ಚಾಮರಾಜನಗರ : ಗೋಹತ್ಯೆ ನಿಷೇಧ ಕಾಯ್ದೆ ವಿರೋಧಿಸಿ ಪೇಜಾವರ ಶ್ರೀಗಳು ಚಳವಳಿ ನಡೆಸಲಿ: ಬಿಎಸ್‌ಪಿ ಸವಾಲು |
ಪ್ರಕಟಿಸಿದ ದಿನಾಂಕ : 2010-09-03
ಪೇಜಾವರ ಶ್ರೀಗಳಿಗೆ ಬಿಎಸ್‌ಪಿ ಹಾಕಿದ ಸವಾಲುಗಳು
ಶ್ರೀಕೃಷ್ಣ ಮಠದ ಪೇಜಾವರ ಸ್ವಾಮಿಗಳಿಗೆ ದಲಿತರ ಬಗ್ಗೆ ನಿಜವಾದ ಕಾಳಜಿ ಇದ್ದಲ್ಲಿ ತಮ್ಮ ಮೂರು ಪ್ರಶ್ನೆಗಳನ್ನು ಈಡೇರಿಸಲು ಮುಂದಾಗಲಿ ಎಂದು ಬಿಎಸ್‌ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ಮಹೇಶ್ ಸವಾಲು ಹಾಕಿದರು.
ಹಿಂದುಧರ್ಮದ ಆಧಾರ ಮನುಧರ್ಮ ಶಾಸ್ತ್ರ. ಹಾಗಾಗಿ ಜಾತಿಯ ಆಧಾರದ ಮೇಲೆ ನಿಂತಿ ರುವ ಮನುಸ್ಮತಿಯನ್ನು ಬಹಿರಂಗವಾಗಿ ಸುಟ್ಟುಹಾಕಲಿ ಎಂದವರು ಸಲಹೆ ನೀಡಿದರು.
ಜನಿವಾರ ಹಾಕುವುದು ಅಸಮಾನತೆಯ ಸಂಕೇತ. ಉಡುಪಿ ಮಠ, ರಾಘವೇಂದ್ರ ಮಠ ಗಳಲ್ಲಿ ಜನಿವಾರ ಯಾರು ಹಾಕಿದ್ದಾರೆ ಎಂದು ನೋಡಿ ಗರ್ಭಗುಡಿಯೊಳಗೆ ಬಿಡಲಿಕ್ಕಾಗಿ ಮೈಮೇಲಿನ ಬಟ್ಟೆಯನ್ನು ಕಳಚಿಸುತ್ತಾರೆ. ಇದು ಅಸಮಾನತೆಯ ಸಂಕೇತವಲ್ಲವೇ? ಈ ಹಿನ್ನೆಲೆಯಲ್ಲಿ ಬ್ರಾಹ್ಮಣರು ಜನಿವಾರ ಹಾಕೋದನ್ನು ನಿಲ್ಲಿಸಿ ಬಿಡಲಿ ಎಂದು ಸೂಚಿಸಿದರು.
ಅಸ್ಪಶತೆ ಸಂಪೂರ್ಣವಾಗಿ ಹೋಗಬೇಕಾದರೆ ಅಷ್ಟಮಠಗಳಲ್ಲಿ ಒಂದೊಂದು ಮಠಕ್ಕೂ ಒಬ್ಬೊಬ್ಬ ಜಾತಿಯವರನ್ನು ಉತ್ತರಾಧಿಕಾರಿಯಾಗಿ ನೇಮಕಮಾಡಬೇಕು. ಮಾದಿಗ, ಹೊಲೆಯ, ಭಂಗಿ, ಜೋಗಯ್ಯ, ಸೇರಿದಂತೆ ಎಲ್ಲಾ ಅಸ್ಪಶ ಜಾತಿಗಳಿಗೆ ಸೇರಿದವರನ್ನು ಒಂದೊಂದು ಮಠದ ಮಠಾಧಿಪತಿಗಳನ್ನಾಗಿ ನೇಮಕ ಮಾಡುವ ಮೂಲಕ ನೈಜ ಕಾಳಜಿ ತೋರಿಸಲಿ. ಇಲ್ಲವಾದಲ್ಲಿ ಈ ರೀತಿಯ ಬೂಟಾಟಿಕೆಯ ಪಾದಯಾತ್ರೆಯನ್ನು ದಲಿತರು ಧಿಕ್ಕರಿಸಬೇಕು. ಯಾವುದೇ ಕಾರಣಕ್ಕೂ ಮೂರ್ಖರಾಗದಿರುವಂತೆ ಸಲಹೆ ಸಲಹೆ ನೀಡಿದರು
ಚಾಮರಾಜನಗರ, ಸೆ. 2: ದಲಿತರ ಕೇರಿಯಲ್ಲಿ ಪಾದಯಾತ್ರೆ ಮಾಡುತ್ತಿರುವ ಉಡುಪಿ ಶ್ರೀ ಕೃಷ್ಣ ಮಠಾಧಿಪತಿ ಪೇಜಾವರ ಶ್ರೀಗಳು ಗೋಹತ್ಯೆ ನಿಷೇಧ ಕಾಯ್ದೆ ವಿರೋಧಿಸಿ ಚಳವಳಿ ಮಾಡಲಿ ಎಂದು ಬಹುಜನ ಸಮಾಜ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ಮಹೇಶ್ ಹೇಳಿದ್ದಾರೆ.
ಅವರು ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಪೇಜಾವರ ಶ್ರೀಗಳು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿರುವ ದಲಿತರ ಕೇರಿಗೆ ಪಾದಯಾತ್ರೆ ಮೂಲಕ ಬಂದು ಅಲ್ಲಿ ಪೂಜೆ ಮಾಡಿ ಸಮಾನತೆಯ ಬಗ್ಗೆ ಕ್ರಾಂತಿ ಮೂಡಿಸುತ್ತಿರುವುದಾಗಿ ಹೇಳುತ್ತಿರುವುದು ಅವರ ಡೋಂಗಿತನವನ್ನು ಪ್ರದರ್ಶಿಸಿದಂತಾಗಿದೆ ಎಂದು ದೂರಿದರು.
ದಲಿತರು ಮನೆಯಲ್ಲಿ ಮಾಂಸಾಹಾರ ಸ್ವೀಕರಿಸಿದರೆ ತಪ್ಪೇನಿಲ್ಲ ಆದರೆ ಮಧ್ಯಪಾನವನ್ನು ಸಂಪೂರ್ಣ ವಾಗಿ ಬಿಡಬೇಕೆಂದು ಹೇಳಿರುವ ಪೇಜಾವರ ಶ್ರೀಗಳ ಹೇಳಿಕೆಯನ್ನು ಪ್ರಶ್ನೆ ಮಾಡಿದ ಮಹೇಶ್, ರಾಜ್ಯ ಸರಕಾರವು ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತರಲು ಸಾಹಸ ಮಾಡು ತ್ತಿದೆ ಇದರ ವಿರುದ್ಧ ಪೇಜಾವರ ಶ್ರೀಗಳು ಹೋರಾಟ ನಡೆಸಿದರೆ ತಮ್ಮ ಪಕ್ಷದ ಬೆಂಬಲ ನೀಡುವು ದಾಗಿ ಪ್ರಕಟಿಸಿದರು.
ವಯೋವೃದ್ಧರಾದ ಪೇಜಾವರ ಶ್ರೀಗಳು ದಲಿತರಲ್ಲಿ ಧಾರ್ಮಿಕತೆಯ ಮಂಕುಬೂದಿ ಎರಚಲು ಪ್ರಯ ತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ಅವರು, ರಾಜ್ಯದಲ್ಲಿರುವ ಬಹುತೇಕ ಗ್ರಾಮಾಂತರ ಪ್ರದೇಶದಲ್ಲಿ ಇಂದಿಗೂ ಶೇ. 70ರಷ್ಟು ಅಸ್ಪಶತೆ ಕಾಡುತ್ತಿದೆ ಇದು ಶ್ರೀಗಳಿಗೆ ತಿಳಿದಿಲ್ಲವೇ ಎಂದು ಹಲವು ಘಟನೆಯನ್ನು ವಿವರಿಸಿದರು.
ರಾಜ್ಯದಲ್ಲಿ ದಲಿತರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದ್ದರೂ ಸರಕಾರವಾಗಲೀ ಇಂತಹ ಶ್ರೀಗಳಾಗಲೀ ಗಮನಹರಿಸದೆ ಇರುವುದು ಅವರ ಮೌಢ್ಯತನವನ್ನು ತೋರಿಸುತ್ತದೆ ಎಂದು ಗೇಲಿ ಮಾಡಿದರು.
ಇದು ಅಮಾನುಷ ಕೃತ್ಯವಲ್ಲವೇ..?: ಚಿತ್ರದುರ್ಗ ತಾಲೂಕು ಲಕ್ಷೀಪುರ ಗ್ರಾಮದಲ್ಲಿ ಪ್ರೇಮ ಪ್ರಕ ರಣಕ್ಕೆ ಸಂಬಂಧಿಸಿದಂತೆ ಭಾಗ್ಯಮ್ಮ ಎಂಬಾಕೆಯನ್ನು ಊರಿನಲ್ಲಿ ಬೆತ್ತಲೆ ಮೆರವಣಿಗೆ ಮಾಡಿರುವು ದು, ಚೆಳ್ಳಕೆರೆ ತಾಲೂಕು ಬೂದಿಹಳ್ಳ ಗ್ರಾಮದಲ್ಲಿ ದಲಿತರು ಸರಕಾರಿ ಗೋಮಾಳದಲ್ಲಿ ಉಳುಮೆ ಮಾಡಿದರು ಎಂಬ ಕಾರಣಕ್ಕಾಗಿ ಅವರ ಮೇಲೆ ದೌರ್ಜನ್ಯ ನಡೆಸಿ ಊರಿಂದ ಹೊರಹಾಕಿರುವುದು,
ತುಮಕೂರು ತಾಲೂಕು ಗೋಪಾಲಪುರ ಗ್ರಾಮದಲ್ಲಿ ಹೊನ್ನಮ್ಮ ಎಂಬ ಮಹಿಳೆಯನ್ನು ಬರ್ಬರವಾಗಿ ಹತ್ಯೆ ಮಾಡಿರುವುದು, ಮಂಡ್ಯ ಜಿಲ್ಲೆ ಮದ್ದೂರು ತಾಲೂಕು ಎಸ್.ಐ ಹೊನ್ನೆಗೆರೆಯಲ್ಲಿ ದೇವಾಲಯದ ಮೆಟ್ಟಿಲು ಹತ್ತಿದರು ಎಂಬ ಕಾರಣಕ್ಕಾಗಿ ಹಾಗೂ ಎಲ್ಲಹಳ್ಳಿಯಲ್ಲಿ ತಮಟೆ ಹೊಡೆಯಲಿಲ್ಲ ಎಂದು ಆರೋಪಿಸಿ ಇಡೀ ಗ್ರಾಮದ ಜನರಿಗೆ ಬಹಿಷ್ಕಾರ ಹಾಕಿರುವುದು ಈ ಎಲ್ಲ ನೈಜಘಟನೆಗಳು ಪೇಜಾ ವರ ಸ್ವಾಮಿಗಳಿಗೆ ತಿಳಿದಿಲ್ಲವೇ ಎಂದು ಪ್ರಶ್ನಿಸಿದರು.
ಕಣ್ಣೊರೆಸುವ ತಂತ್ರ: ಪೇಜಾವರ ಸ್ವಾಮಿಗಳು ದಲಿತ ಕೇರಿಗಳಲ್ಲಿ ಪಾದಯಾತ್ರೆ ನಡೆಸುವಾಗ ಮೈಲಿಗೆಯಾಗುತ್ತದೆ ಎಂಬ ಕಾರಣಕ್ಕಾಗಿ ಜನಿವಾರವನ್ನು ತೆಗದುಹೋಗಿದ್ದಾರೆ. ಚಾರ್ತುಮಾಸ ಆಚರಣೆಯಾದ್ದರಿಂದ ಉಪವಾಸವಿದ್ದೇನೆ. ಏನು ಕೊಟ್ಟರೂ ತಿನ್ನೋದಿಲ್ಲ ಎಂದು ಹೇಳಿರುವುದು ಆಷಾಢಭೂತತನವಲ್ಲವೇ ಎಂದು ಛೇಡಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿ.ಎಸ್.ಪಿ ಮುಖಂಡರಾದ ಮುಳ್ಳೂರು ಶಿವಮಲ್ಲು, ಅರಕಲವಾಡಿನಾಗೇಂದ್ರ, ನಗರಸಭಾ ಸದಸ್ಯ ನಂಜುಂಡಸ್ವಾಮಿ, ಭಾ.ಮ.ಕೃಷ್ಣಮೂರ್ತಿ, ಬಸವಣ್ಣ, ನಾಗರಾಜ ಉಪ್ಪಾರ್, ಮಲ್ಲಿಕಾರ್ಜುನ್ ಶಾಂತರಾಜು, ಮಹದೇವಪ್ಪ ಹಾಗೂ ಇತರರು ಉಪಸ್ಥಿತರಿದ್ದರು.
ವರದಿಯ ವಿವರಗಳು |
 |
ಕೃಪೆ : ವಾಭಾ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-09-03 00:00:00
|
|
| ಸಂತೋಷ್ , ಮಂಗಳೂರು | 2010-09-04 | | ಬಿ.ಎಸ್.ಪಿ. ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ಮಹೇಶ್ ನಿಮಗೊಂದು ಸವಾಲ್, ಅಸ್ಪೃಶ್ಯ ಜಾತಿಗಳು, ಎನೇಲ್ಲಾ ಎಷ್ಟೆಲ್ಲಾ ಗುಂಪು, ಜಾತಿ, ಪಂಗಡಗಳು ಇದ್ದೀರಿ ನೀವೆಲ್ಲರೂ ಸ್ವಾತಂತ್ರ್ಯ ಸಿಕ್ಕಿ ಅರುವತ್ತು ವರ್ಷಗಳು ಕಳೆದಿದೆ. ಮುಂದುಳಿದ ಜಾತಿಗಳು ಎಂದು ನೀವುಗಳು ತಿಳಿದಿದ್ದೀರಿ ಅವರೆಲ್ಲರೂ ಸರ್ಕಾರದಿಂದ ಯಾವುದೇ ಸವಲತ್ತು ಪಡೆಯದೆ ದುಡಿದು, ವಿದ್ಯಾಭ್ಯಾಸ ಪಡೆದು, ಯಾವುದೇ ರಿಸರ್ವೇಶನ್ ಇಲ್ಲದೆ ಕೆಲಸ ಪಡೆದು ಜೀವನ ನಡೆಸುತ್ತಿದ್ದಾರೆ. ಅದರೆ ನೀವೂ ಯಾವುದೇ ಜಾತಿಗೆ ಬಂದು ಸೇರುವ ಅಗತ್ಯವಿಲ್ಲ. ನಿಮ್ಮ ನಿಮ್ಮ ಜಾತಿಯಲ್ಲೇ ಇರಿ. ಅದರೆ ಸರ್ಕಾರದಿಂದ ನಿಮಗೆ ಸಿಗುತ್ತಿರುವ ಎಲ್ಲಾ ಬಿಟ್ಟಿ ಸೌಲಭ್ಯಗಳನ್ನು ದಿಕ್ಕರಿಸಿ, ಸೌಲಭ್ಯ ಪಡೆಯದೆ ಬದುಕುತ್ತಿರುವ ಇನ್ನಿತರರಂತೆ ಜೀವಿಸಲು ಸಾದ್ಯವೇ? ಏನು ಸೌಲಭ್ಯ ಪಡೆಯದೆ ಉನ್ನತ ಮಟ್ಟದಲ್ಲಿ ತಮ್ಮನ್ನು ತೋರಿಸಿ ಕೊಳ್ಳಲು ಸಾಧ್ಯವೇ? ಎಂದು ಬಹಿರಂಗವಾಗಿ ಉತ್ತರಿಸಲು ಸಾಧ್ಯವೇ? |
| naveen mogera, kundapura | 2010-09-04 | | ಯಾವಾಗ್ಯಾವಾಗ ದಲಿತರು ಮತಾಂತರವಾಗತೊಡಗಿದರೋ ಮತ್ತು ಬ್ರಾಹ್ಮಣ್ಯದ ವಿರುದ್ಧ ಸಂಘಟಿತ ಪ್ರತಿರೋಧ ತೋರುತ್ತಿದ್ದರೋ ಆ ಎಲ್ಲಾ ಸಂದರ್ಭಗಳಲ್ಲೂ ಪೇಜಾವರ ಸ್ವಾಮಿಗಳು ಅಸ್ಪೃಶತೆಯ ವಿರುದ್ಧ ಮತ್ತು ಹಿಂದೂ ಧರ್ಮದೊಳಗಿರುವ ಕೆಲವು ಮೌಢ್ಯಗಳ ವಿರುದ್ಧ ತಮ್ಮ ದನಿಯನ್ನೂ ಸೇರಿಸಿ ಬ್ರಾಹ್ಮಣ್ಯದ ತಾರತಮ್ಯವನ್ನು ದಲಿತರಿಗೆ ಸಹ್ಯವಾಗುವಂತೆ ಮಾಡಲು ಪ್ರಯತ್ನಿಸುತ್ತಲೇ ಬರುತ್ತಿದ್ದಾರೆ. ಅವರ ಈವರೆಗಿನ ಈ ಎಲ್ಲಾ ಪ್ರಯತ್ನಗಳ ಸಾರಾಂಶವೊಂದೇ! ಬದಲಾಗುತ್ತಿರುವ ಸಂದರ್ಭದಲ್ಲಿ ಅದರಲ್ಲೂ ದಲಿತ ಮತ್ತು ಶೂದ್ರಪ್ರಜ್ಞೆ ಜಾಗೃತಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಆ ಶಕ್ತಿಗಳು ಬ್ರಾಹ್ಮಣ್ಯದ ಅಡಿಯಾಳುತನದಿಂದ ಮುಕ್ತಗೊಳ್ಳದಂತೆ ಹಿಡಿದಿಟ್ಟುಕೊಳ್ಳುವುದು. ಆದರೆ ದೈಹಿಕ ಗುಲಾಮಗಿರಿಯ ಕಾಲ ಇದಲ್ಲವಾದ್ದರಿಂದ ಸಾಂಸ್ಕೃತಿಕ ಗುಲಾಮಗಿರಿಯನ್ನು ಪರೋಕ್ಷ ವಿಧಾನದ ಮೂಲಕ ಹೇರಿ ಸ್ವಯಂಪ್ರೇರಿತ ದಾಸ್ಯವನ್ನು ಶಾಶ್ವತಗೊಳಿಸುವುದು ಈ ಎಲ್ಲಾ ತಂತ್ರಗಳ ಹುನ್ನಾರ.
|
| Panchajanya, kuwait | 2010-09-03 | | Mr.Plain life,ದಲಿತರ ಕೇರಿಗಳೇನು ಪಾಕಿಸ್ತಾನದಲ್ಲಿದೆಯೇ? ಅಲ್ಲಿಗೆ ಹೋಗಲು ನಿಮ್ಮ ಅಪ್ಪಣೆ ಪಡೆಯಬೇಕೆನು...?ಸ್ವಾಮೀಜಿಗಳು ಎಲ್ಲಿಗೆ ಬೇಕಾದರೂ ಹೋಗಲಿ,ನಿಮಗೇನು ಕಷ್ಟ...?ಅವರು ಅಲ್ಲಿಗೆ ಹೋದರೆ ನೀವು ಕಳೆದುಕೊಳ್ಳುವುದಾದರೂ ಏನು? ನಿಜವಾಗಿಯೂ ಇದೊಂದು ಸೋಜಿಗ....!ಈ ಜನ ಸ್ವಾಮಿಜಿ ಬಗ್ಗೆ ಏಕೆ ಈ ರೀತಿಯಲ್ಲಿ ಮಾತನಾಡುತ್ತಾರೆ?ಕೋಮುಗಲಭೆ ಸಂಭವಿಸಿದರೆ ಏನು ಮುಲ್ಲಾಗಳು ಫೀಲ್ದಿಗಿಳಿಯುತ್ತಾರೆಯೇ...? .ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ. ಹೋಗಿ ಅದನ್ನು ಮೊದಲು ಸರಿ ಮಾಡಿ.ನಮ್ಮ ತಟ್ಟೆಯಲ್ಲಿ ನೊಣ ಬಿದ್ದಿದೆ ಎಂದು ತೋರಿಸಲು ಬರುತ್ತಿದ್ದಾರೆ....ಭಾಷೆ ಇಲ್ಲದ .......! |
| Plain life, bangalore | 2010-09-03 | | ವೃತ ಆಚರಣೆ ಮಾಡಿ mata ದಲ್ಲಿ ಕೂರುವುದು ಬಿಟ್ಟು ದಲಿತರ ಕೇರಿಗೆ ಏಕೆ ಹೋಗಬೇಕು? ಕೋಮು ಗಲಭೆ ,ಅಥವಾ ದಲಿತರ ಮೇಲೆ daurjanya ನಡೆದಾಗ ಈ ಸ್ವಾಮಿಯನ್ನು ಕಾಣಲಿಕ್ಕೆ ಸಿಗುವುದಿಲ್ಲ.ಆಗ matadalli ಕೂತು ಮವ್ನ ವೃತ ಆಚರಿಸುತ್ತಾರೆ. |
|