ಗುರುವಾರ, 09-02-2012
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಹೊನ್ನಾವರ ಬಳಿ ಮರಕ್ಕೆ ಕಾರು ಢಿಕ್ಕಿ: ಉಡುಪಿ ಡಿಸಿಐಬಿ ನಿರೀಕ್ಷಕರಿಗೆ ತೀವ್ರ ಗಾಯ
Latest news item ಜಿಲ್ಲೆಯನ್ನು ಮುಜುಗರಕ್ಕೀಡು ಮಾಡಿದ ಪಾಲೆಮಾರ್ ; ಯಾಕಿಂಥ ಕೆಲಸ ಮಾಡಿದರು? | ಬಿಜೆಪಿಯ ಹಗರಣಗಳು ಮತ್ತು ಕಳಂಕಿತ ಮಿನಿಸ್ಟರುಗಳು | ವಾಜಪೇಯಿ, ಅಡ್ವಾಣಿ ಬೆಳೆಸಿದ ಪಕ್ಷ ಇದೇನಾ?
Latest news item ಯು. ಎ. ಇ. ಬಂಟ್ಸ್ ಡೈರೆಕ್ಟರಿ - 2012 | UAE BUNTS DIRECTORY -2012
Latest news item ಸದನದಲ್ಲಿ ಸಚಿವರ ಸೆಕ್ಸ್ ಫಿಲಂ ವೀಕ್ಷಣೆಯ ರದ್ದಾಂತ : ಉಡುಪಿಯಲ್ಲಿ ಎಸ್.ಡಿ.ಪಿ.ಐ ಪ್ರತಿಭಟನೆ
Latest news item ಯುಪಿಸಿ‌ಎಲ್ ವಿರುದ್ದ ಹೈಕೋರ್ಟ್ ನಲ್ಲಿ ದಾವೆ ಹೂಡಲು ಸಿದ್ದ : ಪತ್ರಿಕಾಗೋಷ್ಠಿಯಲ್ಲಿ ಜಯಶ್ರೀ ಕೃಷ್ಣ ಶೆಟ್ಟಿ
Latest news item ಹೋಟೆಲ್ ಕಿದಿಯೂರಿನ ರಜತ ಸಂಭ್ರಮ : ಪೇಜಾವರ ಶ್ರೀಗಳಿಗೆ ತುಲಾಭಾರ
Latest news item ರೇವ್ ಪಾರ್ಟಿ ಕುರಿತು ಗ್ರಾ.ಪಂ.ಗೆ ಗೊತ್ತೇ ಇಲ್ಲ! ಇನ್ನೊಂದು ವಿವಾದದತ್ತ ಜಿಲ್ಲಾಡಳಿತ
Latest news item ಸದನದಲ್ಲಿ ಸಚಿವತ್ರಯರ ‘ಕಾಮಹರಣ’ : ರಾಜ್ಯದಾದ್ಯಂತ ಆಕ್ರೋಶ : ಉಡುಪಿಯಲ್ಲಿ ನಾಗರೀಕರ ಸಮಿತಿಯ ವಿಶಿಷ್ಟ ಪ್ರತಿಭಟನೆ
Latest news item ಮಲೆನಾಡಿನ ಕವಿ, ಉಪ್ಪುಕಡಲಿನ ರವಿ- ಪ್ರೊ.ಎಸ್.ವಿ.ಪರಮೇಶ್ವರ ಭಟ್ಟರು
Latest news item ದುಬೈ:ಕೆ.ಎಮ್.ಡಬ್ಲು.ಎ ವತಿಯಿಂದ ಕ್ರಿಕೆಟ್ ಟೂರ್ನಮೆಂಟ್
Latest news item ಸದನದಲ್ಲಿ ಮೊಬೈಲ್ ಫೋನ್‌ ಅಶ್ಲೀಲ ದೃಶ್ಯಗಳನ್ನು ವೀಕ್ಷಿಸಿದ ಸಚಿವರುಗಳ ತಲೆದಂಡ: ಸವದಿ, ಸಿಸಿ, ಮತ್ತು ಪಾಲೇಮಾರ್‌ ಮಂತ್ರಿ ಸ್ಥಾನಕ್ಕೆ ರಾಜಿನಾಮೆ
Latest news item SHAME ON YOU! ..ಇದು ಸರೀನಾ?...ವಿಧಾನಸಭೆಯಲ್ಲೇ ಸೆಕ್ಸ್ ಫಿಲ್ಮ್ ವೀಕ್ಷಿಸಿದ ಸಚಿವ ಸವದಿ!; ರಾಜ್ಯಾದ್ಯಂತ ತೀವ್ರ ಆಕ್ರೋಶ | ಅವರ ಜತೆ ಅಶ್ಲೀಲಚಿತ್ರ ಹಂಚಿಕೊಂಡ ಸಚಿವರು ಯಾರ್ಯಾರು? ರಾಜ್ಯ ಸರ್ಕಾರಕ್ಕೆ ಮತ್ತೊಂದು ಮುಜುಗರ!!
Latest news item ಕಲಾಪದಲ್ಲೂ ಪ್ರತಿಧ್ವನಿಸಿದ 'ಮಲ್ಪೆ ಸೈಂಟ್ ಮೇರಿಸ್ ಕಾಮಕೇಳಿ ಪ್ರಕರಣ'; ತನಿಖೆ ಆದೇಶಿಸಿದ ಸಿ.ಎಮ್
Latest news item ರೇವ್ ಪಾರ್ಟಿ ಪಶು ಸಂಸ್ಕೃತಿಯ ಪ್ರತೀಕ : ಅಶೋಕ್ ಸಿಂಘಾಲ್ ಖಂಡನೆ | ರಾಜ್ಯ ಸರ್ಕಾರಕ್ಕೆ ತೀವ್ರ ಮುಜುಗರ
Latest news item ಮಲ್ಪೆ ರೇವ್ ಪಾರ್ಟಿ ಪ್ರಕರಣ : ಜೆಡಿ‌ಎಸ್ ವಿನೂತನ ಪ್ರತಿಭಟನೆ
Latest news item ರೇವ್ ಪಾರ್ಟಿಯಿಂದ ಪವಿತ್ರ ಕ್ಷೇತ್ರ ಅಪವಿತ್ರ: ಇಂತಹ ವಿಕೃತಿ ಎಲ್ಲಿಯೂ ನಡೆಯಬಾರದು : ಪೇಜಾವರ ಶ್ರೀ ಪ್ರತಿಕ್ರೀಯೆ
Latest news item ಕಿದಿಯೂರ್ ಹೋಟೆಲ್ ನ ನೂತನ ಶಿಲಾದೇಗುಲದಲ್ಲಿ ನಾಗದೇವರ ಪುನ:ಪ್ರತಿಷ್ಠೆ : ವಿಶೇಷ ಪೂಜಿತ ನಾಗರಕ್ಷಾದಾರ ಧಾರಣೆ
Latest news item ದುಬಾಯಿಯಲ್ಲಿ ವರ್ಣರಂಜಿತ ಯಕ್ಷಲೋಕ ಸೃಷ್ಟಿಸಿದ ಯಕ್ಷಮಿತ್ರರ ಯಕ್ಷಗಾನ ವೈಭವ ’ಶಾಂಭವಿ ವಿಜಯ’
Latest news item ಶಾರ್ಜಾ ಕರ್ನಾಟಕ ಸಂಘ ವಾರ್ಷಿಕೋತ್ಸವ: ವಿನಯ್ ಆಡಿಗ ಆಶಾ ಫೆರ್ನಾಂಡಿಸ್- 'ಮಯೂರ 'ರಾಜ' 'ರಾಣಿ'; ಶೋಧನ್ ಪ್ರಸಾದ್ ರವರಿಗೆ ಪ್ರತಿಷ್ಟಿತ ’ಮಯೂರ’ ಪ್ರಶಸ್ತಿ ಪ್ರಧಾನ| ಮುಖ್ಯ ಅತಿಥಿ ಕರ್ನಾಟಕ ಲೋಕಾಯುಕ್ತ ಮಾನ್ಯ ಎನ್. ಸಂತೋಷ್ ಹೆಗ್ಡೆ ಯವರಿಂದ ಮೆಚ್ಚುಗೆ
Latest news item ಯು.ಎ.ಇ. ಬಂಟರ 37 ನೇ ಸ್ನೇಹಮಿಲನ: ಜಾನಪದ ಕಲಾ ವೈಭವ... ಡಾ. ಬಿ ಆರ್. ಶೆಟ್ಟಿಯವರಿಂದ ಉದ್ಘಾಟನೆ
Latest news item ಧ್ವನಿ ಪ್ರತಿಷ್ಠಾನ ಯು.ಎ.ಇ. ಯು ಬೆಳ್ಳಿ ಹಬ್ಬ: ವಿಜ್ರಂಭಣೆಯಿ೦ದ ಜರುಗಿದ ಯು.ಎ.ಇ. ಪ್ರಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನ; ಪ್ರಶಸ್ತಿ ಪ್ರದಾನ ಸಮಾರಂಭ
Latest news item ದುಬಾಯಿ ಸರ್ಕಾರದಿಂದ ಸನ್ಮಾನಿತರಾದ ಕರ್ನಾಟಕದ ಗೃಹ ಮತ್ತು ಸಾರಿಗೆ ಸಚಿವರಾದ ಮಾನ್ಯ ಆರ್. ಆಶೋಕ್ ರವರಿಗೆ ದುಬಾಯಿಯಲ್ಲಿ ಕನ್ನಡಿಗರಿಂದ ಅಭಿನಂದನಾ ಸಮಾರಂಭ; ಮಾನ್ಯ ಸಚಿವ ವರಿಂದ ಅನಿವಾಸಿ ಕನ್ನಡಿಗರ ಅಭಿಮಾನಕ್ಕೆ ಮೆಚ್ಚುಗೆ.( Updated )
Latest news item ಮೋಗವೀರ್ಸ್ ಯು.ಎ.ಇ. ಆಶ್ರಯದಲ್ಲಿ ದುಬಾಯಿಯಲ್ಲಿ ಭಕ್ತಿ ಶ್ರದ್ಧೆಯಿಂದ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ
Latest news item ವಿಜ್ರಂಭಣೆಯಿಂದ ಜರುಗಿದ 'ಬಂಟ್ಸ್ ಬಹ್ರೈನ್'ನ ಸಾಂಸ್ಕೃತಿಕ ಕಾರ್ಯಕ್ರಮ: ಶ್ರೀ ಶ್ರೀ ಶ್ರೀ ಒಡಿಯೂರು ಗುರುದೇವಾನಂದ ಸ್ವಾಮೀಜಿಯವರ ಐತಿಹಾಸಿಕ ಭೇಟಿ: ಭಾವಪರವಶರಾದ ಭಕ್ತ ಸಮೂಹ: ಭಕ್ತಿ ಸಂಗೀತದ ಧಾರೆ ಹರಿಸಿದ ನಾಡಿನ ಖ್ಯಾತ ಗಾಯಕ ರವೀಂದ್ರ ಪ್ರಭು.
Latest news item ಸ್ವಾರ್ಥವಿಲ್ಲದ 'ಸಾರ್ಥ' ದ ಅಪೂರ್ವ ಕಾರ್ಯಕ್ರಮ ನಮನ ; ಕನ್ನಡದ ಮಣ್ಣಿಗೆ ದ್ವೀಪದಲ್ಲಿ ನಿಜ ನಮನ; ಸಂಗೀತ ಸುಧೆ ಹರಿಸಿದ ಗಾಯಕಿ ಸಂಗೀತ ಕಟ್ಟಿ ಹಾಗು ತಂಡ; ಖ್ಯಾತ ನಿರ್ದೇಶಕ ನಾಗತಿ ಹಳ್ಳಿ ಚಂದ್ರಶೇಖರ್ ರವರಿಂದ ಸ್ಫೂರ್ತಿಯ ಮಾತುಗಳು.



 

 
ಉಡುಪಿ: ಸ೦ಭ್ರಮದಿ೦ದ ಜರುಗಿದ ವಿಟ್ಲಪಿಂಡಿ...ವಿಭಿನ್ನ ರೀತಿಯಲ್ಲಿ ಆಚರಿಸಿದ ಕೃಷ್ಣ ಲೀಲೋತ್ಸವ

( ಪೋಟೋ ಆಲ್ಬಮ್ ತಪ್ಪದೆ ನೋಡಿ- ಕ್ಲಿಕ್)

ವಿಡಿಯೋ ವರದಿ - 1

ವಿಡಿಯೋ ವರದಿ - 2

ಉಡುಪಿ: ರಥಬೀದಿಯಲ್ಲಿ ಗುರುವಾರ ಕೃಷ್ಣ ಲೀಲೋತ್ಸವ ಸ೦ಭ್ರಮದಿ೦ದ ಆರಂಭವಾಗಿದೆ. ಪ್ರಸ್ತುತ ಪರ್ಯಾಯ ಪೀಠದಲ್ಲಿರುವ ಶಿರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥರು ಯೋಚನೆ- ಯೋಜನೆಯಲ್ಲಿ ಭಿನ್ನರಾಗಿರುವುದರಿಂದ ಸಹಜವಾಗಿಯೇ ಪ್ರತಿವರ್ಷಕ್ಕಿಂತ ಈ ಬಾರಿಯ ಲೀಲೋತ್ಸವ ಕೂಡ ಭಿನ್ನವಾಗಿದೆ.

ಅದಕ್ಕಾಗಿ ಕಳೆದ 10 ದಿನಗಳಿಂದ ಮಠದ ಪರಿಸರದಲ್ಲಿ ರಂಗೋಲಿ, ಕೃಷ್ಣ ರಸಪ್ರಶ್ನೆ, ಸಂಗೀತ, ನೃತ್ಯ, ಚಿತ್ರ, ಹೂವು ಕಟ್ಟುವುದು, ಬತ್ತಿ ಹೊಸೆಯುವುದು ಇತ್ಯಾದಿ ಮಾಮೂಲಿ ಸ್ಪರ್ಧೆಗಳ ಜೊತೆಗೆ ಚಿನ್ನಿದಾಂಡು, ಆಟೋ ರಿಕ್ಷಾದ ಟಯರು ಬದಲಾಯಿಸುವುದು, ಪೇಡಲ್ ಹೊಡೆಯು ವುದು, ಬಾಳೆ ಹಣ್ಣು ತಿನ್ನುವುದು, ಕೃಷ್ಣಮೂರ್ತಿ ರಚಿಸುವುದು, ಲಗೋರಿ, ಬೆರ್ಚಂಡು, ಪೋಕ್ಕು, ಮಲ್ಲಯುದ್ದ, ಪಗಡೆ... ಹೀಗೆ ಹತ್ತಾರು ಬಗೆಯ ಸ್ಪರ್ಧೆಗಳು ನಡೆದಿವೆ.

ರಥಬೀದಿಯಲ್ಲಿ ಕೃಷ್ಣ ಲೀಲೋತ್ಸವದ ಮುಖ್ಯ ಅಂಗವಾದ ಮೊಸರು ಕುಡಿಕೆಯ ಆಟಗಳು ನಡೆದಿವೆ. ಶ್ರೀಗಳು ಉತ್ಸವ ವೀಕ್ಷಿಸಲು ಕುಳಿತುಕೊಳ್ಳುವ, ಪ್ರಸಾದ ವಿತರಿಸುವ ವೇದಿಕೆ ಹಾಗೂ ಶಿರೂರು ಮಠದ ಮುಂಭಾಗದಲ್ಲಿ ಭರ್ಜರಿ ಹುಲಿ ವೇಷ ಕುಣಿತಕ್ಕೆ ಭಾರಿ ಗಾತ್ರದ ವೇದಿಕೆ ನಿರ್ಮಾಣ ಮಾಡಿದ್ದಾರೆ.

ಶಿರೂರು ಶ್ರೀಗಳ ಸ್ಪೆಷಲ್:

ಪ್ರತಿವರ್ಷದಂತೆ ಈ ಬಾರಿಯೂ ಗುರುವಾರ ಮಧ್ಯಾಹ್ನ ಕೃಷ್ಣ ಲೀಲೋತ್ಸವದ ಸಂದರ್ಭದಲ್ಲಿ ನೂರಾರು ಹುಲಿ ವೇಷಧಾರಿಗಳನ್ನು ಶಿರೂರು ಶ್ರೀಗಳು ವಿಶೇಷವಾಗಿ ಕುಣಿಸಿ ಅದಕ್ಕಾಗಿಯೇ 8 ಲಕ್ಷ ರು. ಮೌಲ್ಯದ 5  ರು.ಗಳಿಂದ 1,000 ರು.ಗಳವರೆಗಿನ ನೋಟುಗಳ ಮಾಲೆ ತೊಡಿಸಿ ದ್ದಾರೆ. ಜೊತೆಗೆ ಮರಕಾಲು ಹಾಕುವವರಿಗೆ ಮತ್ತು ಇತರ ವೇಷಧಾರಿಗಳಿಗೂ ಬಹುಮಾನ ನೀಡಿದ್ದಾರೆ. ಇದು ಶಿರೂರು ಶ್ರೀ ಸ್ಪೆಷಲ್.

ಶ್ರೀಗಳ ಇನ್ನೊಂದು ಸ್ಪೆಷಲ್ ಎಂದರೆ ಇದೇ ವೇದಿಕೆಯಲ್ಲಿ ಶ್ರೀಗಳು ತಮ್ಮ ಸಂಗ್ರಹದಲ್ಲಿರುವ ಲಕ್ಷಾಂ ತರ ಬೆಲೆ ಬಾಳುವ ಅಮೂಲ್ಯ ವಾದ್ಯೋಪಕರಣಗಳ ಕಛೇರಿ ನಡೆಸಿದ್ದಾರೆ. ಇದು ಕೃಷ್ಣ ಲೀಲೋತ್ಸ ವದ ಹೈಲೈಟ್ಸ್‌ಗಳಲ್ಲೊಂದಾಗಲಿದೆ.

ಈ ಬಾರಿಯ ಕೃಷ್ಣ ಲೀಲೋತ್ಸವದಲ್ಲಿ ಉಡುಪಿ ಇತಿಹಾಸದಲ್ಲಿ ಪ್ರಥಮ ಬಾರಿಗೆ ಸುಮಾರು  50ಹುಲಿ ವೇಷ ತಂಡಗಳು ಭಾಗವಹಿಸಿವೆ. ಕಳೆದ ಬಾರಿ ಇತಿಹಾಸದಲ್ಲಿಯೇ ಪ್ರಥಮ ಬಾರಿ ಮಹಿಳೆಯರೂ ಹುಲಿ ವೇಷ ಧರಿಸಿದ್ದು, ಈ ಬಾರಿ ಅದೇ ತಂಡ ವಿಷ್ಣುವಿನ 10 ಅವತಾರಗಳನ್ನು ಪ್ರದರ್ಶಿಸಿ ದ್ದಾರೆ. ಅವರು ಗರುಡನ ಬೃಹತ್ ಪ್ರತಿಕೃತಿಯಲ್ಲಿ ಕುಳಿತು ಉತ್ಸವದಲ್ಲಿ ಭಾಗವಹಿಸಿ ದ್ದಾರೆ.

ಸಂಭ್ರಮದ ವಿಟ್ಲಪಿಂಡಿ ಸಂಪನ್ನ

ಉಡುಪಿ: ಶ್ರೀಕೃಷ್ಣನ ಹುಟ್ಟನ್ನು ಸಂಭ್ರಮಿಸುವ ಶ್ರೀಕೃಷ್ಣಲೀಲೋತ್ಸವ (ವಿಟ್ಲಪಿಂಡಿ) ಗುರುವಾರ ಉಡುಪಿಯಲ್ಲಿ ಸಂಪನ್ನ ಗೊಂಡಿ ತು. ಬೆಳಗ್ಗೆ ಮಹಾಪೂಜೆ ನಡೆದ ಬಳಿಕ ಶ್ರೀಕೃಷ್ಣಮುಖ್ಯಪ್ರಾಣ ಸೇವಾ ಸಮಿತಿಯವರು ಆಯೋಜಿಸಿದ ಅನ್ನಸಂತರ್ಪಣೆ ಯನ್ನು ಪರ್ಯಾಯ ಶ್ರೀಶೀರೂರು ಮಠದ ಶ್ರೀಲಕ್ಷ್ಮೀವರತೀರ್ಥ ಶ್ರೀಪಾದರು ಉದ್ಘಾಟಿಸಿದರು. ಸಮಿತಿ ಮುಖ್ಯಸ್ಥ ಭುವನೇಂದ್ರ ಕಿದಿಯೂರು, ದಿವಾನ ಲಾತವ್ಯ ಆಚಾರ್ಯ ವೊದಲಾದವರು ಉಪಸ್ಥಿತರಿದ್ದರು.

ಅಪರಾಹ್ನ ನಡೆದ ವಿಟ್ಲಪಿಂಡಿ ಉತ್ಸವದಲ್ಲಿ ಶ್ರೀಕೃಷ್ಣನ ಮೃಣ್ಮಯ ಮೂರ್ತಿಯನ್ನು ನವರತ್ನ ರಥದಲ್ಲಿರಿಸಿ ತೇರನ್ನು ಎಳೆಯಲಾ ಯಿತು. ಜೊತೆ ಜೊತೆಗೆ ರಥಬೀದಿಯ ಸುತ್ತ ಹುಗಿದ ಗುಜ್ಜಿಗಳಲ್ಲಿ ವೊಸರುಕುಡಿಕೆಯನ್ನು ಗೋವಳರು ಉತ್ಸಾಹದಿಂದ ಒಡೆದರು. ಒಂದೊಂದೆ ಕುಡಿಕೆ ಒಡೆಯುತ್ತಿದ್ದಂತೆ ಜನಸಾಗರದ ನಡುವೆ ರಥ ಮುನ್ನಡೆದು ಒಂದು ಸುತ್ತು ಬಂದ ಬಳಿಕ ಮೂರ್ತಿಯನ್ನು ಜಲಸ್ತಂಭನಗೊಳಿಸಲಾಯಿತು. ಉತ್ಸವದಲ್ಲಿ ಶ್ರೀಲಕ್ಷ್ಮೀವರತೀರ್ಥರಲ್ಲದೆ ಕೇಮಾರು ಸ್ವಾಮೀಜಿ ಉಪಸ್ಥಿತರಿದ್ದರು.

ಅಡಿಕೆ ಮರವೇರಿದ ವೀರದ್ವಯರು
ಕನಕಗೋಪುರದ ಬಳಿ ನೆಟ್ಟ ಎರಡು ಅಡಿಕೆ ಮರವನ್ನು ಕಾರ್ಕಳದ ಜಗನ್ನಾಥ ಮತ್ತು ಬೆಳಗಾವಿಯ ಶಿವ ಏರಿದರು. ನುಣ್ಣಗೆ ಕೀಸುಳಿ ಹಾಕಿದ ಮರಕ್ಕೆ ಎಣ್ಣೆ ಸವರಿದ ಅಡಿಕೆ ಮರವೇರುವ ಪ್ರಯತ್ನವನ್ನು ಹಲವರು ಮಾಡಿದರೂ ಇಬ್ಬರು ಮಾತ್ರ ಸಫಲರಾದರು.

ಎಲ್ಲೆಲ್ಲೂ ದೈತ್ಯ-ದಾನವರು!
ಹುಲಿವೇಷಗಳ ತಂಡಕ್ಕಿಂತ ಚಂಡಮುಂಡರೇ ವೊದಲಾದ ದೈತ್ಯ ದಾನವರ ವೇಷಗಳು ವಿವಿಧೆಡೆ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದವು. ಬೈಕ್‌ನಲ್ಲಿ ಓಡಾಡುವ ದೈತ್ಯರು, ಹುಲಿಗಳನ್ನು ಕಂಡು ಹೊಸಬರಿಗೆ ಅಚ್ಚರಿಯಾಯಿತಾದರೂ ಬಳಿಕ ನಿಜಸ್ಥಿತಿ ತಿಳಿದು ಸಮಾಧಾನಚಿತ್ತರಾದರು. ವೇಷಗಳಿಗೆ ನೀಡುವ ದೇಣಿಗೆಯಿಂದ (ಅಥವ ವೇಷಗಳ ಹಾವಳಿಯಿಂದ) ತಪ್ಪಿಸಿಕೊಳ್ಳಲು ಕೆಲವು ಅಂಗಡಿಮುಂಗಟ್ಟುಗಳು ಬಾಗಿಲುಹಾಕಿದ್ದವು. ಸಂಜೆ ಬಳಿಕ ಹುಲಿವೇಷಗಳ ಕುಣಿತ ಪ್ರದರ್ಶನ ರಾಜಾಂಗಣದಲ್ಲಿ ನಡೆಯಿತು. ತಂಡಗಳಿಗೆ ಪರ್ಯಾಯ ಮಠದಿಂದ ಸಂಭಾವನೆ ನೀಡಲಾಯಿತು.

ತುಂಬಿದ ರಥಬೀದಿ
ವಾಹನ ಸಂಚಾರವನ್ನು ನಿಷೇಧಿಸಿದ ಬಳಿಕ ಜನರಿಂದಲೇ ಸಂಪೂರ್ಣ ತುಂಬಿದ್ದು ವಿಟ್ಲಪಿಂಡಿಯಂದು ಎಂಬುದು ಅನುಭವವೇದ್ಯವಾಯಿತು.

ಚಿನ್ನದ ರಥದಲ್ಲಿ ಕೃಷ್ಣನ ಮೆರವಣಿಗೆ  
 
ಅಷ್ಟಮಠ ಬೀದಿಯಲ್ಲಿ ಶೋಭಾಯಾತ್ರೆ, ಚಿನ್ನದರಥ ಸುತ್ತಿ ಬಂದ ಬಳಿಕ ಕೃಷ್ಣನ ಮೃಣ್ಮಯ ಮೂರ್ತಿಯನ್ನು ಮಧ್ವಸರೋವರದಲ್ಲಿ ವಿಸರ್ಜಿಸುವ ಮೂಲಕ ಲೀಲೋತ್ಸವ ಸಂಪನ್ನಗೊಂಡಿತು.   

ಉಡುಪಿ: ಶ್ರೀಕೃಷ್ಣ ಲೀಲೋತ್ಸವ ‘ವಿಟ್ಲಪಿಂಡಿ’ ಮಹೋತ್ಸವ ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ಗುರುವಾರ ವಿಜೃಂಭಣೆ ಯಿಂದ ರಥಬೀದಿಯಲ್ಲಿ ಜರುಗಿತು.

ಮಿನುಗುತ್ತಿದ್ದ ಚಿನ್ನದ ರಥದಲ್ಲಿ ಮೋಹಕ ಮೃಣ್ಮಯ ಕೃಷ್ಣ ನಸುನಗುತ್ತ ವಿರಾಜಮಾನನಾಗಿದ್ದ. ಚಾತುರ್ಮಾಸ ನಿಮಿತ್ತ ಮಠದ ಉತ್ಸವ ಮೂರ್ತಿಯನ್ನು ಹೊರಗೆ ತೆಗೆಯದ ಕಾರಣ ವಿಟ್ಲಪಿಂಡಿ ವೈಭವದ ಮೆರವಣಿಗೆಗಾಗಿಯೇ ರೂಪಿಸಿದ್ದ ಮೃಣ್ಮಯ ಕೃಷ್ಣನ ಮೂರ್ತಿಯನ್ನು ಪೂಜಿಸಿ ರಥದಲ್ಲಿಟ್ಟು ಮೆರವಣಿಗೆ ಮಾಡಲಾಯಿತು.

 ಹಲವು ಸಾವಿರ ಸಂಖ್ಯೆಯಲ್ಲಿದ್ದ ಕೃಷ್ಣ ಭಕ್ತರ ಜಯಘೋಷದೊಂದಿಗೆ ರಥ ಬೀದಿ ಮಾರ್ದನಿಸಿತು. ಹಾಡುತ್ತ, ಕುಣಿಯುತ್ತ ಕೃಷ್ಣನ ನಾಮಸ್ಮರಣೆ ನಡೆಸುತ್ತಿದ್ದ ಭಕ್ತರು ಚಿನ್ನದ ರಥದೊಂದಿಗೆ ಶೋಭಾಯಾತ್ರೆಯಲ್ಲಿ ಸಾಗಿದರು. 

ರಥ ಬೀದಿ ಸುತ್ತ ನೆಡಲಾಗಿದ್ದ 15 ಗುರ್ಜಿಗಳಲ್ಲಿ ಎತ್ತರದಲ್ಲಿ ಕಟ್ಟಿದ್ದ ಮೊಸರು ಕುಡಿಕೆಗಳನ್ನು ಒಂದೊಂದಾಗಿ ಗೋವಳರು ಒಡೆಯುತ್ತ ಸಾಗಿದಾಗ ಕುಡಿಕೆಯಲ್ಲಿದ್ದ ಮೊಸರು, ಲಡ್ಡು, ಚಕ್ಕುಲಿ, ಬಣ್ಣದ ನೀರು ಸುತ್ತೆಲ್ಲ ಚೆಲ್ಲಾಡಿ ಓಕುಳಿಯಾಡಿದವು. ಒಂದೊಂದೇ ಮೊಸರು ಕುಡಿಕೆಗಳನ್ನು ಒಡೆಯುತ್ತ ಸಾಗಿದಂತೆ ಉತ್ಸವ ಮುಂದೆ ಸಾಗುತ್ತಾ ಕೃಷ ್ಣಮಠದೆದುರು ಬಂದು ನಿಂತಿತು.

ರಥೋತ್ಸವ ಅಂತಿಮ ಘಟ್ಟದಲ್ಲಿ ಶೀರೂರು ಮಠದ ಬಳಿ ಬಂದಾಗ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಪ್ರಸಾದ ರೂಪವಾಗಿ ಎಸೆದ ನಾಣ್ಯ, ಚಕ್ಕುಲಿ, ಲಡ್ಡುಗಳನ್ನು ಭಕ್ತರು ಮುಗಿಬಿದ್ದು ಸ್ವೀಕರಿಸಿದರು.

ವಿಶೇಷ ದಿರಿಸಿನಲ್ಲಿದ್ದ ಗೋವಳರು, ಹುಲಿವೇಷಧಾರಿಗಳು, ಚಂಡೆ-ಮದ್ದಳೆ ಸದ್ದು, ಯಕ್ಷಗಾನ, ಬಗೆಬಗೆಯ ವೇಷಧಾರಿಗಳ ಕುಣಿತ ವೈಭವಕ್ಕೆ ಮತ್ತಷ್ಟು ಕಳೆ ತಂದಿತು. ಅಷ್ಟಮಠ ಬೀದಿಯಲ್ಲಿ ಶೋಭಾಯಾತ್ರೆ, ಚಿನ್ನದರಥ ಸುತ್ತಿ ಬಂದ ಬಳಿಕ ಕೃಷ್ಣನ ಮೃಣ್ಮಯ ಮೂರ್ತಿಯನ್ನು ಮಧ್ವಸರೋವರದಲ್ಲಿ ವಿಸರ್ಜಿಸುವ ಮೂಲಕ ಲೀಲೋತ್ಸವ ಸಂಪನ್ನಗೊಂಡಿತು.

ಶ್ರೀಕೃಷ್ಣ ಮಠದಲ್ಲಿ ಪ್ರಾತಃಕಾಲ ಶೀರೂರು ಲಕ್ಷ್ಮೀವರ ತೀರ್ಥ ಸ್ವಾಮೀಜಿ ಅವರಿಂದ ಪೂಜೆ ನಡೆಯಿತು. ಕೃಷ್ಣ ಮಠದ ಬಳಿಯ ಚಂದ್ರಮೌಳೀಶ್ವರ ಹಾಗೂ ಅನಂತೇಶ್ವರ ದೇಗುಲಗಳಿಗೂ ಪೂಜೆ ಸಲ್ಲಿಸಲಾಯಿತು. ವೈವಿಧ್ಯಮಯ ಕಾರ್ಯಕ್ರಮ, ಮಧ್ಯಾಹ್ನ ವಿಶೇಷ ಅನ್ನಸಂತರ್ಪಣೆ, ಭಕ್ತರಿಗೆ ಲಡ್ಡು ಚಕ್ಕುಲಿ ಪ್ರಸಾದ ವಿತರಣೆ ನಡೆಯಿತು.

ಶೀರೂರು ಮಠದೆದುರು ಬನ್ನಂಜೆ ಮಹಿಳಾ ತಂಡ ಪ್ರದರ್ಶಿಸಿದ ದಶಾವತಾರ ಕಾರ್ಯಕ್ರಮ ವಿಶೇಷ ಆಕರ್ಷಣೆಯಾಗಿತ್ತು. ವಿಷ್ಣುದೇವ ಗರುಡನ ಮೇಲೆ ಕುಳಿತು ಹಾರಿ ಬರುವ ದೃಶ್ಯ ಮನಸೂರೆಗೊಂಡಿತು. ರಥೋತ್ಸವ ಕಾರ್ಯಕ್ರಮ ಮುಗಿಯುತ್ತಿದ್ದಂತೇ ಮಳೆಯೂ ಬಿರುಸಾಗಿ ಸುರಿಯಿತು.

ಲೀಲೋತ್ಸವ: ಭಕ್ತರಲ್ಲಿ ಪೊಲೀಸ್ ಮನವಿ

ಉಡುಪಿ: ಉಡುಪಿಯಲ್ಲಿ ಗುರುವಾರ ನಡೆಯುವ ಶ್ರೀಕೃಷ್ಣ ಲೀಲೋತ್ಸವ ಸಂದರ್ಭ ಕಾನೂನು ಸುವ್ಯ ವಸ್ಥೆ ಕಾಪಾಡುವುದಕ್ಕಾಗಿ ಸಾಕಷ್ಟು ಕ್ರಮ ತೆಗೆದುಕೊಳ್ಳಲಾಗಿದೆ. ಆದರೂ ಈ ಉತ್ಸವ ದಲ್ಲಿ ಭಾಗವ ಹಿಸುವ ಭಕ್ತಾಭಿಮಾನಿಗಳು, ಮುಖ್ಯವಾಗಿ ಮಹಿಳೆಯರು ತಮ್ಮ ಚಿನ್ನಾಭರಣಗಳ ಬಗ್ಗೆ ವಿಶೇಷ ಎಚ್ಚರ ವಹಿಸುವಂತೆ ಉಡುಪಿ ನಗರ ಪೊಲೀಸ್ ಠಾಣೆ ಮನವಿ ಮಾಡಿದೆ.

ಬಹಳ ಕಡಿಮೆ ಚಿನ್ನಾಭರಣಗಳನ್ನು ಧರಿಸುವುದು ಉತ್ತಮ. ಧರಿಸಿರುವ ಚಿನ್ನಾಭರಣಗಳು ಹೊರಗೆ ಕಾಣದಂತೆ ಎಚ್ಚರಿಕೆ ವಹಿಸಬೇಕು, ಸೆರಗಿನಿಂದ, ಬಟ್ಟೆಯಿಂದ ಅದನ್ನು ಮುಚ್ಚಿರುವಂತೆ ನೋಡಿಕೊಳ್ಳ ಬೇಕು, ಮಕ್ಕಳಿಗೆ ಚಿನ್ನಾಭರಣಗಳನ್ನು ಹಾಕದೆ, ಜನಜಂಗುಳಿಯಲ್ಲಿ ಮಕ್ಕಳು ಸದಾ ತಮ್ಮೊಂದಿಗೆ ಇರುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಲಾಗಿದೆ.

ರಥಬೀದಿಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಪೊಲೀಸರು ಸಾದಾ ಉಡುಪಿನಲ್ಲಿದ್ದು, ಸರಗಳ್ಳರ ಬಗ್ಗೆ ನಿಗಾ ವಹಿಸುವುದಕ್ಕೆ ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರು ಪೊಲೀಸರೊಂದಿಗೆ ಸಹಕರಿಸ ಬೇಕು, ಶಿಸ್ತು ಸಂಯಮ ಪಾಲಿಸಬೇಕು ಎಂದು ಇಲಾಖೆ ಮನವಿ ಮಾಡಿದೆ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ದುರ್ಗಪ್ರಸಾದ್ ಕೆ.
ವರದಿಗಾರರು : ಪ್ರವೀಣ್ ಪ್ರಭಾಕರ್
ಪ್ರಕಟಿಸಿದ ದಿನಾಂಕ : 2010-09-02 00:00:00

Tell a Friend
ಇತರ ಸಂಭಂದಪಟ್ಟ ವರದಿಗಳು
»ಉಡುಪಿಯ ರಥಬೀದಿಯಲ್ಲಿ ಕಿಕ್ಕಿರಿದ ಜನಸೋಮ್ತದ ನಡುವೆ ಸ೦ಭ್ರಮದ ಶ್ರೀಕ್ರಷ್ಣಲೀಲೋತ್ಸವ....
»ಉಡುಪಿ: ತೊಟ್ಟಿಲಲ್ಲಿ ಬೆಣ್ಣೆ ಮೆದ್ದ ಬಾಲಗೋಪಾಲ: ಶ್ರೀಕೃಷ್ಣ ಜಯಂತಿಗೆ ಸಂಭ್ರಮದ ಚಾಲನೆ { Special Photo feature }
»ಉಡುಪಿ : ಕೃಷ್ಣ ನಗರಿ ಭಕ್ತಿಯಲ್ಲಿ ತಲ್ಲೀನ { Very Special Pics } | ಉಡುಪಿಯಲ್ಲಿಂದು ಶ್ರೀಕೃಷ್ಣ ಲೀಲೋತ್ಸವ, ವಿಟ್ಲಪಿಂಡಿ
»ಉಡುಪಿ: ಸ೦ಭ್ರಮದಿ೦ದ ಜರುಗುತ್ತಿರುವ ಕ್ರಷ್ಣಾಷ್ಟಮಿ :ಮನಸೂರೆಗೊ೦ಡ ಕ್ರಷ್ಣವೇಷ, ಹುಲಿವೇಷಗಳು
»ಉಡುಪಿ : ಇಂದು ನಾಡಿನಾದ್ಯಂತ ಶ್ರೀಕೃಷ್ಣ ಜನ್ಮಾಷ್ಟಮಿಯ ಸಂಬ್ರಮ
»ಉಡುಪಿ: ಇ೦ದು ಕ್ರಷ್ಣ ಜಯ೦ತಿ : ಮಣ್ಣಿನ ಕೃಷ್ಣಗೆ ಅರ್ಚನೆ
»ಉಡುಪಿ:ಶ್ರೀಕ್ರಷ್ಣ ಜಯ೦ತಿ ಮತ್ತು ವಿಟ್ಲಪಿ೦ಡಿ ಉತ್ಸವ : ಭರದಿ೦ದ ಸಾಗುತ್ತಿರುವ ಸಿದ್ದತೆಗಳು
»

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕರಾವಳಿ]

»‘ಭಾರತ್ ಬೀಡಿ’ಯ ಸಂಸ್ಥಾಪಕರ ದಿನಾಚರಣೆ
»ಜಿಲ್ಲೆಯನ್ನು ಮುಜುಗರಕ್ಕೀಡು ಮಾಡಿದ ಪಾಲೆಮಾರ್
»ಬ್ಲೂಫಿಲಂ ಪ್ರಕರಣ: ಕಾಂಗ್ರೆಸ್‌ನಿಂದ ವಿಧಾನಸಭೆ ಶುಚಿತ್ವ!
»ಸದನದಲ್ಲಿ ಬ್ಲೂಫಿಲಂ ವೀಕ್ಷಣೆ ಪ್ರಕರಣ: ನೈತಿಕತೆ ಇದ್ದಲ್ಲಿ ವಜಾಗೊಳಿಸಿ: ಬಿಜೆಪಿಗೆ ಮೊಯ್ಲಿ ಸವಾಲು
»ಸದನದಲ್ಲಿ ಸಚಿವರಿಂದ ಬ್ಲೂ ಫಿಲಂ ವೀಕ್ಷಣೆ ಪ್ರಕರಣ: ಕರಾವಳಿಯಾದ್ಯಂತ ಕಾವು ಪಡೆದ ಪ್ರತಿಭಟನೆ; ಶಾಸಕ ಸ್ಥಾನ ಅನರ್ಹಗೊಳಿಸಿ ಜೈಲಿಗೆ ತಳ್ಳಿ: ಸಿಪಿಎಂ
»ವಿಕಲಚೇತನರ ಕುಟುಂಬಗಳಿಗೆ ಚೈತನ್ಯ ತುಂಬಿದ ಖಾಝಿ ಭೇಟಿ
»ಫೆ.10: ಕೋಮುದೌರ್ಜನ್ಯ ಖಂಡಿಸಿ ಪ್ರತಿಭಟನೆ
»ಸಿಸಿಬಿ ಪೊಲೀಸರಿಂದ ಗುಲಾಂ ಮುಹಮ್ಮದ್ ವಿಚಾರಣೆ: ಬಿಡುಗಡೆ
»13ರಂದು ರಫ್ತುದಾರರ ಸಮಾವೇಶ: ವೀರಪ್ಪ ಮೊಯ್ಲಿ
»ಹೊನ್ನಾವರ ಬಳಿ ಮರಕ್ಕೆ ಕಾರು ಢಿಕ್ಕಿ: ಉಡುಪಿ ಡಿಸಿಐಬಿ ನಿರೀಕ್ಷಕರಿಗೆ ತೀವ್ರ ಗಾಯ
»ಕಾಸರಗೋಡಿನಲ್ಲಿ ಘರ್ಷಣೆ: ಪೊಲೀಸರಿಂದ ಲಾಠಿ ಪ್ರಹಾರ; 200ಮಂದಿಯ ವಿರುದ್ಧ ಪ್ರಕರಣ ದಾಖಲು
»ಸದನದಲ್ಲಿ ಸಚಿವರ ಸೆಕ್ಸ್ ಫಿಲಂ ವೀಕ್ಷಣೆಯ ರದ್ದಾಂತ : ಉಡುಪಿಯಲ್ಲಿ ಎಸ್.ಡಿ.ಪಿ.ಐ ಪ್ರತಿಭಟನೆ
»ಫೆ.10 ರಿಂದ ರಾಷ್ಟ್ರೀಯ ಮಟ್ಟದ ಮ್ಯಾನೇಜ್‌ಮೆಂಟ್ ಉತ್ಸವ
»ಫೆ.25ರಂದು ಭಾರತೀಯ ಮಜ್ದೂರ್ ಸಂಘದ 18ನೇ ತ್ರೈವಾರ್ಷಿಕ ಪ್ರದೇಶ ಅಧಿವೇಶನ
»ಯುಪಿಸಿ‌ಎಲ್ ವಿರುದ್ದ ಹೈಕೋರ್ಟ್ ನಲ್ಲಿ ದಾವೆ ಹೂಡಲು ಸಿದ್ದ : ಪತ್ರಿಕಾಗೋಷ್ಠಿಯಲ್ಲಿ ಜಯಶ್ರೀ ಕೃಷ್ಣ ಶೆಟ್ಟಿ
»ಹೋಟೆಲ್ ಕಿದಿಯೂರಿನ ರಜತ ಸಂಭ್ರಮ : ಪೇಜಾವರ ಶ್ರೀಗಳಿಗೆ ತುಲಾಭಾರ
»ತಣ್ಣೀರುಪಂಥದ ಖತೀಜಮ್ಮ ಕೊಲೆ ಪ್ರಕರಣ: ಮೂವರ ಬಂಧನ
»ಏತಡ್ಕ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದ ಆರಂಭೋತ್ಸವ
»ರೇವ್ ಪಾರ್ಟಿ ಕುರಿತು ಗ್ರಾ.ಪಂ.ಗೆ ಗೊತ್ತೇ ಇಲ್ಲ! ಇನ್ನೊಂದು ವಿವಾದದತ್ತ ಜಿಲ್ಲಾಡಳಿತ
»ವಿಧಾನಸಭೆಯಲ್ಲಿ ಸಚಿವರಿಂದ ಬ್ಲೂಫಿಲಂ ವೀಕ್ಷಣೆ: ರಾಜ್ಯಾದ್ಯಂತ ಪ್ರತಿಭಟನೆ
»ಸದನದಲ್ಲಿ ಸಚಿವತ್ರಯರ ‘ಕಾಮಹರಣ’ : ರಾಜ್ಯದಾದ್ಯಂತ ಆಕ್ರೋಶ : ಉಡುಪಿಯಲ್ಲಿ ನಾಗರೀಕರ ಸಮಿತಿಯ ವಿಶಿಷ್ಟ ಪ್ರತಿಭಟನೆ
»ಶ್ರೀ ಅಶೋಕ್ ಸಿಂಘಾಲ್ ಅವರಿಗೆ ಗೌರವಪೂರ್ವಕ ಸ್ವಾಗತ
»ಮಂಗಳೂರು: ಕ್ರೈಸ್ತ ಸಂಘಟನೆ ಮೇಲೆ ತೆರಿಗೆ ವಂಚನೆ ಆರೋಪ
»ವಿಧಾನಸಭೆಯಲ್ಲಿ ಸಚಿವರಿಂದ ಬ್ಲೂಫಿಲಂ ವೀಕ್ಷಣೆ; ಶಾಸಕ ಸ್ಥಾನ ಅನರ್ಹಗೊಳಿಸಿ ಜೈಲಿಗೆ ತಳ್ಳಿ: ಸಿಪಿಎಂ
»ರೇವ್ ಪಾರ್ಟಿ: ಗ್ರಾಪಂಗೆ ಮಾಹಿತಿಯೇ ಇಲ್ಲ!...
»ಪಚ್ಚನಾಡಿ ಡಂಪಿಂಗ್ ಯಾರ್ಡ್‌ನಲ್ಲಿ ಬೆಂಕಿ: ಎರಡು ದಿನಗಳಿಂದ ಹೊಗೆಯಲ್ಲಿ ದಿನಗಳೆದ ಸ್ಥಳೀಯರು
»ಮಂಗಳೂರು: ಗೋದ್ರೆಜ್ ಅಲ್‌ಪೈನ್‌ಗೆ ಚಾಲನೆ
»ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಎಫ್‌ಐಆರ್: ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದಿಂದ ಪ್ರತಿಭಟನೆ
»ಉಳ್ಳಾಲ ಪುರಸಭೆಗೆ ಸ್ಪೆಷಲ್ ರೆಕೊಗ್ನಿಷನ್ ಅವಾರ್ಡ್-2012
»ನಾಪತ್ತೆಯಾಗಿದ್ದ ವ್ಯಕ್ತಿಯ ಅಸ್ಥಿಪಂಜರ ಪತ್ತೆ
»ಸೈಂಟ್ ಮೇರಿಸ್ ದ್ವೀಪದಲ್ಲಿ ನಡೆದ ನಂಗ ನಾಚಿಗೆ ಮುಖ್ಯಮಂತ್ರಿ ಸಮರ್ಥನೆ : ಸಿ.ಎಮ್. ರಾಜಿನಾಮೆಗೆ ಜನಾರ್ಧನ್ ಪೂಜಾರಿ ಆಗ್ರಹ
»ರೇವ್ ಪಾರ್ಟಿ ಪಶು ಸಂಸ್ಕೃತಿಯ ಪ್ರತೀಕ : ಅಶೋಕ್ ಸಿಂಘಾಲ್ ಖಂಡನೆ | ರಾಜ್ಯ ಸರ್ಕಾರಕ್ಕೆ ತೀವ್ರ ಮುಜುಗರ
»ಮಲ್ಪೆ ರೇವ್ ಪಾರ್ಟಿ ಪ್ರಕರಣ : ಜೆಡಿ‌ಎಸ್ ವಿನೂತನ ಪ್ರತಿಭಟನೆ
»ರೇವ್ ಪಾರ್ಟಿಯಿಂದ ಪವಿತ್ರ ಕ್ಷೇತ್ರ ಅಪವಿತ್ರ: ಇಂತಹ ವಿಕೃತಿ ಎಲ್ಲಿಯೂ ನಡೆಯಬಾರದು : ಪೇಜಾವರ ಶ್ರೀ ಪ್ರತಿಕ್ರೀಯೆ
»ಕಿದಿಯೂರ್ ಹೋಟೆಲ್ ನ ನೂತನ ಶಿಲಾದೇಗುಲದಲ್ಲಿ ನಾಗದೇವರ ಪುನ:ಪ್ರತಿಷ್ಠೆ : ವಿಶೇಷ ಪೂಜಿತ ನಾಗರಕ್ಷಾದಾರ ಧಾರಣೆ
»ಅಖಿಲ ಭಾರತ ಬಿಲ್ಲವರ ಯೂನಿಯನ್ ಗೆ 100ರ ಸಂಭ್ರಮ:ಫೆ.12ರಂದು ಮುಖ್ಯಮಂತ್ರಿಗಳಿಂದ ಚಾಲನೆ
»ಸ್ಟ್ರಿಂಗ್ ಝೂಕ್ ನಲ್ಲಿ ಅತಿರೇಕವಾಗಿದ್ದರೆ ಕರ್ತವ್ಯದಲ್ಲಿದ್ದವರಿಂದ ವರದಿ ಕಡ್ಡಾಯ: ಜಿಲ್ಲಾಧಿಕಾರಿ ಡಾ.ಎಂ.ಟಿ.ರೇಜು
»ಹೋಟೆಲ್ ಕಿದಿಯೂರ್ ರಜತ ಮಹೋತ್ಸವ ಉದ್ಘಾಟನೆ
»ಭಟ್ಕಳ: ಮಾವಿನಕಟ್ಟೆ ಬಳಿ ಭೀಕರ ಅಪಘಾತ; ಕೇರಳದ ಇಬ್ಬರ ದುರ್ಮರಣ
»ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಕೋಮು ಕಾಯ್ದೆ ವಿರುದ್ಧ ರಾಷ್ಟ್ರಾದ್ಯಂತ ಹೋರಾಟ: ಸಿಂಘಾಲ್‌
»ಮೂಡಬಿದಿರೆ ಪುರಸಭೆಗೆ ’ವರ್ಲ್ಡ್ ವಾಟರ್‌ ಅವಾರ್ಡ್‌’
»ಪೆರುಂಬಳ ದುರಂತ: ಒಂದೇ ಕುಟುಂಬದ ಇಬ್ಬರು ವಿದ್ಯಾರ್ಥಿಗಳ ಸಾವು
»ಬಿ.ಸಿ.ರೋಡ್: ಪೈಪ್‌ಲೈನ್ ಒಡೆದು ಪೋಲಾಗುತ್ತಿರುವ ನೀರು
»ಬೆಂಡರವಾಡಿಗೆ ‘ಪನ್ನಾಭ ಪುರಸ್ಕಾರ’
»ಬ್ಯಾರಿ ಅಕಾಡಮಿಯ ನೂತನ ಅಧ್ಯಕ್ಷರ ಪದಗ್ರಹಣ
»ಫೆ.11-12: ಮಂಗಳೂರು ಧರ್ಮ ಪ್ರಾಂತ್ಯದ ಶತಮಾನೋತ್ತರ ಬೆಳ್ಳಿ ಹಬ್ಬ
»‘ಅಲ್‌ಪೈನ್ ಅಸೋಸಿಯೇಟ್ಸ್’ಗೆ ನಾಲ್ಕನೆ ವರ್ಷದ ಸಂಭ್ರಮ: ಆಯುರ್ವೇದ-ಯುನಾನಿ ಔಷಧಿಗಳು, ತಜ್ಞರಿಂದ ಚಿಕಿತ್ಸೆ
»ಪುತ್ತೂರು: ಯಕ್ಷಗಾನ ಬಯಲಾಟ ಸಪ್ತಾಹ ಉದ್ಘಾಟನೆ
»ವಿರೋಧದ ನಡುವೆಯೂ ಸೂಲಿಬೆಲೆ ಭಾಷಣ...
»ಹೋಟೆಲ್ ಕಿದಿಯೂರ್ ರಜತ ಸಂಭ್ರಮ: ಅಷ್ಟಪವಿತ್ರ ನಾಗಮಂಡಲೋತ್ಸವಕ್ಕೆ ಬೃಹತ್ ಹೊರಕಾಣಿಕೆ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri