ಗುರುವಾರ, 09-02-2012
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಹೊನ್ನಾವರ ಬಳಿ ಮರಕ್ಕೆ ಕಾರು ಢಿಕ್ಕಿ: ಉಡುಪಿ ಡಿಸಿಐಬಿ ನಿರೀಕ್ಷಕರಿಗೆ ತೀವ್ರ ಗಾಯ
Latest news item ಜಿಲ್ಲೆಯನ್ನು ಮುಜುಗರಕ್ಕೀಡು ಮಾಡಿದ ಪಾಲೆಮಾರ್ ; ಯಾಕಿಂಥ ಕೆಲಸ ಮಾಡಿದರು? | ಬಿಜೆಪಿಯ ಹಗರಣಗಳು ಮತ್ತು ಕಳಂಕಿತ ಮಿನಿಸ್ಟರುಗಳು | ವಾಜಪೇಯಿ, ಅಡ್ವಾಣಿ ಬೆಳೆಸಿದ ಪಕ್ಷ ಇದೇನಾ?
Latest news item ಯು. ಎ. ಇ. ಬಂಟ್ಸ್ ಡೈರೆಕ್ಟರಿ - 2012 | UAE BUNTS DIRECTORY -2012
Latest news item ಸದನದಲ್ಲಿ ಸಚಿವರ ಸೆಕ್ಸ್ ಫಿಲಂ ವೀಕ್ಷಣೆಯ ರದ್ದಾಂತ : ಉಡುಪಿಯಲ್ಲಿ ಎಸ್.ಡಿ.ಪಿ.ಐ ಪ್ರತಿಭಟನೆ
Latest news item ಯುಪಿಸಿ‌ಎಲ್ ವಿರುದ್ದ ಹೈಕೋರ್ಟ್ ನಲ್ಲಿ ದಾವೆ ಹೂಡಲು ಸಿದ್ದ : ಪತ್ರಿಕಾಗೋಷ್ಠಿಯಲ್ಲಿ ಜಯಶ್ರೀ ಕೃಷ್ಣ ಶೆಟ್ಟಿ
Latest news item ಹೋಟೆಲ್ ಕಿದಿಯೂರಿನ ರಜತ ಸಂಭ್ರಮ : ಪೇಜಾವರ ಶ್ರೀಗಳಿಗೆ ತುಲಾಭಾರ
Latest news item ರೇವ್ ಪಾರ್ಟಿ ಕುರಿತು ಗ್ರಾ.ಪಂ.ಗೆ ಗೊತ್ತೇ ಇಲ್ಲ! ಇನ್ನೊಂದು ವಿವಾದದತ್ತ ಜಿಲ್ಲಾಡಳಿತ
Latest news item ಸದನದಲ್ಲಿ ಸಚಿವತ್ರಯರ ‘ಕಾಮಹರಣ’ : ರಾಜ್ಯದಾದ್ಯಂತ ಆಕ್ರೋಶ : ಉಡುಪಿಯಲ್ಲಿ ನಾಗರೀಕರ ಸಮಿತಿಯ ವಿಶಿಷ್ಟ ಪ್ರತಿಭಟನೆ
Latest news item ಮಲೆನಾಡಿನ ಕವಿ, ಉಪ್ಪುಕಡಲಿನ ರವಿ- ಪ್ರೊ.ಎಸ್.ವಿ.ಪರಮೇಶ್ವರ ಭಟ್ಟರು
Latest news item ದುಬೈ:ಕೆ.ಎಮ್.ಡಬ್ಲು.ಎ ವತಿಯಿಂದ ಕ್ರಿಕೆಟ್ ಟೂರ್ನಮೆಂಟ್
Latest news item ಸದನದಲ್ಲಿ ಮೊಬೈಲ್ ಫೋನ್‌ ಅಶ್ಲೀಲ ದೃಶ್ಯಗಳನ್ನು ವೀಕ್ಷಿಸಿದ ಸಚಿವರುಗಳ ತಲೆದಂಡ: ಸವದಿ, ಸಿಸಿ, ಮತ್ತು ಪಾಲೇಮಾರ್‌ ಮಂತ್ರಿ ಸ್ಥಾನಕ್ಕೆ ರಾಜಿನಾಮೆ
Latest news item SHAME ON YOU! ..ಇದು ಸರೀನಾ?...ವಿಧಾನಸಭೆಯಲ್ಲೇ ಸೆಕ್ಸ್ ಫಿಲ್ಮ್ ವೀಕ್ಷಿಸಿದ ಸಚಿವ ಸವದಿ!; ರಾಜ್ಯಾದ್ಯಂತ ತೀವ್ರ ಆಕ್ರೋಶ | ಅವರ ಜತೆ ಅಶ್ಲೀಲಚಿತ್ರ ಹಂಚಿಕೊಂಡ ಸಚಿವರು ಯಾರ್ಯಾರು? ರಾಜ್ಯ ಸರ್ಕಾರಕ್ಕೆ ಮತ್ತೊಂದು ಮುಜುಗರ!!
Latest news item ಕಲಾಪದಲ್ಲೂ ಪ್ರತಿಧ್ವನಿಸಿದ 'ಮಲ್ಪೆ ಸೈಂಟ್ ಮೇರಿಸ್ ಕಾಮಕೇಳಿ ಪ್ರಕರಣ'; ತನಿಖೆ ಆದೇಶಿಸಿದ ಸಿ.ಎಮ್
Latest news item ರೇವ್ ಪಾರ್ಟಿ ಪಶು ಸಂಸ್ಕೃತಿಯ ಪ್ರತೀಕ : ಅಶೋಕ್ ಸಿಂಘಾಲ್ ಖಂಡನೆ | ರಾಜ್ಯ ಸರ್ಕಾರಕ್ಕೆ ತೀವ್ರ ಮುಜುಗರ
Latest news item ಮಲ್ಪೆ ರೇವ್ ಪಾರ್ಟಿ ಪ್ರಕರಣ : ಜೆಡಿ‌ಎಸ್ ವಿನೂತನ ಪ್ರತಿಭಟನೆ
Latest news item ರೇವ್ ಪಾರ್ಟಿಯಿಂದ ಪವಿತ್ರ ಕ್ಷೇತ್ರ ಅಪವಿತ್ರ: ಇಂತಹ ವಿಕೃತಿ ಎಲ್ಲಿಯೂ ನಡೆಯಬಾರದು : ಪೇಜಾವರ ಶ್ರೀ ಪ್ರತಿಕ್ರೀಯೆ
Latest news item ಕಿದಿಯೂರ್ ಹೋಟೆಲ್ ನ ನೂತನ ಶಿಲಾದೇಗುಲದಲ್ಲಿ ನಾಗದೇವರ ಪುನ:ಪ್ರತಿಷ್ಠೆ : ವಿಶೇಷ ಪೂಜಿತ ನಾಗರಕ್ಷಾದಾರ ಧಾರಣೆ
Latest news item ದುಬಾಯಿಯಲ್ಲಿ ವರ್ಣರಂಜಿತ ಯಕ್ಷಲೋಕ ಸೃಷ್ಟಿಸಿದ ಯಕ್ಷಮಿತ್ರರ ಯಕ್ಷಗಾನ ವೈಭವ ’ಶಾಂಭವಿ ವಿಜಯ’
Latest news item ಶಾರ್ಜಾ ಕರ್ನಾಟಕ ಸಂಘ ವಾರ್ಷಿಕೋತ್ಸವ: ವಿನಯ್ ಆಡಿಗ ಆಶಾ ಫೆರ್ನಾಂಡಿಸ್- 'ಮಯೂರ 'ರಾಜ' 'ರಾಣಿ'; ಶೋಧನ್ ಪ್ರಸಾದ್ ರವರಿಗೆ ಪ್ರತಿಷ್ಟಿತ ’ಮಯೂರ’ ಪ್ರಶಸ್ತಿ ಪ್ರಧಾನ| ಮುಖ್ಯ ಅತಿಥಿ ಕರ್ನಾಟಕ ಲೋಕಾಯುಕ್ತ ಮಾನ್ಯ ಎನ್. ಸಂತೋಷ್ ಹೆಗ್ಡೆ ಯವರಿಂದ ಮೆಚ್ಚುಗೆ
Latest news item ಯು.ಎ.ಇ. ಬಂಟರ 37 ನೇ ಸ್ನೇಹಮಿಲನ: ಜಾನಪದ ಕಲಾ ವೈಭವ... ಡಾ. ಬಿ ಆರ್. ಶೆಟ್ಟಿಯವರಿಂದ ಉದ್ಘಾಟನೆ
Latest news item ಧ್ವನಿ ಪ್ರತಿಷ್ಠಾನ ಯು.ಎ.ಇ. ಯು ಬೆಳ್ಳಿ ಹಬ್ಬ: ವಿಜ್ರಂಭಣೆಯಿ೦ದ ಜರುಗಿದ ಯು.ಎ.ಇ. ಪ್ರಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನ; ಪ್ರಶಸ್ತಿ ಪ್ರದಾನ ಸಮಾರಂಭ
Latest news item ದುಬಾಯಿ ಸರ್ಕಾರದಿಂದ ಸನ್ಮಾನಿತರಾದ ಕರ್ನಾಟಕದ ಗೃಹ ಮತ್ತು ಸಾರಿಗೆ ಸಚಿವರಾದ ಮಾನ್ಯ ಆರ್. ಆಶೋಕ್ ರವರಿಗೆ ದುಬಾಯಿಯಲ್ಲಿ ಕನ್ನಡಿಗರಿಂದ ಅಭಿನಂದನಾ ಸಮಾರಂಭ; ಮಾನ್ಯ ಸಚಿವ ವರಿಂದ ಅನಿವಾಸಿ ಕನ್ನಡಿಗರ ಅಭಿಮಾನಕ್ಕೆ ಮೆಚ್ಚುಗೆ.( Updated )
Latest news item ಮೋಗವೀರ್ಸ್ ಯು.ಎ.ಇ. ಆಶ್ರಯದಲ್ಲಿ ದುಬಾಯಿಯಲ್ಲಿ ಭಕ್ತಿ ಶ್ರದ್ಧೆಯಿಂದ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ
Latest news item ವಿಜ್ರಂಭಣೆಯಿಂದ ಜರುಗಿದ 'ಬಂಟ್ಸ್ ಬಹ್ರೈನ್'ನ ಸಾಂಸ್ಕೃತಿಕ ಕಾರ್ಯಕ್ರಮ: ಶ್ರೀ ಶ್ರೀ ಶ್ರೀ ಒಡಿಯೂರು ಗುರುದೇವಾನಂದ ಸ್ವಾಮೀಜಿಯವರ ಐತಿಹಾಸಿಕ ಭೇಟಿ: ಭಾವಪರವಶರಾದ ಭಕ್ತ ಸಮೂಹ: ಭಕ್ತಿ ಸಂಗೀತದ ಧಾರೆ ಹರಿಸಿದ ನಾಡಿನ ಖ್ಯಾತ ಗಾಯಕ ರವೀಂದ್ರ ಪ್ರಭು.
Latest news item ಸ್ವಾರ್ಥವಿಲ್ಲದ 'ಸಾರ್ಥ' ದ ಅಪೂರ್ವ ಕಾರ್ಯಕ್ರಮ ನಮನ ; ಕನ್ನಡದ ಮಣ್ಣಿಗೆ ದ್ವೀಪದಲ್ಲಿ ನಿಜ ನಮನ; ಸಂಗೀತ ಸುಧೆ ಹರಿಸಿದ ಗಾಯಕಿ ಸಂಗೀತ ಕಟ್ಟಿ ಹಾಗು ತಂಡ; ಖ್ಯಾತ ನಿರ್ದೇಶಕ ನಾಗತಿ ಹಳ್ಳಿ ಚಂದ್ರಶೇಖರ್ ರವರಿಂದ ಸ್ಫೂರ್ತಿಯ ಮಾತುಗಳು.



 

 
ಕೇಸರಿ ಭಯೋತ್ಪಾದನೆ : ಜಿಹಾದಿ ಮುಚ್ಚಿಹಾಕಲು ಪಿತೂರಿ: ಆರೆಸ್ಸೆಸ್, ವಿಎಚ್‌ಪಿ

ನವದೆಹಲಿ, ಗುರುವಾರ, 2 ಸೆಪ್ಟೆಂಬರ್ 2010
 
ಜಿಹಾದಿ ಭಯೋತ್ಪಾದನೆಯನ್ನು ಮುಚ್ಚಿ ಹಾಕುವ ಸಲುವಾಗಿ ಕೇಸರಿ ಭಯೋತ್ಪಾದನೆ ಎಂಬ ಆರೋಪವನ್ನು ಸರಕಾರ ಮಾಡುತ್ತಿದೆ ಎಂದು ವಿಶ್ವ ಹಿಂದೂ ಪರಿಷತ್ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘಗಳು ಗೃಹಸಚಿವ ಪಿ. ಚಿದಂಬರಂ ಹೇಳಿಕೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿವೆ.

ಹಿಂದೂಗಳ ಭಾವನೆಗಳಿಗೆ ಅಪಮಾನ ಎಸಗಿರುವ ಗೃಹಸಚಿವರು ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿರುವ ವಿಶ್ವ ಹಿಂದೂ ಪರಿಷತ್ ಅಂತಾರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ತೊಗಾಡಿಯಾ, ಹಾಗೆ ಕ್ಷಮೆ ಯಾಚಿಸದೇ ಇದ್ದಲ್ಲಿ ಅವರನ್ನು ಸಂಪುಟದಿಂದ ಪ್ರಧಾನಿ ಕೈ ಬಿಡಬೇಕು ಎಂದರು.

ಅತ್ತ ಭೋಪಾಲ್‌ನಲ್ಲಿ ಆರೆಸ್ಸೆಸ್ ಹಿರಿಯ ನಾಯಕ ರಾಮ್ ಮಾಧವ್ ಕೂಡ ಚಿದಂಬರಂ ಹೇಳಿಕೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಮ್ಮ ಪ್ರಕಾರ ಹಿಂದೂ ಭಯೋತ್ಪಾದನೆ ಅಥವಾ ಕೇಸರಿ ಭಯೋತ್ಪಾದನೆ ಎನ್ನುವುದು ದೇಶದಲ್ಲಿಲ್ಲ. ಆದರೆ ಕೇಸರಿ ಭಯೋತ್ಪಾದನೆಯೆಂಬ ಪಿಶಾಚಿಯನ್ನು ಸೃಷ್ಟಿಸುವ ಯತ್ನಗಳು ಹಲವು ರಾಜಕೀಯ ಪಕ್ಷಗಳಿಂದ ನಡೆಯುತ್ತಿದೆ. ಕೇವಲ ಮೂರು-ನಾಲ್ಕು ಘಟನೆಗಳಿಂದ ಇಂತಹ ಉಲ್ಲೇಖಗಳನ್ನು ಮಾಡಲಾಗದು ಎಂದು 'ಭಯೋತ್ಪಾನೆ ಮತ್ತು ಮಾಧ್ಯಮಗಳ ರಾಜಕೀಯ' ಎಂಬ ವಿಚಾರಗೋಷ್ಠಿಯಲ್ಲಿ ಅಭಿಪ್ರಾಯಪಟ್ಟರು.

ಜಿಹಾದಿ ಭಯೋತ್ಪಾದನೆಯ ಕಡೆಗಿನ ಗಮನವನ್ನು ವಿಕೇಂದ್ರೀಕರಿಸುವ ಯತ್ನವಾಗಿ ಕೇಸರಿ ಭಯೋತ್ಪಾದನೆ ಎಂಬ ವ್ಯಾಖ್ಯಾನವನ್ನು ಮಾಡಲಾಗುತ್ತಿದೆ ಎಂದು ಆರೋಪಿಸಿರುವ ಮಾಧವ್, ಇದರ ಹಿಂದೆ ಸ್ಥಾಪಿತ ರಾಜಕೀಯ ಹಿತಾಸಕ್ತಿಗಳು ಅಡಗಿವೆ; ಅದೇ ಕಾರಣದಿಂದ ಜಿಹಾದಿ ಭಯೋತ್ಪಾದನೆ ಕುರಿತು ಸರಕಾರದಲ್ಲಿ ಯಾರೊಬ್ಬರೂ ಪ್ರಶ್ನಿಸುತ್ತಿಲ್ಲ ಎಂದರು.

ಹಿಂದೂ ಬಲಪಂಥೀಯ ಸಂಘಟನೆಗಳ ಕೈವಾಡವಿದೆ ಎಂದು ಹೇಳಲಾಗುತ್ತಿರುವ ಪ್ರಸಕ್ತ ನಡೆಯುತ್ತಿರುವ ಮೂರರಿಂದ ನಾಲ್ಕು ಬಾಂಬ್ ಸ್ಫೋಟ ಪ್ರಕರಣಗಳ ವಿಚಾರಣೆಯ ಕುರಿತು ಪ್ರಸ್ತಾಪಿಸುತ್ತಾ ಅವರು, ಇದರ ಹಿಂದಿನ ನೈಜ ರೂವಾರಿಗಳು ಯಾರೆಂಬುದು ಬಯಲಾಗಬೇಕು ಎಂದು ಆಗ್ರಹಿಸಿದರು.

ದೇಶದಲ್ಲಿ ಯಾವುದೇ ರೀತಿಯ ಹಿಂದೂ ಭಯೋತ್ಪಾದನೆ ಅಥವಾ ಕೇಸರಿ ಭಯೋತ್ಪಾದನೆಗಳಿಲ್ಲ. ಆದರೆ ಭಯೋತ್ಪಾದನೆಗೆ ಬಣ್ಣವೇ ಇಲ್ಲ ಎಂದು ಹೇಳಲಾಗದು. ಯಾಕೆಂದರೆ ಅದು ಧಾರ್ಮಿಕ ಸಿದ್ಧಾಂತಗಳನ್ನು ಹೊಂದಿರುತ್ತದೆ ಎಂದು ಯಾವುದೇ ಸಂಘಟನೆಗಳನ್ನು ಉಲ್ಲೇಖಿಸದೆ ತಿಳಿಸಿದರು.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : web duniya
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-09-02 00:00:00

Tell a Friend
ಇತರ ಸಂಭಂದಪಟ್ಟ ವರದಿಗಳು
»'ಕೇಸರಿ ಉಗ್ರವಾದ' ನುಡಿಗಟ್ಟಿನಿಂದ ಉದ್ದೇಶ ಈಡೇರಿದೆ
»ನವದೆಹಲಿ : ಸಂಸತ್ತಿನಲ್ಲಿ ಅಲ್ಲೋಲಕಲ್ಲೋಲಗೊಳಿಸಿದ ‘ಕೇಸರಿ ಭಯೋತ್ಪಾದನೆ’
»ಕೇಸರಿ ಭಯೋತ್ಪಾದನೆ ಆರೋಪ ಕೀಳು ರಾಜಕೀಯ: ಬಿಜೆಪಿ
»ಹಲವು ಸ್ಫೋಟಗಳ ಹಿಂದೆ ಕೇಸರಿ ಭಯೋತ್ಪಾದನೆ: ಕೇಂದ್ರ

ಪ್ರತಿಸ್ಪಂದನ
ಪ್ರಶಾಂತ್ , ಮಂಗಳೂರು
2010-09-04
ಶ್ರೀ ಪ್ರಜ್ವಲ್ ರವರೇ, ಈ ಪ್ರದೀಪ್ ಕುಮಾರ್ ಎಂದು ಹೆಸರಿನ ವ್ಯಕ್ತಿ ಖಂಡಿತಾ ಹಿಂದುಧರ್ಮದವನಲ್ಲ. ಈ ಪ್ರತಿಕ್ರಿಯೆ ಬರೆಯಲು ಮಾತ್ರಾ ತಾತ್ಕಾಲಿಕವಾಗಿ ಹಿಂದುಧರ್ಮಕ್ಕೆ ಮತಾಂತರ ಗೊಂಡ ವ್ಯಕ್ತಿ ಈತ. ಮತ್ತು ವಾಲ್ಟರ್. ಪ್ರಜ್ವಲ್ ರವರೇ.... ನೀವು ಎಷ್ಟೇ ವಿವರಣೆ ನೀಡಿದರೂ ಇಂತಹ ವ್ಯಕ್ತಿಗಳಿಗೆ ಅದೆಲ್ಲಾ ಅರ್ಥವಾಗುವುದಲ್ಲ. ಯಾಕೆಂದರೆ ಇಂತವರು ಇರುವುದು ಬಾವಿಯ ಒಳಗೆ. ಅದೇ ಅವರ ಪ್ರಪಂಚ. ಅದರ ಹೊರಗಡೆ ಒಂದು ಜಗತ್ತು ಇದೆ ಎಂಬ ಬಗ್ಗೆ ಅವರಿಗೆ ಅರಿವೇ ಇಲ್ಲ. ಇಂತವರಿಗೆ ವಿವರ ನೀಡಿ ಅರಿವು ಮೂಡಿಸುವ ಪ್ರಯತ್ನವೆಂದರೆ ಅದೇ ಗಾದೆ ಇದೆಯಲ್ಲಾ. "ಗೋರ್ಕಲ್ಲ ಮೇಲೆ........."

ನಮ್ಮ ಭಾರತದ ಮೇಲೆ ಅಲ್ಲ ಸಲ್ಲದ ಮಾತುಗಳನ್ನಾಡುವ ಇಂತವರು ನಮ್ಮ ಪಕ್ಕದಲ್ಲೇ ನಮ್ಮೊಂದಿಗೆ ಸ್ವಾತಂತ್ರ್ಯ ಗಳಿಸಿದ ದೇಶವೊಂದಿದೆ. ಇಂದು ಅಲ್ಲಿನ ಪ್ರಜೆಗಳು ಹೇಗೆ ಜೀವನ ಸಾಗಿಸುತ್ತಿ ದ್ದಾರೆ ಎಂಬುದನ್ನು ಸ್ವಲ್ಪ ಗಮನಿಸಲಿ. ರಸ್ತೆಯಲ್ಲಿ ನಡೆದಾಡುವುದು, ಮಸೀದಿ ಯಲ್ಲಿ ನಮಾಜ್ ನಡೆಸುವುದು ಕಷ್ಟವಾಗಿದೆ. ಮನೆಯಿಂದ ಹೊರಹೋದ ವ್ಯಕ್ತಿ ಮನೆಗೆ ವಾಪಾಸು ಬರುತ್ತಾನೆಂಬ ಗ್ಯಾರೆಂಟಿ ಏನೂ ಇಲ್ಲವೆಂಬ ಪರಿಸ್ಥಿತಿ. ಯಾವಾಗ ಯಾವ ಗಳಿಗೆಯಲ್ಲಿ ಪಟಾಕಿಗಳು... ಗರ್ನಾಲ್ ಗಳು ಶಬ್ದಮಾಡಿಯಾವೋ ಯಾರಿಗೂ ಗೊತ್ತಿರುವುದಿಲ್ಲ. ಯಾರು ಇದನ್ನೆಲ್ಲಾ ಮಾಡುತ್ತಿದ್ದಾರೆ? ಅವರದೇ ಧರ್ಮದವರು. ಇತರರಿಗೆ ಅನ್ಯಾಯ ತೊಂದರೆ ಮಾಡಬಾರದು ಎಂಬ ಭೋಧನೆಯನ್ನು ಪವಿತ್ರ ಕುರಾನ್ ನಲ್ಲಿ ಓದಿದವರೇ!!! ಅಲ್ಲಿರುವ ಅಲ್ಪ ಸ್ವಲ್ಪ ಹಿಂದೂ ಮತ್ತು ಕ್ರಿಶ್ಚಿಯನ್ ರನ್ನು (ಅಲ್ಲಿನ ಅಲ್ಪ ಸಂಖ್ಯಾತರನ್ನು) ಕಾಲಕೆಳಗಿನ ಕಸಕ್ಕಿಂತಲೂ ನಿಕ್ರಷ್ಟವಾಗಿ ಕಾಣುತ್ತಿದ್ದಾರೆ. ಉಸಿರೆತ್ತುವಂತಿಲ್ಲ... ಆದರೂ ನಮ್ಮ ದೇಶದಲ್ಲಿ ಇಷ್ಟೊಂದು ಫ್ರೀಡಂ ಇದ್ದರೂ ಕೂಡಾ ಕೂಗಾಟ, ಅರಚಾಟ ತಪ್ಪಿಲ್ಲ. ಫ್ರೀಡಂ ಹೆಚ್ಚಾಯಿತು...

ಪ್ರಜ್ವಲ್ , ಮೈಸೂರು
2010-09-04
ಶ್ರೀಯುತ ಪ್ರದೀಪ್ ಕುಮಾರ್ ಹೆಸರಿನಲ್ಲಿ ಬಸ್ರೂರ್ ನಿಂದ ಪ್ರತಿಕ್ರಿಯೆ ನೀಡಿದ ತಮ್ಮಲ್ಲಿ ಒಂದು ಪ್ರಶ್ನೆ?

ಹಿಂದೂ ರಾಷ್ಟ್ರವಾಗಿದ್ದ ಭಾರತವನ್ನು ಮುಸ್ಲಿಮರು, ಬ್ರೀಟಿಷರು ಸಾವಿರಾರು ವರ್ಷ ಲೂಟಿಮಾಡಿ, ಸ್ವಾತಂತ್ರ್ಯ ಎಂಬ ಸರ್ಟಿಫಿಕೆಟ್ ನೀಡಿ ನೀಚ ರಾಜಕಾರಣಿಗಳ ಕೈಗೆ ಅಧಿಕಾರ ಕೊಟ್ಟ ನಂತರ ಅಲ್ಪಸಂಖ್ಯಾತರು ಎಂದು ಸೀಲ್ ಹೊಡೆದು ಜಾರಿಮಾಡಿದ ಸರ್ಕಾರಿ ಸುತ್ತೋಲೆ 60 ವರ್ಷ ಕಳೆದರೂ ಬಹುಸಂಖ್ಯಾತರಾಗದೆ, ಅಲ್ಪರಾಗಿಯೇ ಉಳಿದು ದೇಶದ ಖಜಾನೆಯನ್ನು ಮುಕ್ಕಿ ಲೂಟಿಮಾಡುವುದರ ಜೊತೆಗೆ, ಕಳೆದ ಎಪ್ಪತ್ತು ವರ್ಷಗಳಿಂದ ಸಾಕ್ಷಿ ಸಹಿತ ಸೆರೆ ಸಿಕ್ಕ ನೂರಾರು ಮಂದಿ ಜೈಲಿನೊಳಗೆ ಇದ್ದು ಮರಣ ದಂಡನೆ ಶಿಕ್ಷೆ ನೀಡಿದರೂ ನೀಚ ರಾಜಕಾರಣಿಗಳ ಅಭಯ ಹಸ್ತದಲ್ಲಿ ಶಿಕ್ಷೆ ಇಲ್ಲದೆ ಹಾಯಾಗಿರುವ ದೇಶ ಭ್ರಷ್ಟರು ಇವೆಲ್ಲಾವೂ ಜೀವಂತ ಸಾಕ್ಷಿಯಾಗಿರು ವಾಗ, ಭಾರತವನ್ನು ಹಿಂದು ರಾಷ್ಟ್ರ ಮಾಡಲು ಹೊರಟ್ಟಿದ್ದಾರೆ ಎಂದೆಲ್ಲಾ ತಾವೇ ಪ್ರತ್ಯಕ್ಷ ದರ್ಶಿಯಾಗಿ ನೋಡಿದಂತೆ, ನಡೆದ ಎಲ್ಲಾ ದುರ್ಘಟನೆಗಳು, ಬಾಂಬ್ ಸ್ಪೋಟಗಳು ಸುಳ್ಳು ಎಂಬಂತೆ ಚಿತ್ರಿಸಿರುವ ತಾವು ಒಂದು ಸಮಯ ಹಿಂದುವಾಗಿದ್ದರೆ? ಸತ್ಯತೆಯ ಉತ್ತರವನ್ನು ನೀಡಬಲ್ಲಿರಾ?

ಶ್ರೀ ವಾಲ್ಟರ್ ಅಲ್ಮೇಡಾ ಹೆಸರಿನಲ್ಲಿರುವ ಮತ್ತೊಬ್ಬರಾದ ಬಸ್ರೂರಿನವರೆ, ಈ ಸುದ್ದಿಯಲ್ಲಿ ಮಾನ್ಯ ಅಟಲ್ ಬಿಹಾರಿ ವಾಹಪೇಯಿಯವರ ಹೆಸರಿಲ್ಲದಿದ್ದರೂ ತಾವು ಅನಾವಶ್ಯಕವಾಗಿ ಅವರ ಹೆಸರನ್ನು ತುರುಕಿ ಕಳನಾಯಕರಂತೆ ಚಿತ್ರಿಸಿದ್ದೀರಿ. ಇದರಿಂದ ಗೊತ್ತಗುತ್ತದೆ ತಮ್ಮ ಪ್ರಪಂಚ ಜ್ಞಾನ. ಅಟಲ್ ಬಿಹಾರಿ ವಾಜಪೇಯಿಯವರು ಪ್ರಧಾನ ಮಂತ್ರಿಯಾಗಿ ಆಡಳಿತ ನಡೆಸುವಾಗ ಭಾರತ ದೇಶ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಖಾಯಂ ಸ್ಥಾನ ಪಡೆದದ್ದು, ವಿಶ್ವ ಸಂಸ್ಥೆಯ ಏಕಪಕ್ಷೀಯ ನಿರ್ಧಾರಗಳಿಗೆ ಕಡಿವಾಣ ಹಾಕಲು ಜಿ-24 ಸಂಘಟನೆ ರಚಿಸಿ ಭಾರತ ಮತ್ತುಅಭಿವೃದ್ಧಿ ದೇಶಗಳ ಹಿತಾಶಕ್ತಿ ಕಾಪಾಡಿದ್ದು, ಭಾರತ ಪಾಕ್ ಭಾಂದವ್ಯಕ್ಕೆ ಕೈಜೋಡಿಸಿ ಭಾರತ ಪಾಕ್ ಬಸ್ ಪ್ರಯಾಣ ಪ್ರಾರಂಭಿಸಿದ್ದು, 1998 ರಲ್ಲಿ ಅಣು ಪರೀಕ್ಷೆ ನಡೆಸಿ ವಿಶ್ವವೇ ಭಾರತವನ್ನು ಕಂಡು ಬೆಚ್ಚಿ ಬಿದ್ದದ್ದು, ಭಾರತದ ನಾಲ್ಕು ಮೂಲೆಗಳಿಗೆ ಸುವರ್ಣ ಚತುಷ್ಪತ ಹೆದ್ದಾರಿಯನ್ನು ನಿರ್ಮಿಸಿದ್ದು.. ಈಗೆ ಬರೆಯುತ್ತಾ ಹೋದರೆ ತುಂಬಾ ಇದೆ... ತಮ್ಗೆ ಇದು ಗೊತ್ತಿರಲಿ ಎಂದು ಉತ್ತರಿಸಿದ್ದು ಸ್ವಾಮಿ.

walter almeda, basrur
2010-09-04
ಸ್ವಾತಂತ್ರ್ಯ ಹೋರಾಟದಲ್ಲಿ ಎಂದೂ ಭಾಗವಹಿಸದಿದ್ದರೂ ತಾವೇ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟವೆಂದು ಪ್ರಚಾರ ಮಾಡುತ್ತಾ ಅಸಲಿ ಸ್ವಾತಂತ್ರ್ಯ ಹೋರಾಟಗಾರರನ್ನು ಭಯೋತ್ಪಾದಕರೆಂದು ಚಿತ್ರಿಸುತ್ತದೆ. 1942ರ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ತನ್ನ ಸಹಚರರನ್ನೇ ಹಿಡಿದು ಕೊಟ್ಟು ತಾನು ಬಚಾವಾದ ಅಟಲ್ ಬಿಹಾರಿ ವಾಜಪೇಯಿಯನ್ನು ದೊಡ್ಡ ಸ್ವಾತಂತ್ರ್ಯ ಯೋಧ ನಂತೆ ಚಿತ್ರಿಸುತ್ತದೆ.

ಗಾಂಧಿಯನ್ನೇ ಕೊಂದವರ ಪಕ್ಷವಾದರೂ ಯಾವುದೇ ಎಗ್ಗೂ ಸಿಗ್ಗೂ ಇಲ್ಲದೆ 1980ರಲ್ಲಿ ಗಾಂಧಿ ಪ್ರಣೀತ ಸಮಾಜವಾದವೇ ತಮ್ಮ ಸಿದ್ಧಾಂತ ಎಂದು ಸೈದ್ಧಾಂತಿಕ ಪಿಕ್ ಪಾಕೆಟ್ ಮಾಡಬಲ್ಲವರು ಈ ಬಿಜೆಪಿ ಮತ್ತವರ ಸಂಘಪರಿವಾರದವರು. ಯಾವುದೇ ಶ್ರಮವಿಲ್ಲದೆ, ಬೆವರು ಸುರಿಸದೇ ಇತರರ ಹೋರಾಟವನ್ನೂ, ಶ್ರಮವನ್ನೂ ತಮ್ಮ ಖಾತೆಗೆ ಜಮಾ ಮಾಡಿಕೊಳ್ಳುವಲ್ಲೂ ಈ ಪರಾವಲಂಬಿ ಜೀವಿಗಳು ಮಹಾನ್ ಪರಿಣಿತರು.

Pradeep Kumar, Basrur
2010-09-03
ಪ್ರಜ್ಞಾ ಸಿಂಗ್ ಠಾಕೂರ್ ಹಾಗೂ ದಯಾ ನಂದ ಪಾಂಡೆ ಮುಂತಾದವರು ನಡೆಸಿದ ಭಯೋತ್ಪಾದಕ ಕೃತ್ಯಗಳು ಬೆಳಕಿಗೆ ಬರುತ್ತಿ ದ್ದಂತೆಯೇ, ‘ ಹಿಂದೂ ಭಯೋತ್ಪಾದನೆ’ ಎಂಬ ಪದವು ಹೆಡೆಯೆತ್ತಿತು. ಹಿಂದೂರಾಷ್ಟ್ರ, ಹಿಂದುತ್ವ ಹಾಗೂ ಸಂಘಪರಿವಾರದ ವಿಚಾರಧಾರೆ ಗಳಿಂದ ಪ್ರೇರಿತವಾದ ಗುಂಪುಗಳು ಮಾಲೆಗಾಂವ್ ಸ್ಫೋಟ, ಮಕ್ಕಾ ಮಸೀದಿ ಸ್ಫೋಟ, ಅಜ್ಮೀರ್, ಮಡ್ಗಾಂವ್ ಮತ್ತು ಸಂಜೋತಾ ಎಕ್ಸ್‌ಪ್ರೆಸ್ ಸ್ಫೋಟ ಪ್ರಕರಣ ದಲ್ಲಿ ಶಾಮೀಲಾಗಿರುವುದು ತನಿಖೆಯಿಂದ ಬಯಲಾಗಿದೆ.

ವಿಪರ್ಯಾಸವೆಂದರೆ, ಈ ಸ್ಫೋಟಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸತ್ತವರು ಮುಸ್ಲಿಮರೇ ಆಗಿದ್ದರೂ ಸಹ, ಪೊಲೀಸರು ಘಟನೆಗಳ ಬಳಿಕ ತಕ್ಷಣವೇ ಬಂಧಿಸಿದ್ದುದು ಅಮಾಯಕ ಮುಸ್ಲಿಂ ಯುವಕರನ್ನು. ನಮಾಝ್‌ನಂತಹ ಸಂದರ್ಭಗಳಲ್ಲಿ ಜನರು ಗರಿಷ್ಠ ಸಂಖ್ಯೆಯಲ್ಲಿ ಒಂದೆಡೆ ಸೇರುವ ಸಮಯ ವನ್ನು ಲೆಕ್ಕಹಾಕಿಕೊಂಡೇ ಹೆಚ್ಚಿನ ಸ್ಫೋಟಗಳನ್ನು ಆಯೋಜಿಸಲಾಗಿತ್ತು. ನಿರಪರಾಧಿ ಮುಸ್ಲಿಂ ಯುವಕರನ್ನು ಬಂಧಿಸುವುದನ್ನು ನಿಲ್ಲಿಸ ಬೇಕು ಹಾಗೂ ನೈಜ ಅಪರಾಧಿಗಳನ್ನು ಸೆರೆಹಿಡಿಯಬೇಕೆಂಬ ಮಾನವಹಕ್ಕು ಚಳವಳಿ ಕಾರ್ಯಕರ್ತರ ಧ್ವನಿಯು ತನಿಖಾಧಿಕಾರಿಗಳ ಕಿವಿಗೆ ಬೀಳಲು ತುಂಬಾ ಸಮಯ ತಗಲಿತು.

ಮಾಲೆಗಾಂವ್ ಸ್ಫೋಟದಲ್ಲಿ ಸಾಧ್ವಿ ಪ್ರಜ್ಞಾ ಸಿಂಗ್ ಹಾಗೂ ಆಕೆಯ ದುಷ್ಟಕೂಟವು ಶಾಮೀಲಾಗಿದೆಯೆಂಬ ಸತ್ಯವನ್ನು ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹದಳದ ವರಿಷ್ಠ ಹೇಮಂತ್ ಕರ್ಕರೆ, ಬಲವಾದ ಪುರಾವೆಗಳೊಂದಿಗೆ ಬಯಲಿ ಗೆಳೆದಾಗ, ಒಟ್ಟಾರೆ ಪರಿಸ್ಥಿತಿ ಬೇರೆಯೇ ತಿರುವನ್ನು ಪಡೆದುಕೊಂಡಿತು. ಹೇಮಂತ ಕರ್ಕರೆ ಓರ್ವ ದೇಶದ್ರೋಹಿ ಮತ್ತು ರಾಷ್ಟ್ರೀಯವಾದಿ ವಿರೋಧಿ ಎಂದು ಮೊದಮೊದಲು ಹಿಂದುತ್ವವಾದಿ ನಾಯಕರು ಬೊಬ್ಬೆ ಹೊಡೆಯುತ್ತಿದ್ದರು. ದುರದೃಷ್ಟವಶಾತ್ 2008ರ ನವೆಂಬರ್ 26ರ ಮಧ್ಯರಾತ್ರಿ ಮುಂಬೈ ಮೇಲೆ ಉಗ್ರರು ನಡೆಸಿದ ದಾಳಿಯಲ್ಲಿ ಹೇಮಂತ್ ಕರ್ಕರೆ ಮಡಿದರು.

ಬಜರಂಗದಳ, ಅಭಿನವ್ ಭಾರತ್ ಹಾಗೂ ಸನಾತನ ಸಂಸ್ಥೆಯಂತಹ ಸಂಘ ಟನೆಗಳ ಜೊತೆ ಸಂಪರ್ಕವಿದ್ದ ಗುಂಪು ಗಳು ಮಾಲೆಗಾಂವ್, ಮಕ್ಕಾ ಮಸೀದಿ, ಅಜ್ಮೀರ್, ಮಡ್ಗಾಂವ್ ಸ್ಫೋಟಗಳಲ್ಲಿ ಶಾಮೀಲಾಗಿರುವುದನ್ನು ಮಹಾರಾಷ್ಟ್ರ ಎಟಿಎಸ್ ಸೇರಿದಂತೆ ವಿವಿಧ ತನಿಖಾ ಸಂಸ್ಥೆಗಳು ಸಾಕ್ಷಾಧಾರಗಳ ಸಮೇತ ಬಹಿರಂಗ ಪಡಿಸಿವೆ. ಆದರೆ ಹಿಂದುತ್ವವಾದಿ ರಾಜಕಾರಣಿ ಗಳು ಮಾತ್ರ ‘‘ಈ ಭಯೋತ್ಪಾದಕ ಕೃತ್ಯಗಳಿಗೆ ಹಿಂದುತ್ವದ ಜೊತೆ ನಂಟು ಕಲ್ಪಿಸಕೂಡದು.

ಯಾಕೆಂದರೆ ಭಯೋತ್ಪಾದನೆಯಲ್ಲಿ ಯೆಹೂದ್ಯ, ಕ್ರೈಸ್ತ ಹಾಗೂ ಇಸ್ಲಾಂ ಧರ್ಮ ಗಳದೇ ಏಕಸ್ವಾಮ್ಯ’ವೆಂಬ ಬುಡಮೇಲು ರಹಿತವಾದವನ್ನು ಮುಂದಿಟ್ಟಿದ್ದರು. ಇನ್ನೂ ಕೆಲವು ಪತ್ರಕರ್ತರಂತೂ ಇದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ, ‘ಹಿಂದು ಭಯೋತ್ಪಾದನೆಯೆಂಬುದು ಇಲ್ಲ. ಏನಿದ್ದರೂ ಇಬ್ರಾಹೀಂ ಅನುಯಾಯಿಗಳ ಧರ್ಮಗಳೇ (ಯೆಹೂದ್ಯ, ಕ್ರೈಸ್ತ, ಇಸ್ಲಾಂ) ಭಯೋ ತ್ಪಾದನೆಯ ಜೊತೆ ನಂಟು ಹೊಂದಿವೆ’ ಯೆಂದು ವಾದಿಸಿದ್ದರು

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಭಾರತ]

»ಭ್ರಷ್ಟ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರಗಿಸಲು ಅನುಮತಿ ಕೋರಿ ಸಿವಿಸಿಯಿಂದ ಸರಕಾರಕ್ಕೆ ಮನವಿ
»ವಾರಣಾಸಿ: ಕುಸಿದ ನಿತಿನ್ ಗಡ್ಕರಿ ವೇದಿಕೆ
»ಸೊಹ್ರಾಬುದ್ದೀನ್ ನಕಲಿ ಎನ್‌ಕೌಂಟರ್ ಪ್ರಕರಣ: ಆಂಧ್ರ ಪೊಲೀಸರಿಗೆ ಸಮನ್ಸ್ ಜಾರಿಗೊಳಿಸಿದ ಸಿಬಿಐ
»ಆಂಧ್ರ ಅಬಕಾರಿ ಸಚಿವ ಮದ್ಯ ಲಾಬಿಯ ಕೈಗೊಂಬೆ: ಎಸಿಬಿ ವರದಿ ಆರೋಪ
»ಶೀಘ್ರವೇ ಅಡ್ಡ ಹಾಯ್ಕೆ ಕ್ಷಿಪಣಿಯ ಪುನಃ ಪರೀಕ್ಷೆ
»‘ಲಕ್ಷ-1’ ಪರೀಕ್ಷೆ ಯಶಸ್ವಿ
»ದಯಾನಿಧಿ ಮಾರನ್ ವಿರುದ್ಧ ಇನ್ನೊಂದು ಪ್ರಕರಣ ದಾಖಲು
»ಸಬ್ಸಿಡಿ ಭೂತ ನಿದ್ದೆಗೆಡಿಸುತ್ತಿದೆ: ಪ್ರಣವ್
»ಗೋಧ್ರಾ ಗಲಭೆ: ಧಾರ್ಮಿಕ ಕಟ್ಟಡಗಳ ಹಾನಿ ಬಗ್ಗೆ ನಿರ್ಲಕ್ಷ್ಯ- ಮೋದಿ ಸರ್ಕಾರಕ್ಕೆ ತರಾಟೆ
» ಜೀವವೈವಿಧ್ಯ ತಾಣ: `ಪಶ್ಚಿಮ ಘಟ್ಟದಲ್ಲಿ ಬೇಡ ಗಣಿಗಾರಿಕೆ’
»ರೈಲ್ವೆ ಟಿಕೆಟ್ ಕಾದಿರಿಸುವಿಕೆ ಅವಧಿ 120 ದಿನಗಳವರೆಗೆ ವಿಸ್ತರಣೆ
»ಚುನಾವಣೋತ್ತರ ಸಮೀಕ್ಷೆ, ಅಭಿಪ್ರಾಯ ಸಂಗ್ರಹ ಸಮೀಕ್ಷೆ ನಿಷೇಧಕ್ಕೆ ಚುನಾವಣಾ ಆಯೋಗದ ಸುತ್ತೋಲೆ
»ಚಿಕಿತ್ಸೆ ವೆಚ್ಚ ಭರಿಸಲಾಗದ ತಾಯಿಯಿಂದ ಮಗನಿಗೆ ದಯಾ ಮರಣ ಕೋರಿ ಅರ್ಜಿ
»ಪತ್ರಕರ್ತೆಯ ಮೇಲೆ ದಾಳಿ: ಚುನಾವಣಾಧಿಕಾರಿ, ಪೊಲೀಸರ ವಿರುದ್ಧ ಕ್ರಮಕ್ಕೆ ಶಿಫಾರಸು
»ರಾಬರ್ಟ್ ವಾದ್ರಾರನ್ನು ತಡೆದ ಚುನಾವಣಾಧಿಕಾರಿಯ ವರ್ಗಾವಣೆ
»ಪ್ರಾಥಮಿಕ ಶಾಲೆಗಳ ಕಾರ್ಯ ನಿರ್ವಹಿಸುತ್ತಿರುವ ಅಝಂಗಡದ ಮಸೀದಿಗಳು
»ಆಂಧ್ರ ಪ್ರದೇಶ: ಸಚಿವರ ವಿರುದ್ಧ ಒಂದಾದ ಐಎಎಸ್ ಅಧಿಕಾರಿಗಳು
»ಅಂತರ್ಜಾಲಾಧಾರಿತ ಔಷಧಿ ವ್ಯಾಪಾರ ತಡೆಗೆ ಸಮಿತಿ
»ಮಾನವ ಅಸ್ಥಿಪಂಜರ ಪತ್ತೆ ಪ್ರಕರಣ: ಆರೋಪಿ ಘೋಷ್ ಜಾಮೀನು ಬಿಡುಗಡೆ
»ಮಾ. 16ಕ್ಕೆ ಕೇಂದ್ರ ಬಜೆಟ್
»ಕಚ್ಚಾ ತೈಲ ಆಮದು: ಭಾಗಶಃ ಪಾವತಿ ವ್ಯವಸ್ಥೆಗೆ ಇರಾನ್ ಸಮ್ಮತಿ
»2ಜಿ: ಸೋನಿಯಾ ತಂಗಿಯರಿಗೆ ಸಿಕ್ಕಿದ್ದು 18000ಕೋಟಿ - ಸ್ವಾಮಿ ಆರೋಪ
»ದುಡಿಯದ' ಅಧಿಕಾರಿಗಳಿಗೆ 15 ವರ್ಷದಲ್ಲೇ ನಿವೃತ್ತಿ: ಕೇಂದ್ರದ ಹೊಸ ನಿಯಮಾವಳಿ
»ಕಪ್ಪುಹಣ; ಕೈ, ಬಿಜೆಪಿ ಜನರನ್ನು ತಪ್ಪು ದಾರಿಗೆಳೆಯುತ್ತಿವೆ: ಮಾಯಾವತಿ
»ಆಕ್ಷೇಪಾರ್ಹ ವಿಷಯ ಅಳಿಸಲು ಜಾಲತಾಣಗಳಿಗೆ ಇನ್ನೂ 15 ದಿನ ಕಾಲಾವಕಾಶ
»ಬಜೆಟ್‌ಗೆ ಗಣಿ ಬಂಪರ್: 49 ಕಂಪೆನಿಗಳ ಗುತ್ತಿಗೆ ರದ್ದು. ಗಣಿ ಧಣಿಗಳತ್ತ ಸಿಇಸಿ ಕೆಂಗಣ್ಣು
»ಅಕ್ರಮ ಗಣಿಗಾರಿಕೆ: ಜಾರ್ಖಂಡ್ ಸರಕಾರಕ್ಕೆ ಎನ್‌ಎಚ್‌ಆರ್‌ಸಿ ನೋಟಿಸ್
»3000 ಬೆಲ್ಜಿಯಂ ಶೆಫರ್ಡ್ಸ್‌ಗಳಿಗೆ ತರಬೇತಿಗೆ ಸಿಆರ್‌ಪಿಎಫ್ ನಿರ್ಧಾರ
»ಪೊಲೀಸ್ ಅಧಿಕಾರಿ ಸಹಿತ ಇಬ್ಬರು ಹಿಮಪಾತದಲ್ಲಿ ಸಮಾಧಿ
»ಮಧ್ಯಪ್ರದೇಶದ ಬಿಜೆಪಿ ಸರಕಾರದಿಂದ ರೂ. 250 ಕೋಟಿ ಗೋ ಹಗರಣ: ಕಾಂಗ್ರೆಸ್
»ಜೀವಂತವಾಗಿ ಬಂದ ‘ಸಾವನ್ನಪ್ಪಿದ’ ಮಹಿಳೆ!
»ಹರೇನ್ ಪಾಂಡ್ಯ ಹತ್ಯೆ ಪ್ರಕರಣ: ಮರು ತನಿಖೆಗೆ ಗುಜರಾತ್ ಹೈಕೋರ್ಟ್ ನಕಾರ
»ಮೊಬೈಲ್ ಸಂಪರ್ಕ ಮಾರ್ಗಸೂಚಿ ಟ್ರಾಯ್‌ಗೆ ಕಡೆಯ ಅವಕಾಶ
»ರೂ. 36,900 ಕೋಟಿ ಇಂಧನ ಸಬ್ಸಿಡಿ ನೀಡಲು ಮುಂಚೂಣಿ ತೈಲ ಸಂಸ್ಥೆಗಳಿಗೆ ಕೇಂದ್ರದ ಮನವಿ
»2ಜಿ ಪರವಾನಿಗೆ ರದ್ದತಿ ತೀರ್ಪು ಸರಕಾರಿ ಮಟ್ಟದಲ್ಲಿ ಚರ್ಚಿಸಲು ನಾರ್ವೆಯ ಇಚ್ಛೆ
»ಕಾನೂನು ಬಾಹಿರ ಔಷಧಿ ಪ್ರಯೋಗ: ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್
»ಪ್ರಧಾನಿ ಪದದ ಹೆಬ್ಬಯಕೆಯಿಲ್ಲ: ರಾಹುಲ್
»ಅಂತರಿಕ್ಷ್- ದೇವಾಸ್ ಲೋಪ: ವರದಿಯಲ್ಲಿ ವೈಯಕ್ತಿಕವೇನೂ ಇಲ್ಲ- ರಾಧಾಕೃಷ್ಣನ್
»ಕೋರ್ಟ್ ಗೆ ಬಗ್ಗಿದ ಗೂಗಲ್, ಫೇಸ್‌ಬುಕ್‌: ಆಕ್ಷೇಪಾರ್ಹ ಮಾಹಿತಿಗೆ ಕತ್ತರಿ
»ಬಿಜೆಪಿ ರಾಜಕೀಯ ದುರುದ್ದೇಶಗಳಿಗಾಗಿ ಧರ್ಮವನ್ನು ಬಳಸುತ್ತಿದೆ: ಫಾರುಕ್
»ಅಕ್ರಮ ಗಣಿ: ಸುಪ್ರೀಂಗೆ ಸಿ‌ಇಸಿ ಅಂತಿಮ ವರದಿ
»ಸೋನಿಯಾ ಅಳಿಯ ರಾಬರ್ಟ್ ವಾದ್ರಾ ಸಕ್ರಿಯ ಪಾಲಿಟಿಕ್ಸ್‌ಗೆ ಎಂಟ್ರಿ?
»ಅಕ್ರಮ ಗಣಿಗಾರಿಕೆ: ಸಕ್ರಮ ಗಣಿಗೆ ಪರವಾನಗಿ
»ಇಸ್ರೋ ವರದಿ ಏಕಪಕ್ಷೀಯ: ಮಾಧವನ್ ನಾಯರ್
»ರಜಪೂತರು-ದಲಿತರ ಸಂಘರ್ಷ: ದಲಿತ ಯುವಕನ ಭೀಕರ ಹತ್ಯೆ; ಎಂಟು ಮಂದಿಯ ಬಂಧನ
»ಅಪಘಾತ: ಉದ್ರಿಕ್ತರಿಂದ ಪೊಲೀಸರ ಮೇಲೆ ದಾಳಿ; ಬಸ್‌ಗಳಿಗೆ ಬೆಂಕಿ
»ಗ್ರಾಮಸ್ಥರ ಮೇಲೆ ಮುಖ್ಯೋಪಾಧ್ಯಾಯರ ಮಕ್ಕಳಿಂದ ಬಾಂಬ್ ಎಸೆತ: ಆರೋಪ
»ಅಯೋಧ್ಯೆಯಲ್ಲಿ ಅಡ್ವಾಣಿಯ ರಾಮ ಮಂದಿರದ ಬೇಡಿಕೆಗೆ ಜನರ ನಿರಾಸಕ್ತಿ!
»500 ಮಿಲಿಯನ್ ಭಾರತೀಯರಿಗೆ ಹೊಸ ಮನೆಗಳ ಆವಶ್ಯಕತೆಯಿದೆ: ಫಿಕ್ಕಿ
»ಅಂಡಮಾನ್ ಆದಿವಾಸಿಗಳ ಮತ್ತೆರಡು ವೀಡಿಯೊ ಪತ್ತೆ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri