ಮಂಗಳೂರಿನಲ್ಲಿ ಮೈಮನ ಸೆಳೆದ ಮೊಸರು ಕುಡಿಕೆ ಉತ್ಸವ. |
ಪ್ರಕಟಿಸಿದ ದಿನಾಂಕ : 2010-09-03
(ವಿಶೇಷ ಚಿತ್ರ /ವರದಿ : ಸತೀಶ್ ಕಾಪಿಕಾಡ್)
ನೂರಕ್ಕೂ ಹೆಚ್ಚು ವಿಶೇಷ ಚಿತ್ರಗಳ ವೀಕ್ಷಣೆಗೆ - ಫೋಟೋ ಆಲ್ಬಂ ಕ್ಲಿಕ್ ಮಾಡಿ
ಮಂಗಳೂರು,ಸೆ.03: ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಪ್ರತೀ ವರ್ಷ ನಡೆಯುವ ಮೊಸರು ಕುಡಿಕೆ ಮಹೋತ್ಸವವು ಮಂಗಳೂರಿನಲ್ಲಿ ಗುರುವಾರ ಬಹಳ ವಿಜೃಂಭಣೆಯಿಂದ ಜರುಗಿತು.
ಶ್ರೀಕೃಷ್ಣನ ಮೆರವಣಿಗೆಯ ಜೊತೆಗೆ ಮಡಿಕೆ ಹೊಡೆಯುವ ದೃಶ್ಯ, ಹುಲಿವೇಶ ಕುಣಿತ, ತಾಲಿಮು ಪ್ರದರ್ಶನ, ಬಗೆ ಬಗೆ ವೇಷಧಾರಿ ಗೊಂಬೆಗಳ ನೃತ್ಯ, ಹಲವಾರು ವಿಧದ ಟ್ಯಾಬ್ಲೋ ಗಳು ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಸಾರ್ವಜನಿಕರ ಮೈಮನ ಸೆಳೆಯಿತು.
ಮೊಸರು ಕುಡಿಕೆ ಉತ್ಸವ ಅಚರಣೆಗೆ ಯಾವೂದೇ ಅಡ್ಡಿಯಾಗಬಾರದೆಂದು ವರುಣ ದೇವರು ರಜೆ ಸಾರಿದ್ದರಿಂದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಂಭ್ರಮ ಪಟ್ಟರು.
ವರದಿಯ ವಿವರಗಳು |
 |
ವರದಿಗಾರರು : ಸತೀಶ್ ಕಾಪಿಕಾಡ್
ಪ್ರಕಟಿಸಿದ ದಿನಾಂಕ : 2010-09-03 00:00:00
|
|
|