ಅಪ್ರಾಪ್ತ ವಯಸ್ಕರ ಸಹಮತದ ಸಂಭೋಗ ಆರೋಪಿಗೆ ದೇಶ ಬಿಡಲು ಸೂಚನೆ |
ಪ್ರಕಟಿಸಿದ ದಿನಾಂಕ : 2010-09-03
ಅಪ್ರಾಪ್ತ ವಯಸ್ಕರ ಸಹಮತದ ಸಂಭೋಗ ಆರೋಪಿಗೆ ದೇಶ ಬಿಡಲು ಸೂಚನೆ ನೀಡಿದ ಘಟನೆಯೊಂದು ನ್ಯಾಯಾಲಯದಿಂದ ವರದಿಯಾಗಿದೆ.
17 ರ ಹರಯದ ಲೆಬಾನಿ ಯುವಕ 15 ರ ಎಮಿರೇಟ್ ಯುವತಿಯೊಂದಿಗೆ ಸಹಮತದ ಲೈಂಗಿಕ ಕರಿಯೆ ನಡೆಸಿರುವ ಪ್ರಕರಣ ದಲ್ಲಿ ಹುಡುಗನಿಗೆ ತನ್ನ ದೇಶಕ್ಕೆ ತೆರಳಲು ಸೂಚನೆ ನೀಡಲಾಗಿದೆ.
ದುಬಾಯಿಯ ಜುವೆನೀಲ್ ನ್ಯಾಯಾಲಯವು ಅವರಿಬ್ಬರು ಕೂಡಿರುವ ಬಗ್ಗೆ ತನಿಖೆಯಿಂದ ಅರಿತು ಅವರಿಬ್ಬರೂ ಅಪ್ರಾಪ್ತರಾಗಿರು ವುದರಿಂದ ಅವರನ್ನು ಬೇರ್ಪಡಿಸಿ ಅವರವರ ಹೆತ್ತವರಿಗೆ ಒಪ್ಪಿಸಲು ನಿರ್ಧರಿಸಿತು ಎನ್ನಲಾಗಿದೆ.
ಹುಡುಗನ ಮೇಲೆ ಸಹಮತದ ಸಂಭೋಗ ಮತ್ತು ಪರವಾನಿಗೆ ರಹಿತ ವಾಹನ ಚಾಲನೆಯ ಆರೋಪವನ್ನು ಮಾಡಲಾಗಿದ್ದು ಆತನನ್ನು ಆತನ ದೇಶಕ್ಕೆ ಕಳುಹಿಸಲಾಗಿದೆ ಎಂದು ಪತರಿಕೆಯೊಂದು ವರದಿ ಮಾಡಿದೆ.
ಶಾಲೆಗೆ ಹೋಗುವ ಮಗಳು ಬಂದಿರಲಿಲ್ಲ. ನಾವು ಗಂಡ ಹೆಂಡತಿ ಇಬ್ಬರೂ ಮನೆಯಲ್ಲಿ ಏನಾಗುತ್ತಿದೆ ಯಾಕೆ ಮಗಳು ರಾತ್ರಿಮನೆಗೆ ಬರಲಿಲ್ಲ ಎಂದು ತಿಳಿಯಲು ಪ್ರಯತ್ನಿಸುತ್ತಿದ್ದೆವು. ಆಗ ಆಕೆ ಒಬ್ಬ ಅಪರಿಚಿತ ವ್ಯಕ್ತಿಯೊಂದಿಗೆ ಕಾರ್ ನಲ್ಲಿ ಬಂದಿಳಿದಳು. ನಾವು ಆತನನ್ನು ಅಲ್ಲಿಂದ ತೆರಳದಂತೆ ತಡೆದೆವು ಎಂದು ಅಲ್ ವರ್ಕಾ ಪೋಲಿಸರಿಗೆ ಹುಡುಗಿಯ ತಂದೆ ತಾಯಿಯರು ಹೇಳಿಕೆ ನೀಡಿದ್ದಾರೆ.
ಅವರ ದೂರಿನ ಆಧಾರದ ಮೇಲೆ ಹುಡುಗ ಮತ್ತು ಹುಡುಗಿಗೆ ಪೊಲಿಸರು ಸಮನ್ಸ್ ಜಾರಿ ಮಾಡಿದ್ದರು.
ವರದಿಯ ವಿವರಗಳು |
 |
ಕೃಪೆ : gulf news ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-09-03 00:00:00
|
|
|