ಬೇಲೆಕೇರಿ ಅದಿರು ನಾಪತ್ತೆ ಪ್ರಕರಣ: ಸಿಐಡಿ ಪೊಲೀಸರಿಗೆ ಮಹತ್ವದ ಸುಳಿವು |
ಪ್ರಕಟಿಸಿದ ದಿನಾಂಕ : 2010-09-02
58 ಕಂಪೆನಿಗಳ ವಿರುದ್ಧ ಎಫ್‌ಐಆರ್
30 ಗಣಿ ಕಂಪೆನಿ ಪ್ರಮುಖ ಸಿಬ್ಬಂದಿಯ ಬಂಧನಕ್ಕೆ ಕ್ಷಣಗಣನೆ
ಸಿಐಡಿ ಪೊಲೀಸರಿಗೆ ಮಹತ್ವದ ಸುಳಿವು
ಬೆಂಗಳೂರು : ಬೇಲೆಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ 58 ಕಂಪೆನಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿರುವ ಸಿಐಡಿ ಪೊಲೀಸರು , ಸ್ಪಷ್ಟ ಸಾಕ್ಷ್ಯಾಧಾರಗಳೊಂದಿಗೆ 30 ಕಂಪೆನಿಗಳ ಪ್ರಮುಖ ಸಿಬ್ಬಂದಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.
ಬೇಲೆಕೇರಿ ಬಂದರಿನಿಂದ 200 ಕೋಟಿ ರೂ. ಮೌಲ್ಯದ 6.5 ಲಕ್ಷ ಮೆಟ್ರಿಕ್ ಟನ್ ಅದಿರು ನಾಪತ್ತೆ ಪ್ರಕರಣದಲ್ಲಿ ನಾಲ್ಕು ಸ್ಟೀವ್‌ಡೊರ್ಸಿ ಸೇರಿದಂತೆ 58 ಗಣಿ ಕಂಪೆನಿಗಳು ಪ್ರಮುಖ ಪಾತ್ರವಹಿಸಿರುವ ಕುರಿತು ಸಿಐಡಿ ಪೊಲೀಸರು ಅಂಕೋಲ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಪ್ರಥಮ ಮಾಹಿತಿ ವರದಿ ಸಲ್ಲಿಸಿದ್ದಾರೆ. ನ್ಯಾಯಾಲಯ ಈ ಆರೋಪಿಗಳ ವಿರುದ್ಧ ಬಂಧನ ವಾರೆಂಟ್ ಜಾರಿ ಮಾಡಿದೆ. ಸೂಕ್ತ ಸಾಕ್ಷ್ಯಾಧಾರಗಳ ಲಭ್ಯವಿರುವ ಹಿನ್ನೆಲೆಯಲ್ಲಿ ಸಿಐಡಿ ಪೊಲೀಸರು 30 ಗಣಿ ಕಂಪೆನಿಗಳ ಪ್ರಮುಖ ಸಿಬ್ಬಂದಿಯನ್ನು ಬಂಧಿಸಲು ಕ್ರಮ ಕೈಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
58 ಗಣಿ ಕಂಪೆನಿಗಳ ವಿರುದ್ಧ ಸಿಐಡಿ ಪೊಲೀಸರು ಅಂಕೋಲ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 406 ಮತ್ತು 379ರ ಅಡಿ ಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಇದರ ಜತೆಗೆ ಕಾರವಾರ ಉಪ ಅರಣ್ಯ ಸಂರಕ್ಷಣಾಧಿ ಕಾರಿ ಅರಣ್ಯ ಕಾಯ್ದೆ ಅಡಿಯಲ್ಲಿ ದೂರು ನೀಡಿದ್ದಾರೆ.
ಅದಿರು ನಾಪತ್ತೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳ ವಿರುದ್ಧ ಸ್ಪಷ್ಟ ಸಾಕ್ಷ್ಯಾಧಾರಗಳು ಲಭ್ಯವಾಗಿವೆ. ಗೋವಾ, ಆಂಧ್ರಪ್ರದೇಶ ಸೇರಿದಂತೆ ವಿವಿಧೆಡೆ ತಲೆ ಮರೆಸಿಕೊಂಡಿರುವ ಆರೋಪಿಗಳನ್ನು ಬಂಧಿಸಲು ಸಿಐಡಿ ಅಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಈ ವೊದಲು ಐಎಲ್‌ಸಿ ಇಂಡಸ್ಟ್ರೀಸ್ ಲಿಮಿಟೆಡ್, ಆಶಾಪೂರ್ಣ ಮೈನ್‌ಕೆಮ್, ಪಿಜೆಎಸ್ ಓವರ್‌ಸೀಸ್ ಕಂಪೆನಿ, ದೊಡ್ಡಣ್ಣನವರ್ ಬ್ರಾಸ್, ಲಾಲ್ ಮಹಾಲ್ ಲಿಮಿಟೆಡ್, ಸ್ವಸ್ತಿಕ್ ಸ್ಟೀಲ್ ಲಿಮಿಟೆಡ್, ಲಕ್ಷ್ಮಿ ವೆಂಕಟೇಶ ಕಂಪೆನಿ, ಮೆಟಾಕೆಮ್ ಮ್ಯಾನ್ಯುುಫ್ಯಾಕ್ಚ ರರ್ ಹಾಗೂ ಶಿಪ್ಪಿಂಗ್ ಕಂಪೆನಿಗಳಾದ ಅದಾನಿ ಎಂಟರ್‌ಪ್ರೈಸಸ್, ಶ್ರೀ ಮಲ್ಲಿಕಾರ್ಜುನ ಶಿಪ್ಪಿಂಗ್, ಸಲಾಗಾಂವ್‌ಕರ್ ಮೈನಿಂಗ್ ಇಂಡಸ್ಟ್ರೀಸ್ ಮತ್ತು ಹೊಸಪೇಟೆಯ ರಾಜಮಹಾಲ್ ಸಿಲ್ಕ್$Õ ಕಂಪೆನಿಗಳ ವಿರುದ್ಧ ಕಾರವಾರ ಉಪ ಅರಣ್ಯ ಸಂರಕ್ಷಣಾಧಿ ಕಾರಿ ಹಾಗೂ ಅಂಕೋಲ ಸಹಾಯಕ ಅರಣ್ಯ ಸಂರಕ್ಷಣಾಧಿ ಕಾರಿ ದೂರು ನೀಡಿದ್ದ ಹಿನ್ನೆಲೆಯಲ್ಲಿ ಅಂಕೋಲ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು.
ಆದರೆ ಸಿಐಡಿ ಪೊಲೀಸರು ತನಿಖೆ ಆರಂಭಿಸಿದ ನಂತರ ಪ್ರಕರಣದಲ್ಲಿ 58 ಕಂಪೆನಿಗಳು ಭಾಗಿಯಾಗಿರುವುದು ಬೆಳಕಿಗೆ ಬಂದಿತ್ತು. ಈ 58 ಕಂಪೆನಿಗಳ ಪೈಕಿ 34 ಕಂಪೆನಿಗಳ ವಿರುದ್ಧ ಪೊಲೀಸರು ಸಾಕಷ್ಟು ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ್ದು, ಉಳಿದ 24 ಕಂಪೆನಿಗಳ ಮೇಲಿನ ಆರೋಪ ಕುರಿತು ತನಿಖೆ ಮುಂದುವರೆಸಿದ್ದಾರೆ. ಈಗಾಗಲೇ ನಾಲ್ಕು ಕಂಪೆನಿಗಳ 9 ಮಂದಿ ಸಿಬ್ಬಂದಿ ಯನ್ನು ಬಂಧಿಸಿದ್ದು, ಆರು ಮಂದಿ ಜಾಮೀನು ಮೇಲೆ ಬಿಡುಗಡೆಯಾಗಿದ್ದಾರೆ. ಮೂವರಿಗೆ ಧಾರವಾಡ ಹೈಕೋರ್ಟ್ ಸಂಚಾರಿ ಪೀಠ ಬುಧವಾರ ಜಾಮೀನು ನಿರಾಕರಿಸಿದೆ. ಅದೇ ರೀತಿ ನಾಲ್ಕು ಶಿಪ್ಪಿಂಗ್ ಕಂಪೆನಿಗಳ ಪರವಾನಗಿ ರದ್ದು ಹಾಗೂ ಸಿಬ್ಬಂದಿಯ ಬಂಧನ ಪ್ರಕರಣವೂ ನಾಳೆ ಸರ್ಕಿàಟ್ ಪೀಠದಲ್ಲಿ ವಿಚಾರಣೆಗೆ ಬರಲಿದೆ.
ವರದಿಯ ವಿವರಗಳು |
 |
ಕೃಪೆ : ಉದಯವಾಣಿ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-09-02 00:00:00
|
|
|