ನನ್ನ ಏಕಾಂತಕ್ಕೆ ಮೆಟ್ರೋ ಲಗ್ಗೆ : ಬಚ್ಚನ್ |
ಪ್ರಕಟಿಸಿದ ದಿನಾಂಕ : 2010-09-01
ಮೆಟ್ರೋ ರೈಲು ತನ್ನ ಏಕಾಂತಕ್ಕೆ ಭಂಗ ತರಲಿದೆ ಎಂದು ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಂಬಯಿ : ತನ್ನ ಪ್ರತೀಕ್ಷಾ ಬಂಗಲೆಯಿಂದ ಹಾದು ಹೋಗಲಿರುವ ಪ್ರಸ್ತಾವಿತ ಮೆಟ್ರೋ ರೈಲು ತನ್ನ ಏಕಾಂತಕ್ಕೆ ಭಂಗ ತರಲಿದೆ ಎಂದು ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರ ಹೇಳಿಕೆಗೆ ರಾಜಕೀಯ ಪಕ್ಷಗಳಿಂದ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಮೆಟ್ರೋ ರೈಲು ಮುಂಬಯಿ ನಗರಾದ್ಯಂತ ಹಾದು ಹೋಗಲಿದೆ. ಕೆಲವು ಕಡೆ ಭೂಗತವಾಗಿ, ಕೆಲವೆಡೆ ಸಿಮೆಂಟ್ ರಚನೆಗಳಲ್ಲಿ ಹಳಿಗಳು ಸಿದ್ಧವಾಗುತ್ತಿವೆ. ಜನದಟ್ಟನೆಯ ಸ್ಥಳೀಯ ಪ್ರಯಾಣಿಕರಿಗೆ ಹೊಸ ಪ್ರಯಾಣದ ವ್ಯವಸ್ಥೆಯಾಗುತ್ತಿದೆ. ತ್ರಿಚಕ್ರ ವಾಹನ ಮತ್ತು ಹಳದಿ-ಕಪ್ಪು ಬಣ್ಣದ ಕ್ಯಾಬ್‌ಗಳಿಗೆ ಅನಿಶ್ಚಿತತೆ ತರಲಿದೆ. ಪ್ರತೀಕ್ಷಾ ಬಳಿಯಲ್ಲಿ ಮೆಟ್ರೋ ರೈಲು ಹಾದು ಹೋಗಲಿದೆ. ಅದು ನನ್ನ ಏಕಾಂತಕ್ಕೆ ಗುಡ್‌ಬೈ ಹೇಳಲಿದೆ ಎಂದು ಬಚ್ಚನ್ ಬ್ಲಾಗ್‌ನಲ್ಲಿ ಬರೆದಿದ್ದಾರೆ.
ಅವರ ಈ ನಿಲುವಿಗೆ ಶಿವಸೇನೆ, ಕಾಂಗ್ರೆಸ್ ಮತ್ತು ಎಂಎನ್‌ಎಸ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿವೆ.
ಮುಂಬಯಿ ಉಪನಗರ ಉಸ್ತುವಾರಿ ಸಚಿವ ನಸೀಮ್ ಖಾನ್ ಅವರು ಬಚ್ಚನ್ ಹೇಳಿಕೆ ದುರದೃಷ್ಟಕರ ಎಂಬುದಾಗಿ ಹೇಳಿದ್ದಾರೆ. ಬಚ್ಚನ್ ಇತರ ಜನರ ಹಿತಾಸಕ್ತಿಯ ಬಗ್ಗೆ ಕೂಡಾ ಕೇರ್ ತೆಗೆದುಕೊಳ್ಳಬೇಕಾಗಿದೆ. ಲಕ್ಷಾಂತರ ಪ್ರಯಾಣಿಕರ ಅಗತ್ಯವನ್ನು ಅವರು ಅರ್ಥಮಾಡಿಕೊಳ್ಳಬೇಕಾಗಿದೆ ಎಂದರು.
ಪ್ರತಿಯೊಬ್ಬರೂ ಏಕಾಂತವನ್ನು ಬಯಸುತ್ತಾರೆ. ಆದರೆ ಜನರ ಅವಶ್ಯಕತೆಗಳನ್ನು ನಿರ್ಲಕ್ಷಿಸಲಾಗದು ಎಂದು ಶಿವಸೇನಾ ನಾಯಕ ಸಂಜಯ್ ನಿರುಪಮ್ ಪ್ರತಿಕ್ರಿಯಿಸಿದ್ದಾರೆ.
ವ್ಯಕ್ತಿಯೊಬ್ಬನಿಗಾಗಿ ಅಭಿವೃದ್ಧಿ ಕಾಮಗಾರಿಯನ್ನು ನಿಲ್ಲಿಸುವಂತಿಲ್ಲ. ಯೋಜನೆ ಮಂಜೂರಾಗುವಾಗ ಅಕ್ಷೇಪ ವ್ಯಕ್ತಪಡಿಸದ ಬಚ್ಚನ್ ಈಗ ಯಾಕೆ ಹಾಗೆ ಮಾಡುತ್ತಿದ್ದಾರೆ ಎಂದು ಎಂಎನ್‌ಎಸ್ ವಕ್ತಾರ ನಿತಿನ್ ಸರ್‌ದೇಸಾಯಿ ಪ್ರಶ್ನಿಸಿದ್ದಾರೆ.
ಎಂಎಂಆರ್‌ಡಿಎ ಮುಖೇನ 32 ಕಿ.ಮೀ. ಉದ್ದದ ಚಾರ್ಕೋಪ್-ಬಾಂದ್ರಾ-ಮಾನ್‌ಕುರ್ಡ್ ಮೆಟ್ರೋ ರೈಲು ಮಾರ್ಗವನ್ನು ರಾಜ್ಯ ಸರಕಾರ ನಿರ್ಮಿಸುತ್ತಿದೆ. 22 ಲಕ್ಷ ಪ್ರಯಾಣಿಕರು ಇದರ ಪ್ರಯೋಜನ ಪಡೆಯಲಿದ್ದಾರೆ
ವರದಿಯ ವಿವರಗಳು |
 |
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-09-01 00:00:00
|
|
| ಉಬೈದ್ ಉಜಿರೆ, ದುಬೈ | 2010-09-01 | | ಬಚ್ಚನ್‌ರವರೆ ನಿಮಗೆ ಸರಕಾರದ ವತಿಯಿಂದ ಬಂಗಲೆ ಕಟ್ಟಿಸಿಕೊಟ್ಟರೆ ತ್ರಪ್ತಿ ಆಗಬಹುದೇ? |
|