ಟಿ-20 ಮತ್ತು ಏಕದಿನ ಸರಣಿಯಿಂದ ಕಳಂಕಿತ ಕ್ರಿಕೆಟಿಗರ ಕೈಬಿಟ್ಟ ಪಾಕ್ ; ಸ್ವ ಇಛ್ಛೆಯಿಂದ ಹೊರಬಂದ ಕ್ರಿಕೆಟಿಗರು!? |
ಪ್ರಕಟಿಸಿದ ದಿನಾಂಕ : 2010-09-03
ಕಳಂಕಿತ ಆಟಗಾರರಾದ ಸಲ್ಮಾನ್ ಬಟ್, ವೊಹಮ್ಮದ್ ಆಮೀರ್ ಮತ್ತು ವೊಹಮ್ಮದ್ ಆಸಿಫ್ ಅವರನ್ನು ಕೈಬಿಟ್ಟಿದೆ.
ಟಾಂಟನ್ : ಐಸಿಸಿ ಮತ್ತು ಇಂಗ್ಲಂಡ್ ಕ್ರಿಕೆಟ್ ಮಂಡಳಿಯ ಒತ್ತಡದ ಹಿನ್ನೆಲೆಯಲ್ಲಿ ಪಾಕಿಸ್ಥಾನವು ಮುಂಬರುವ ಟಿ-20 ಮತ್ತು ಏಕದಿನ ಸರಣಿಯಿಂದ ಫಿಕ್ಸಿಂಗ್ ಕಳಂಕಿತ ಆಟಗಾರರಾದ ಸಲ್ಮಾನ್ ಬಟ್, ವೊಹಮ್ಮದ್ ಆಮೀರ್ ಮತ್ತು ವೊಹಮ್ಮದ್ ಆಸಿಫ್ ಅವರನ್ನು ಕೈಬಿಟ್ಟಿದೆ.
ಬ್ರಿಟಿಷ್ ಟ್ಯಾಬ್ಲಾಯ್ಡ ಕಳೆದ ವಾರ ನಡೆಸಿದ ಕುಟುಕು ಕಾರಾಯಚರಣೆಯಲ್ಲಿ ಈ ಮೂವರು ಕ್ರಿಕೆಟಿಗರ ಹೆಸರು 'ಸಾ³ಟ್ ಫಿಕ್ಸಿಂಗ್' ಹಗರಣದಲ್ಲಿ ಕೇಳಿ ಬಂದಿತ್ತು. ಪಾಕ್ ಹೈ ಕಮಿಶನ್ ಅಧಿ ಕಾರಿಗಳು ಮತ್ತು ಪಾಕ್ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಇಜಾಜ್ ಬಟ್ ಅವರಿಂದ ಲಂಡನ್‌ನಲ್ಲಿ ಪ್ರಸಕ್ತ ವಿಚಾರಣೆ ಎದುರಿಸುತ್ತಿರುವ ಈ ಮೂವರು ಆಟಗಾರರು ಟಿ-20 ಮತ್ತು ಏಕದಿನ ಪಂದ್ಯಗಳಲ್ಲಿ ಆಡುವುದಿಲ್ಲ ಎಂದು ತಂಡದ ಮ್ಯಾನೇಜರ್ ಯಾವರ್ ಸಯೀದ್ ಗುರುವಾರ ಪ್ರಕಟಿಸಿದರು.
'ಇಂದು ಬೆಳಗ್ಗೆಯಿಂದ ನಮ್ಮ ತಂಡದಲ್ಲಿ 13 ಆಟಗಾರರಷ್ಟೇ ಇರುತ್ತಾರೆ. ಕೈಬಿಡಲಾಗಿರುವ ಮೂವರು ಆಟಗಾರರ ಬದಲಿಗ ರನ್ನು ಆಯ್ಕೆ ಮಾಡಲು ಕೇಳಿಕೊಂಡಿದ್ದೇವೆ. ವೊದಲೆರಡು ಟಿ-20 ಪಂದ್ಯಗಳಿಗೆ ನಮ್ಮ ತಂಡವು 13 ಆಟಗಾರರಿಂದ ಕೂಡಿರಲಿದೆ' ಎಂದು ಸಯೀದ್ ಸುದ್ದಿಗಾರರಿಗೆ ತಿಳಿಸಿದರು.
ಟಿ-20 ಮತ್ತು ಏಕದಿನ ಸರಣಿ ನಿಗದಿಯಂತೆಯೇ ನಡೆಯಬೇಕಾದರೆ ಕಳಂಕಿತ ಆಟಗಾರರನ್ನು ಕೈಬಿಡಬೇಕೆಂದು ಐಸಿಸಿ ಮತ್ತು ಇಂಗ್ಲಂಡ್ ಕ್ರಿಕೆಟ್ ಮಂಡಳಿಯು ಪಿಸಿಬಿಯ ಮೇಲೆ ಒತ್ತಡ ಹೇರಿತ್ತು ಎನ್ನಲಾಗಿದೆ. ಇಂಗ್ಲಂಡ್‌ನ ವೃತ್ತಿಪರ ಕ್ರಿಕೆಟಿಗರ ಅಸೋಸಿಯೇಶನ್ ಕೂಡ ಕಳಂಕಿತ ಆಟಗಾರರ ವಜಾಕ್ಕೆ ಒತ್ತಾಯಿಸಿತ್ತು. ಕಳಂಕಿತ ಆಟಗಾರರೆದುರು ಆಡುವುದು ಆತಿಥೇಯ ತಂಡದ ಆಟಗಾರರಿಗೆ ಕಠಿನವಾಗಲಿದೆ ಎಂದೂ ಹೇಳಿತ್ತು.
ಈ ಮುನ್ನ ಪಿಸಿಬಿ ಅಧ್ಯಕ್ಷ ಇಜಾಜ್ ಬಟ್ ಅವರು ಆಟಗಾರರನ್ನು ಕೈಬಿಡಲು ನಿರಾಕರಿಸಿದ್ದರು. 'ಆಟಗಾರರ ವಿರುದ್ಧ ಸ್ಕಾಟ್ಲಂಡ್ ಯಾರ್ಡ್ಸ್ ಆರೋಪಪಟ್ಟಿ ಸಲ್ಲಿಸುವವರೆಗೆ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ. ತತ್‌ಕ್ಷಣಕ್ಕೆ ಆಡಲು ಅವರು ಸ್ವತಂತ್ರರು' ಎಂದು ಬಟ್ ನುಡಿದಿದ್ದರು. ಅಲ್ಲದೆ ಫಿಕ್ಸಿಂಗ್ ವಿವಾದದ ಬಗ್ಗೆ ವರದಿ ಮಾಡುತ್ತಿರುವ ಮಾಧ್ಯಮಗಳ ವಿರುದ್ಧವೂ ಕಿಡಿ ಕಾರಿದ್ದರು.
ಸಾಕ್ಷ್ಯ ಒದಗಿಸಿದ ವೀಣಾ ಐಸಿಸಿಯ ಭ್ರಷ್ಟಾಚಾರ ತಡೆ ಘಟಕದ ದಕ್ಷಿಣ ಏಷ್ಯಾದ ಪ್ರಮುಖ ಅಧಿಕಾರಿಯಾಗಿರುವ ಹಸನ್ ರಜಾ ಬುಧವಾರ ರಾತ್ರಿ ವೀಣಾ ಅವರನ್ನು ಭೇಟಿಯಾದರು. ಈ ವೇಳೆ ತಮ್ಮ ಬಳಿ ಇರುವ ಸಾಕ್ಷ್ಯಗಳನ್ನು ವೀಣಾ ಅವರು ಅಧಿಕಾರಿಗೆ ಹಸ್ತಾಂತರಿಸಿದ್ದಾರೆ.
ಲಾಹೋರ್ (ಪಿಟಿಐ):‘ಸ್ಪಾಟ್- ಫಿಕ್ಸಿಂಗ್’ ಆರೋಪಕ್ಕೆ ಒಳಗಾಗಿರುವ ಪಾಕಿಸ್ತಾನದ ವೇಗದ ಬೌಲರ್ ಮೊಹಮ್ಮದ್ ಆಸಿಫ್ ಅವರ ಮಾಜಿ ಗೆಳತಿ ವೀಣಾ ಮಲಿಕ್ ಗುರುವಾರ ತಮ್ಮ ಬಳಿಯಿದ್ದ ‘ಸಾಕ್ಷ್ಯ’ಗಳನ್ನು ಐಸಿಸಿ ಭ್ರಷ್ಟಾಚಾರ ತಡೆ ಘಟಕದ ಅಧಿಕಾರಿಗೆ ಹಸ್ತಾಂತರಿಸಿದರು.
ಆಸಿಫ್‌ಗೆ ಬುಕ್ಕಿಗಳ ಜೊತೆ ಸಂಪರ್ಕವಿದೆ ಎಂದು ಆರೋಪ ಮಾಡಿದ್ದ ವೀಣಾ, ‘ಅದಕ್ಕೆ ಬೇಕಾದ ಸಾಕಷ್ಟು ಪುರಾವೆ ತನ್ನ ಬಳಿ ಇದೆ’ ಎಂದಿದ್ದರು. ಐಸಿಸಿ ಈ ಆರೋಪವನ್ನು ಗಂಭೀರವಾಗಿ ಪರಿಗಣಿಸಿತ್ತು.
ಐಸಿಸಿಯ ಭ್ರಷ್ಟಾಚಾರ ತಡೆ ಘಟಕದ ದಕ್ಷಿಣ ಏಷ್ಯಾದ ಪ್ರಮುಖ ಅಧಿಕಾರಿಯಾಗಿರುವ ಹಸನ್ ರಜಾ ಬುಧವಾರ ರಾತ್ರಿ ವೀಣಾ ಅವರನ್ನು ಭೇಟಿಯಾದರು. ಈ ವೇಳೆ ತಮ್ಮ ಬಳಿ ಇರುವ ಸಾಕ್ಷ್ಯಗಳನ್ನು ವೀಣಾ ಅವರು ಅಧಿಕಾರಿಗೆ ಹಸ್ತಾಂತರಿಸಿದ್ದಾರೆ.
‘ಆಸಿಫ್ ಬುಕ್ಕಿಯ ಜೊತೆ ನಡೆಸಿದ ಮಾತುಕತೆಯ ವಾಯ್ಸಿ ರೆಕಾರ್ಡ್ ಹಾಗೂ ಇತರ ಕೆಲವು ಮಾಹಿತಿಗಳನ್ನು ಐಸಿಸಿ ಅಧಿಕಾರಿಗೆ ನೀಡಿದೆ’ ಎಂದು ವೀಣಾ ಅವರು ಟಿವಿ ಚಾನೆಲ್‌ಗೆ ತಿಳಿಸಿದರು.
‘ಪಾಕ್ ತಂಡದ ಎಲ್ಲ ಆಟಗಾರರು ಮಾತ್ರವಲ್ಲ ಪಿಸಿಬಿ ಅಧಿಕಾರಿಗಳೂ ಮೋಸದಾಟದಲ್ಲಿ ಪಾಲ್ಗೊಂಡಿದ್ದಾರೆ’ ಎಂಬ ಆರೋಪವನ್ನು ವೀಣಾ ಬುಧವಾರ ಮಾಡಿದ್ದರು.
ಕಳಂಕಿತರಿಗೆ ಬೆಂಬಲ:
ಕ್ರಿಕೆಟ್‌ನ ಮಾನ ಹರಾಜು ಮಾಡಿರುವ ‘ಸ್ಪಾಟ್- ಫಿಕ್ಸಿಂಗ್’ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಕ್ರಿಕೆಟಿಗರ ಬೆಂಬಲಕ್ಕೆ ಪಿಸಿಬಿ, ಪಾಕ್ ಹೈಕಮಿಷನ್ ಮತ್ತು ಪಾಕ್ ಸರ್ಕಾರ ನಿಂತಿವೆ.
‘ಆಟಗಾರರ ಮೇಲಿನ ಆರೋಪ ಸಾಬೀತಾಗಿಲ್ಲ. ಅವರು ಮುಗ್ಧರು’ ಎಂದು ಹಸನ್ ಹೇಳಿದರು. ಆಟಗಾರರಿಗೆ ಬೆಂಬಲ ಸೂಚಿಸಿರುವ ಪಾಕಿಸ್ತಾನದ ಕ್ರೀಡಾ ಸಚಿವ ಐಜಾಜ್ ಜಕ್ರಾನಿ, ‘ಈ ಆಟಗಾರರು ಏಕದಿನ ಸರಣಿಯಲ್ಲಿ ಆಡುವ ಸಾಧ್ಯತೆಯಿದೆ’ ಎಂದಿದ್ದಾರೆ.
ಐಸಿಸಿ ಮತ್ತು ಇಸಿಬಿ ಅಧಿಕಾರಿಗಳ ಜೊತೆಗಿನ ಸಭೆಯ ವೇಳೆ ಪಿಸಿಬಿ ಮುಖ್ಯಸ್ಥ ಇಜಾಜ್ ಬಟ್, ಕಳಂಕಿತ ಆಟಗಾರರನ್ನು ಕೈಬಿಡಲು ಕೊನೆಯವರೆಗೂ ಒಪ್ಪಲಿಲ್ಲ ಎನ್ನಲಾಗಿದೆ. ಬಟ್ ಹಾಗೂ ಐಸಿಸಿ ಮುಖ್ಯ ಕಾರ್ಯನಿರ್ವಾಹಕ ಹರೂನ್ ಲೊರ್ಗಟ್ ನಡುವಿನ ಮಾತುಕತೆ ಬುಧವಾರ ಮಧ್ಯರಾತ್ರಿಯವರೆಗೆ ಮುಂದುವರಿದಿತ್ತು. ಕೊನೆಯಲ್ಲಿ ಕ್ರಿಕೆಟ್ ಕ್ರೀಡೆಯ ಹಿತಾಸಕ್ತಿಯನ್ನು ಪರಿಗಣಿಸಿ ಬಟ್ ಆಟಗಾರರನ್ನು ಕೈಬಿಡುವ ನಿರ್ಧಾರಕ್ಕೆ ಸಮ್ಮತಿ ಸೂಚಿಸಿದ್ದಾರೆ.
ಪಾಕ್ ತಂಡ ಕೈಗೊಂಡ ನಿರ್ಧಾರವನ್ನು ಇಸಿಬಿ ಮುಖ್ಯಸ್ಥ ಜೈಲ್ಸ್ ಕ್ಲಾರ್ಕ್ ಸ್ವಾಗತಿಸಿದ್ದಾರೆ. ಏಕದಿನ ಸರಣಿ ನಿಗದಿತ ವೇಳಾಪಟ್ಟಿಯಂತೆ ಮುಂದುವರಿಯಬೇಕಾದರೆ ಈ ಮೂವರು ಆಟಗಾರರು ಪಾಕ್ ತಂಡದಲ್ಲಿರಬಾರದು ಎಂದು ಇಸಿಬಿ ಸ್ಪಷ್ಟವಾಗಿ ತಿಳಿಸಿತ್ತು.
ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್‌ನಲ್ಲಿ ನಡೆದ ಅಂತಿಮ ಟೆಸ್ಟ್ ಪಂದ್ಯದಲ್ಲಿ ‘ಸ್ಪಾಟ್- ಫಿಕ್ಸಿಂಗ್’ ನಲ್ಲಿ ಭಾಗಿಯಾದ ಆರೋಪ ಬಟ್, ಆಸಿಫ್ ಮತ್ತು ಅಮೇರ್ ಮೇಲಿದೆ. ‘ನ್ಯೂಸ್ ಆಫ್ ದಿ ವರ್ಲ್ಡ್’ ಟ್ಯಾಬ್ಲಾಯ್ಡಾ ನಡೆಸಿದ ಮಾರುವೇಷದ ಕಾರ್ಯಾಚರಣೆಯಲ್ಲಿ ಇದು ಬಹಿರಂಗಗೊಂಡಿತ್ತು.
ವರದಿಯ ವಿವರಗಳು |
 |
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-09-03 00:00:00
|
|
|