ರೋಗ ನಿರೋಧಕ ಶಕ್ತಿ ಕುಂಠಿತ ದುಬಾಯಿಯಲ್ಲಿ ಸೂಪರ್ ಬಗ್ ಆತಂಕ |
ಪ್ರಕಟಿಸಿದ ದಿನಾಂಕ : 2010-09-02
ನಿರಂತರ ಆಂಟಿಬಯೊಟಿಕ್ ಗಳ ಬಳಕೆಯಿದ ಬ್ಯಾಕ್ಟೆರಿಯಾ ನಿರೋಧಕ ಶಕ್ತಿ ಎಲ್ಲೆಡೆ ಕ್ಷೀಣಿಸುತ್ತಿದೆ.ಆಸ್ಪತ್ರೆಗಳ ವಾತಾವರಣ ದಲ್ಲಿ ಇದು ಅತ್ಯಂತ ಹೆಚ್ಚಾಗಿದೆ ಎಂದು ಯು.ಏ.ಇ. ಸರ್ಕಾರದ ಆರೋಗ್ಯ ಸಂರಕ್ಷಣಾ ಯೋಜನೆಯು ದೃಢಪಡಿಸಿದೆ.
ಸಾಂಕ್ರಾಮಿಕ ರೋಗಗಳು ಹರಡದಂತೆ ಎಲ್ಲಾ ಆಸ್ಪತ್ರೆಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದ್ದು ವಿಚಿತ್ರ ಹಾಗೂ ತಡೆಯಲು ಅಸಾಧ್ಯವೆನಿಸ ಬಹುದಾದ ಸೂಪೆರ್ ಕ್ರಿಮಿಗಳು ಕಾಣಿಸಿ ಕೊಳ್ಳುವ ಬಗ್ಗೆ ತಜ್ನರು ಎಚ್ಚರಿಕೆ ನೀಡಿದ್ದಾರೆ.
ಆಸ್ಪತ್ರೆಯ ಒಳಗೆ ವೈದ್ಯರು ಅನಾವಶ್ಯಕ ರೋಗನಿರೋಧಕ ಔಷಧಿಗಳನ್ನು ಬಳಸುತ್ತಿದ್ದು ಅದರ ಪರಿಣಾಮವಾಗಿ ರೋಗ ನಿರೋಧಕ ಶಕ್ತಿಯಲ್ಲಿ ವ್ಯಾಪಕ ಕುಂಠಿತ ಅಗಿದೆ ಎಂದು ಸಾಂಕ್ರಮಿಕ ರೋಗ ತಡೆ ಸಮಿತಿಯ ಅಧ್ಯಕ್ಷ ಡಾ.ಅಶ್ರಫ್ ಮೊಹಮ್ಮದ್ ಅಭಿಪ್ರಾಯ ಪಟ್ಟಿದ್ದಾರೆ.ದುಬಾಯಿ ಆರೋಗ್ಯ ಇಲಾಖೆಯು ಸಾಂಸ್ಕೃತಿಕ ತಡೆ ಸಮಿತಿಯನ್ನು ನೇಮಿಸಿದ್ದು ದುಬಾಯಿಯ ಪ್ರಮುಖ ಆಸ್ಪತ್ರೆಗಳಾದ ರಶೀದ್, ಅಲ್ ವಸಲ್ ದುಬಾಯಿ ಆಸ್ಪತ್ರೆಗಳಲ್ಲಿಯು ಸಾಂಕ್ರಮಿಕ ರೋಗಗಳು ಹರಡುತ್ತಿವೆ.
ಇಲ್ಲಿ ಸಾಕಷ್ಟು ಭಾರತೇಯರಿದ್ದು ಪರಿಣಾಮ ಭಾರತ ಸೇರಿದಂತೆ ಇತರ ದೇಶಗಳಿಗೂ ವಿಸ್ತರಿಸುವ ಭಯವನ್ನು ಸಮಿತಿ ವ್ಯಕ್ತ ಪಡಿಸಿದೆ.
ಹೊಸತಾಗಿ ಪತ್ತೆಯಾಗಿರುವ 'ಎಂ ಆರ್ ಎಸ್ ಎ' ಸುಪೆರಬಗ್ ಬಾರಿ ಆತಂಕವನ್ನು ಸೃಷ್ಟಿಸಿದ್ದು ಅದನ್ನು ಸುಲಭವಾಗಿ ನಾಶ ಪಡಿಸುವುದೂ ಕಷ್ಟ ಮತ್ತು ಅದನ್ನು ಹಚ್ಚುವುದು ಸುಲಭವಲ್ಲ,ನಿದಾನ ಕೂಡಾ ಎಂದು ಹೇಳಲಾಗಿದೆ.
ಈ ಎಲ್ಲಾ ಭಯಗಳ ನಡುವೆ ಆಸ್ಪತ್ರೆಗಳಲ್ಲಿ ಸ್ವಚ್ಚತೆಯ ಬಗ್ಗೆ ವಿಶೇಷ ಗಮನ ಸೆಳೆಯುವ ಪ್ರಯತ್ನಗಳು ನಡೆಯುತ್ತಿವೆ.ಮುಂದಿನ ದಿನಗಳಲ್ಲಿ ಆಸ್ಪತ್ರೆಗೆ ಬರುವ ವೀಕ್ಷಕರಿಗೂ ಕೈಗಳನ್ನು ಸ್ವಚ್ಚವಾಗಿಡುವ ಕುರಿತು ಕಠಿಣ ನಿಯಮಾವಳಿಗಳನ್ನು ರೂಪಿಸಲಾಗುತ್ತಿದೆ ಎಂದು ವೈದ್ಯರಾದ ಎಯ್ ಹೌಫಿ ಪ್ರತಿಕ್ರಿಯಿಸಿದ್ದಾರೆ.
ವರದಿಯ ವಿವರಗಳು |
 |
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-09-02 00:00:00
|
|
|