ಸೌದಿ ಅರೇಬಿಯಾ : ಜುಬೈಲಿನಲ್ಲಿ ರಸ್ತೆ ಅಪಘಾತ , ಭಟ್ಕಳದ ಯುವಕ ಸ್ಥಳದಲ್ಲೇ ಸಾವು , ಕಾಟಿಪಳ್ಳದ ಯುವಕನ ಸ್ಥಿತಿ ಗಂಭೀರ |
ಪ್ರಕಟಿಸಿದ ದಿನಾಂಕ : 2010-09-01
ಜುಬೈಲ್: (ಸೌದಿ ಅರೇಬಿಯಾ) : ಜುಬೈಲ್ ನಗರದಲ್ಲಿ ಕಾರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅದರಲ್ಲಿದ್ದ ಪ್ರಯಾಣಿಕರ ಪೈಕಿ ಒಬ್ಬ ಸುಟ್ಟು ಕರಕಲಾಗಿ ಸ್ಥಳದಲ್ಲೇ ಮೃತಪಟ್ಟರೆ ಮತ್ತೊ ಬ್ಬ ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾನೆ.
ದಮಾಮಿನ ಕಂಪ್ಯೂಟರ್ ಅಂಗಡಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿರುವ ಭಟ್ಕಳದ ಸಮೀರ್ ಮತ್ತು ಕಾಟಿಪಳ್ಳದ ನಿಸಾರ್ ಅಹಮದ್ ತಮ್ಮ ಕೆಲಸ ಮುಗಿಸಿಕೊಂಡು ಟೊಯೋಟಾ ಕೊರೋಲಾ ಕಾರಿ ನಲ್ಲಿ ಜುಬೈಲಿಗೆ ಹಿಂದಿರುಗುತ್ತಿದ್ದಾಗ ಕಾರು ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಈ ಸಂಧರ್ಭದಲ್ಲಿ ಕಾರಿಗೆ ಬೆಂಕಿಹೊತ್ತಿಕೊಂಡ ಕಾರಣ ಕಾರು ಚಲಾಯಿಸುತ್ತಿದ್ದ ಭಟ್ಕಳದ ಸಮೀರ್ (೨೩) ತೀವ್ರ ಸುಟ್ಟ ಗಾಯಗಳೊಂದಿಗೆ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಕಾರಿನಲ್ಲಿದ್ದ ನಿಸಾರ್ ತೀವ್ರವಾಗಿ ಗಾಯಗೊಂಡಿದ್ದು ದಮಾಮಿನ ಸೆಂಟ್ರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಮೀರ್ ಮೃತದೇಹವನ್ನು ದಮಾಮಿನ ಜನರಲ್ ಆಸ್ಪತ್ರಗೆ ಸಾಗಿಸಲಾಗಿದ್ದು ಅಲ್ಲಿನ ಶವಾಗಾರ ದಲ್ಲಿಡಲಾಗಿದೆ. ಮೊನ್ನೆ ತಾನೇ ಮದೀನಾ ಬಳಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಕೃಷ್ಣಾಪುರದ ಇಬ್ಬರು ಮಕ್ಕಳು ಮತ್ತು ಬಂಟ್ವಾಳದ ಒಬ್ಬರ ನಿಧನದ ದುಃಖ ಆರುವ ಮುನ್ನವೇ ನಡೆದ ಈ ದುರಂತ ಇಲ್ಲಿನ ಕನ್ನಡಿಗರನ್ನು ಅಘಾತಕ್ಕೀಡುಮಾಡಿದೆ.
ವರದಿಯ ವಿವರಗಳು |
 |
ಕೃಪೆ : ವಿಕೆನ್ಯೂ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-09-01 00:00:00
|
|
|