ನಾಲ್ಕು ಮಕ್ಕಳ ಹೆತ್ತ ಮಹಾತಾಯಿಗೆ ಮಂಗಳವಾಗಲಿ |
ಪ್ರಕಟಿಸಿದ ದಿನಾಂಕ : 2010-09-03
ದೇವರು ಮನಸ್ಸು ಮಾಡಿದ್ರೆ ಮನೆಗೇ ಹೊತ್ತು ತಂದು ಕೊಡುತ್ತಾನೆ ಎಂಬ ಆರ್ಷೇಯ ಮಾತನ್ನು ನೆನೆಪಿಸುವಂತೆ ಸೌದಿ ಅರೇಬಿಯಾದ ಮಹಿಳೆಯೊಬ್ಬರು ಪವಿತ್ರ ರಂಜಾನ್ ಮಾಸದ ಬುಧವಾರದಂದು ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾರೆ.
ತಾಯಿ ಮತ್ತು ಮೂರು ಮಕ್ಕಳು ಆರೋಗ್ಯವಂತರಾಗಿದ್ದು ಒಂದು ಹಎಣ್ಣು ಮಗುವಿನ ಆರೋಗ್ಯ ಸ್ವಲ್ಪ ನಾಜೂಕಾಗಿದ್ದು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ ಎಂದು ಆಸ್ಪತ್ರೆಯ ಮೂಲಗಳನ್ನು ಉಲ್ಲೇಖಿಸಿ ಆನ್ ಲೈನ್ ಪತರಿಕೆಯೋದು ವರದಿ ಮಾಡಿದೆ.
ಎರಡು ಗಂಡು ಮತ್ತು ಎರಡು ಹೆಣ್ಣು ಅವಳಿ ಶಿಶುಗಳ ಜನನವಾಗಿದೆ.
ಏಳು ವರ್ಷಗಳ ವೈವಾಹಿಕ ಜೀವನದಲ್ಲಿ ಮಕ್ಕಳಿಗಾಗಿ ಪ್ರಾರ್ಥಿಸುತ್ತಿದ್ದ ದಂಪತಿಗಳಿಗೆ ಪ್ರತಿ ಸಾರಿಯೂ ಒಂದಲ್ಲ ಒಂದು ರೀತಿಯಲ್ಲಿ ನಿರಾಶೆ ಕಾದಿರುತ್ತಿತ್ತು. ಆದರೆ ಈ ಭಾರಿ ದೇವರು ಏಕಕಾಲದಲ್ಲಿ ದಂಪತಿಗಳಿಗೆ ನಾಲ್ಕು ಮಕ್ಕಳನ್ನು ಕರುಣಿಸಿದ್ದಾನೆ.
ಏಳು ವರ್ಷಗಳ ನಿರೀಕ್ಷೆಯ ಬಳಿಕ ದೇವರು ಈ ರೀತಿ ಕರುಣಿಸಿದ್ದಾನೆ, ಅವನ ದಯೆ ಹಚ್ಚು ಎಂದು ಮಗುವಿನ ತಂದೆ ನಯೀಫ್ ತೌಮಿ ಖುಷಿ ವ್ಯಕ್ತ ಪಡಿಸಿದ್ದಾರೆ.
ಇದೊಂದು ವಿಶೇಷ ಹೆರಿಗೆ ಪ್ರಕರಣವಾಗಿದ್ದು ಮಕ್ಕಳನ್ನು ಶಸ್ತ್ರಕ್ರಿಯೆಯ ಮೂಲಕ ಹೊರ ತೆಗೆಯಲಾಗಿತ್ತು. ಅನಾರೊಗ್ಯ ದಿಂದಿರುವ ಮಗುವನ್ನು ರಕ್ಷಿಸಲು ವೈದ್ಯರ ತಂಡ ನಿರತವಾಗಿದೆ.
ಘಟನೆ ನಡೆದಿರುವುದು ಸೌದಿಯ ಒಂದು ನಗರ ಅರಾರ್ ನಲ್ಲಿ ಎಂದು ಪತ್ರಿಕೆಗಳು ವರದಿ ಮಾಡಿವೆ.
ವರದಿಯ ವಿವರಗಳು |
 |
ಕೃಪೆ : ಎಮಿರೇಟ್ಸ್ ೨೪೭ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-09-03 00:00:00
|
|
|