ದುಬಾಯಿ ಟ್ಯಾಕ್ಸಿ ಬಾಡಿಗೆ ಶೀಘ್ರ ಹೆಚ್ಚಳ |
ಪ್ರಕಟಿಸಿದ ದಿನಾಂಕ : 2010-09-03
ಬಹಳಕಾಲದಿಂದ ನಿರೀಕ್ಷಿಸಲಾಗುತ್ತಿರುವ ದುಬಾಯಿಯ ಟ್ಯಾಕ್ಸಿ ಬಾಡಿಗೆಯನ್ನು ಹೆಚ್ಚಿಸುವ ಪ್ರಸ್ತಾವಕ್ಕೆ ಹಸಿರು ನಿಶಾನೆ ದೊರಕಿದ್ದು ಸಂಬಂಧ ಪಟ್ಟ ಅಧಿಕಾರಿಗಳು ಇಲಾಖೆಗಳು ಅನು ಮತಿ ನೀಡಿವೆ ಎಂದು ಟ್ಯಾಕ್ಸಿ ಕಾರ್ಪೊರೇಶನ್ನ ಹಿರಿಯ ಆಧಿಕಾರಿ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.
ಎರಡು ಸಲ ಇಂಧನ ದರ ಹಚ್ಚಾಗಿರುವುದು ಜನ ಸಾಮಾನ್ಯರ ಮೇಲೆ ಪರಿಣಾಮ ಬೀರಿದೆ.ಇಂಧನ ಹೆಚ್ಚಳದಿಂದ ಉಂಟಾಗಿರು ವ ವ್ಯತ್ಯಾಸವನ್ನು ಸರಿದೂಗಿಸಲು ಎಲ್ಲರಿಗೂ ಅನುಕೂಲವಾಗುವಂತೆ ಈ ನಿರ್ಧಾರ ತೆಗೆದು ಕೊಳ್ಳಲಾಗಿದೆ ಎಂದು ಸಾರ್ವಜನಿಕ ಸಾರಿಗೆ ವಿಭಾಗದ ನಿರ್ದೇಶಕ ಯುಸುಫ್ ಅಲ್ ಆಲಿ ಆಭಿಪ್ರಾಯ ಪಟ್ಟಿದ್ದರು.
ಎಪ್ರಿಲ್ ನಿಂದ 28 ಶೇಕಡಾ ಇಂಧನ ಬೆಲೆ ಏರಿಕೆ ಆಗಿದೆ.ಡಿಟಿಸಿಯು 3500 ಸಾವಿರ ವಾಹನಗಳನ್ನು ಹೊಂದಿದೆ.ಅಲ್ಲದೆ ದುಬಾಯಿಯ ಟ್ಯಾಕ್ಸಿ ದರವು ಬೆಳೆಯುತ್ತಿರುವ ಮತ್ತು ಅಭಿವೃದ್ದಿ ಹೊದಿರುವ ದೇಶಗಳಿಗೆ ಹೋಲಿಸಿದರೆ ತುಂಬಾ ಕಡಿಮೆ ಯಾಗಿದೆ.
ವರದಿಯ ವಿವರಗಳು |
 |
ಕೃಪೆ : emirates business ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-09-03 00:00:00
|
|
|