ವಾಷಿ೦ಗ್ಟನ್ : ಆಪರೇಷನ್ ಇರಾಕ್ ಅಂತ್ಯ : ಒಬಾಮ ಘೋಷಣೆ |
ಪ್ರಕಟಿಸಿದ ದಿನಾಂಕ : 2010-09-02
ವಾಶಿಂಗ್ಟನ್, ಸೆ.1: ಇರಾಕ್‌ನಲ್ಲಿ ಅಮೆರಿಕದ ಯುದ್ಧಾಭಿಯಾನ ಮುಕ್ತಾಯಗೊಂಡಿದೆಯೆಂದು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಇಂದು ಔಪಚಾರಿಕ ವಾಗಿ ಘೋಷಿಸಿದ್ದಾರೆ. ಮಹಾಭಿಯಾನವು 21ನೆ ಶತಮಾನದಲ್ಲಿ ಅಮೆರಿಕವು ತನ್ನ ನಾಯಕತ್ವವನ್ನು ಕಾಯ್ದುಕೊಳ್ಳಲು ಹಾಗೂ ಬಲಪಡಿಸಲು ಬಯಸಿದೆ ಯೆಂಬ ಸಂದೇಶವನ್ನು ವಿಶ್ವಕ್ಕೆ ನೀಡಲಿ ದೆಯೆಂದು
ಅವರು ಅಭಿಪ್ರಾಯಿಸಿದ್ದಾರೆ. ‘‘ಆತ್ಮವಿಶ್ವಾಸ ಹಾಗೂ ಬದ್ಧತೆಯಿಂದ ಮುಂದೆ ಸಾಗಬೇಕಾದರೆ ನಮ್ಮ ಭವಿಷ್ಯಕ್ಕೆ ನಾವೇ ರೂಪಕೊಡ ಬೇಕೆಂದು ಎಲ್ಲ ಅಮೆರಿಕನ್ನರಿಗೆ ಜ್ಞಾಪಿಸಲು ಈ ಮಹಾಕಾರ್ಯ ಸಹಾಯ ಮಾಡಲಿದೆ.
ಈ ಶತಮಾನದಲ್ಲೂ ಅಮೆರಿಕವು ತನ್ನ ನಾಯಕತ್ವವನ್ನು ಉಳಿಸಿ ಬಲಪಡಿಸುವುದೆಂಬ ಸಂದೇಶ ವನ್ನು ಇದು ವಿಶ್ವಕ್ಕೆ ನೀಡಲಿದೆ’’ ಎಂದು ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣವೊಂದರಲ್ಲಿ ಒಬಾಮ ಹೇಳಿದ್ದಾರೆ. ಇರಾಕ್‌ನಲ್ಲಿ ಅಮೆರಿಕದ ಯುದ್ಧಾಭಿಯಾನವು ಮುಕ್ತಾಯಗೊಂಡಿದೆಯೆಂದು ತಾನು ಘೋಷಿಸುವುದಾಗಿ ಅವರು ತನ್ನ ಓವಲ್ ಕಚೇರಿಯಿಂದ ಇಂದು ರಾತ್ರಿ ಮಾಡಿದ ನೇರ ಪ್ರಸಾರಿತ ಭಾಷಣದಲ್ಲಿ ತಿಳಿಸಿದ್ದಾರೆ.
ಇರಾಕ್ ಸ್ವಾತಂತ್ರ ಕಾರ್ಯಾಚರಣೆ ಮುಕ್ತಾಯಗೊಂಡಿದೆ. ಇನ್ನು ತಮ್ಮ ದೇಶದ ಭದ್ರತೆಯ ಹೊಣೆ ಇರಾಕಿಗಳಿಗೆ ಸೇರಿದೆ. ಇದು ಅಮೆರಿಕದ ಅಧ್ಯಕ್ಷನಾಗಿ ಅಮೆರಿಕದ ಪ್ರಜೆಗಳಿಗೆ ತನ್ನ ವಾಗ್ದಾನವಾಗಿದೆ ಎಂದು ಒಬಾಮ ಹೇಳಿದ್ದಾರೆ.
ಇರಾಕ್‌ನ ಭದ್ರತಾ ಪಡೆಗಳನ್ನು ಇಮ್ಮಡಿಗೊಳಿಸಿ ಅಲ್ಲಿನ ಸರಕಾರ ಹಾಗೂ ಜನತೆಗೆ ಬೆಂಬಲ ನೀಡು ವುದರೊಂದಿಗೆ ಅಲ್ಲಿಂದ ಅಮೆರಿಕದ ಪಡೆಗಳನ್ನು ಹಿಂದಕ್ಕೆ ಕರೆಸುವ ಯೋಜನೆಯನ್ನು ತಾನು ಫೆಬ್ರವ ರಿಯಲ್ಲೇ ಘೋಷಿಸಿದ್ದೆ. ಅದೀಗ ಸಾಕಾರ ಗೊಂಡಿದೆಯೆಂದು ಅವರು ನುಡಿದಿದ್ದಾರೆ. ಅಮೆರಿಕವು ಇರಾಕ್‌ನಿಂದ ತನ್ನ ಒಂದು ಲಕ್ಷದಷ್ಟು ಸೈನಿಕರನ್ನು ಹಿಂದಕ್ಕೆ ಕರೆಸಿಕೊಂಡಿದೆ. ಅದು ಅಲ್ಲಿನ ಅನೇಕ ಸೇನಾ ನೆಲೆಗಳನ್ನು ಮುಚ್ಚಿದೆ ಅಥವಾ ಇರಾಕಿಗಳಿಗೆ ವರ್ಗಾಯಿಸಿದ್ದು, ಲಕ್ಷಾಂತರ ಉಪಕರಣಗಳ ನ್ನು ಅಲ್ಲಿಂದ ತನ್ನ ದೇಶಕ್ಕೆ ಸಾಗಿಸಿರುವುದನ್ನು ಖಚಿತಪಡಿಸಿದೆ.
ಕೇವಲ ಇರಾಕ್‌ನ ಹಿತದೃಷ್ಟಿಯಿಂದ ಮಾತ್ರವಲ್ಲದೆ ಅಮೆರಿಕದ ಹಿತ ದೃಷ್ಟಿಯಿಂದಲೂ ಈ ಸಮರ ವನ್ನು ಕೊನೆಗೊಳಿಸಲಾಗಿದೆ. ಇರಾಕ್‌ನ ಭವಿಷ್ಯವನ್ನು ಅಲ್ಲಿನ ಜನತೆಯ ಕೈಗೆ ಒಪ್ಪಿಸುವುದಕ್ಕೆ ಅಮೆರಿಕ ಭಾರೀ ಬೆಲೆ ತೆತ್ತಿದೆ. ಇರಾಕ್‌ನಲ್ಲಿ ಭಾರೀ ತ್ಯಾಗ ಮಾಡುವುದಕ್ಕಾಗಿ ತಾವು ಅಮೆರಿಕದ ಯುವಕ- ಯುವತಿಯರನ್ನು ಕಳುಹಿಸಿದ್ದೆವು ಹಾಗೂ ದೇಶದಲ್ಲಿ ತೀವ್ರ ಆರ್ಥಿಕ ಬಿಕ್ಕಟ್ಟಿನ ನಡುವೆಯೂ ಅಲ್ಲಿ ಅಪಾರ ಸಂಪನ್ಮೂಲನವನ್ನು ವೆಚ್ಚ ಮಾಡಿದ್ದೆವು.
ಸಮರದ ಬೂದಿಯೊಳಗಿಂದ ಆ ನಾಗರಿಕತೆಯ ತೊಟ್ಟಿಲಲ್ಲಿ ಹೊಸ ಆರಂಭವು ಹುಟ್ಟಲಿ ಎಂಬ ಹಾರೈಕೆಯೊಂದಿಗೆ ತಾವಲ್ಲಿಂದ ನಿರ್ಗಮಿಸುತ್ತಿದ್ದೇವೆ ಎಂದು ಒಬಾಮ ಹೇಳಿದ್ದಾರೆ.
ಆಪರೇಷನ್ ಇರಾಕ್ ಅಂತ್ಯ
-ಅಮೆರಿಕ ಅಧ್ಯಕ್ಷ ಒಬಾಮಾ ಅಧಿಕೃತ ಘೋಷಣೆ
-೭ ವರ್ಷದಲ್ಲಿನ ಸೋಲು, ಗೆಲವಿನ ಪ್ರಸ್ತಾಪವಿಲ್ಲ
ಫೋರ್ಟ್‌ಬ್ಲಿಸ್: ಇರಾಕ್ ಮೇಲಿನ ಅಮೆರಿಕದ ವ್ಯರ್ಥ ದಾಳಿ ಅಂತ್ಯಗೊಂಡಿದೆ. ಸತತ ೭ ವರ್ಷಗಳ ಕಾಲ ಇರಾಕ್‌ನಲ್ಲಿ ಬೀಡುಬಿಟ್ಟಿದ್ದ ಅಮೆರಿಕ ಸೇನೆ ವಾಪಸ್ಸಾಗಿದ್ದು, ‘ಆಪರೇಷನ್ ಇರಾಕಿ ಫ್ರೀಡಂ’ ಕೊನೆಗೊಳಿಸಿರುವುದಾಗಿ ಅಮೆರಿಕ ಅಧ್ಯಕ್ಷ ಒಬಾಮಾ ಅಧಿಕೃತವಾಗಿ ಘೋಷಿಸಿದ್ದಾರೆ. ಈ ಮೂಲಕ ಸ್ವತಂತ್ರ ರಾಷ್ಟ್ರವಾಗುವ ಇರಾಕ್‌ನ ಕನಸು ನನಸಾದಂತಾಗಿದೆ. ಆದರೆ, ಇರಾಕ್‌ನಲ್ಲಿ ಇಷ್ಟು ವರ್ಷ ನಡೆಸಿದ ಯುದ್ಧದಿಂದ ಅಮೆರಿಕ ವಿಜಯ ಸಾಧಿಸಿದೆಯೋ, ಇಲ್ಲವೋ ಎಂಬ ಬಗ್ಗೆ ಒಬಾಮಾ ತುಟಿ ಬಿಚ್ಚದಿರುವುದು ಅಚ್ಚರಿ ಮೂಡಿಸಿದೆ.
ಒಬಾಮಾ ಭಾಷಣ: ಇರಾಕ್‌ನಲ್ಲಿನ ತಮ್ಮ ಸೇನಾ ಕಾರ್ಯಾಚರಣೆಯನ್ನು ಮುಕ್ತಾಯಗೊಳಿಸುವ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷ ಒಬಾಮಾ ಇರಾಕ್ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದರು. ‘ಇಂದಿನ ದಿನ ಇರಾಕ್ ಹಾಗೂ ಅಮೆರಿಕದ ಇತಿಹಾಸದಲ್ಲಿ ಬಹಳ ಮಹತ್ವಪೂರ್ಣ ಅಧ್ಯಾಯ. ಅಮೆರಿಕ ತನ್ನ ಯುದ್ಧವನ್ನು ಕೊನೆಗೊಳಿಸಿದೆ. ಇನ್ನು ಇರಾಕ್‌ನ ಭದ್ರತೆಯ ಜವಾಬ್ದಾರಿಯನ್ನು ಇರಾಕ್ ಜನತೆಯೇ ಹೊರಬೇಕು. ನಾವು ನಮ್ಮ ಮಾತಿನಂತೇ ನಡೆದಿದ್ದೇವೆ.
ಯುದ್ಧದ ಅಂತ್ಯ ಇರಾಕ್ ಹಿತಾಸಕ್ತಿಯಿಂದ ಅಲ್ಲ, ಬದಲಾಗಿ ಇದರಲ್ಲಿ ಅಮೆರಿಕದ ಹಿತಾಸಕ್ತಿಯೂ ಇದೆ. ಇರಾಕ್ ಸರ್ಕಾರದೊಂದಿಗಿನ ಒಪ್ಪಂದದ ಪ್ರಕಾರ ಮುಂದಿನ ವರ್ಷ ಇರಾಕ್‌ನಲ್ಲಿರುವ ನಮ್ಮ ಸೇನೆಯನ್ನು ಸಂಪೂರ್ಣವಾಗಿ ವಾಪಸ್ಸು ಪಡೆದುಕೊಳ್ಳುತ್ತೇವೆ’ ಎಂದು ಒಬಾಮಾ ಹೇಳಿದರು.
ಬುಷ್ ಜತೆಗೆ ಮಾತುಕತೆ: ಯುದ್ಧ ಅಂತ್ಯಗೊಳಿಸುವುದೆಂದು ಘೋಷಿಸುವ ಸ್ವಲ್ಪ ಹೊತ್ತಿನ ಮುಂಚೆ ಅಧ್ಯಕ್ಷ ಒಬಾಮಾ ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್ ಬುಷ್ ಅವರೊಂದಿಗೆ ಚರ್ಚಿಸಿದ್ದರು. ಇರಾಕ್ ಸರ್ವಾಧಿಕಾರಿ ಸದ್ದಾಂ ಹುಸೇನ್ ಅವರನ್ನು ಸದೆಬಡಿಯುವ ಸಲುವಾಗಿ ಬುಷ್ ಅವರೇ ೨೦೦೩ರ ಮಾರ್ಚ್‌ನಲ್ಲಿ ಇರಾಕ್ ಮೇಲೆ ಯುದ್ಧ ಸಾರಿದ್ದರು. ೭ ವರ್ಷಗಳ ಯುದ್ಧದಲ್ಲಿ ಸುಮಾರು ೪,೪೨೭ ಮಂದಿ ಅಮೆರಿಕ ಸೈನಿಕರು ಬಲಿಯಾಗಿದ್ದು, ೩೪,೨೬೮ ಮಂದಿ ಗಾಯಗೊಂಡಿದ್ದರು.
ಇರಾಕ್‌ಗೆ ಗೇಟ್ಸ್: ಒಬಾಮಾ ಅವರು ಯುದ್ಧ ಅಂತ್ಯಗೊಳಿಸುವ ಘೋಷಣೆ ಮಾಡುತ್ತಿದ್ದಂತೆಯೇ ಅಮೆರಿಕದ ರಕ್ಷಣಾ ಸಚಿವ ರಾಬರ್ಟ್ ಗೇಟ್ಸ್ ಇರಾಕ್‌ಗೆ ಆಗಮಿಸಿ ಅಮೆರಿಕ ಸೇನೆಯನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಇರಾಕ್‌ನ ಸಮಸ್ಯೆಗಳು ಇನ್ನೂ ಮುಗಿದಿಲ್ಲ. ಈಗ ಇರಾಕ್‌ನಲ್ಲಿರುವ ಅಮೆರಿಕ ಸೇನೆಯು ಉಗ್ರರ ವಿರುದ್ಧ ಹೋರಾಡಲು ಅಗತ್ಯವಿರುವ ಎಲ್ಲಾ ತರಬೇತಿಗಳನ್ನು ಇರಾಕ್ ಸೇನೆಗೆ ನೀಡಬೇಕು ಎಂದು ಹೇಳಿದರು.
ವರದಿಯ ವಿವರಗಳು |
 |
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-09-02 00:00:00
|
|
|