ಮ೦ಗಳೂರು : ಕಾಮನ್‌ವೆಲ್ತ್ ಕ್ರೀಡಾಕೂಟದ ಕ್ವೀನ್ಸ್ ಬ್ಯಾಟನ್ ರಿಲೇ ಸೆ.5ರಂದು ದ.ಕ.ಜಿಲ್ಲೆಗೆ |
ಪ್ರಕಟಿಸಿದ ದಿನಾಂಕ : 2010-09-03
ಮಂಗಳೂರು, ಸೆ.2: ನವದೆಹಲಿಯಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಕ್ರೀಡಾಕೂಟ 2010ರ ಪ್ರಚಾರ ಹಾಗೂ ಸಂಘಟನೆಗಾಗಿ ಹಮ್ಮಿಕೊಂಡ ಕ್ವೀನ್ಸ್ ಬ್ಯಾಟನ್ ರಿಲೇ ತಂಡ ಭಾರತದ ಉತ್ತರ ಗಡಿ ವಾಘಾದಿಂದ ಹೊರಟು ದೇಶಾದ್ಯಂತ ಅಭಿಯಾನ ಹಮ್ಮಿಕೊಂಡ ಕಾರ್ಯಕ್ರಮಗಳ ಪ್ರಕಾರ ಸೆ.5ರಂದು ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಲಿದೆ ಎಂದು ಜಿಲ್ಲಾಧಿಕಾರಿ ವಿ.ಪೊನ್ನುರಾಜ್ ಇಂದಿಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ದ.ಕ. ಜಿಲ್ಲೆಯ ಗಡಿಭಾಗದ ಗುಂಡ್ಯ ಪ್ರದೇಶದಲ್ಲಿ ಮಾಜಿ ಅಂತಾರಾಷ್ಟ್ರೀಯ ಕ್ರೀಡಾಪಟುಗಳಾದ ಸಂಜೀವ ಪುತ್ತೂರು, ಪುಷ್ಪರಾಜ ಹೆಗ್ಡೆಯವರೊಂದಿಗೆ ಜಿ.ಪಂ. ಅಧ್ಯಕ್ಷರು ತಂಡವನ್ನು ಪೂರ್ಣಕುಂಭ ದೊಂದಿಗೆ ಸ್ವಾಗತಿಸಲಿದ್ದಾರೆ.
ಸಂಜೆ 5 ಗಂಟೆಗೆ 98 ಮಂದಿಯ ರಿಲೇ ತಂಡ ಕದ್ರಿ ಪಾರ್ಕ್ ತಲುಪಲಿದ್ದು, ಈ ಸಂದರ್ಭ ಖ್ಯಾತ ಕ್ರೀಡಾಪಟುಗಳಾದ ವಂದನಾರಾವ್, ವಂದನಾ ಶ್ಯಾನ್‌ಭಾಗ್, ಶೋಭ ನಾರಾಯಣ ಮತ್ತಿತರರು ಮೇಯರ್ ರಜನಿ ದುಗ್ಗಣ್ಣರಿಂದ ಬ್ಯಾಟನ್ ಸ್ವೀಕರಿಸುತ್ತಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಸಂಜೆ 5:30ಕ್ಕೆ ತಂಡದ ಪುರಸಂಚಲನ ಕದ್ರಿಪಾರ್ಕ್‌ನಿಂದ ಹೊರಟು ಸರ್ಕ್ಯೂಟ್ ಹೌಸ್, ಭಟ್ರಗುಡ್ಡೆ, ಬಿಜೈ ಜಂಕ್ಷನ್, ರಿಲಯನ್ಸ್ ಫೂಟ್‌ವೇರ್, ಬಿಜೈ ಕೆಎರ್ಸ್ಸಾಟಿಸಿ, ಮನಪಾ, ಹೀರೊ ಹೊಂಡಾ ಸರ್ಕ ಲ್, ಬೆಸೆಂಟ್, ಪಿವಿಎಸ್, ಅಲೋಶಿಯಸ್, ಕರಂಗಲ್ಪಾಡಿ, ಬಂಟ್ಸ್ ಹಾಸ್ಟೆಲ್, ವುಡ್‌ಲ್ಯಾಂಡ್ಸ್ ಹೊಟೇ ಲ್, ಜ್ಯೋತಿ ಸರ್ಕಲ್, ಡಾನ್ ಬಾಸ್ಕೊ ಹಾಲ್, ಅರವಿಂದ ಮೋಟರ್ಸ್, ಹಂಪನಕಟ್ಟ ಜಂಕ್ಷನ್, ಯುನಿವರ್ಸಿಟಿ ಕಾಲೇಜು ಮಾರ್ಗವಾಗಿ ಪುರಭವನ ತಲುಪಲಿದೆ.
ಈ ವೇಳೆ ಅರ್ಜುನ ಪ್ರಶಸ್ತಿ ವಿಜೇತರು, ಏಕಲವ್ಯ ಪ್ರಶಸ್ತಿ ವಿಜೇತರು, ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ ವರು, ಕಾಮನ್‌ವೆಲ್ತ್, ಏಶಿಯನ್ ಗೇಮ್ಸ್ ಮತ್ತು ಇತರ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾಗವಹಿ ಸಿದ ಸುಮಾರು 17 ಕ್ರೀಡಾಪಟುಗಳಲ್ಲದೆ, ವಿವಿಧ ಕ್ಷೇತ್ರದ ಸಾಧಕರು, ನಾಗರಿಕ ರಕ್ಷಣಾ ಸೇವೆ, ಹಿರಿಯ ಅಧಿಕಾರಿಗಳು, ಕ್ರೀಡಾ ಆಡಳಿತಗಾರರು, ಕ್ರೀಡಾ ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊ ಳ್ಳಲಿದ್ದಾರೆ.
ಸಂಜೆ 7 ಗಂಟೆಗೆ ಪುರಭವನದಲ್ಲಿ ಪೌರ ಸತ್ಕಾರ, ತಾಲೀಮು, ಹುಲಿವೇಷ ಕುಣಿತ, ಯಕ್ಷಗಾನ, ಜಾನಪದ ನೃತ್ಯ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಸೆ.6ರಂದು ಬೆಳಗ್ಗೆ 9 ಗಂಟೆಗೆ ಈ ತಂಡ ಉಡುಪಿ ಮೂಲಕ ಕಾರವಾರಕ್ಕೆ ತೆರಳಲಿದೆ ಎಂದು ಜಿಲ್ಲಾಧಿಕಾರಿ ವಿ.ಪೊನ್ನು ರಾಜ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಮಿಷನರ್ ಸೀಮಂತ್‌ಕುಮಾರ್ ಸಿಂಗ್, ಮನಪಾ ಆಯುಕ್ತ ಡಾ. ವಿಜಯ ಪ್ರಕಾಶ್, ಮಂಗಳೂರು ಎ.ಸಿ.ಪ್ರಭುಲಿಂಗ ಕಾವಳಕಟ್ಟೆ, ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಭಾಕರ ಶರ್ಮ ಹಾಜರಿದ್ದರು.
ವರದಿಯ ವಿವರಗಳು |
 |
ಕೃಪೆ : ವಾಭಾ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-09-03 00:00:00
|
|
|