೇವಾಲಯದ ಜೀರ್ಣೊದ್ದಾರಕ್ಕೆ ವೈಯುಕ್ತಿಕ ೫೦೦೦೦ ರೂಪಾಯಿ ಕೊಡುಗೆ ಘೋಷಿಸಿದ್ದು ಸಮಿತಿ ಮಾಜಿ ಸಚಿವ ಅಮರನಾಥ ಶೆಟ್ಟಿಯವರ ಅಧ್ಯಕ್ಷತೆಯಲ್ಲೇ ಆಗಲಿ ಎಂದಿದ್ದಾರೆ.


ಕೃಷ್ಣ ವೇಷಧಾರಿಗೆ ಹಿಮ್ಮೇಳದಲ್ಲಿ ಸುಧಾಕರ ಮಳಲಿ,ಕರುಣಾಕರ,ಪ್ರವೀಣ್ ಕುಮಾರ್, ವೀರೇಂದ್ರ ಅವರು ಭಾಗವತ,ಮದ್ದಳೆ ಚೆಂಡೆ,ಚಕ್ರತಾಳಗಳಲ್ಲಿ ಸಹಕರಿಸಿದರು.
ದೇವಾಲಯದಲ್ಲಿ ಗಣಹೋಮ,ಪವಮಾನ ಕಳಶಾಭಿಷೇಕ ಮಹಾಪೂಜೆಯು ಅಷ್ಟಮಿ ಪ್ರಯುಕ್ತ ರಾಘವೇಂದ್ರ ಭಟ್ಟರ ಮುಂದಾಳುತ್ವದಲ್ಲಿ ನಡೆಯಿತು.
ವರದಿಯ ವಿವರಗಳು |
 |
ಕೃಪೆ : ರಾಜ್ ಶೇಖರ್, ಅಜೆಕಾರ್ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-09-03 00:00:00
|
|
|