ಹಿಂದೂಗಳೆಂದು ನಂಬಿಸಿ ದಲಿತರಿಗೆ ಮೋಸ? |
ಪ್ರಕಟಿಸಿದ ದಿನಾಂಕ : 2010-09-01
ಮೈಸೂರಿನ ಕೈಲಾಸಪುರಂ ಬಡಾವಣೆಯ ದಲಿತ ಕಾಲನಿಗಳಿಗೆ ಪ್ರವೇಶಗೈದಿರುವ ಪೇಜಾವರ ಶ್ರೀಗಳು ಅಲ್ಲಿನ ದಲಿತರನ್ನು ರೋಮಾಂಚನಗೊಳಿಸಿದ್ದರು. ಅಲ್ಲಿನ ಮಾದಿಗರೊಂದಿಗೆ ಬೆರೆತ ಸ್ವಾಮೀಜಿ ಗಳು ಕೆಲವು ದಲಿತರ ಮನೆಗಳಿಗೂ ಭೇಟಿ ನೀಡಿ, ತಮ್ಮ ಹೃದಯವೈಶಾಲ್ಯತೆ ಯನ್ನು ಮೆರೆದರು. ಸ್ವಾಮೀಜಿಯ ಭೇಟಿಗಾಗಿ ದಲಿತರು ತಮ್ಮ ಕಾಲನಿಯನ್ನು ಶೃಂಗಾರಗೊಳಿಸಿ ದ್ದರು. ಮನೆ- ಅಂಗಳ ವನ್ನು ಶುಚಿಗೊಳಿಸಿದ್ದರಂತೆ. ಎಲ್ಲಕ್ಕಿಂತ ವಿಶೇಷವೆಂದರೆ, ದಲಿತ ಕಾಲನಿಗೆ ಭೇಟಿ ನೀಡಿದ ಪೇಜಾ ವರಶ್ರೀಗಳು ಒಂದು ಪ್ಯಾಕೇಜನ್ನು ದಲಿತರಿಗಾಗಿ ಘೋಷಿಸಿದ್ದರು.
‘ದಲಿತರು ಮದ್ಯ, ಮಾಂಸವನ್ನು ತ್ಯಜಿಸಿದರೆ ಅವರನ್ನು ತಾನು ವೈಷ್ಣವರಾಗಿಸುತ್ತೇನೆ’ ಎನ್ನುವುದೇ ಈ ದಲಿತ ಪ್ಯಾಕೇಜ್. ದಲಿತರು ಇಸ್ಲಾಂ ಧರ್ಮಕ್ಕೆ, ಕ್ರೈಸ್ತ ಧರ್ಮಕ್ಕೆ ಮತಾಂತರ ವಾಗುವ ಅಗತ್ಯ ವಿಲ್ಲ, ನನ್ನಲ್ಲೂ ಮತಾಂತರದ ಪ್ಯಾಕೇಜ್ ಇದೆ ಎನ್ನುವುದನ್ನು ಅವರು ದಲಿತರಿಗೆ ತಿಳಿಸಿದ್ದಾರೆ.
ದಲಿತ ಕಾಲನಿಗೆ ಪೇಜಾವರರು ನೀಡಿರುವ ಭೇಟಿ ಶ್ಲಾಘನೀಯವಾಗಿದೆ. ಆದರೆ ಅವರು ವ್ರತಧಾರಿಯಾಗಿ ದಲಿತರ ಕಾಲನಿಗೆ ಭೇಟಿ ನೀಡಿದ್ದರು. ದಲಿತರ ಮನೆಯಲ್ಲಿ ಅವರ ಮನೆ ದೇವರಿಗೆ ಪೂಜೆ ಯನ್ನೇನೋ ಸಲ್ಲಿಸಿದರು. ಆದರೆ ದಲಿತರ ಮನೆಯಲ್ಲಿ ಏನಾದರೂ ಉಂಡರೇ, ತಿಂದರೆ? ಎನ್ನುವು ದರ ಕುರಿತಂತೆ ಯಾವ ಪತ್ರಿಕೆಗಳಲ್ಲೂ ಮಾಹಿತಿಯಿರಲಿಲ್ಲ.
ಬಹುಶಃ ದಲಿತರ ಮನೆಯಲ್ಲಿ ಅವರು ಕೊಟ್ಟ ಒಂದು ಹಿಡಿ ಅವಲಕ್ಕಿಯನ್ನು ‘ಕೃಷ್ಣಾರ್ಪಣ’ ಎಂದು ಬಾಯಿಗೆ ಹಾಕಿಕೊಂಡಿದ್ದರೆ, ಅದು ರಾಜ್ಯ ಮಟ್ಟದಲ್ಲಿ ಕ್ರಾಂತಿ ಕಾರಕ ಸುದ್ದಿಯಾಗುತ್ತಿತ್ತು.
ಆದರೆ ಅಂತಹದೇನೂ ನಡೆಯಲಿಲ್ಲ. ಪೇಜಾವರರನ್ನು ಬೆರಳತುದಿಯಿಂದ ದಲಿತರು ಸ್ಪರ್ಶಿಸುತ್ತಿರು ವುದನ್ನೇ ಪತ್ರಿಕೆಗಳು ಮಹಾಕ್ರಾಂತಿ ಯೆಂಬಂತೆ ಛಾಪಿಸಿದ್ದವು. ಪೇಜಾವರರ ಪಾಲಿಗೆ ಅದೊಂದು ಮಹಾನ್ ಸಾಧನೆ ಮತ್ತು ಕ್ರಾಂತಿಯೇ ಆಗಿರಬಹುದು. ಆದರೆ ಶತಶತಮಾನ ಗಳಿಂದ ಅಸ್ಪಶತೆಯ ಅವಮಾನವನ್ನು ಅನುಭವಿಸಿಕೊಂಡು ಬಂದಿರುವ ದಲಿತರಿಗೆ ಅದರಿಂದ ಏನು ಪ್ರಯೋಜನವಾದಂ ತಾಯಿತು. ಪೇಜಾವರರು ದಲಿತ ಕಾಲನಿಯಲ್ಲಿ ದಲಿತರೊಂದಿಗೆ ಸಾಮೂಹಿಕ ಭೋಜನವನ್ನು ಮಾಡಿದ್ದರೆ ಆ ದಿನ ದಲಿತರ ಪಾಲಿಗೆ ಆಶಾದಾಯಕ ದಿನವಾಗುತ್ತಿತ್ತು. ಆದರೆ ಇದಕ್ಕೆ ಪೇಜಾವರರು ಸಿದ್ಧರಿರಲಿಲ್ಲ.
ವಿಪರ್ಯಾಸವೆಂದರೆ, ಕ್ರೆಸ್ತ, ಇಸ್ಲಾಂ ಧರ್ಮಕ್ಕೆ ದಲಿತರು ಮತಾಂತರವಾಗುವುದನ್ನು ತಡೆಯಲು ಪೇಜಾವರರು ಘೋಷಿಸಿದ ಪ್ಯಾಕೇಜ್. ದಲಿತರು ಮಾಂಸಾಹಾರವನ್ನು ತ್ಯಜಿಸುವುದಾದರೆ ಅವರನ್ನು ವೈಷ್ಣವ ಧರ್ಮಕ್ಕೆ ಮತಾಂತರ ಗೊಳಿಸಲು ತಾನು ಸಿದ್ಧ ಎಂದಿದ್ದಾರೆ ಅವರು. ಪೇಜಾವರ ಶ್ರೀಗಳು ಒಂದನ್ನು ಸ್ಪಷ್ಟಪಡಿ ಬೇಕು.

ಈಗ ಇರುವ ದಲಿತರು ಹಿಂದೂ ಧರ್ಮಕ್ಕೆ ಸೇರಿದವರಲ್ಲವೆ? ಅವರನ್ನು ಹಿಂದೂಗಳೆಂದು ನೀವು ಒಪ್ಪುತ್ತೀರಾದರೆ, ಅವರು ಮತ್ತೊಮ್ಮೆ ಮತಾಂತರವಾಗುವ ಆವಶ್ಯಕತೆ ಇದೆಯೆ? ಉಳಿದೆಲ್ಲ ಜಾತಿ ಗಳಿಗೆ ಈ ಮತಾಂತರದ ಅಗತ್ಯವಿಲ್ಲದೇ ಇರುವಾಗ ದಲಿತರನ್ನು ನೀವು ಒಪ್ಪಬೇಕಾದರೆ, ಸ್ವೀಕರಿಸಬೇಕಾದರೆ ಯಾಕೆ ಈ ಮತಾಂತರ ಅಗತ್ಯ ವಾಗುತ್ತದೆ? ಮಾಂಸಾಹಾರ ಉಳಿದೆಲ್ಲ ಜಾತಿಗಳ ಆಹಾರವಾಗಿರುವಂತೆಯೇ ದಲಿತ ರದ್ದೂ ಆಹಾರವಾಗಿದೆ.
ದಲಿತರಿಗೆ ಅವರದೇ ಆದ ಸಂಸ್ಕೃತಿಯಿದೆ. ದೈವ ದೇವರುಗಳಿವೆ. ಆಚರಣೆಗಳಿವೆ. ಅವರನ್ನು ನೀವು ಹಿಂದೂಗಳೆಂದು ಒಪ್ಪುವುದಾದರೆ, ಅವರೇಕೆ ಮತ್ತೊಮ್ಮೆ ವೈಷ್ಣವ ಧರ್ಮಕ್ಕೆ ಮತಾಂತರ ವಾಗಬೇಕು? ನಿಮ್ಮಂತೆಯೇ ಅವರೂ ಹಿಂದೂಗಳು ಎನ್ನುವುದು ನಿಜವೇ ಆಗಿದ್ದರೆ ನೀವೇಕೆ ಅವರ ಮನೆಯಲ್ಲಿ ಸಾಮೂಹಿಕವಾಗಿ ಸಸ್ಯಾಹಾರ ಊಟವನ್ನು ಮಾಡಬಾರದು? ಹಿಂದೂಗಳೆಲ್ಲ ಒಂದು ಎನ್ನುವುದನ್ನು ಎಲ್ಲಾ ವೇದಿಕೆಗಳಲ್ಲಿ, ಸಂಘ ಪರಿವಾರ ಹಮ್ಮಿಕೊಳ್ಳುವ ಹಿಂದೂ ಸಮಾ ವೇಶಗಳಲ್ಲಿ ಸಾರಿ ಸಾರಿ ಹೇಳುತ್ತಿರುವವರು ನೀವು. ಆದರೆ ಅನುಷ್ಠಾನದ ಸಮಯದಲ್ಲಿ ಮಾತ್ರ ದಲಿತರು ಬೇರೆಯಾಗುವುದು ಹೇಗೆ?
ಮತಾಂತರ ದಲಿತರ ಪಾಲಿಗೆ ಬಿಡುಗಡೆಯ ದಾರಿಯೂ ಕೂಡ. ಈ ದೇಶದಲ್ಲಿ ಲಕ್ಷಾಂತರ ದಲಿತರು, ಶೂದ್ರರು ಮತಾಂತರದ ಮೂಲಕ ಸಮಾನತೆಯ ಬದುಕನ್ನು ಕಂಡುಕೊಂಡಿದ್ದಾರೆ. ದಲಿತರ ಪಾಲಿಗೆ ಮತಾಂತರವೆನ್ನುವುದು ಆಧ್ಯಾತ್ಮಿಕ ಆವಶ್ಯಕತೆಯಷ್ಟೇ ಅಲ್ಲ, ಅದು ಅವರ ಪಾಲಿಗೆ ರಾಜಕೀಯ, ಸಾಮಾಜಿಕ, ಆರ್ಥಿಕ ಆವಶ್ಯಕತೆಯೂ ಕೂಡ. ಯಾವ ವೈಷ್ಣವ ಧರ್ಮ ತಮ್ಮನ್ನು ಚಂಡಾಲ, ನೀಚ ಎಂಬಿತ್ಯಾದಿಯಾಗಿ ಭಾವಿಸುತ್ತದೆಯೋ ಆ ಧರ್ಮವನ್ನು ದಲಿತರು ಯಾಕಾಗಿ ಗೌರವಿಸಬೇಕು.
ತಮ್ಮ ಸಂಸ್ಕೃತಿ, ಆಹಾರ ಪದ್ಧತಿ ಎಲ್ಲವನ್ನು ಬದಿಗಿಟ್ಟು ನೀವು ನೀಡುವ ವೈಷ್ಣವ ಧರ್ಮವನ್ನು ಆಚರಿ ಸಿದರೆ ಅದು ಅವರಿಗೆ ರಾಜಕೀಯ, ಸಾಮಾಜಿಕ ಬಿಡುಗಡೆಯನ್ನು ಕೊಡಬಹುದೆ? ಅಥವಾ ದಲಿತ ವೈಷ್ಣವರಾಗಿ ಮತ್ತೆ ತಮ್ಮ ಕಾಲನಿಯಲ್ಲಿ ದಿನನೂಕಬೇಕಾದೀತೋ?
ದಲಿತರು ಮನುಷ್ಯರು. ಇದನ್ನು ಪೇಜಾವರರು ಮೊದಲು ಪರಿಗಣಿಸಬೇಕಾಗಿದೆ. ಅವರಿಗೆ ಮನಸ್ಸು ಎನ್ನುವುದಿದೆ. ಅವರು ಹಿಂದೂಗಳು ಎನ್ನುವುದನ್ನು ಪೇಜಾವರರು ಒಪ್ಪುತ್ತಾರಾದರೆ, ಹಿಂದೂಗಳು ಎಂದು ಸಮಾನತೆಯಿಂದ ಕಂಡು ಗೌರವಿಸುತ್ತಾರಾದರೆ ಮತ್ತೆ ವೈಷ್ಣವರಾಗುವ ಅಗತ್ಯವೇನಿದೆ? ದಲಿತರನ್ನು ಹೀನಾಯವಾಗಿ ಕಾಣುತ್ತಿರುವುದರ ವಿರುದ್ಧ ಪೇಜಾವರರು ನೋವಿನಿಂದ ಮಾತನಾಡಿ ದ್ದಾರೆ.
ತನ್ನ ಸಮಾಜದ ಮುಖ್ಯವಾಹಿನಿಯಲ್ಲಿ ದಲಿತರನ್ನು ಕೊಂಡೊ ಯ್ಯುವ ಉದ್ದೇಶ ಪೇಜಾವರರಿ ಗಿದ್ದರೆ ಅದಕ್ಕೊಂದೇ ಮಾರ್ಗ. ದಲಿತರೊಂದಿಗೆ ಸಾಮೂಹಿಕ ಭೋಜನವನ್ನು ಮಾಡುವುದು. ಪೇಜಾವರರು ಇದಕ್ಕೆ ಸಿದ್ಧರಿದ್ದಾರೆಯೆ? ಈ ಪ್ರಶ್ನೆಗೆ ಪೇಜಾವರರು ನೀಡುವ ಉತ್ತರದಿಂದ, ದಲಿತರು ಹಿಂದೂಗಳು ಹೌದೋ, ಅಲ್ಲವೋ ಎನ್ನುವುದು ಸಾಬೀತಾಗಿ ಬಿಡುತ್ತದೆ.
ದಲಿತರನ್ನು ಹಿಂದೂಗಳೆಂದು ನಂಬಿಸಿ, ವಂಚಿಸಿ ಅವರನ್ನು ಮುಸ್ಲಿಮರ, ಕ್ರೈಸ್ತರ ವಿರುದ್ಧ ಎತ್ತಿ ಕಟ್ಟುವ ಕೆಲಸ ಹಿರಿಯರಾದ ಪೇಜಾವರಶ್ರೀಗಳಿಗೆ ಶೋಭಿಸು ವುದಿಲ್ಲ. ದಲಿತರಿಗೆ ಯಾವುದೇ ನ್ಯಾಯವನ್ನು ಕೊಡದೆ, ಅವರನ್ನು ಸಂಘಪರಿವಾರದ ಕುಕೃತ್ಯಗಳಿಗೆ ಬಲಿಕೊಡುವ ಉದ್ದೇಶದಿಂದ ಪೇಜಾವರರು ದಲಿತಕಾಲನಿಗೆ ಕಾಲಿಟ್ಟಿದಿದ್ದರೆ ಅದಕ್ಕಿಂತ ಅನ್ಯಾಯ, ಮೋಸ ಇನ್ನೊಂದಿಲ್ಲ.
ದಲಿತರನ್ನು ಪೇಜಾವರರು ವೈಷ್ಣವಧರ್ಮಕ್ಕೆ ಸೇರಿಸದಿದ್ದರೂ ಚಿಂತಿಲ್ಲ, ಹಿಂದೂಗಳೆಂದು ಒಪ್ಪದಿದ್ದರೆ ಚಿಂತಿಲ್ಲ. ದಲಿತರನ್ನು ದಲಿತರಷ್ಟಕ್ಕೇ ಬಿಡಲಿ. ದಲಿತರು ಇಂಗ್ಲಿಷ್ ಕಲಿಯಲಿ. ಕಂಪ್ಯೂಟರ್ ಕಲಿಯಲಿ. ವಿದ್ಯಾವಂತರಾಗಲಿ. ಶೋಷಿತ ಬದುಕಿನಿಂದ ಹೊರ ಬರುವ ದಾರಿ ಅವರಿಗೆ ಆ ಮೂಲಕವೇ ತೆರೆದುಕೊಳ್ಳುತ್ತದೆ. ಪೇಜಾವರರಂತಹ ಹಿರಿಯ ಸ್ವಾಮೀಜಿಗಳು ದಲಿತರ ಆ ದಾರಿಗೆ ಯಾವ ಕಾರಣಕ್ಕೂ ತಡೆಯಾಗದಿರಲಿ.
ವರದಿಯ ವಿವರಗಳು |
 |
ಕೃಪೆ : ಸಂಪಾದಕೀಯ; ವಾರ್ತಾ ಭಾರತಿ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-09-01 00:00:00
|
|
| hassanmukha, mangalore/ksa | 2010-09-03 | | ಅಂದರೆ ಜಾತಿ ವ್ಯವಸ್ತೆಯನ್ನು ಮಾಡಿದ ಮನು ಮತ್ತು ಅವನ ಕೂಟವನ್ನು ತಲೆ ಕೆಟ್ಟವರು ಅಂತ ಹೇಳುತಿರೋ ಮಿ.ರೋಶನ್? ಪಾನ್ಚಜನ್ಯರಿಗೆ ಬೇಸರವಾದೀತು. |
| ರೋಶನ್, ಮಂಗಳೂರು | 2010-09-01 | | ಹಸನ್ ಮುಕ್ಕ ರವರೆ ಪಾಂಚಜನ್ಯ ಏನು ಪ್ರತಿಕ್ರಿಯೆ ಮಾಡುತ್ತಾರೊ ಅದೇ ಪ್ರತಿಕ್ರಿಯೆಯನ್ನು ನಿಜವಾದ ಭಾರತೀಯ ಮಾಡುತ್ತಾನೆ. ಇಸ್ಲಾಂ, ಕ್ರೈಸ್ತರಲ್ಲಿ ಇರದ ಹಿಂದುಳಿದವರು, ದಲಿತರು, ಹಿಂದುಗಳಲ್ಲಿ ಯಾಕೆ? ಯಾರೋ ತಲೆಕೆಟ್ಟವರು ಮಾಡಿದ ಈ ವ್ಯವಸ್ಥೆಯನ್ನು ರಾಜಕೀಯವಾಗಿ ಚೆನ್ನಾಗಿ ಬಳಸಿ ಕೊಂಡಿದ್ದು ರಾಜಕಾರಣಿಗಳು ಮಾತ್ರ ಸ್ವಾತಂತ್ರ್ಯದ ನಂತರ ಇಲ್ಲಿವರೆಗೆ ಎಷ್ಟು ಕೋಟಿ ಕೋಟಿ ಯೋಜನೆ ಹಾಕಿದ್ದಾರೆ? ಏಷ್ಟು ಖರ್ಚು ಮಾಡಿದ್ದಾರೆ? ಎಷ್ಟು ಹಿಂದುಳಿದವರು ಮುಂದೆ ಬಂದಿದ್ದಾರೆ. ಯಾರಾದರೂ ಹೇಳಬಲ್ಲಿರಾ? ಬಿಟ್ಟಿ ಸಿಕ್ಕಿದರೆ, ಸಿಗುವವರೆಗೆ ಹಿಂದುಳಿದ ಸ್ಥಿತಿಯಲ್ಲಿರುತ್ತಾರೆ. ಹುಚ್ಚಿಮುಂಡೆ ಮದುವೇಲಿ ಉಂಡವನೇ ಜಾಣ. |
| Panchajanya, Kuwait | 2010-09-01 | | ಇದಕ್ಕೆ ನನ್ನ ಮೊದಲ ಪ್ರತಿಕ್ರಿಯೆ ಇದು ಯಾವ ಪತ್ರಿಕೆಯಲ್ಲಿ ಬಂದ ವರದಿ ಎಂಬುದನ್ನು ಮೊದಲು ನೋಡಿ. ಆ ಪತ್ರಿಕೆ ನಿಮಗೆ ಮಾತ್ರ ಮೀಸಲು ಮತ್ತು ಮೂಸಲು. ಇನ್ನು ಹೆಚ್ಚಿನ ಪ್ರತಿಕ್ರಿಯೆ ಬೇಕೇ?
ಸರಿ ನಿಮಗೇಕೆ ಬೇಸರ ಮಾಡಿಸಲಿ ?ಕೇಳಿ ಇಲ್ಲಿ , ಪೇಜಾವರ ಶ್ರೀ ಹೇಳಿದಂತೆ ದಲಿತರು ಹಿಂದುಗಳಾದರೆ ಅವರನ್ನು ವೈಷ್ಣವಧರ್ಮಕ್ಕೆ ಸೇರಿಸುವ ಅಗತ್ಯ ಏನಿದೆ ಎಂಬುದೇ ತಾನೇ ನಿಮ್ಮ ಪ್ರಶ್ನೆ?....!ಅನಾದಿ ಕಾಲದಿಂದಲೂ ಹಿಂದುಗಳಲ್ಲಿ ವೈಷ್ಣವ ಮತ್ತು ಶೈವ ಧರ್ಮಗಳೆಂಬ ಎರಡು ಪಂಗಡಗಳಿದ್ದವು. ಕ್ರಿಶ್ಚಿಯನ್ನರಲ್ಲಿ ರೋಮನ್ ಕೆಥೋಲಿಕ್, ಬ್ಯಾಪ್ಟಿಸ್ಟ್, ಒರ್ತೋಡಾಕ್ಸ್, ಮೊದಲಾದ ಪಂಗಡಗಳಿರುವಂತೆ, ಜೈನರಲ್ಲಿ ಶ್ವೆತಂಬರ ಮತ್ತು ದಿಗಂಬರ ಎಂಬ ಪಂಗಡಗಳಿಲ್ಲವೇ ಹಾಗೆ. ಅಷ್ಟೇ ಏಕೆ ನಿಮ್ಮ ಧರ್ಮದಲ್ಲಿಯೂ ಶಾಫಿ,ಸಲಫಿ,ಸುನ್ನಿ ..ಇನ್ನಿತರ ಪಂಗಡಗಳಿಲ್ಲವೇ ಹಾಗೆಯೇ! ಆಯಾ ಪಂಗಡದ ಪ್ರತಿಪಾದಕರು ಅನುಸರಿಸಿದಂತೆ ಮಾರ್ಗದರ್ಶನ ನೀಡಿದಂತೆ ಅವರ ಅನುಯಾಯಿಗಳು, ಹಿಂಬಾಲಕರು ಮುಂದುವರೆಯುತ್ತಾರೆ....ದ್ವೈತ ಸಿದ್ದಾಂತ ,ಅದ್ವೈತ ಸಿದ್ದಾಂತ, ವಿಶಿಷ್ಟಾದ್ವೈತ ಸಿದ್ದಾಂತ ವನ್ನು ಪ್ರತಿಪಾದಿಸಿದ ಅಚಾರ್ಯತ್ರಯರಾದ ಶಂಕರಾಚಾರ್ಯ, ರಾಮಾನುಜಾಚಾರ್ಯ, ಮಧ್ವಾಚಾರ್ಯ ರು ತಮ್ಮದೇ ಆದ ಮಾರ್ಗಸೂತ್ರದಲ್ಲೇ ತಮ್ಮ ಶಿಷ್ಯವೃಂದ ವನ್ನು, ಅನುಯಾಯಿಗಳನ್ನು, ಭಕ್ತವೃಂದವನ್ನು ಮುನ್ನಡೆಸಿಕೊಂಡು ಬಂದರು. ಹಾಗೆಯೇ ಪೇಜಾವರ ಶ್ರೀ ವೈಷ್ಣವ ಧರ್ಮ ಎಂದು ಹೇಳಿದ್ದಾರೋ ಅಂದರೆ ಆ ಪಂಗಡದ , ಸಿದ್ದಾಂತದ ಅನುಯಾಯಿಗಳಾದ ಅವರು,ಅಹಿಂಸೆಯನ್ನು ನಾಶಮಾಡಿ ಬರುವುದಾದರೆ, ಅಂದರೆ ಮಾಂಸಹಾರವನ್ನು ತ್ಯಜಿಸಿ ಬರುವುದಾದರೆ, ಜೊತೆಗೆ ಸಮಾಜಕಂಟಕ ಮದ್ಯಸೇವನೆಯನ್ನು ಬಿಟ್ಟು ಬರುವುದಾದರೆ ವೈಷ್ಣವ ಪಂಗಡ(ಧರ್ಮ)ದ ದೀಕ್ಷೆಯನ್ನು ನೀಡುವುದಾಗಿ ಹೇಳಿದ್ದರು. ಅಹಾರಪದ್ಧತಿಯಲ್ಲಿ ಮತ್ತು ಉಡುಗೆತೊದುಗೆಗಳಲ್ಲಿ ಇರುವ ಭಿನ್ನತೆಯೇ ಅಲ್ಲವೇ ಧರ್ಮಧರ್ಮಗಳಲ್ಲಿ ಮತ್ತು ಪಂಗಡಗಳಲ್ಲಿ ತನ್ನದು ಮಾತ್ರ ಮಿಗಿಲು ಎಂಬ ಭಾವನೆ ಮೂಡಿಸುವುದು? ಶೈವ ಪಂಗಡದ ಜನ ಶಿವನನ್ನು ಆರಾಧಿಸುತ್ತಾರೆ,ವೈಷ್ಣವ ಪಂಗಡದವರು ವಿಷ್ಣುವನ್ನು ಆರಾಧಿಸುತ್ತಾರೆ.ನಮ್ಮ ದೋಸೆಯಲ್ಲಿ ತೂತು ಹುಡುಕಲು ಹೊರಡಬೇಡಿ. ನಿಮ್ಮ ಕಾವಲಿಯಲ್ಲೇ ತೂತು ಇರುವಾಗ......!ನಿಮ್ಮ ಎಲ್ಲ ಪದ್ಧತಿಗಳು ನಮಗೆ ಉಲ್ಟಾ ಎಂದುಕೊಂಡರೆ, ನಿಮ್ಮಲ್ಲೇ ಇರುವ ಕೆಲವು ಪಂಗಡಗಳು ನಿಮಗೆ ಉಲ್ಟಾ ಇದೆಯಲ್ಲ...?ಅಥವಾ ನಿಮ್ಮ ಆಚರಣೆಗಳೇ ಅವರಿಗೆ ಉಲ್ಟಾವೆ?. ನಿಮ್ಮ ಉಪವಾಸ ವ್ರತ ಶುರುವಾದ ಮರುದಿನ ಕೆಲ ಪಂಗಡದ ಜನ ಶುರು ಮಾಡುತ್ತಾರೆ ಅಲ್ಲವೇ?. ನೀವು ರಂಜಾನ್ ಹಬ್ಬ ಆಚರಣೆ ಮಾಡುವ ಮರುದಿನ ಕೆಲವು ಪಂಗಡ ಜನರು ಹಬ್ಬ ಆಚರಿಸುತ್ತಾರೆ ಅಲ್ಲವೇ? ಕೆಲವು ಪಂಗಡದ ಜನರು ಪ್ರತ್ಯೇಕ ಮಸೀದಿಗಳಿಗೆ ಹೋಗುತ್ತಾರೆ ಏಕೆ?ಅವರನ್ನೇಕೆ ನಿಮ್ಮ ಮಸೀದಿಗೆ ಸೇರಿಸುವುದಿಲ್ಲ ?. ನಿಮ್ಮ ಪತ್ರಿಕೆಗೆ ಹೇಳಿ ಮೊದಲು ಆ ಕಾವಲಿಯ ತೂತನ್ನು ಮುಚ್ಚಲು.!ಮತ್ತೆ ಹಿಂದೂಗಳ ವಿಷಯಕ್ಕೆ ಬರಲಿ.!
ಇಂದು ಶ್ರೀಕೃಷ್ಣ ಜಯಂತಿ. ಪೇಜಾವರ ಶ್ರೀ ಯವರು ಅವರದೇ ಆದ ವ್ರತಾಚರಣೆಯಲ್ಲಿ ತೊಡಗಿರಬಹುದು...ಅಥವಾ ಉಪವಾಸದಲ್ಲಿಯೇ ಇರಬಹುದು.ನೀವೀಗ ಆಚರಿಸುತ್ತಿಲ್ಲವೇ...?ನಿಮಗೀಗ ಊಟಮಾಡಿ ಎಂದರೆ ನೀವು ತಯಾರಿದ್ದೀರಾ?ಅಂತಹದರಲ್ಲಿ ಅವರು ಊಟ ಮಾಡಲಿಲ್ಲ ಎಂದು ಮೊಸರಿನಲ್ಲಿ ಕಲ್ಲು ಹುಡುಕಲು ಹೊರಟಿರುವುದು ಯಾಕೆ?
ನಿಮ್ಮ ಪತ್ರಿಕೆಯ ಸಂಪಾದಕರು ಹೇಳಿರುವ ಪ್ರಕಾರ ಮತಾಂತರ ಎನ್ನುವುದು ದಲಿತರಿಗೆ ಬಿಡುಗಡೆಯ ದಾರಿ. ಹಾಗಿದ್ದರೆ ಭಾರತದಲ್ಲಿರುವ ಮುಸ್ಲಿಮರೆಲ್ಲ ಒಂದು ಕಾಲದಲ್ಲಿ ದಲಿತರಾಗಿದ್ದರು ಎಂದು ಹೇಳಿದ ಹಾಗಾಯ್ತು. ಈಗ ಏನಂತೀರಿ ಅದಕ್ಕೆ?. ಸ್ವತಂತ್ರ ಭಾರತದಲ್ಲಿ 63 ವರ್ಷಗಳಿಂದಲೂ ದಲಿತರನ್ನು ಮೇಲೆ ತರುವ ಪ್ರಯತ್ನ ನಡೆಯುತ್ತಲೇ ಇದೆ. ಇಷ್ಟು ವರ್ಷಗಳಾದರೂ ಅವರಿಗೆ ಮೇಲೆ ಬರಲಾಗಲಿಲ್ಲ ಎಂದರೆ ಅದು ರಾಜಕೀಯ ಪಕ್ಷಗಳ ಕಸರತ್ತಿನ ಪ್ರಭಾವ. ಇಷ್ಟೆಲ್ಲಾ ಮಾಡುವುದರ ಬದಲು ಅವರಿಗೆ ಶಿಕ್ಷಣವನ್ನು ಕಡ್ಡಾಯ ಮಾಡಿದ್ದರೆ ಸಾಕಿತ್ತು. ಸುಶಿಕ್ಷಿತ ದಲಿತರಿಗೆ ಮಾತ್ರ ಮೀಸಲಾತಿ ಎಂದು ಮಾಡಿದ್ದರೆ ಅವರು ಯಾವಾಗಲೋ ಪ್ರಗತಿ ಹೊಂದುತ್ತಿದ್ದರು. ರಾಜಕೀಯದಾಟದಲ್ಲಿ ದಲಿತರು ಸೊರಗಿದರು ಮಾತ್ರವಲ್ಲ, ಇತರ ಧರ್ಮಗಳ ಪುಸಲಾಯಿಸುವಿಕೆಗೆ ಮರುಳಾಗಿ ತಮ್ಮ ನೆಮ್ಮದಿಯನ್ನೇ ಕಳೆದುಕೊಂಡರು. ಅದಕ್ಕಾಗಿ ನೀವು ಕೂಡ ಮನೆಬಿಟ್ಟು ಹೋಗಬೇಡಿ ಉಳಿದವರಂತೆ ಎಂದು ದಲಿತರಿಗೆ ಪೇಜಾವರಶ್ರೀಯವರು ಜಾಗೃತಿಯನ್ನು ಉಂಟುಮಾಡುತ್ತಿರುವುದು ಬಹುಷಃ ಆ ಸಂಪಾದಕರಿಗೆ ಏಕೆ ತಡೆದು ಕೊಳ್ಳಲಾಗುತಿಲ್ಲ ಎಂಬುದು ಇಡೀ ಮಂಗಳೂರಿಗೆ ಗೊತ್ತಿದೆ.
ಇಂತಹ ವರದಿಗೆ ತಲೆಕೆಡಿಸಿಕೊಳ್ಳದೆ ವಿಶಾಲವಾಗಿ ಯೋಚಿಸುವುದನ್ನು ಆರಂಬಿಸಿ ಹಸನ್ಮುಖ ಅವರೇ.......ಇನ್ನು ಹೆಚ್ಚಿನ ಪ್ರತಿಕ್ರಿಯೆ ಬೇಕೇ?think my friend....! |
| hassanmukha, mangalore | 2010-09-01 | | ಪಾಂಚಜನ್ಯ ,
ಮೇಲೆ ತಿಳಿಸಿದ ವರದಿಗೆ ತಮ್ಮ ಪ್ರತಿಕ್ರಿಯೆಯನ್ನು ನಿರೀಕ್ಷಿಸುವ ,
ಹಸ್ಸನ್ಮುಖ |
|