| ಸಿದ್ದರಾಮಯ್ಯನಂತಹ ರಾಜಕಾರಣಿಗೆ ಇಂತಹ ಮಾತುಗಳು ಶೋಭೆ ತರುವಂತದ್ದಲ್ಲ. ದಲಿತ ನಾಯಕನಿರಬಹುದು. ಆದರೆ ತಾನು ತಿನ್ನುವುದನ್ನು ಸಮರ್ಥಿಸಿಕೊಳ್ಳುವವನು ನಾಳೆ ಮುಖ್ಯಮಂತ್ರಿಯಾದರೆ ಬಹುಸಂಖ್ಯಾತರ ಭಾವನೆಗಳಿಗೆ ಹೇಗೆ ಬೆಲೆ ಕೊಡಬಲ್ಲ?. ಸಿದ್ದರಾಮಯ್ಯ ಒಬ್ಬ ನಾಸ್ತಿಕ. ಅಂದ ಮಾತ್ರಕ್ಕೆ ಬೇರೊಬ್ಬರ ಧಾರ್ಮಿಕ ಮನೋಭಾವನೆಗೆ ಘಾಸಿ ತರುವಂತಹ ಹೇಳಿಕೆ ನೀಡುವುದು ಸರಿಯಲ್ಲ. ಇದೇ ನಾಸ್ತಿಕ ಚಾಮುಂಡೇಶ್ವರಿ ವಿಧಾನ ಸಭಾ ಕ್ಷೇತ್ರದಲ್ಲಿ ಚುನಾವಣೆಗೆ ನಿಂತಾಗ ತನ್ನ ರಾಜಕೀಯ ಭವಿಷ್ಯವನ್ನೇ ಪಣಕ್ಕಿಟ್ಟು ಮಾಡು ಇಲ್ಲವೇ ಮಡಿ ಹೋರಾಟವಿದ್ದಾಗ, ದೇವೇಗೌಡರ ಕುಟುಂಬ ಸಿದ್ದರಾಮಯ್ಯ ನನ್ನು ಮಕ್ಕಡೆ ಮಲಗಿಸಲು ಇಲ್ಲದ ಭಗೀರಥ ಪ್ರಯತ್ನ ಮಾಡಿತ್ತು. ಜೊತೆಗೆ ಬಿಜೆಪಿ ತನ್ನ ಸ್ಪರ್ಧಿಯನ್ನು ಕಣಕ್ಕಿರಿಸಿರಲಿಲ್ಲ. ಇಂತಹ ದುಸ್ಥಿತಿಯಲ್ಲಿ ಸಿದ್ದರಾಮಯ್ಯ ಶರಣಾದದ್ದು ಮಠಮಂದಿರಗಳಿಗೆ. ಮಠಾಧಿಪತಿಗಳ ಕೈಕಾಲು ಹಿಡಿದು ಹೇಗೋ ಚುಣಾವಣೆ ಗೆದ್ದುಬಂದರು. ಆದರೆ ಈಗ ಗೋಮಾಂಸ ತಿನ್ನುತ್ತೇನೆ ಏನುತಪ್ಪು ಎನ್ನುತ್ತಿದ್ದಾರೆ. ಈ ಹೇಳಿಕೆ ಕೇವಲ ಮಾಧ್ಯಮದವರ ಎದುರು ಮಾತ್ರ ಏಕೆ ಹೇಳುವುದು..? ಸಾರ್ವಜನಿಕವಾಗಿ ಹೇಳಲಿ. ಎಷ್ಟು ಓಟು ಬೀಳುತ್ತದೆ ನೋಡೋಣ. ಕಡೂರಿನಲ್ಲಿ ವೀರಶೈವ, ಒಕ್ಕಲಿಗ ಮತ್ತು ಕುರುಬರ ಮತಗಳು ಹೆಚ್ಚಿರುವುದರಿಂದ, ಒಂದು ವೇಳೆ ಅಂತಹ ಹೇಳಿಕೆ ಬಹಿರಂಗವಾಗಿ ಕೊಟ್ಟಲ್ಲಿ ಒಕ್ಕಲಿಗರು ಮತ್ತು ವೀರಶೈವರು ಒಂದಾಗಿ ಕಾಂಗ್ರೆಸ್ಸ್ ಗೆ ಸರಿಯಾದ ಪಾಠ ಕಲಿಸುತ್ತಾರೆ. ಇಲ್ಲದಿದ್ದರೆ ಬಿಜೆಪಿ ಗೋಹತ್ಯೆ ನಿಷೇಧ ಜಾರಿಗೆ ತಂದರೆ ,ಕಾಂಗ್ರೆಸ್ಸ್ ಗೆ ಅಧಿಕಾರ ಸಿಕ್ಕಾಗ ಆ ನಿಷೇಧವನ್ನು ವಾಪಾಸ್ಸು ತೆಗೆಯುತ್ತೇವೆ ಎಂದು ಹೇಳಲಿ ನೋಡೋಣ. ಅವರಿಗೂ ಗೊತ್ತಿದೆ. ಒಂದು ವೇಳೆ ಗೋಹತ್ಯೆ ನಿಷೇಧ ಜಾರಿಗೆ ಬಂದದ್ದೆ ಆದಲ್ಲಿ ಈ ಜನ್ಮದಲ್ಲಿ ಅದನ್ನು ಹಿಂತೆಗೆದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ ಎಂದು. ಏಕೆಂದರೆ ಈ ಹಿಂದೆ ಯಡಿಯೂರಪ್ಪ ಲಾಟರಿ ನಿಷೇಧ, ವೀಡಿಯೊ ಗೇಮ್ ನಿಷೇಧ, ಸೂಪರ್ ಲೊಟ್ಟೋ ನಿಷೇಧ, ಲೈವ್ ಬ್ಯಾಂಡ್ ನಿಷೇಧ, ಅಷ್ಟೇ ಏಕೆ ಸಾರಾಯಿ ನಿಷೇಧ ಮಾಡಿದಾಗಲೂ ಕಾಂಗ್ರೆಸ್ಸ್ ಒಂದಲ್ಲ ಒಂದು ರೀತಿಯಲ್ಲಿ ತಗಾದೆ ತೆಗೆದೇ ಇತ್ತು. ಈ ಎಲ್ಲಾ ನಿಷೇಧಗಳು ಕಾಂಗ್ರೆಸ್ಸ್ ಸರಕಾರ ಇದ್ದಾಗ ಏಕೆ ಸಾಧ್ಯವಾಗಲಿಲ್ಲ?ಇದು ಯಾವುದೂ ಸಮಾಜವಿರೋಧಿಯಾಗಿರಲಿಲ್ಲವೇ......? ಯಾಕೆಂದರೆ ಆಗ ಕಾಂಗ್ರೆಸ್ಸ್ ನ "ನಾವು ದುಡ್ಡು ಮಾಡುತ್ತೇವೆ.ನೀವು ದುಡ್ಡು ಮಾಡಿಕೊಳ್ಳಿ."ಪದ್ಧತಿ ಜಾರಿಯಲ್ಲಿತ್ತು. ಒಂದಂಕಿ ಲಾಟರಿ, ವೀಡಿಯೊ ಗೇಮ್, ಸಾರಾಯಿ, ಲೈವ್ ಬ್ಯಾಂಡ್ ಗಳಿಂದ ಮಕ್ಕಳಿಂದ ಹಿಡಿದು ಯವಕರು, ಮುದುಕರು ಎಲ್ಲರೂ ವ್ಯಸನಿಗಳಾಗಿದ್ದರು. ಕರ್ನಾಟಕದ ಹೆಣ್ಣುಮಕ್ಕಳ ಕಣ್ಣೀರ ಶಾಪವೇ ಕಾಂಗ್ರೆಸ್ಸ್ ಗೆ ಈ ದುಸ್ಥಿತಿ ಬರಲು ಕಾರಣ. ಅಷ್ಟೇ ಅಲ್ಲದೇ, ಕಾಂಗ್ರೆಸ್ಸ್ ನ ಕೋಡಂಗಿ ರಾಜಕಾರಣಿ ಜನಾರ್ಧನ ಪೂಜಾರಿ ಇನ್ನು ಒಂದು ಹೆಜ್ಜೆ ಮುಂದು ಹೋಗಿ ಕಾಂಗ್ರೆಸ್ಸ್ ಗೆ ಅಧಿಕಾರ ಬಂದರೆ ಸಾರಾಯಿ ನಿಷೇಧ ಹಿಂತೆಗೆಯುವುವುದಾಗಿ ಹೇಳಿಕೆ ಭಟ್ಕಳದಲ್ಲಿ ಹೇಳಿಕೆ ನೀಡಿ, ಅಲ್ಲಿಯ ಹೆಣ್ಣು ಮಕ್ಕಳಿಂದ ಮಹಾಮಂಗಳಾರತಿ ಮಾಡಿಸಿ ಕೊಂಡದ್ದಲ್ಲದೆ, ಭಟ್ಕಳದ ಕಾಂಗ್ರೆಸ್ಸ್ ಅಭ್ಯರ್ಥಿ ಸೋಲುವ ಹಾಗೆ ಮಾಡಿದರು. ಈಗ ಯಡಿಯೂರಪ್ಪ ನಿಷೇಧ ಮಾಡಲು ಹೊರಟಿರುವುದು ನಾಡಿನ ಲಕ್ಷಾಂತರ ಅನಾಥ ಮಕ್ಕಳ ಪಾಲಿಗೆ ತಾಯಿ ಎದೆಹಾಲಿಗೆ ಪರ್ಯಾಯವಾಗಿ ದೇವರು ಸೃಷ್ಟಿಸಿದ,ಸಮುದ್ರಮಥನದಲ್ಲಿ ಕಲ್ಪವೃಕ್ಷದೊಂದಿಗೆ ಸೃಷ್ಟಿಯಾದ ಕಾಮಧೇನುವಿನ ಹತ್ಯೆಯನ್ನು ವೈಜ್ಞಾನಿಕವಾಗಿ ನೋಡಿದರೂ, ಅಥವಾ ಧಾರ್ಮಿಕತೆಯಿಂದ ನೋಡಿದರೂ ಗೋಹತ್ಯೆ ನಿಷೇಧ ಸಮರ್ಪಕವಾಗೆ ಇದೆ. ಮನುಷ್ಯತ್ವ ಇಲ್ಲದ ಕಾಡು ಪ್ರಾಣಿಗಳಿಗೆ ಇದೆಲ್ಲ ಅರ್ಥವಾಗುವುದಿಲ್ಲ. |