ಈದ್ ಹಬ್ಬದ ಪ್ರಯುಕ್ತ ಪಾಕ್‌ನಲ್ಲಿ ಬಾಲಿವುಡ್‌ಚಿತ್ರಗಳಿಗೆ ನಿರ್ಬಂಧ |
ಪ್ರಕಟಿಸಿದ ದಿನಾಂಕ : 2010-08-28
ಈದ್ ಹಬ್ಬದ ಸಂದರ್ಭದಲ್ಲಿ ಭಾರತೀಯ ಹೊಸ ಸಿನಿಮಾ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎಂದು ಪಾಕಿಸ್ತಾನ ಸರ್ಕಾರ ತಿಳಿಸಿದೆ.
ಇಸ್ಲಾಮಾಬಾದ್ (ಐಎಎನ್‌ಎಸ್): ದೇಶೀಯ ಸಿನಿ ಉದ್ಯಮಕ್ಕೆ ಬೆಂಬಲ ನೀಡುವ ಉದ್ದೇಶದಿಂದ ಪಾಕ್ ಸರ್ಕಾರ ಈ ನಿರ್ಧಾರ ಪ್ರಕಟಿಸಿದೆ ಎಂದು ಸಾಂಸ್ಕೃತಿಕ ಖಾತೆ ಸಚಿವ ಪೀರ್ ಆಫ್ತಾಬ್ ಷಾ ಜಿಲಾನಿ ಹೇಳಿದ್ದಾರೆ. ರಂಜಾನ್ ಉಪವಾಸದ ಹಿನ್ನೆಲೆಯಲ್ಲಿ ಸಿನಿಮಾ ಮತ್ತು ಮನರಂಜನಾ ಉದ್ಯಮ ಕ್ಷೀಣಿಸಿದೆ. ಈದ್ ಸಂದರ್ಭದಲ್ಲಿ ಮತ್ತೆ ಚೇತರಿಸುವ ಸಾಧ್ಯತೆ ಇದೆ. ಹಾಗಾಗಿ ಪಾಕ್ ಸಿನಿಮಾಗಳಿಗೆ ಮಾತ್ರ ಅವಕಾಶ ನೀಡಲಾಗಿದೆ ಎಂದರು.
ಭಾರತೀಯ ಚಾನೆಲ್‌ಗಳಿಗೆ ಕೊಕ್: ಪಾಕಿಸ್ತಾನದ ಕೇಬಲ್ ಅಪರೇಟರ್‌ಗಳು ಭಾರತೀಯ ಚಾನೆಲ್‌ಗಳ ಮನರಂಜನಾ ಕಾರ್ಯಕ್ರಮ ಹಾಗೂ ಬಾಲಿವುಡ್ ಸಿನಿಮಾಗಳ ಪ್ರಸಾರವನ್ನು ನಿಲ್ಲಿಸಿವೆ.
ಮಾಧ್ಯಮ ನಿಯಂತ್ರಣ ಘಟಕ ನೀಡಿದ ಆದೇಶಕ್ಕೆ ಅನುಸಾರವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಬಲ್ ಅಪರೇಟರ್‌ಗಳು ತಿಳಿಸಿದ್ದಾರೆ.
ವರದಿಯ ವಿವರಗಳು |
 |
ವರದಿಗಾರರು : ಪ್ರವೀಣ್ ಪ್ರಭಾಕರ್
ಪ್ರಕಟಿಸಿದ ದಿನಾಂಕ : 2010-08-28 00:00:00
|
|
|