ಲ೦ಡನ್ : ಭಾರತದ ಪ್ರಖ್ಯಾತ ವಿಜ್ಞಾನ ಲೇಖಕನಿಗೆ ಎಜಿಯು ಪತ್ರಿಕೋದ್ಯಮ ಪ್ರಶಸ್ತಿ |
ಪ್ರಕಟಿಸಿದ ದಿನಾಂಕ : 2010-09-02
ಲಂಡನ್, ಸೆ.1: ಭಾರತದ ಪ್ರಖ್ಯಾತ ವಿಜ್ಞಾನ ಪತ್ರಕರ್ತ ಪಲ್ಲವ ಬಾಗ್ಲಾ ಹಿಮಾಲಯದ ನೀರ್ಗಲ್ಲು ಗಳ ಮೇಲೆ ಹವಾಮಾನ ಬದಲಾವಣೆಯಿಂದ ಆಗುವ ಪರಿಣಾಮಗಳ ಕುರಿತು ಬರೆದಿರುವ ತಮ್ಮ ಲೇಖನಗಳಿಗಾಗಿ ವಿಜ್ಞಾನ ಪತ್ರಿಕೋದ್ಯಮದಲ್ಲಿನ ಘನತೆಗೆ ಕೊಡ ಮಾಡುವ ಪ್ರತಿಷ್ಠಿತ ಡೇವಿಡ್ ಪಾರ್ಲೆ ಮನ್ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.
ಈ ಪ್ರತಿಷ್ಠಿತ ಪುರಸ್ಕಾರವನ್ನು ಕೊಡುವ ಅಮೆರಿಕದ ಭೂಭೌತ ಒಕ್ಕೂಟ ಸಮಿತಿ(ಎಜಿಯು)ಯು ಭೂ ವಿಜ್ಞಾನಗಳಿಗೆ ಸಂಬಂಧಿಸಿದಂತೆ ಗಂಭೀರ ಸಮಸ್ಯೆಗಳನ್ನು ನಿವಾರಿಸುವಲ್ಲಿ ಬಾಗ್ಲಾ ನೀಡಿರುವ ಕೊಡುಗೆಯನ್ನು ಪರಿಗಣಿಸಿದೆ.
ಅವರ ಮೊದಲ ಎರಡು ಲೇಖನಗಳು, ವಿಜ್ಞಾನ ನಿಯತ ಕಾಲಿಕೆಯಲ್ಲಿ ಪ್ರಕಟವಾದ ‘ನೊ ಸೈನ್ ಆಫ್ ಹಿಮಾಲಯನ್ ಮೆಲ್ಟ್‌ಡೌನ್, ಇಂಡಿಯನ್ ರಿಪೋರ್ಟ್ ಫೈಂಡ್ಸ್’ ‘ಸೈನ್ಸ್’ ಪತ್ರಿಕೆಯಲ್ಲಿ ಪ್ರಕಟಗೊಂಡಿದ್ದು, ಅಮೆರಿಕ ಸರಕಾರದ ಹವಾಮಾನ ಬದಲಾವಣೆಯ ತಜ್ಞರ ಸಮಿತಿಯ ಹಿಮತಜ್ಞರ ನಡುವೆ ಭಿನ್ನಾಭಿಪ್ರಾಯ ಗಳನ್ನು ಸೃಷ್ಟಿಸಿತ್ತು ಎಂದೂ ಎಜಿಯು ಹೇಳಿಕೆಯೊಂದರಲ್ಲಿ ತಿಳಿಸಿದೆ.
ವರದಿಯ ವಿವರಗಳು |
 |
ಕೃಪೆ : ವಾಭಾ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-09-02 00:00:00
|
|
|