ಪಾಟ್ನಾ : ಒತ್ತೆಯಾಳು ಪ್ರಕರಣ: ಒಬ್ಬ ಅಧಿಕಾರಿಯನ್ನು ಬಲಿ ತೆಗೆದುಕೊಂಡ ನಕ್ಸಲರು |
ಪ್ರಕಟಿಸಿದ ದಿನಾಂಕ : 2010-09-02
ಪಾಟ್ನಾ: ತಮ್ಮ ಸಹಚರರನ್ನು ಬಿಡುಗಡೆಗೊಳಿಸುವಂತೆ ಆಗ್ರಹಿಸಿ ತಮ್ಮಲ್ಲಿ ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದ ನಾಲ್ವರು ಪೊಲೀಸರಲ್ಲಿ ಒಬ್ಬ ಪೊಲೀಸ್ ಅಧಿಕಾರಿಯನ್ನು ಇಂದು ನಕ್ಸಲರು ಹತ್ಯೆ ಗೈದಿದ್ದಾರೆ. ಅತ್ತ ನವದೆಹಲಿಯಲ್ಲಿ ಕೇಂದ್ರ ಗೃಹ ಕಾರ್ಯದರ್ಶಿ ಪಿಳ್ಳೈ ಬಿಹಾರ ಸರ್ಕಾರ ಒತ್ತೆಯಾ ಳುಗಳ ಸುರಕ್ಷಿತ ಬಿಡುಗಡೆಗಾಗಿ ಸಂಧಾನ ಮಾತುಕತೆ ನಡೆಸುತ್ತಿದೆ ಎಂದು ಹೇಳಿಕೆ ಇತ್ತ ಕೆಲವೇ ಗಂಟೆಗಳಲ್ಲಿ ಈ ಸ್ಫೋಟಕ ಮಾಹಿತಿ ಬಹಿರಂಗಗೊಂಡಿದೆ.
ತಮ್ಮ ಸಹಚರರನ್ನು ಬಿಡುಗಡೆಗೊಳಿಸುವಂತೆ ನಕ್ಸಲರು ನೀಡಿದ್ದ ಗಡುವು ನಿನ್ನೆ ಸಂಜೆ ನಾಲ್ಕು ಗಂಟೆಗೆ ಮುಕ್ತಾಯವಾದ ಕಾರಣ, ಅವರು ಈ ನಿರ್ಧಾರ ಕೈಗೊಂಡಿದ್ದಾರೆ. ಅಲ್ಲದೇ, ಉಳಿದ ಮೂವ ರು ಒತ್ತೆಯಾಳುಗಳನ್ನು ತಮ್ಮಲ್ಲೇ ಇಟ್ಟುಕೊಂಡಿರುವ ನಕ್ಸಲರು ಗಡುವಿನ ಕಾಲಾವಧಿಯನ್ನು ಹೆಚ್ಚಿಸಿ ದ್ದಾರೆ ಎಂದು ಬಿಹಾರ ಪೊಲೀಸ್‌ನ ಗುಪ್ತಚರ ವಿಭಾಗದ ವರದಿಗಳು ತಿಳಿಸಿವೆ.
ಇಂದು ಪಾಟ್ನಾದ ಕೆಲ ಸ್ಥಳೀಯ ಮಾಧ್ಯಮಗಳ ಕಚೇರಿಗೆ ಮಾವೋವಾದಿಗಳ ತಂಡದ ಅವಿನಾಶ್ ಎಂಬವನೊಬ್ಬ ಕರೆ ಮಾಡಿ, ತಮ್ಮಲ್ಲಿ ಒತ್ತೆಯಾಳಾಗಿದ್ದ ಅಭಯ್ ಯಾದವ್ ಎಂಬ ಪೊಲೀಸ್ ಅಧಿ ಕಾರಿಗಳನ್ನು ನಕ್ಸಲರು ಕೊಂದುಹಾಕಿರುವ ಮಾಹಿತಿ ತಿಳಿಸಿದ್ದಾನೆ.
ಮೂಲಗಳ ಪ್ರಕಾರ, ಯಾದವ್‌ರವರ ಶವವನ್ನು ಇಂದು ರಾತ್ರಿ ಎಂಟು ಗಂಟೆ ಸುಮಾರಿಗೆ ಸರ್ಕಾರಿ ಅಧಿಕಾರಿಗಳಿಗೆ ತಲುಪಿಸಲಿದ್ದಾರೆ ಎಂದು ಅವಿನಾಶ್ ತಿಳಿಸಿದ್ದಾನೆ. ಅಲ್ಲದೇ, ನಕ್ಸಲರು ತಮ್ಮ ಬೇಡಿಕೆ ಗಳ ಈಡೇರಿಕೆಗಾಗಿ ಉಳಿದ ಮೂವರು ಒತ್ತೆಯಾಳುಗಳನ್ನು ತಮ್ಮಲ್ಲೇ ಇರಿಸಿಕೊಂಡಿರುವುದಲ್ಲದೇ, ಗಡುವನ್ನು ನಾಳೆ(ಸೆಪ್ಟಂಬರ್ ೩) ಬೆಳಿಗ್ಗೆ ೧೦ವರೆಗೂ ವಿಸ್ತರಿಸಿದ್ದಾರೆ.
ನಿತೀಶ್ ಕುಮಾರ್ ಗರಂ: ಯಾದವ್‌ರವರ ಹತ್ಯೆಯ ಸುದ್ದಿ ತಿಳಿಯುತ್ತಲೇ ನಕ್ಸಲರ ವರ್ತನೆಯ ಬಗ್ಗೆ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಕಿಡಿಕಾರಿದ್ದಾರೆ. ಅಲ್ಲದೇ, 'ಪೊಲೀಸರಿಗೂ ಮಾನ ವ ಹಕ್ಕುಗಳು ಅನ್ವಯಿಸುತ್ತವೆ. ನಾವು(ಸರ್ಕಾರ) ನಕ್ಸಲರೊಂದಿಗೆ ಮಾತುಕತೆ ನಡೆಸಲು ಸಿದ್ಧವಿದೆ. ನಕ್ಸಲರಲ್ಲಿ ಯಾರೊಬ್ಬರಾದರೂ ಮಾತುಕತೆಗೆ ಮುಂದೆ ಬಂದರೆ, ಅವರೊಂದಿಗೆ ಸರ್ಕಾರ ಮಾತು ಕತೆ ನಡೆಸಲಿದೆ. ಅಲ್ಲದೇ, ಮಾತುಕತೆಗೆ ಬರುವ ಯಾವುದೇ ನಕ್ಸಲರ ವಿರುದ್ಧ ಯಾವುದೇ ಪೊಲೀಸ್ ಕಾರ್ಯಾಚರಣೆ ನಡೆಸುವುದಿಲ್ಲ' ಎಂದು ಆಶ್ವಾಸನೆ ನೀಡಿದ್ದಾರೆ.
ವರದಿಯ ವಿವರಗಳು |
 |
ಕೃಪೆ : ಕನ್ನಡಪ್ರಭ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-09-02 00:00:00
|
|
|